Homeಮುಖಪುಟಜಾಮೀನು ಸಿಕ್ಕಿ ವಾರಗಳಾದರೂ ಬಿಡುಗಡೆಯಾಗದ ಪತ್ರಕರ್ತ ಸಿದ್ದೀಕ್ ಕಪ್ಪನ್!

ಜಾಮೀನು ಸಿಕ್ಕಿ ವಾರಗಳಾದರೂ ಬಿಡುಗಡೆಯಾಗದ ಪತ್ರಕರ್ತ ಸಿದ್ದೀಕ್ ಕಪ್ಪನ್!

- Advertisement -
- Advertisement -

ಜಾರಿ ನಿರ್ದೇಶನಾಲಯ (ಇಡಿ) ಆರಂಭಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು ನೀಡಿತ್ತು. ಆದರೆ, ಕೋರ್ಟ್‌ ಅವರಿಗೆ ಜಾಮೀನು ನೀಡಿ ವಾರಗಳು ಕಳೆದರೂ ಅವರು ಇನ್ನೂ ಜೈಲಿನಲ್ಲೇ ಇದ್ದಾರೆ. 2022ರ ಡಿಸೆಂಬರ್‌ 23ರಂದು ಜಾಮೀನು ಆದೇಶವನ್ನು ಅಂಗೀಕರಿಸಲಾಗಿದ್ದರೂ, ಅವರ ಜಾಮೀನು ಶ್ಯೂರಿಟಿಯನ್ನು ಇನ್ನೂ ಪರಿಶೀಲಿಸಲಾಗಿಲ್ಲ.

ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ ಅಡಿಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ 2022ರ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನ್ಯಾಯಾಲಯದ ಮುಂದೆ ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಶ್ಯೂರಿಟಿಗಳನ್ನು ಈಗಾಗಲೇ ಸಲ್ಲಿಸಿದ್ದೇವೆ ಎಂದು ಕಪ್ಪನ್‌ ಅವರನ್ನು ಪ್ರತಿನಿಧಿಸುವ ವಕೀಲರಲ್ಲಿ ಒಬ್ಬರಾದ ವಕೀಲ ಮೊಹಮ್ಮದ್ ಡ್ಯಾನಿಶ್ ಕೆ.ಎಸ್. ಹೇಳಿದ್ದಾರೆ.

“ನಾವು ಶ್ಯೂರಿಟಿಯ ಪರಿಶೀಲನೆಗಾಗಿ ಕಾಯುತ್ತಿದ್ದೇವೆ. ಅವುಗಳನ್ನು ಸ್ಥಳೀಯ ಅಧಿಕಾರಿಗಳು ಪರಿಶೀಲಿಸಬೇಕಾಗಿದ್ದು, ಇದು ಸಾಮಾನ್ಯವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಜಾಮೀನು ಷರತ್ತುಗಳನ್ನು ನಿಗದಿಪಡಿಸುವ ವೇಳೆ, ಯುಎಪಿಎ ಪ್ರಕರಣದ ಜಾಮೀನು ಶ್ಯೂರಿಟಿಗಳನ್ನು ಪರಿಶೀಲಿಸುವಲ್ಲಿ ಮೂರು ತಿಂಗಳಿಗೂ ಹೆಚ್ಚಿನ ವಿಳಂಬವಾಗಿದೆ ಎಂದು ನಾವು ನ್ಯಾಯಾಲಯಕ್ಕೆ ನೆನಪಿಸಿದ್ದೇವೆ” ಎಂದು ಡ್ಯಾನಿಶ್‌ ಅವರು ಹೇಳಿದ್ದಾರೆ.

ಯುಎಪಿಎ ಪ್ರಕರಣದಲ್ಲಿ ಜಾಮೀನು ಪಡೆದಾಗ ಸಿದ್ದಿಕ್ ಕಪ್ಪನ್ ಅವರಿಗೆ ತಲಾ 1 ಲಕ್ಷ ರೂ.ಗಳ ಎರಡು ಶ್ಯೂರಿಟಿ ಮತ್ತು ಅಷ್ಟೆ ಮೊತ್ತದ ವೈಯಕ್ತಿಕ ಬಾಂಡ್ ನೀಡುವಂತೆ ಕೇಳಲಾಗಿತ್ತು. ಪ್ರಸ್ತುತ ಪ್ರಕರಣವು ಸಹ ಇದೇ ರೀತಿಯಲ್ಲಿ ಇದ್ದು, ಕಪ್ಪನ್ ಅವರು ತಲಾ 1 ಲಕ್ಷ ರೂಪಾಯಿಗಳ ಎರಡು ಸ್ಥಳೀಯ ಶ್ಯೂರಿಟಿಗಳು ಮತ್ತು ವೈಯಕ್ತಿಕ ಬಾಂಡ್ ಅನ್ನು ಒದಗಿಸಬೇಕಾಗಿದೆ.

