Homeಕರ್ನಾಟಕಕನ್ನಡ-ಸಂಸ್ಕೃತಿ ಇಲಾಖೆಯಿಂದ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳ ಘೋಷಣೆ: ಆನಂದ್ ತೇಲ್ತುಂಬ್ಡೆ ಸೇರಿ ಹಲವರಿಗೆ ಪ್ರಶಸ್ತಿ

ಕನ್ನಡ-ಸಂಸ್ಕೃತಿ ಇಲಾಖೆಯಿಂದ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳ ಘೋಷಣೆ: ಆನಂದ್ ತೇಲ್ತುಂಬ್ಡೆ ಸೇರಿ ಹಲವರಿಗೆ ಪ್ರಶಸ್ತಿ

- Advertisement -
- Advertisement -

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2022–23 ಹಾಗೂ 2023–24ನೇ ಸಾಲಿನ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಈ ಕುರಿತು ಮಾತನಾಡಿದ್ದು, ಬಸವ ರಾಷ್ಟ್ರೀಯ ಪ್ರಶಸ್ತಿ, ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ, ಟಿ. ಚೌಡಯ್ಯ ಪ್ರಶಸ್ತಿ, ಪ್ರತಿಷ್ಠಿತ ಪಂಪ ಪ್ರಶಸ್ತಿ ಸೇರಿದಂತೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಜನವರಿ 31ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಸವ ರಾಷ್ಟ್ರೀಯ ಪುರಸ್ಕಾರ: ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಪ್ರಖರ ಚಿಂತಕ ಆನಂದ್ ತೇಲ್ತುಂಬ್ಡೆ ಅವರು ಆಯ್ಕೆಯಾಗಿದ್ದಾರೆ. ಡಾ.ಎನ್.ಜಿ. ಮಹದೇವಪ್ಪ ಅವರನ್ನು ಕೂಡ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ: ಧಾರವಾಡದ ಜಿನದತ್ತ ದೇಸಾಯಿ ಹಾಗೂ ಗುಜರಾತ್‌ನ ಗಾಂಧಿ ಸೇವಾಶ್ರಮ ಆಯ್ಕೆಯಾಗಿದೆ.

ಟಿ.ಚೌಡಯ್ಯ ಪ್ರಶಸ್ತಿ; ಕೊಳಲು ವಾದಕ ನಿತ್ಯಾನಂದ ಹಳದಿಪುರ, ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಆಯ್ಕೆಯಾಗಿದ್ದಾರೆ.

ಗಾಯನಯೋಗಿ ಪಂ.ಪಂಚಾಕ್ಷರಿ ಗವಾಯಿ ಪ್ರಶಸ್ತಿ; ಹಿಂದೂಸ್ಥಾನಿ ಗಾಯಕ ಧಾರವಾಡದ ಪಂ. ಸೋಮನಾಥ ಮರಡೂರ ಹಾಗೂ ಕರ್ನಾಟಕ ಸಂಗೀತದ ಮೈಸೂರಿನ ಡಾ.ನಾಗಮಣಿ ಶ್ರೀನಾಥ್ ಆಯ್ಕೆಯಾಗಿದ್ದಾರೆ.

ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ, ಬೆಳಗಾವಿಯ ಚಂದ್ರಕಾಂತ ಪೋಕಳೆ ಆಯ್ಕೆಯಾಗಿದ್ದಾರೆ.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್, ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ ಆಯ್ಕೆಯಾಗಿದ್ದಾರೆ.

ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ, ಮಂಗಳೂರಿನ ಸದಾನಂದ ಸುವರ್ಣ ಅವರು ಆಯ್ಕೆಯಾಗಿದ್ದಾರೆ.

ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ, ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ ಅವರು ಆಯ್ಕೆಯಾಗಿದ್ದಾರೆ.

ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಹಂಪಿ ಡಾ.ಮೊಗಳ್ಳಿ ಗಣೇಶ್, ಉತ್ತಮ ಕಾಂಬ್ಳೆ , ದಾವಣಗೆರೆಯ ಬಿ.ಟಿ.ಜಾಹ್ನವಿ ಅವರು ಆಯ್ಕೆಯಾಗಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಬೆಂಗಳೂರಿನ ಕೆ. ಮರುಳಸಿದ್ದಪ್ಪ, ಬೆಳಗಾವಿಯ ಹಸನ್‌ ನಯೀಂ ಸುರಕೋಡ, ಕೋಲಾರದ ಕೆ. ರಾಮಯ್ಯ, ಬಳ್ಳಾರಿಯ ವೀರಸಂಗಯ್ಯ ಅವರು ಆಯ್ಕೆಯಾಗಿದ್ದಾರೆ.

ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್, ಮಂಡ್ಯದ ಡಾ. ಆರ್.ಸುನಂದಮ್ಮ, ಕಲಬುರಗಿಯ ಮೀನಾಕ್ಷಿ ಬಾಳಿ, ಬೆಂಗಳೂರಿನ ಡಾ. ವಸುಂಧರಾ ಭೂಪತಿ ಅವರು ಆಯ್ಕೆಯಾಗಿದ್ದಾರೆ.

ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ, ಮಂಗಳೂರಿನ ಡಾ. ಬಿ.ಶೆಟ್ಟಿ ಆಯ್ಕೆಯಾಗಿದ್ದಾರೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಮೈಸೂರಿನ ಜಿ.ಎಲ್.ಎನ್.ಸಿಂಹ,  ಕಲಬುರಗಿಯ ಬಸವರಾಜ್ ಎಲ್.ಜಾನೆ ಆಯ್ಕೆಯಾಗಿದ್ದಾರೆ.

ಜಾನಪದಶ್ರೀ ಪ್ರಶಸ್ತಿ– ವಾದನ: ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ , ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ ಅವರು ಆಯ್ಕೆಯಾಗಿದ್ದಾರೆ.

ಜಾನದಪಶ್ರೀ ಪ್ರಶಸ್ತಿ– ಗಾಯನ: ಬೀದರ್‌ನ ಕಲ್ಲಪ್ಪ ಮಿರ್ಜಾಪುರ, ಚಿತ್ರದುರ್ಗದ ಹಲಗೆ ದುರ್ಗಮ್ಮ ಅವರು ಆಯ್ಕೆಯಾಗಿದ್ದಾರೆ.

ನಿಜಗುಣ–ಪುರಂದರ ಪ್ರಶಸ್ತಿ: ಮೈಸೂರಿನ ಎಂ.ಕೆ.ಸರಸ್ವತಿ, ಧಾರವಾಡದ ಅಕ್ಕಮಹಾದೇವಿ ಮಠ ಆಯ್ಕೆಯಾಗಿದೆ.

ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸ್ತ್ರಿ, ಮೈಸೂರಿನ ಕೃಷ್ಣಗಿರಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್, ಬೆಂಗಳೂರಿನ ರೇವತಿ ನರಸಿಂಹನ್‌ ಅವರು ಆಯ್ಕೆಯಾಗಿದ್ದಾರೆ.

ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ರಂಗನ್‌, ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ ಅವರು ಆಯ್ಕೆಯಾಗಿದ್ದಾರೆ.

ಪಂಪ ಪ್ರಶಸ್ತಿ: ಹಿರಿಯ ಸಾಹಿತಿ, ಶಿವಮೊಗ್ಗದ ನಾ. ಡಿಸೋಜಾ ಅವರು ಆಯ್ಕೆಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...