Homeಅಂಕಣಗಳುಕೀಲಾರ ಟೆಂಟ್ ಹೌಸ್-3: ಒಡಲನ್ನು ಸುಡುವ ಕಾಣದ ಸಂಗತಿಗಳು: ಲೀ-ಚಾಂಗ್ ಡಾಂಗ್'ನ 'ಬರ್ನಿಂಗ್'

ಕೀಲಾರ ಟೆಂಟ್ ಹೌಸ್-3: ಒಡಲನ್ನು ಸುಡುವ ಕಾಣದ ಸಂಗತಿಗಳು: ಲೀ-ಚಾಂಗ್ ಡಾಂಗ್’ನ ‘ಬರ್ನಿಂಗ್’

- Advertisement -
- Advertisement -

“Economic imperialism is the least troublesome form of domination for the dominating power. It does not give rise to so much resentment as political domination because many people do not notice it”

-Jawaharlal Nehru

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಷ್ಟೇ ಅಲ್ಲ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ, ಸಾಮಾನ್ಯರಿಗೆ ಕಾಣದ ಅಥವಾ ತಮ್ಮ ಗ್ರಹಿಕೆಗೆ ಸಿಗದ ಸಂಗತಿಗಳು  ಅವರನ್ನು ಹೆಚ್ಚು ಭಾದಿಸುತ್ತಿವೆ ಮತ್ತು ಅವು ಅವರ ಬದುಕುನ್ನು ನಿರೂಪಿಸುತ್ತಿವೆ. ರಾಷ್ಟ್ರೀಯತೆ, ಧರ್ಮ, ಜಾತಿ, ಆಹಾರ, ಮಾನವ ಹಕ್ಕು, ವ್ಯಕ್ತಿ ಸ್ವಾತಂತ್ರ್ಯ….., ಹೀಗೆ ಹಲವು ಕಣ್ಣಿಗೆ ಕಾಣುವ ಮತ್ತು ಗ್ರಹಿಸುವ ಸಂಗತಿಗಳಾಚೆ ಇರುವಂತಹವು.

ಇಂತಹ ಸಂಗತಿಗಳು, ಸಾಹಿತ್ಯ-ಕಲೆಯಲ್ಲಿ ಅಭಿವ್ಯಕ್ತಿಯಾಗಿದೆಯೇ? ದಿನ ನಿತ್ಯದ ನಮ್ಮ ಬದುಕಿನಲ್ಲಿ ಅವುಗಳ ಬಗ್ಗೆ ಚರ್ಚಿಸಲಾಗುತ್ತಿದೆಯೇ? ಅಥವಾ, ಅದರ ಬಗ್ಗೆ ಪ್ರತಿರೋಧಗಳು ಹೋರಾಟ ರೂಪದಲ್ಲೇನಾದರೂ ಬಂದಿವಿಯೇ? ನನ್ನ ಸೀಮಿತ ತಿಳಿವಳಿಕೆಲ್ಲಿ ಹೇಳುವುದಾದಾರೆ, ಕನಿಷ್ಟ ಪ್ರಮಾಣದಲ್ಲಿಯೂ ಇಲ್ಲ. ಕೆಲವೊಮ್ಮೆ, ಅಲ್ಲೊಂದು-ಇಲ್ಲೊಂದು ಕಾಣಿಸಿಕೊಂಡಿವೆಯಾದರೂ, ಅದು ಒಂದು ದೇಶದ ಮೇಲೆ ಆದ ಪರಿಣಾಮದ ನೆಲೆಯಲ್ಲಿ ಬಂದಿದೆಯೇ ಹೊರತು ಸಮುದಾಯದೊಳಗಿನ  ವ್ಯಕ್ತಿಯ ವೈಕ್ತಿಕ ಜೀವನದ ಮೇಲೆ ಅದರ ಪರಿಣಾಮ ಏನು? ಕನಿಷ್ಟ ಈಗಿನ ತಲೆಮಾರಿನ ಮೇಲೆ ಅದರ ಪರಿಣಾಮ ಏನು? ಏನೂ ಇಲ್ಲ.