“ಪಿಎಂಎಲ್‌ಎ ಪ್ರಕರಣದಲ್ಲಿ ನಾವು ನ್ಯಾಯಾಲಯದ ಮುಂದೆ ಜಾಮೀನು ಷರತ್ತುಗಳನ್ನು ನಿಗದಿಪಡಿಸಿದಾಗ, ಇತರ ಪ್ರಕರಣದಲ್ಲಿನ ವಿಳಂಬವನ್ನು ಪರಿಗಣಿಸಿ ಪರಿಶೀಲನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ನ್ಯಾಯಾಲಯವು ನಮಗೆ ಭರವಸೆ ನೀಡಿತು. ಆದರೆ ಶ್ಯೂರಿಟಿಗಳ ಪರಿಶೀಲನೆಯನ್ನು ಪೂರ್ಣಗೊಳಿಸಲು ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ”

“ಯಾಕೆಂದರೆ ಹಲವು ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅದು ನ್ಯಾಯಾಲಯದ ನಿಯಂತ್ರಣದಲ್ಲಿಲ್ಲ. ಪರಿಶೀಲನೆ ಇಂದು (ಜನವರಿ 30ರ ಸೋಮವಾರ) ಅಥವಾ ನಾಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಂತರ ಜಾಮೀನು ಬಾಂಡ್ ಮತ್ತು ಬಿಡುಗಡೆ ಆದೇಶವನ್ನು ನೀಡಲಾಗುತ್ತದೆ. ಕಪ್ಪನ್ ಈ ವಾರ ಜೈಲಿನಿಂದ ಹೊರಬರಬಹುದು” ಎಂದು ಕಪ್ಪನ್ ಅವರ ವಕೀಲ ಡ್ಯಾನಿಶ್ ಹೇಳಿದ್ದಾರೆ.

ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ ಪ್ರಕರಣವನ್ನು ಸುದ್ದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಸಿದ್ದಿಕ್ ಕಪ್ಪನ್ ಮತ್ತು ಇತರ ನಾಲ್ವರನ್ನು 2020ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಈ ವೇಳೆ ಅವರ ವಿರುದ್ಧ, ‘ಕೋಮು ಗಲಭೆಗಳ ಕುರಿತು ವರದಿ ಮಾಡಿದ್ದಾರೆ’ ಮತ್ತು ಬಲಪಂಥೀಯ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ಅವರ ವಿರುದ್ಧ ಪ್ರಕರಣದಲ್ಲಿ 5,000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದು, “ಅವರು ಮುಸ್ಲಿಮರ ಬಗ್ಗೆ ಮಾತ್ರ ವರದಿ ಮಾಡಿದ್ದಾರೆ” ಎಂದು ಹೇಳಿದ್ದರು. ಜೊತೆಗೆ ಸೆಕ್ಷನ್ 124A (ದೇಶದ್ರೋಹ), 153A (ಹಗೆತನವನ್ನು ಉತ್ತೇಜಿಸುವುದು), 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ), UAPA, PMLA, ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಜೊತೆಗೆ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಪೊಲೀಸರು ಆರೋಪ ಹೊರಿಸಿದ್ದಾರೆ.

ಅವರ ಬಂಧನ ನಡೆದ ವೇಳೆ ಅವರ ಜೊತೆಗೆ ಪ್ರಯಾಣಿಸಿದ ಕಾರಿನ ಚಾಲಕ ಮೊಹಮ್ಮದ್ ಆಲಂ ಅವರು ಅಲಹಾಬಾದ್ ಹೈಕೋರ್ಟ್‌ನಿಂದ ಆಗಸ್ಟ್‌ನಲ್ಲಿ ಜಾಮೀನು ಪಡೆದಿದ್ದಾರೆ. ಅವರ ವಶದಿಂದ ಯಾವುದೇ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲವಾದರೂ, ಅವರು ಇನ್ನೂ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ: ಹಿಂಡನ್‌ಬರ್ಗ್‌ ವರದಿ: ಭಾರತದ ಮೇಲಿನ ದಾಳಿ ಎಂದ ಅದಾನಿ; ರಾಷ್ಟ್ರೀಯತೆ ಹೆಸರಿನಲ್ಲಿ ವಂಚನೆ ಮರೆಯಾಗಿಸಬೇಡಿ ಎಂದ ಸಂಶೋಧನಾ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...