Homeಮುಖಪುಟಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ: ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿರೋಧ

ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ: ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿರೋಧ

- Advertisement -
- Advertisement -

ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಹೊಣೆಗೇಡಿಯಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

“ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ” ಇದು ಕರ್ನಾಟಕದ ಹಿತ ಕಾಯಲು ಕನ್ನಡಿಗರಿಂದ ಆಯ್ಕೆಯಾದ ಸಂಸದರ ಮಾತು. ನಳಿನ್ ಕುಮಾರ್ ಕಟೀಲ್‌ರವರೆ ಚುನಾವಣೆ ಬಂದಾಗ ಮಾತ್ರ ಮೋದಿಗೆ ಕರ್ನಾಟಕವೇ ಮುಖ್ಯವಾಗಿರುತ್ತದೆಯೇ? ಚುನಾವಣೆಗಾಗಿ ಮೂರ್ ಮೂರು ದಿನಕ್ಕೊಮ್ಮೆ ಓಡೋಡಿ ಬಂದು ಗಲ್ಲಿ ಗಲ್ಲಿಯಲ್ಲಿ ಕೈ ಬೀಸಿದ ಮೋದಿಗೆ ಅಂದು ಕರ್ನಾಟಕ ಮುಖ್ಯವಾಗಿತ್ತೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕರ್ನಾಟಕ ಮುಖ್ಯವಾಗಿರದಿದ್ದಕ್ಕೆ ನೆರೆ ಪರಿಹಾರ ಕೊಡಲಿಲ್ಲವೇ? ಬರ ಪರಿಹಾರ ಕೊಡಲಿಲ್ಲವೇ? ಕರ್ನಾಟಕದಲ್ಲಿನ ಯೋಜನೆಗಳನ್ನು ಕಿತ್ತುಕೊಂಡಿದ್ದೇಕೆ? ಒಕ್ಕೂಟ ವ್ಯವಸ್ಥೆಯ ಗಂಧಗಾಳಿ ತಿಳಿಯದ, ಗೌರವಿಸದ ಬಿಜೆಪಿಯಿಂದ ಕರ್ನಾಟಕವೂ ಉದ್ದರವಾಗಿಲ್ಲ, ದೇಶವೂ ಉದ್ದಾರವಾಗಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜ್ಯಗಳೆಲ್ಲ ಸೇರಿಯೇ “ದೇಶ” ಆಗಿರುವುದು ಎಂಬ ಕನಿಷ್ಠ ಜ್ಞಾನ ಕಟೀಲರಿಗಿಲ್ಲದಿರುವುದು ದುರಂತ. ಸಂಸದನಾಗಿ ತನ್ನ ಜವಾಬ್ದಾರಿ ಮರೆತು ಇಂತಹ ಹೊಣೆಗೇಡಿ ಹೇಳಿಕೆ ನೀಡುತ್ತಿರುವ ಬಿಜೆಪಿಯವರನ್ನು ಕರ್ನಾಟಕದ ಜನತೆ ಲೋಕಸಭೆಯ ಚುನಾವಣೆಯಲ್ಲೂ ಫ್ರಿಯಾಗಿ ಟೀಕೆಟ್ ಕೊಡಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ನಿನ್ನೆ ಕಲಬುರಗಿಯಲ್ಲಿ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, “ಅಕ್ಕಿ ವಿತರಣೆಗೆ ಸಂಬಂಧಿಸಿ ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ. ಇತರೆ ರಾಜ್ಯಗಳಿಗೆ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ. ಕಾಂಗ್ರೆಸ್‌ ಸರ್ಕಾರ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ. ಉಚಿತ ಅಕ್ಕಿ ನೀಡುವ ಮುನ್ನ ಪ್ರಧಾನಿ ಮೋದಿ ಅಥವಾ ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಿಲ್ಲ. ಹೀಗಾಗಿ ಅಕ್ಕಿ ಕೊಡುವ ಯೋಜನೆಗೆ ಬೇಕಾದ ಅಕ್ಕಿಯನ್ನು ತಾನೇ ಹೊಂದಿಸಿಕೊಳ್ಳಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ; ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆಂಬುದು ಸತ್ಯವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read