Homeಮುಖಪುಟರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ‘ಮೃದು ನಕ್ಸಲಿಸಂ’ ಕಡೆಗೆ ತಿರುಗಿಸಿದ್ದಾರೆ: ಹಿಮಂತ ಬಿಸ್ವಾ ಶರ್ಮಾ

ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ‘ಮೃದು ನಕ್ಸಲಿಸಂ’ ಕಡೆಗೆ ತಿರುಗಿಸಿದ್ದಾರೆ: ಹಿಮಂತ ಬಿಸ್ವಾ ಶರ್ಮಾ

- Advertisement -
- Advertisement -

‘ಕಲ್ಲಿದ್ದಲು ಒಲೆ’ ವಿವಾದದ ನಂತರ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಸಿದ್ಧಾಂತಗಳಿಂದ ಪಕ್ಷವನ್ನು ಮೃದು ನಕ್ಸಲಿಸಂ ಕಡೆಗೆ ತಿರುಗಿಸಿದ್ದಾರೆ’ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ತಮ್ಮ ವಿಡಿಯೋ ಪೋಸ್ಟ್ ಮಾಡಿರುವ ಶರ್ಮಾ, ‘ಕಾಂಗ್ರೆಸ್ ಪಕ್ಷದ ಮೂಲ ತತ್ವವನ್ನು ಮಹಾತ್ಮ ಗಾಂಧಿ ಕಲ್ಪಿಸಿಕೊಂಡರು, ಪ್ರಸ್ತುತ ಅದು ನಗರ ನಕ್ಸಲ್ ಪ್ರಾಬಲ್ಯದ ನಾಯಕತ್ವದಿಂದ ತನ್ನ ಪ್ರಭಾವ ಕಳೆದುಕೊಂಡಿದೆ’ ಎಂದು ಹೇಳಿಕೆ ನೀಡಿದ್ದಾರೆ.

‘ಕಾಂಗ್ರೆಸ್ ನ ರಾಜಕೀಯ ಮೃದು ನಕ್ಸಲೀಯರದ್ದಾಗಿದೆ. ಅವರ ಘೋಷಣೆಗಳು ಗಾಂಧಿ ತತ್ವಗಳನ್ನು ಪ್ರತಿಬಿಂಬಿಸುವುದಿಲ್ಲ. ನಾನು 22 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದರೂ ಅಂತಹ ಘೋಷಣೆಗಳು ಇರಲಿಲ್ಲ. ಅವರ ಘೋಷಣೆಗಳು ಮೃದು ಮತ್ತು ವಿಭಿನ್ನ, ಅವರು ಕಾಂಗ್ರೆಸ್‌ನ ಆತ್ಮವನ್ನೂ ಕೊಂದಿರುವುದನ್ನು ನಾನು ನೋಡಿದ್ದೇನೆ’ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಅಸ್ಸಾಂನ ರಾಜ್ಯಸಭಾ ಸಂಸದೆ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪಬಿತ್ರಾ ಮಾರ್ಗರಿಟಾ ಅವರು ಮಾತನಾಡಿ, ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮೂಲಕ ಅಸ್ಸಾಂನಲ್ಲಿ ತಮ್ಮ ಸಂಘಟನಾ ಶಕ್ತಿಯನ್ನು ಸಾಬೀತುಪಡಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ಅವರು ಪ್ರಧಾನಿಯಾಗಿದ್ದಾರೆ; ಇಂಡಿಯಾ ಮೈತ್ರಿಕೂಟದ ಸಂಭಾವ್ಯ ಅಭ್ಯರ್ಥಿಯ ಸಭೆಯಲ್ಲಿ ಕೇವಲ 500 ರಿಂದ 600 ಜನರು ಮಾತ್ರ ಜಮಾಯಿಸಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಅವರು ಗುವಾಹಟಿಯಲ್ಲಿ ಜನನಿಬಿಡ ಪ್ರದೇಶಗಳಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಅವರು ಮಾರ್ಗಗಳನ್ನು ತಿರುಗಿಸಿ ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಹೊಂದಿರುವ ಗುವಾಹಟಿ ನಗರವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು ಮಾಧ್ಯಮದವರ ಗಮನ ಸೆಳೆಯಲು, ಅವರು ತಮ್ಮ ಯಾತ್ರೆಗೆ ಜನರಿರುವ ರಸ್ತೆಯನ್ನು ಆರಿಸಿಕೊಂಡರು, ಅವರನ್ನು ತಡೆದ ಪೊಲೀಸರೊಂದಿಗೆ ಜಗಳವಾಡಿದರು’ ಎಂದು ಅವರು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಮುಖಾಮುಖಿ ಗುವಾಹಟಿ ನಗರ ವ್ಯಾಪ್ತಿಯಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳಿಗೆ ಕಾರಣವಾಯಿತು. ಘರ್ಷಣೆಯ ನಂತರ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಮೇಲೆ ಗಲಭೆ, ಕಾನೂನುಬಾಹಿರ ಸಭೆ ಮತ್ತು ಕ್ರಿಮಿನಲ್ ಪಿತೂರಿ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ರಾಜ್ಯದ ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಕನಿಷ್ಠ ಐದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಮತ್ತು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾರ್ಗರಿಟಾ ಆರೋಪಿಸಿದ್ದಾರೆ.

‘ಇದು ಭಾರತ್ ಜೋಡೋ ನ್ಯಾಯ್ ಯಾತ್ರೆ ಅಲ್ಲ, ಇದು ‘ಕಾನೂನು ಮತ್ತು ಸುವ್ಯವಸ್ಥೆ ತೋಡೋ’ ಯಾತ್ರೆ, ಅಸ್ಸಾಂನಲ್ಲಿ ‘ಬ್ಯಾರಿಕೇಡ್ ಟೋಡೋ ಯಾತ್ರೆ’. ನಕ್ಸಲೀಯ ಶೈಲಿಯಲ್ಲಿ ರಾಹುಲ್ ಗಾಂಧಿ ಜನರನ್ನು ಪ್ರಚೋದಿಸಿದರು’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ; ಪತ್ರಕರ್ತನ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ; ಸಹಾಯಕ್ಕೆ ಬಾರದ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...