Homeಕರ್ನಾಟಕಅತೃಪ್ತರಿಗೆ ‘ಅಪಶಕುನ’, ಬಿಜೆಪಿಗೆ ತಾತ್ಕಾಲಿಕ ಹಿನ್ನಡೆ, ಮೈತ್ರಿಗೆ ಮುಗುಳ್ನಗೆ..

ಅತೃಪ್ತರಿಗೆ ‘ಅಪಶಕುನ’, ಬಿಜೆಪಿಗೆ ತಾತ್ಕಾಲಿಕ ಹಿನ್ನಡೆ, ಮೈತ್ರಿಗೆ ಮುಗುಳ್ನಗೆ..

- Advertisement -
- Advertisement -

ಸರ್ಕಾರ ಬೀಳುತ್ತೋ ಅಥವಾ ಇಲ್ಲವೋ ಎಂಬ ಚರ್ಚೆಯನ್ನು ಇವತ್ತಿನ (ಶುಕ್ರವಾರ) ಮುಂಜಾನೆ 4 ತಾಸುಗಳು ಹೊಸ ಆಯಾಮಕ್ಕೆ ಒಯ್ದುಬಿಟ್ಟಿವೆ. ಅರ್ಜೆಂಟಾಗಿ ಅಧಿಕಾರ ಹಿಡಿಯಬೇಕೆಂದಿದ್ದ ಬಿಜೆಪಿ ಮತ್ತು ಅತೃಪ್ತರಿಗೆ ತಾತ್ಕಾಲಿಕ ಹಿನ್ನಡೆ ಆಗಿದ್ದರೆ, ಒಂದೊಂದು ದಿನ ಸಿಕ್ಕರೂ ಸಾಕು ಎಂದು ಹಪಹಪಿಸುತ್ತಿದ್ದ ಮೈತ್ರಿ ಸರ್ಕಾರದ ಮುಖದಲ್ಲಿ ಮಂದಹಾಸ ಕಾಣಿಸಿತೊಡಗಿದೆ. ಇಲ್ಲೊಂದು ಇಂಟರೆಸ್ಟಿಂಗ್ ಪಾಯಿಂಟ್ ಅಂದರೆ, ತಮ್ಮ ರಾಜಕೀಯದ ಕೊನೆ ಘಟ್ಟದಲ್ಲಿರುವ ಸ್ಪೀಕರ್ ರಮೇಶಕುಮಾರರಿಗೆ ಈ ಒಟ್ಟೂ ಬಿಕ್ಕಟ್ಟು ಸಂವಿಧಾನ ಮತ್ತು ಸಂಸದೀಯ ಪ್ರಕ್ರಿಯೆಗಳ ಕುರಿತ ಅವರ ಜ್ಞಾನವನ್ನು ದೇಶದ ಎದುರು ಇಡಲು ಒಂದು ಅಪೂರ್ವ ಅವಕಾಶವನ್ನು ಒದಗಿಸಿದೆ!

ಸುಪ್ರಿಂಕೋರ್ಟು ಮಂಗಳವಾರಕ್ಕೆ ವಿಚಾರಣೆ ಮುಂದೂಡಿದ್ದು, ಸಂತಾಪ ಕಲಾಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯ ಅಸ್ತ್ರ ಬಿಟ್ಟಿದ್ದು, ಹಿಂದೆಯೇ ವಿಪ್ ಭೂತವನ್ನು ತೇಲಿಬಿಟ್ಟಿದ್ದು-ಇದೆಲ್ಲವೂ ಆಪರೇಷನ್ ಕಮಲ ಎಂಬ ದಂಧೆಯನ್ನು ಅಧಿಕೃತಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಸದ್ಯಕ್ಕೆ ಶಾಕ್ ನೀಡಿದೆ. ಒಟ್ಟಿನಲ್ಲಿ ಅಧಿಕಾರ ಬಿಡಲೇಬಾರದು ಎಂದು ಒದ್ದಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ರಿಲೀಫ್ ನೀಡಿದೆ.