‘Alexandria Avranas’ ನ  ‘Miss Violence’ ಎಂಬ ಸಿನಿಮಾ, 2012-13ರಲ್ಲಿ ಗ್ರೀಸ್ ದೇಶದಲ್ಲಿ ಉಂಟಾದ ಆರ್ಥಿಕ ಕುಸಿತದ ಬಗ್ಗೆ ಒಂದು ಗ್ರೀಕ್ ಕುಟುಂಬದ ಜೀವನವನ್ನು ರೂಪಕವಾಗಿಟ್ಟುಕೊಂಡು ಮೂಡಿದ ಚಿತ್ರ. ಇಡೀ ದೇಶದ ಬವಣೆಯನ್ನು ಮತ್ತದರ ಸದ್ಯದ ಪರಿಸ್ಥಿತಿಯನ್ನು ನಿರ್ದೇಶಕ ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾನೆ. ನೋಡಿದ ಏಳು ವರ್ಷಗಳ ನಂತರವು ಆ ವಸ್ತು ಕಾಡುತ್ತಿದೆ. ಅದೇ ರೀತಿ, 2017 ರಲ್ಲಿ ನೋಡಿದ ಬಲ್ಗೇರಿಯಾ ದೇಶದ ‘Directions’  (ನಿರ್ದೇಶಕ:Stephan Komandarev). ಈ ಸಿನಿಮಾ, ಆ ದೇಶದ  ಟ್ಯಾಕ್ಸಿ ಡ್ರೈವರ್ ಗಳ ಒಂದು ರಾತ್ರಿಯ ಬದುಕಿನ ಚಿತ್ರಣ ಇಡೀ ಬಲ್ಗೇರಿಯಾ ದೇಶದ ಆರ್ಥಿಕ ಸಂಕಷ್ಟವನ್ನ ಚರ್ಚಿಸುತ್ತದೆ.

2018ರಲ್ಲಿ ಬಿಡುಗಡೆಯಾದ ದಕ್ಷಿಣ ಕೋರಿಯಾದ ನಿರ್ದೇಶಕ ‘ಲೀ-ಚಾಂಗ್ ಡಾಂಗ್’ನ  ‘ಬರ್ನಿಂಗ್’ ಚಿತ್ರ,  ಮೇಲೆ ಪ್ರಸ್ತಾಪ ಮಾಡಿದ ಎರಡು ಸಿನಿಮಾಗಳಿಗಿಂತ ಸ್ವಲ್ಪ ಭಿನ್ನವಾದದ್ದು ಮತ್ತು ಹೆಚ್ಚು ವಿಸ್ತಾರವಾದದ್ದು. ಇಲ್ಲಿ ನಿರ್ದೇಶಕ ಹಲವು ಸಂಗತಿಗಳನ್ನ ಚರ್ಚಿಸುತ್ತಾನೆ ಮತ್ತು ಯಾವುದನ್ನು ತೀರ್ಪು ನೀಡುವಂತೆ ಪ್ರಸ್ತುತಪಡಿಸೋದಿಲ್ಲ, ಎಲ್ಲವನ್ನು ಅಪೂರ್ಣವಾಗಿ ಹೇಳಿ ಬಿಟ್ಟುಬಿಡುತ್ತಾನೆ. ಪೂರ್ಣಗೊಳಿಸಿಕೊಳ್ಳುವ ಜವಬ್ದಾರಿ ಪ್ರೇಕ್ಷಕನದು. ಇದು ನಿಷ್ಕ್ರಿಯ ಪ್ರೇಕ್ಷಕನನ್ನು ಕ್ರಿಯಾಶೀಲನನ್ನಾಗಿ ಮಾಡುವ ಕ್ರಮವಿರಬಹುದು.

