Homeಕರ್ನಾಟಕಕನ್ನಡ ಧ್ವಜಾರೋಹಣವಿಲ್ಲದೇ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಕಿಡಿ ಕಾರಿದ ನೆಟ್ಟಿಗರು

ಕನ್ನಡ ಧ್ವಜಾರೋಹಣವಿಲ್ಲದೇ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಕಿಡಿ ಕಾರಿದ ನೆಟ್ಟಿಗರು

- Advertisement -
- Advertisement -

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕನ್ನಡ ಧ್ವಜಾರೋಹಣ ಮಾಡದೇ ಕನ್ನಡ ರಾಜ್ಯೋತ್ಸವ ಆಚರಿಸಿರುವ ಘಟನೆಗಳು ನಡೆದಿವೆ. ಇದಕ್ಕೆ ಸರ್ಕಾರದ ಚಿತಾವಣೆಯೇ ಕಾರಣವೆಂದು ಆರೋಪಿಸಿ ಹಲವಾರು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಸಿಂಧನೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಹಶೀಲ್ದಾರ್‌ ಅಧಿಕೃತವಾಗಿ ಸುತ್ತೋಲೆ ಹೊರಡಿಸಿ ನಾಡಧ್ವಜ ಹಾರಿಸಬಾರೆಂದು ತಾಕೀತು ಮಾಡಿದ್ದರು. ಇದರಿಂದ ಗೊಂದಲಕ್ಕೊಳಗಾದ ಹಲವಾರು ಜಿಲ್ಲೆಗಳ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜಾರೋಹಣ ಮಾಡದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಿ ಕಾರ್ಯಕ್ರಮ ಮುಗಿಸಿದ್ದಾರೆ.

ತುಮಕೂರು, ಬೀದರ್‌, ಚಿಕ್ಕಮಗಳೂರು, ರಾಯಚೂರು, ಮಂಡ್ಯ, ಹಾಸನ, ಕೊಪ್ಪಳ, ಭಾಗಲಕೋಟೆ, ಶಿವಮೊಗ್ಗ, ಉಡುಪಿ, ಚಿಕ್ಕಬಳ್ಳಾಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಧ್ವಜಾರೋಹಣ ನಡೆದಿಲ್ಲ ಎಂದು ಕೇಳಿಬಂದಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ್ದಾರೆ. ಆದರೆ ಅವರ ಸಂಪುಟದ ನಾಡದ್ರೋಹಿ ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜಾರೋಹಣ ಮಾಡಿಲ್ಲ. ಏನೇ ಸಮರ್ಥನೆ ನೀಡಿದರೂ ಇದು ಉಂಡ ಎಲೆಗೆ ಉಗಿಯುವ ಹೀನ ಚಾಳಿ. ಯಾವುದೋ ಶಾಗಳ ಪಾದ ತೊಳೆಯುವ ಗುಲಾಮಗಿರಿ. ಈ ಕೊಳಕರ ಕೈಲಿ ಕನ್ನಡ ಧ್ವಜ ಮಲಿನಗೊಂಡಿಲ್ಲ ಎಂದು ಸಮಾಧಾನಪಟ್ಟುಕೊಂಡು, ಮುಂದಿನ ರಾಜ್ಯೋತ್ಸವದೊಳಗೆ ಈ ಹೇಡಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ” ಎಂದು ಪತ್ರಕರ್ತರಾದ ದಿನೇಶ್‌ ಕುಮಾರ್‌ ದಿನೂರವರು ಕಿಡಿಕಾರಿದ್ದಾರೆ.

ಸರ್ಕಾರಿ ಕಟ್ಟಡಗಳು ಬಿಜೆಪಿ ಅಥವಾ ಆರ್.ಎಸ್.ಎಸ್ ನವರ ಸ್ವತ್ತಲ್ಲ. ಅದು ಸಾರ್ವಜನಿಕರ ಸ್ವತ್ತು, ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕನ್ನಡ ಬಾವುಟವನ್ನು ನಿಷೇಧಿಸಿದ ಬಿಜೆಪಿ ಪಕ್ಷ ಈ ಮಣ್ಣಿನದಲ್ಲ. ಎಂದು ಎಂ.ಆರ್ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನೀವು ರಾಜ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಿಸಿದ್ರೆ ಮುಂದಿನ ವರ್ಷ ಸ್ವಾತಂತ್ರ್ಯೋತ್ಸವ ನಾಡಧ್ವಜದಿಂದ ಆಚರಿಸುತ್ತೇವೆ.. ಸಿಂಪಲ್.. ದೇಶ ಮೊದಲೋ ರಾಜ್ಯ ಮೊದಲೋ ನೋಡೋಣ” ಎಂದು ಕನ್ನಡಪರ ಹೋರಾಟಗಾರ ಗಣೇಶ್‌ ಕೊಡ್ಲಾಡಿಯವರು ಸವಾಲು ಹಾಕಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಧ್ವಜದ ಬದಲು ರಾಷ್ಟ್ರಧ್ವಜ ಹಾರಿಸಬೇಕು-ಸರ್ಕಾರದ ಆದೇಶ.

ಆಚರಣೆ ಮಾಡುತ್ತಿರುವುದು ಭಾರತದ ರಾಜ್ಯೋತ್ಸವ ಅಲ್ಲ;ಕರ್ನಾಟಕದ ರಾಜ್ಯೋತ್ಸವ-ಶ್ರೀ ಸಾಮಾನ್ಯ ಎಂದು ಓದು ಸಿದ್ದೇಗೌಡ ಎಂಬುವವರು ತಿರುಗೇಟು ನೀಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...