Homeಅಂಕಣಗಳುಕಳೆದುಹೋದ ದಿನಗಳುಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

ಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 23

ಅಂದು ಸರ್ಕಾರಿ ಸ್ಥಳವನ್ನು ಜಮೀನಿದ್ದವರು ಒತ್ತುವರಿ ಮಾಡುತ್ತಿದ್ದವರ ನಡುವೆಯೂ ಕೆಲವರು ನ್ಯಾಯ ನಿಷ್ಟುರಿ ಭೂಮಾಲಿಕರಿದ್ದರಿದ್ದರು.

ಅಂತಹವರಲ್ಲಿ ಒಬ್ಬರು ಹಾದಿಗೆ ಶಾಂತಪ್ಪನವರು. ಅವರು ಕಾಂಗ್ರೆಸ್ಸಿಗರು, ಗಣಪಯ್ಯನವರ ಸ್ವತಂತ್ರ ಪಾರ್ಟಿ ಹಾಸನ ಜಿಲ್ಲೆಯಲ್ಲಿ ಉತ್ತುಂಗದಲ್ಲಿ ಇದ್ದಾಗಲೂ ಶಾಂತಪ್ಪನವರು ಕಾಂಗ್ರೆಸ್ಸಿನಲ್ಲಿಯೇ ಇದ್ದರು. ಆದರೆ ಗಣಪಯ್ಯನವರ ಸ್ನೇಹವಲಯದಲ್ಲೇ ಇದ್ದರು.
ಶಾಂತಪ್ಪನವರು ಆ ಕಾಲದಲ್ಲಿಯೇ ಬಿ.ಎ. ಪದವೀಧರರು. ಕಾಲೇಜಿನಲ್ಲಿ ಕೆಂಗಲ್ ಹನುಮಂತಯ್ಯನವರ ಸಹಪಾಠಿಗಳು ಮಾತ್ರವಲ್ಲ, ಆತ್ಮೀಯ ಸ್ನೇಹಿತರು ಕೂಡಾ. ಹನುಮಂತಯ್ಯನವರ ಜೊತೆಗಿನ ಒಡನಾಟ ಮತ್ತು ಸ್ನೇಹ ಕಾಲೇಜು ದಿನಗಳ ನಂತರವೂ ಮುಂದುವರೆದಿತ್ತು.

ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿ ನಿಯುಕ್ತರಾದಾಗ ಪ್ರಮಾಣ ವಚನ ಸಮಾರಂಭಕ್ಕೆ ಸಮಯ ನಿಗದಿ ಮಾಡಲು ಅಧಿಕಾರಿಗಳು ಹನುಮಂತಯ್ಯನವರಲ್ಲಿ ಚರ್ಚಿಸಲು ಬಂದರು. ಆಗ ಹನುಮಂತಯ್ಯನವರು, ಶಾಂತಪ್ಪನವರಲ್ಲಿ ಇಂತ ಸಮಯಕ್ಕೆ ನಿನಗೆ ಬಿಡುವು ಇದಿಯೇನಯ್ಯ, ನಾನು ಪ್ರಮಾಣ ವಚನ ಸ್ವೀಕರಿಸುವಾಗ ಅಲ್ಲಿ ನೀನಿರಬೇಕು. ಆಗ ನಿನಗೆ ಬಿಡುವಿರದಿದ್ದರೆ ಹೇಳು ಸಮಯ ಬದಲಾಯಿಸುತ್ತೇನೆ ಎಂದರಂತೆ !

ಮುಖ್ಯಮಂತ್ರಿಯಾಗಿ ಕೆಂಗಲ್ ಹನುಮಂತಯ್ಯನವರ ಪ್ರಮಾಣವಚನ ಸ್ವೀಕಾರಕ್ಕೆ ಶಾಂತಪ್ಪನವರು ಸಾಕ್ಷಿಯಾದರು. ನಂತರ ಗೆಳೆಯನನ್ನು ಹನುಮಂತಯ್ಯ ತಮ್ಮ ಮನೆಗೆ ಊಟಕ್ಕೆ ಕರೆದೊಯ್ದರು.