ಆರ್ಥಿಕ ಉದಾರೀಕರಣಕ್ಕೆ ಒಳಗಾದ, ಅಮೇರಿಕಾ ಎಂಬ ಬಲಿಷ್ಟ ರಾಷ್ಟ್ರದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವ ಮತ್ತು ತನ್ನ ಸೋದರ ದೇಶ ಉತ್ತರ ಕೊಯಾದೊಂದಿಗೆ ಇಂದಿಗೂ ತಕರಾರು ಹೊಂದಿರುವ ಆಧುನಿಕ ದಕ್ಷಿಣ ಕೋರಿಯಾದ ಹಲವು ಸಂಗತಿಗಳು ತನ್ನ ದೇಶದ ಯುವ ಪೀಳಿಗೆಯನ್ನು ಮತ್ತು ಅವರ ಬದುಕನ್ನು ಹೇಗೆ ರೂಪಿಸುತ್ತಿವೆ ಮತ್ತು ಆ ಯುವ ಪೀಳಿಗೆಯ ಆಸೆ, ಹತಾಶೆ, ದುಗುಡ,  ಕೋಪಗಳೇನು? ಎಂಬುದು ಬರ್ನಿಂಗ್ ನ ಮೂಲ ದ್ರವ್ಯ. ಆರ್ಥಿಕ ಉದಾರಿಕರಣದಿಂದ ಉಂಟಾದ ನಿರುದ್ಯೋಗ, ಅಮೇರಿಕಾ ದೇಶದ ಹೊಸ ನಾಯಕನ ದಿಢೀರ್ ನಿರ್ಧಾರಗಳು ದಕ್ಷಿಣ ಕೊರಿಯಾದ ಮೇಲೆ ಉಂಟು ಮಾಡುತ್ತಿರುವ ಪರಿಣಾಮ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವಿನ ಜಗಳ  ಮತ್ತು ಆ ಜಗಳ ಅವರ, ಅದರಲ್ಲೂ ಗಡಿ ಪ್ರದೇಶದ ಜನರ  ಸ್ಮೃತಿಯಿಂದ ಮಾಸದಿರುವುದು ಇವೆೆೆೆೆೆೆಲ್ಲವೂ ಅಡಕವಾಗಿವೆ

‘ಬರ್ನಿಂಗ್’  ಮೇಲು ನೋಟಕ್ಕೆ ಒಂದು ಮಿಸ್ಟರಿ, ರಿವೆಂಜ್ ಅಥವಾ ಕ್ರೈಮ್ ಥ್ರಿಲರ್ ಸಿನಿಮಾವಾಗಿ  ಕಾಣಿಸಿಕೊಳ್ಳಬಹುದು! ಆದರೆ ಅದಲ್ಲ. ಅದರಲ್ಲಿ ಬರುವ ಮೂರು ಪ್ರಧಾನ ಪಾತ್ರಗಳು ‘ವಿಲಕ್ಷಣವಾಗಿವೆ’ ಅನ್ನಿಸಲೂಬಹುದು. ಹೌದು, ನಿಜ. ನಮ್ಮ ಸಮಾಜದ ಕಳೆದ ಅರ್ಧ ಶತಮಾನದ ಇತಿಹಾಸ ನೋಡಿದ್ರು (ಅತೀ ರಮ್ಯವಾಗೇನಲ್ಲ, ಸಾಧಾರಣವಾಗಿ) ಈಗ ನಾವು ಬದುಕುತ್ತಿರುವ ಸಮಾಜ ‘ವಿಲಕ್ಷಣ’ವಾಗಿ ಕಾಣಿಸುತ್ತದೆ.