‘ಈಗಲೇ ರಾಜೀನಾಮೆ ಅಂಗೀಕರಿಸಿ’ ಎಂದು ಸುಪ್ರಿಂಕೋರ್ಟು ಸ್ಪೀಕರ್ ಗೆ ಆದೇಶ ನೀಡಬಹುದು ಎಂದು ಬಿಜೆಪಿಯಷ್ಟೇ ಅಲ್ಲ, ಟಿವಿ ಮಾಧ್ಯಮಗಳು ಮತ್ತು ಅಲ್ಲಿ ಸ್ಪೀಕರ್ ನಾಲೆಡ್ಜ್ ಗಿಂತ ತಮ್ಮದೇ ಜಾಸ್ತಿ ಎಂದೆಲ್ಲ ಪ್ರದರ್ಶನ ಮಾಡಲು ಹೆಣಗಾಡುತ್ತಿರುವ ಕೆಲವು ಪತ್ರಕರ್ತ ಪಂಡಿತರೂ ನಿರೀಕ್ಷೆ ಮಾಡಿದ್ದರು. ಆದರೆ, ಅಲ್ಲಿ ನಡೆದದ್ದೇ ಬೇರೆ. ಅತೃಪ್ತರ ಪರ ಮುಕುಲ್ ರೊಹಟಗಿ ಮಂಡಿಸಿದ ವಾದಕ್ಕೆ ಸ್ಪೀಕರ್ ಪರ ವಾದ ಮಂಡಿಸಿದ ಅಭಿಷೇಕ್ ಸಿಂಘ್ವಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪರ ವಾದ ಮಂಡಿಸಿದ ರಾಹುಲ್ ಧವನ್ ಹಿನ್ನಡೆ ಮಾಡಿದರು. ‘ಈ ಸಂದರ್ಭದಲ್ಲಿ ನಾವು ಸ್ಪೀಕರ್ ಗೆ ನಿರ್ದೇಶನ ಮಾಡಬಾರದೇ’ ಎಂದು ಪ್ರಶ್ನೆ ಮಾಡಿಕೊಂಡ ಸುಪ್ರಿಂಕೋರ್ಟು ವಿಚಾರಣೆಯನ್ನು ಮಂಗಳವಾರದವರೆಗೆ ಮುಂದೂಡಿ, ಅಲ್ಲಿವರೆಗೆ ಯಥಾಸ್ಥಿತಿ ಕಾಪಾಡಲು ಹೇಳುವ ಮೂಲಕ ಮುಂಬೈಯಲ್ಲಿ ಮಜಾ ಮಾಡುತ್ತಿರುವ ಶಾಸಕರಿಗೆ ಆಘಾತವನ್ನು, ವಿಜಯೋತ್ಸಾಹದ ನಿರೀಕ್ಷೆಯಲ್ಲಿ ಸದನಕ್ಕೆ ಬಂದಿದ್ದ ಬಿಜೆಪಿಗೆ ಭರ್ಜರಿ ಶಾಕ್ ಅನ್ನು ನೀಡಿಬಿಟ್ಟಿತು.

ಇದರಿಂದ ಸುಧಾರಿಸಿಕೊಳ್ಳುವ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆಶ್ಚರ್ಯಕರ ರೀತಿಯಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ, ದಿನಾಂಕ ನಿಗದಿ ಮಾಡಿ ಎಂದಿದ್ದಂತೂ ಬಿಜೆಪಿ ಮತ್ತು ಅತೃಪ್ತರ ಪಾಲಿಗೆ ಒಂದು ರೀತಿಯ ಚಾಲೆಂಜೇ ಆಗಿದೆ.

