Homeಮುಖಪುಟಜೆಎನ್‌ಯು ಉಪಕುಲಪತಿಗಳು ಅಧಿಕಾರವಿಲ್ಲದೆ ನೇಮಕಾತಿ ಮಾಡಿದ್ದಾರೆ: ದೆಹಲಿ ಹೈಕೋರ್ಟ್

ಜೆಎನ್‌ಯು ಉಪಕುಲಪತಿಗಳು ಅಧಿಕಾರವಿಲ್ಲದೆ ನೇಮಕಾತಿ ಮಾಡಿದ್ದಾರೆ: ದೆಹಲಿ ಹೈಕೋರ್ಟ್

- Advertisement -
- Advertisement -

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಉಪಕುಲಪತಿಗಳಿಗೆ ವಿಭಾಗಗಳ ಅಧ್ಯಕ್ಷರನ್ನು ನೇಮಿಸುವ ಅಧಿಕಾರವಿಲ್ಲ ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ, ವಿವಿಧ ವಿಭಾಗಗಳಿಗೆ ಉಪಕುಲಪತಿ ಪ್ರೊ.ಎಂ.ಜಗದೇಶ್ ಕುಮಾರ್ ಅವರು ನೇಮಿಸಿದ್ದ ಒಂಬತ್ತು ಅಧ್ಯಕ್ಷರುಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕೋರ್ಟ್‌ ನಿರ್ಬಂಧ ಹೇರಿದೆ.

ನ್ಯಾಯಮೂರ್ತಿ ರಾಜೀವ್ ಶಕ್ಧೇರ್ ಮತ್ತು ನ್ಯಾಯಮೂರ್ತಿ ತಲವಂತ್ ಸಿಂಗ್ ಅವರ ವಿಭಾಗೀಯ ಪೀಠವು, ಅಧ್ಯಕ್ಷರನ್ನು ನೇಮಿಸುವ ಅಧಿಕಾರವು ಕಾರ್ಯಕಾರಿ ಮಂಡಳಿಗೆ ಮಾತ್ರ ಇದೆಯೇ ಹೊರತು ಉಪಕುಲಪತಿಗಳಿಗೆ ಇಲ್ಲ. ಹೀಗಾಗಿ ಉಪ ಕುಲಪತಿಗಳಿಂದ ನೇಮಕವಾಗಿರುವವರು, ಆಯ್ಕೆ ಸಮಿತಿಗಳ ಸಭೆ ನಡೆಸುವುದು, ವಿಭಾಗಗಳು ಅಥವಾ ವಿಶೇಷ ವಿಭಾಗಗಳಿಗೆ ಸಂಬಂಧಿಸಿದಂತೆ ನೇಮಕಾತಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.

ಪ್ರೊಫೆಸರ್ ಅತುಲ್ ಸೂದ್ ಅವರು ಕುಲಪತಿಗಳು ಮಾಡಿದ ಒಂಬತ್ತು ನೇಮಕಾತಿಗಳಿಗೆ ಕಾರ್ಯಕಾರಿ ಮಂಡಳಿಯ ಅನುಮೋದನೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ, ಉಪ ಕುಲಪತಿಗಳು ವಿಭಾಗಗಳು ಅಥವಾ ವಿಶೇಷ ವಿಭಾಗಗಳಿಗೆ ಅಧ್ಯಕ್ಷರನ್ನಾಗಿ ಪ್ರಾಧ್ಯಾಪಕರನ್ನು ನೇಮಿಸುವ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ವಿಶ್ವವಿದ್ಯಾನಿಲಯ ಶಾಸನ 4 (5) ರ ಅಡಿಯಲ್ಲಿ ಕುಲಪತಿಗಳು ಅಧಿಕಾರವನ್ನು ಚಲಾಯಿಸಿದ್ದಾರೆ ಎಂದು ವಿವಿಯು ವಾದಿಸಿತ್ತು. ಆದರೆ ಈ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. “ತುರ್ತು ಪರಿಸ್ಥಿತಿಯ ಕಾರಣದಲ್ಲಿ” ತಕ್ಷಣದ ಕ್ರಮ ಅಗತ್ಯವಿದ್ದಾಗ ಮಾತ್ರ ವಿಸಿ ಅಂತಹ ಅಧಿಕಾರವನ್ನು ಚಲಾಯಿಸಬಹುದು ಎಂದು ಕೋರ್ಟ್‌ ಹೇಳಿದೆ.

ಕಾರ್ಯಕಾರಿ ಮಂಡಳಿಯ 296ನೇ ಸಭೆಯ ಕಾರ್ಯಸೂಚಿಗೆ ಸೂದ್ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಗಮನಿಸಿದ ನ್ಯಾಯಾಲಯ, ವಿಸಿ ಅವರು ಮಾಡಿರುವ ನೇಮಕದಲ್ಲಿ ದೋಷವಿದೆ ಎಂದು ಹೇಳಿದೆ.

ವಿಸಿ ಮಾಡಿದ ಒಂಬತ್ತು ನೇಮಕಾತಿಗಳಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ನ ಏಕ ಪೀಠ ನಿರಾಕರಿಸಿದ ನಂತರ, ಅಕ್ಟೋಬರ್ 08 ರಂದು ಸ್ಪ್ಯಾನಿಷ್, ಪೋರ್ಚುಗೀಸ್, ಇಟಾಲಿಯನ್ ಮತ್ತು ಲ್ಯಾಟಿನ್ ಅಮೇರಿಕನ್ ಸ್ಟಡೀಸ್/ಸ್ಕೂಲ್ ಆಫ್ ಲ್ಯಾಂಗ್ವೇಜ್, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ಅಧ್ಯಕ್ಷರಾಗಿ ಇನ್ನೊಬ್ಬ ವ್ಯಕ್ತಿಯನ್ನು ನೇಮಿಸಲು ಅವರು ಮುಂದಾದರು ಎಂದು ಸೂದ್ ಅವರ ವಕೀಲ ಅಭಿಕ್ ಚಿಮ್ನಿ ಸಲ್ಲಿಸಿದ ಸಲ್ಲಿಕೆಯನ್ನು ವಿಭಾಗೀಯ ಪೀಠವು ಗಮನಿಸಿದೆ.

ಏಕ ನ್ಯಾಯಾಧೀಶರ ಮುಂದೆ ವಿಷಯ ಬಾಕಿ ಇರುವ ಕಾರಣ, ಸೂದ್ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ. ನವೆಂಬರ್ 10 ರಂದು ನಡೆಯುವ ವಿಚಾರಣೆಗೆ ಆ ವಿಷಯವನ್ನೂ ನ್ಯಾಯಾಲಯದ ಮುಂದೆ ನಿರ್ದೇಶನಕ್ಕಾಗಿ ಪಟ್ಟಿ ಮಾಡಿದೆ.


ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಇಳಿಮುಖ: ಕಳೆದ 24 ಗಂಟೆಗಳಲ್ಲಿ 10,423 ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...