ಮೊದಲೇ ಹೇಳಿದ ಹಾಗೆ ‘ಬರ್ನಿಂಗ್’ನಲ್ಲಿ ಮೂರು ಪ್ರಧಾನ ಪಾತ್ರಗಳು 1. Lee jongsu (Too Ah-in) 2. Ben (Steven Yeun) ಮತ್ತು 3. Shin Haemi (Neon Jong-Lee). ಇವರು ಇಡಿ ಸಿನಿಮಾದ ಜೀವಾಳ, ಈ ಮೂರು ಪಾತ್ರಗಳು ಆರ್ಥಿಕವಾಗಿ ಮೂರು ವರ್ಗಗಳನ್ನ ಪ್ರತಿನಿಧಿಸುತ್ತಾರೆ. ಈ ಮೂರು ನಟ/ನಟಿಯರು,  ಆ ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡಿದ್ದಾರೆನೋ ಅನ್ನುವಷ್ಟು ಅದ್ಭುತವಾಗಿ ನಟಿಸಿದ್ದಾರೆ.  ಲೀ-ಚಾಂಗ್ ಒಂದು ಕಡೆ ಹೇಳುತ್ತಾನೆ “ನಾನು ನನ್ನ ಸಿನಿಮಾದ ನಟ/ನಟಿಯರಿಗೆ ಸ್ವಾಭಾವಿಕವಾಗಿ ಮತ್ತು ಆದಷ್ಟು ಅವರಿಗೆ ಅನಿಸಿದ ರೀತಿ ನಟಿಸೋದಿಕ್ಕೆ ಅವಕಾಶ ಕೊಡುತ್ತೇನೆ, ಈ ಸಿನಿಮಾದಲ್ಲಂತೂ ನಾನು ಅವರಿಗೆ ಏನೊಂದು ವಿವರಿಸಲು ಹೋಗಿಲ್ಲ” ಅಂತ. Haemi ಪಾತ್ರವನ್ನು ಅಭಿನಯಿಸಿರುವ Jeon Jong-Leeಳ ನಟನೆ ಅಂತೂ ಅಬ್ಬಾ! ಅದರ ಬಗ್ಗೆನೇ ಒಂದಷ್ಟು ಚರ್ಚಿಸಬಹುದು. ಸಿನಿಮಾದ ಒಂದು ದೃಶ್ಯವನ್ನು ನೆನಪು ಮಾಡಿಕೊಳ್ಳೊದಾದ್ರೆ, ಹೋಟೇಲೊಂದರಲ್ಲಿ jongsu ಮತ್ತು haemi ನಡುವೆ ಸಂಭಾಷಣೆ ನಡೆಯುತ್ತಿದೆ, ಮಾತಿನ ಮಧ್ಯ haemi ಇಲ್ಲದ ಒಂದು ಕಿತ್ತಲೆ ಹಣ್ಣನ್ನು ಇದೆ ಎಂದು ಕಲ್ಪಿಸಿ ಕೈಯಲ್ಲಿ ಹಿಡಿದು ಅದನ್ನು ಬಿಡಿಸಿ ತಿನ್ನುವ ಮತ್ತು ಅದನ್ನು ಸ್ವಾದಿಸುವ ನಟನೆ ವಾವ್ಹ್! ಅದ್ಭುತ. ನಿರ್ದೇಶಕ ಲೀ-ಚಾಂಗ್ ಕೂಡ ಕಾಣದ ಸಂಗತಿಗಳನ್ನು ನಮ್ಮದೆಗೆ ಇಳಿಸುತ್ತಿದ್ದಾನೆನೋ!?. ಮತ್ತೊಂದು ದೃಶ್ಯ: ಇಡೀ ಚಿತ್ರದ ಕೇಂದ್ರ ಇದೇ ಅನಿಸುವ ಒಂದು ದೃಶ್ಯದಲ್ಲಿ, Jong-su ಮನೆಯ ಆವರಣದಲ್ಲಿ ಮೂವರು ಮರ್ವಾನಾ ಸೇದುತ್ತಾ ಕುಳಿತ್ತಿರುತ್ತಾರೆ, (ಪ್ರತಿಯಂದು ಪಾತ್ರಗಳು Explore ಆಗೋ ಸಂದರ್ಭ) ಇದ್ದಕ್ಕಿದ್ದಾಗೆ Haemi ಮೇಲೆದ್ದು ಬೆಳಕು ಮತ್ತು ಕತ್ತಲೆ ಸಂಧಿಸುವ ಆ ಮಬ್ಬಿನಲಿ ತನ್ನ ಮೇಲುಡಿಗೆಯನ್ನು ಕಳಚಿ ಅದನ್ನು ವೃತ್ತಾಕಾರವಾಗಿ ಮೇಲೆ ತಿರಗುತ್ತಾ, ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ ನೋಡುತ್ತಾ ನರ್ತಿಸುವ ದೃಶ್ಯ, ಹಾಗೇ ಪ್ರೇಕ್ಷಕನ ಎದೆಯಲ್ಲಿಳಿಯುತ್ತದೆ. ಹೀಗೆ ಇವಳ ನಟನೆಗೆ ಸಾಕಷ್ಟು ಉದಾಹರಣೆ ಕೊಡಬಹುದು.