ಊಟ ಮಾಡುವಾಗ ಹನುಮಂತಯ್ಯನವರು, “ಶಾಂತು ನಾನೀಗ ಮುಖ್ಯಮಂತ್ರಿ ನಿಂದೇನಾದ್ರೂ ಕೆಲಸ ಇದ್ರೆ ಸಂಕೋಚ ಮಾಡ್ಬೇಡ ನನ್ನತ್ರ ಬಾ” ಎಂದರಂತೆ.

ಆಗ ಶಾಂತಪ್ಪ “ಹನುಮಂತು ಏನಾದರೂ ಸಾರ್ವಜನಿಕ ಕೆಲಸ ಇದ್ರೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಕೊಡ್ತೇನೆ, ಇನ್ನು ನಾನು ನಿನ್ನ ಮನೆಗೆ ಬರೋದು, ಒಂದಿನ ನೀನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಲೇ ಬೇಕಲ್ಲ, ಆ ನಂತರ ಬರ್ತೀನಿ” ಎಂದರು. ಮುಂದೆ ಹಾಗೆಯೇ ನಡೆದುಕೊಂಡರು.

ಸಾಕಷ್ಟು ಕಾಫಿ ತೋಟವಿದ್ದ ಶಾಂತಪ್ಪನವರು ಸಾರ್ವಜನಿಕ ಕೆಲಸಗಳಿಗೆ ಕೊಡುಗೈ ದೊರೆ. ಪ್ರತಿ ವರ್ಷ ತಮ್ಮ ಆದಾಯದ ಗಣನೀಯ ಮೊತ್ತವನ್ನು ಇಂತಹ ಕೆಲಸಗಳಿಗೆಂದೇ ಬೇರೆ ತೆಗೆದಿಟ್ಟು ಖರ್ಚು ಮಾಡುತ್ತಿದ್ದರು.

ಒಮ್ಮೆ ಇವರ ಮಗ, ತಂದೆ ಮನೆಯಲ್ಲಿ ಇಲ್ಲದಾಗ ತೋಟದ ಪಕ್ಕದಲ್ಲಿದ್ದ ಒಂದಷ್ಟು ಸರ್ಕಾರಿ ಜಾಗಕ್ಕೆ ಬೇಲಿ ಹಾಕಿಸಿದರು. ಕೆಲವು ದಿನಗಳ ನಂತರ ಶಾಂತಪ್ಪನವರು ತೋಟಕ್ಕೆ ಹೋದಾಗ ಅದು ಅವರ ಕಣ್ಣಿಗೆ ಬಿತ್ತು. ಕೆಲಸದವರಲ್ಲಿ ವಿಚಾರಿಸಿದಾಗ ಅದು ತಮ್ಮ ಮಗನ ಕೆಲಸವೆಂದು ತಿಳಿಯಿತು. ಕೂಡಲೇ ಕೆಲಸದವರನ್ನು ಕರೆಸಿ. ಬೇಲಿ ಮೊದಲು ಎಲ್ಲಿ ಇತ್ತೋ ಅಲ್ಲಿಗೇ ಹಾಕಿಸಿದರಲ್ಲದೆ ಮಗನನ್ನು ಕರೆದು ಇನ್ನುಮುಂದೆ ಹೀಗೆ ಮಾಡಬೇಕೆಂದು ತಾಕೀತು ಮಾಡಿದರು.

ಇವರ ಒಬ್ಬನೇ ಮಗ ಹೆಚ್.ಎಸ್. ಸಂಪತ್. ಸ್ನೇಹಜೀವಿ, ಅಪಾರ ಗೆಳೆಯರನ್ನು ಕಟ್ಟಿಕೊಂಡು ಸಕಲೇಶಪುರದಲ್ಲಿ ಕ್ರೀಡಾಭಿವೃದ್ಧಿಗೆ ದುಡಿದವರು. ಮುಂದೆ ನಮ್ಮ ಕ್ಯಾಮನಹಳ್ಳಿ ಮಂಡಲ ಪಂಚಾಯತಿಯ ಪ್ರಧಾನರಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿದರು. ನಮ್ಮ ನಮ್ಮ ಜೈ ಕರ್ನಾಟಕ ಸಂಘ ಬೆಳ್ಳೇಕೆರೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರದ ದಿನಗಳಲ್ಲಿ ಸಕಲೇಶಪುರ ಶಾಸಕರಾದ ಬಿ.ಡಿ.ಬಸವರಾಜ್ ಇವರ ಹತ್ತಿರದ ಸಂಬಂಧಿ.

