Homeರಾಷ್ಟ್ರೀಯ‘ಸೇನೆ ಸೇರುವುದು ಉದ್ಯೋಗಕ್ಕಾಗಿ ಅಲ್ಲ’: ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ

‘ಸೇನೆ ಸೇರುವುದು ಉದ್ಯೋಗಕ್ಕಾಗಿ ಅಲ್ಲ’: ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ

ದೇಶದ ಪ್ರಸ್ತುತ ಪರಿಸ್ಥಿತಿಯು ಪ್ರತಿ ಖಾಲಿ ಹುದ್ದೆಗೆ 50-60 ಜನರು ಅರ್ಜಿ ಸಲ್ಲಿಸುತ್ತಾರೆ ಎಂದು ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾದ ಅವರು ಹೇಳಿದ್ದಾರೆ

- Advertisement -
- Advertisement -

ಅಗ್ನಿವೀರ್‌ಗಳು ಶೌರ್ಯ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ ಎಂದು ಸೇನಾ ವ್ಯವಹಾರಗಳ ಇಲಾಖೆ ತಿಳಿಸಿದೆ. ಅಲ್ಪಾವಧಿಯ ಸೇನಾ ನೇಮಕಾತಿ ಯೋಜನೆಯಾದ ಅಗ್ನಿಪಥ್‌‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ದೇಶಭಕ್ತಿ ಅಥವಾ ಸೈನ್ಯದಲ್ಲಿ ಕೆಲಸ ಮಾಡುವುದು ಮೋಹಕ್ಕಾಗಿ ಹೊರತು ಉದ್ಯೋಗಕ್ಕಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.

ಸೇನಾ ವ್ಯವಹಾರಗಳ ಇಲಾಖೆಯು ಹಲವು ದೇಶಗಳೊಂದಿಗೆ 80-100 ದ್ವಿಪಕ್ಷೀಯ ವ್ಯಾಯಾಮಗಳಲ್ಲಿ ತೊಡಗಿದೆ ಎಂದು ಅವರು ಹೇಳಿದ್ದು, ಸೈನಿಕರ ಸರಾಸರಿ ವಯಸ್ಸು 26-27 ಎಂಬ ಕಲ್ಪನೆಯು ಇದರಿಂದ ಬಂದಿದೆ ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿ ಸರ್ಕಾರವು ಅಗ್ನಿಪಥ್ ಯೋಜನೆ ಘೋಷಣೆ ಮಾಡಿದ ನಂತರ ಅದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಮತ್ತು ಹಿಂಸಾತ್ಮಕ ಗಲಭೆಗಳು ದೇಶದಾದ್ಯಂತ ನಡೆಯುತ್ತಿವೆ. ಪ್ರತಿಭಟನೆಗಳಿಂದಾಗಿ ಸರ್ಕಾರವು ವಯೋಮಿತಿಯಲ್ಲಿ ರಿಯಾಯಿತಿಗಳನ್ನು ಘೋಷಿಸಿದೆ. ಆದರೆ ಸೇನಾ ಉದ್ಯೋಗಾಕಾಂಕ್ಷಿಗಳು ಅಲ್ಪಾವಧಿ ನೇಮಕಾತಿಯನ್ನು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ: ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್

ಹೊಸ ಯೋಜನೆಯ ಪ್ರಕಾರ, ವೈದ್ಯಕೀಯ ಶಾಖೆಗಳಲ್ಲಿರುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಡೆಗಳನ್ನು ಸೇರಲು ಅಗ್ನಿಪಥ್ ಒಂದೇ ದಾರಿಯಾಗಿದೆ.

“ದೇಶದ ಪ್ರಸ್ತುತ ಪರಿಸ್ಥಿತಿಯು ಪ್ರತಿ ಖಾಲಿ ಹುದ್ದೆಗೆ 50-60 ಜನರು ಅರ್ಜಿ ಸಲ್ಲಿಸುತ್ತಾರೆ, ಆದರೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ” ಎಂದು ಲೆಫ್ಟಿನೆಂಟ್ ಜನರಲ್ ಪುರಿ ಅವರು ಹೇಳಿದ್ದಾರೆ.

“ನಮಗೆ ದೇಶಕ್ಕೆ ಉತ್ತಮ ಅಭ್ಯರ್ಥಿ ಬೇಕು. ಆಯ್ಕೆ ಪ್ರಕ್ರಿಯೆಯು ಪಾರದರ್ಶಕ, ನ್ಯಾಯೋಚಿತ, ವಸ್ತುನಿಷ್ಠ ಮತ್ತು ಕೇಂದ್ರೀಯವಾಗಿ ನಿರ್ವಹಿಸಲ್ಪಡುತ್ತದೆ. ಸೈನಿಕರು ಭಾರತದ ದೊಡ್ಡ ಆಸ್ತಿಯಾಗಿದ್ದು, ನಾವು ಮಾಡುವ ಯಾವುದೇ ವಿಷಯವು ದೇಶದ ರಕ್ಷಣೆಗಾಗಿ” ಎಂದು ಅವರು ತಿಳಿಸಿದ್ದಾರೆ, ANI ವರದಿ ಮಾಡಿದೆ.

ಲೆಫ್ಟಿನೆಂಟ್‌ ಜನರಲ್ ಬನ್ಸಿ ಪೊನಪ್ಪ ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪೂರ್ಣ ನೇಮಕಾತಿ ವೇಳಾಪಟ್ಟಿ ಸಿದ್ಧವಾಗಿದೆ. ಅಗ್ನಿಪಥ್ ಯೋಜನೆಗೆ ನೇಮಕಾತಿ ಅಧಿಸೂಚನೆಯನ್ನು ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಅಗ್ನಿಪಥ ಯೋಜನೆ: ನಿರ್ಧಾರ ಕೈಗೊಳ್ಳುವ ಮೊದಲು ನಮ್ಮ ಮಾತನ್ನೂ ಕೇಳಿ- ಸುಪ್ರೀಂಗೆ ಕೇಂದ್ರದ ಮನವಿ

ಭಾರತೀಯ ರಕ್ಷಣಾ ಸೇವೆಗಳಾದ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂವರು ಮುಖ್ಯಸ್ಥರು ಶುಕ್ರವಾರದಂದು ಕೇಂದ್ರ ಸರ್ಕಾರದ ಹೊಸ ಯೋಜನೆಯನ್ನು ಬೆಂಬಲಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...