ಸದ್ಯ ಸದನ ಮುಂದೂಡಿಕೆ ಆಗಿದೆ. ಈಗ ಮತ್ತೊಮ್ಮೆ ವಿಪ್ ಜಾರಿಯಾಗಬಹುದು. ವಿಶ್ವಾಸಮತ ಯಾಚನೆ ನಿಗದಿ ಏಕಾಏಕಿ ಆಗುವಂಥದ್ದಲ್ಲ… ಇಲ್ಲಿ ಸಂಕೀರ್ಣ ಕಾನೂನು ಈ ಸಂದರ್ಭಕ್ಕೆ ಹೇಗೆ ಅಪ್ಲೈ ಆಗುತ್ತದೆ ಎಂಬ ಬಗ್ಗೆ ಗೊಂದಲವಿದೆ….

ಆದರೆ, ಸಿಎಂ ಪರ ವಾದ ಮಂಡಿಸಿದ ರಾಜೀವ್ ಧವನ್ ಇದನ್ನು ಪ್ರಜಾತಂತ್ರಕ್ಕೇ ಅಪಾಯ ಎಂಬ ರೀತಿಯಲ್ಲಿ ವಾದ ಮಂಡಿಸುತ್ತ ಆಪರೇಷನ್ ಕಮಲ ಎಂಬ ದಂಧೆಯ ಅಪಾವಿತ್ರ್ಯತೆಯನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ. ಮಂಗಳವಾರ ಅವರು, ಮತ್ತೆ ರೋಷನ್ ಬೇಗ್-ಐಎಂಎ ಮತ್ತು ಇತರ ಕೆಲವು ಅತೃಪ್ತರು ಭಾಗಿಯಾಗಿರಬಹುದು ಎನ್ನಲಾದ ಭ್ರಷ್ಟಾಚಾರದ ಪ್ರಕರಣಗಳನ್ನು ಸುಪ್ರೀಂ ಮುಂದೆ ಇಡಬಹುದು….

ಅಂತ್ಯದಲ್ಲಿ ಬಿಜೆಪಿ ಇಲ್ಲಿ ಸರ್ಕಾರ ರಚಿಸಬಹುದು, ಆದರೆ ಆಪರೇಷನ್ ಕಮಲ ಎಂಬ ವ್ಯಾಪಾರದ ಮೂಲಕ ಪಕ್ಷಾಂತರ ಕಾಯ್ದೆಯನ್ನೇ ಅಪ್ರಸ್ತುತ ಮಾಡುತ್ತ ಅಧಿಕಾರ ಕಬಳಿಸುತ್ತಿರವ ಬಿಜೆಪಿಯ ನಡೆಯೂ ಸುಪ್ರಿಂನಲ್ಲಿ ಚರ್ಚೆಯಾಗಬಹುದು. ಆ ಮೂಲಕ ರಾಷ್ಟ್ರವ್ಯಾಪಿಯಾಗಿ ಈ ಹೇಯ ದಂಧೆಯ ಅನಾವರಣವಾದರೂ ಆಗಲಿ ಎಂಬುದೇ ಪ್ರಜಾತಂತ್ರವಾದಿಗಳ ಆಶಯ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ, ಮೋದಿ ವಿರುದ್ಧದ ಪೋಸ್ಟ್‌ಗೆ ಲೈಕ್‌ ಹಾಕಿದ ಪ್ರಾಂಶುಪಾಲೆಗೆ ರಾಜೀನಾಮೆ ನೀಡುವಂತೆ ಸೂಚನೆ

0
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಮೋದಿ ವಿರುದ್ಧದ ಪೋಸ್ಟ್‌ಗೆ ಲೈಕ್‌ ಮಾಡಿದ ಕಾರಣಕ್ಕೆ ಮುಂಬೈನ ಸೋಮಯ್ಯ ಶಾಲೆಯ ಪ್ರಾಂಶುಪಾಲೆ ಪರ್ವೀನ್ ಶೇಖ್ ಅವರಲ್ಲಿ ಶಾಲಾ ಆಡಳಿತ ಮಂಡಳಿ ರಾಜೀನಾಮೆ...