ಗಣಪಯ್ಯನವರು ಪ್ರಾರಂಭಿಸಿದ್ದ ಮನೆಗಳ ಕೆಲಸ ಮುಗಿಯುತ್ತಾ ಬಂದಿತ್ತು. ಅಗಲಟ್ಟಿ ಮಾವಿನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದ ನೂರು ಎಕರೆ ಜಮೀನಿನ ಸರ್ವೆ ಎಲ್ಲ ಮುಗಿದರೂ, ಇನ್ನೂ ಹಕ್ಕು ಪತ್ರ ವಿತರಣೆ ಆಗಿರಲಿಲ್ಲ. ಅದಕ್ಕಾಗಿ ಪ್ರಯತ್ನ ನಡೆದೇ ಇತ್ತು.

ಈಗ ನಿರ್ಮಾಣವಾಗಿದ್ದ ಮನೆಗಳನ್ನು ಅವರಿಗೆ ಹಸ್ತಾಂತರಿಸುವ ಬಗ್ಗೆ ಒಂದು ಸಮಾರಂಭ ಮಾಡಬೇಕೆಂದು ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳೂ ಹೇಳುತ್ತಿದ್ದರು. ಸುಮಾರು ಹತ್ತು ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳು ವಾಸಕ್ಕೆ ಕೊಡುವ ಹಂತಕ್ಕೆ ಬಂದಿದ್ದವು.
ಹೆನ್ನಲಿ ಗ್ರಾಮದಲ್ಲಿ ಹೇಮಾವತಿ ನದಿ ದಡದಲ್ಲಿ ಒಂದು ಸಮಾರಂಭಕ್ಕೆ ತಯಾರಿ ನಡೆಯಿತು. ಯೋಜನೆ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದಲೇ ತಯಾರಿ ನಡೆಸಿದರು.
ಅಂದಿನ ಕಾರ್ಯಕ್ರಮಕ್ಕೆ ಸಿ.ಎಂ.ಪೂಣಚ್ಚನವರು ಅತಿಥಿಗಳಾಗಿ ಬಂದಿದ್ದರು. ಅವರು ಆಗ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಅಂದು ಅವರು ಭಾಷಣದಲ್ಲಿ ನಾವು ದಕ್ಷಿಣ ಭಾರತದ ಜನ ಪುಣ್ಯ ಮಾಡಿದ್ದೇವೆ. ನಮ್ಮಲ್ಲಿ ಗಣಪಯ್ಯನವರಂತಹ ಜನ ಇದ್ದಾರೆ. ಆ ಕಾರಣಕ್ಕಾಗಿಯೇ ನಾವು ಸ್ವಲ್ಪಮಟ್ಟಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಆದರೆ ಇಲ್ಲಿಗೆ ಹೋಲಿಸಿದಲ್ಲಿ ಉತ್ತರ ಭಾರತದ ರಾಜ್ಯಗಳು ನಮಗಿಂತ ಐವತ್ತು ವರ್ಷಗಳಷ್ಟು ಹಿಂದೆ ಇದ್ದಾರೆ. ಹಳ್ಳಿಗಳ ಜನರಿಗೆ ದೇಶಕ್ಕೆ ಪ್ರಜಾಪ್ರಭುತ್ವ ಬಂದಿದೆ ಎಂದೇ ಗೊತ್ತಿಲ್ಲ. ಇನ್ನೂ ರಾಜರ ಆಳ್ವಿಕೆ ಇದೆ ಎಂದೇ ನಂಬಿದ್ದಾರೆ. ನಮ್ಮಂತವರು ಹೋದರೂ ಮಹಾರಾಜರು ಬಂದರು ಎಂದುಕೊಳ್ಳುತ್ತಾರೆ. ನೀವೆಲ್ಲ ಇಲ್ಲಿ ಇರುವಂತಹ ಅವಕಾಶವನ್ನು ಬಳಸಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸಿ. ಕುದುರೆಯನ್ನು ಹೊಳೆಯವರೆಗೆ ಒಯ್ಯಬಹುದಷ್ಟೇ ಆದರೆ ನೀರನ್ನು ಅದೇ ಕುಡಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಮನೆಗಳ ಫಲಾನುಭವಿಗಳೆಲ್ಲರೂ ಸೇರಿ, ಸುಮಾರು ಎರಡು ಸಾವಿರ ಜನರಿಗಾಗುವಷ್ಟು ಉಪ್ಪಿಟ್ಟು ಮತ್ತು ಕೇಸರಿಬಾತನ್ನು ತಯಾರಿಸಿದ್ದರು. ಕೆಲವರು ಭಾಷಣಗಳು ಮುಗಿದಕೂಡಲೇ ದಲಿತರು ಮಾಡಿದ ಅಡಿಗೆಯೆಂದು ಉಪಹಾರಕ್ಕೆ ನಿಲ್ಲದೆ ಜಾರಿಕೊಂಡರು. ಆದರೆ ಗಣಪಯ್ಯ ಮತ್ತು ಪೂಣಚ್ಚನವರು ಎಲ್ಲರ ಮದ್ಯೆ ಉಪಹಾರಕ್ಕೆ ಕುಳಿತಾಗ ಇನ್ನು ಕೆಲವರು ನಿರ್ವಾಹವಿಲ್ಲದೆ ಜೊತೆ ಸೇರಿದರು.

ಈ ಮನೆಗಳನ್ನು ಕಟ್ಟಿದ ಕೆಲವು ಸ್ಥಳಗಳಿಗೆ ಮೊದಲೇ ರೂಡಿಯಾದ ಹೆಸರುಗಳಿದ್ದವು, ಉದಾಹರಣೆಗೆ ಕೃಷ್ಣಾಪುರ, ಅಜ್ಜನಕೆರೆ, ಹಾರ್ಲೆ ಕೂಡಿಗೆ ಹೀಗೆ, ಇದ್ದವು ಆ ಹೆಸರುಗಳನ್ನು ಬಿಟ್ಟು ಕೆಲವು ಹೆಸರಿಲ್ಲದ ಸ್ಥಳಗಳು ಮತ್ತು ಕೇರಿಗಳಿಗೆ ಗಣಪಯ್ಯ ಹೊಸ ಹೆಸರನ್ನು ಇಟ್ಟರು. ರಾಮಕೃಷ್ಣ ನಗರ, ವಿವೇಕ ನಗರ, ವಿಜಯ ನಗರ ಹೀಗೆ, ಈ ತಲೆಮಾರಿನ ಅನೇಕರು “ರಾಮಕೃಷ್ಣ ನಗರ” ದ ಹೆಸರು, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆದಾಗ ಇಟ್ಟದ್ದೆಂದು ತಿಳಿದಿದ್ದಾರೆ. ಮತ್ತು ಕೆಲವರು ರಾಜಕೀಯದ ವ್ಯಕ್ತಿಗಳು ಅದನ್ನೇ ಭಾಷಣಗಳಲ್ಲಿಯೂ ಹೇಳುತ್ತಾರೆ. ಅದು ನಿಜವಲ್ಲ ಹೆಗಡೆಯವರು ಮುಖ್ಯಮಂತ್ರಿ ಆಗುವ ಮೊದಲೇ ಈ ಸ್ಥಳಕ್ಕೆ ಹೆಸರಿಡಲಾಗಿತ್ತು, ಮತ್ತು ಅದು ರಾಮಕೃಷ್ಣ ಪರಮಹಂಸರ ಹೆಸರು ಮತ್ತು ಪಕ್ಕದ “ವಿವೇಕ ನಗರ” ದ ವಿವೇಕಾನಂದರ ಹೆಸರಾಗಿದೆ.

ಹಾಗೇಯೇ ಇನ್ನೊಂದು ಹೆಸರು ವಿಜಯ ನಗರ. ಯಾವ ಬ್ಯಾಂಕೂ ಈ ಯೋಜನೆಗೆ ಸಾಲ ಕೊಡದಿದ್ದಾಗ ಸಾಲ ಕೊಟ್ಟ ವಿಜಯಬ್ಯಾಂಕಿನ ವಿಠ್ಠಲ ಶೆಟ್ಟರ ಹೆಸರಿಡೋಣ ಎಂದಿದ್ದರು ಗಣಪಯ್ಯ. ಆಗ ವಿಠ್ಠಲ ಶೆಟ್ಟರು ನಾನೊಬ್ಬ ಬ್ಯಾಂಕ್ ನೌಕರ ಜನರ ದುಡ್ಡನ್ನು ಜನರಿಗೆ ಕೊಡುವವ, ನನ್ನ ಹೆಸರು ಹಾಕಲೇಬಾರದು ಎಂದರು. ಆದ್ದರಿಂದ ಬ್ಯಾಂಕಿನ ಹೆಸರಾದರೂ ಇರಲಿ ಎಂದು ಹೇಳಿ ಕಾನೂನಿನ ತೊಡಕಾಗದಂತೆ ವಿಜಯ ನಗರ ಎಂದು ಹೆಸರಿಟ್ಟರು.
ನಂತರ ಆ ಮನೆಗಳತ್ತ ಗಣಪಯ್ಯನವರ ಓಡಾಟ ಹೆಚ್ಚಾಯಿತು. ಅವರಿಗೆ ಬಟ್ಟೆ ಬರೆ ಹಂಚುವುದು, ಹಣ್ಣಿನ ಗಿಡಗಳನ್ನು ಕೊಡಿಸುವುದು. ಬೇರೆ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು ಮಾಡುತ್ತಿದ್ದರು.

ರಾಜ್ಯ ರಾಜಕಾರಣದಲ್ಲಿ ಅವರ ತೊಡಗುವಿಕೆ ಕಡಿಮೆಯಾಗುತ್ತ ಬಂತು. ರಾಜ್ಯದಲ್ಲಿ ರೈತ ಚಳುವಳಿ ಉತ್ತುಂಗಕ್ಕೇರಿತ್ತು. ಗುಂಡೂರಾವ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ರೈತ ಸಂಘದ ಪಾತ್ರವೂ ಗಣನೀಯವಾಗಿತ್ತು. ರೈತ ಸಂಘ ತನ್ನ ಕಾರ್ಯಕರ್ತರಿಗೆ ಗುಂಡೂರಾವ್ ಸರ್ಕಾರ ವಿರುದ್ಧ ಮತ ಚಲಾಯಿಸುವಂತೆ ಕರೆನೀಡಿತ್ತು. ದೇವರಾಜ ಅರಸರ ದೇಹಾಂತ್ಯವಾಗಿತ್ತು. ಬಂಗಾರಪ್ಪನವರು ಕಾಂಗ್ರೆಸ್ಸಿನಿಂದ ಬೇರೆಯಾಗಿ ಕರ್ನಾಟಕ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿದ್ದರು. ಇದೆಲ್ಲದರ ಫಲವಾಗಿ ಜನತಾ ಪಕ್ಷ ಹೆಚ್ಚು ಸದಸ್ಯರನ್ನು ಗೆದ್ದು ಹದಿನೆಂಟು ಜನರು ಶಾಸಕರಿದ್ದ ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂತು. ರಾಮಕೃಷ್ಣಹೆಗಡೆಯವರು ಮುಖ್ಯಮಂತ್ರಿಗಳಾದರು.


ಇದನ್ನೂ ಓದಿ: ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...