ನಿರ್ದೇಶಕ: ಲೀ ಚಾಂಗ್-ಡಾಂಗ್

‘ಬರ್ನಿಂಗ್’ ಸಿನಿಮಾದ Jong-su ಪಾತ್ರ ಆಗಾಗ್ಗೆ ಕೇಳಿಕೊಳ್ಳಿವ ಪ್ರಶ್ನೆ “What kind of story can write?”.  ಅದೇ ರೀತಿ Lee Chong-dong ಕೂಡ ಸಿನಿಮಾ ಮಾಡುವ ಮೊದಲಿಗೆ” What is cinema for?” ಅನ್ನೊ ಪ್ರಶ್ನೆಯನ್ನ ಮುಂದಿಟ್ಟುಕೊಳ್ಳುತ್ತಾನಂತೆ. ಅವನ ಮೊದಲ ಸಿನಿಮಾ 2010ರಲ್ಲಿ ತೆರೆಕಂಡ ‘ಪೊಯೆಟ್ರಿ’ ಜಗತ್ತಿನಾದ್ಯಂತ ಹೆಸರು ಮಾಡಿತು. ಆ ನಂತರ ಮತ್ತು ಬರ್ನಿಂಗ್ ಮಾಡುವ ಎಂಟು ವರ್ಷಗಳ ನಡುವೆ ಸುಮಾರು ವಿಷಯಗಳ ಕುರಿತು ಮೂರು ಸ್ಕ್ರಿಪ್ಟ್ ರೆಡಿಯಾಗಿದ್ರು ಅವುಗಳನ್ಬ ಸಿನಿಮಾ ಮಾಡಬೇಕು ಅಂತ ಲೀಗೆ ಅನ್ಸೋದಿಲ್ಲ. ಜಪಾನಿನ ಲೇಖಕ ‘ಹರುಕಿ ಮುರಕಮಿ’ಯ ಸಣ್ಣ ಕಥೆ ‘ಬಾರ್ನ್ ಬರ್ನಿಂಗ್’ ಓದಿದ ಮೇಲೆ, ಈ ವಸ್ತುವನ್ನು ಸಮಕಾಲಿನ ದಕ್ಷಿಣ ಕೋರಿಯಾದ ಸಮಾಜವನ್ನು ಅದರಲ್ಲೂ ಯುವ ತಲೆಮಾರಿನ ತಲ್ಲಣಗಳನ್ನು ಅಭಿವ್ಯಕ್ತಿಸಬಹುದು ಅನಿಸಿದ್ದರಿಂದ, ಮುರಕಮಿಯ ‘ಬಾರ್ನ್ ಬರ್ನಿಂಗ್’ ಸಣ್ಣ ಕಥೆ, ಲೀ ಚಾಂಗ್’ನ ‘ಬರ್ನಿಂಗ್’ ಸಿನಿಮಾವಾಗಿ  ರೂಪಾಂತರವಾಯ್ತು. ಒಂದು ಸಿನಿಮಾದ ಯಶಸ್ಸು, ಕೀರ್ತಿಯ 8 ವರ್ಷಗಳ ನಂತರದಲ್ಲಿ ಬಂದ್ದದ್ದು ‘ಬರ್ನಿಂಗ್’. ಇದಕ್ಕೆ ಏನು ಹೇಳೋದು,  ಆಶ್ಚರ್ಯವಷ್ಟೆ.

ಲೀ-ಚಾಂಗ್’ನ ವೃತ್ತಿ ಜೀವನ ಮತ್ತೂ ಆಶ್ಚರ್ಯವಾಗಿದೆ. ಪ್ರಾರಂಭದ ದಿನಗಳಲ್ಲಿ  ಪ್ರಾಥಾಮಿಕ ಶಾಲೆಯ ನಂತರ, ಪ್ರೌಢಶಾಲೆಯ ಮೇಷ್ಟ್ರಾಗಿ ತದನಂತರ, ರಂಗ ನಿರ್ದೇಶಕನಾಗಿ, ಸಾಹಿತ್ಯ ಬರಹಗಾರನಾಗಿ, ಪತ್ರಿಕೆ ಅಂಕಣ ಬರಹನಾಗಿ, ದ.ಕೋರಿಯಾ ಸರ್ಕಾರದ ‘ಸಂಸ್ಕೃತಿ ಇಲಾಖೆ’ಯ ಸಚಿವನಾಗಿ  ಹೀಗೆ ವೈವಿಧ್ಯ ವೃತ್ತಿಗಳಲ್ಲಿ ಬೆಳೆದ ಲೀ ಚಾಂಗ್, ಪ್ರಸ್ತುತ ದ.ಕೋರಿಯಾದಲ್ಲಿ ಸಾಹಿತಿ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕನಾಗಿ ಹೆಸರುವಾಸಿಯಾಗಿದ್ದಾನೆ. ೧೯೮೨ರ ಅವನ ಸಣ್ಣ ಕಥೆಗಳ ಸಂಗ್ರಹಕ್ಕೆ ದ.ಕೋರಿಯದ ಪ್ರತಿಷ್ಠಿತ ‘ಕೊರಿಯನ್ ಟೈಮ್ಸ್ ಲಿಟರರಿ’ ಪ್ರಶಸ್ತಿ ಸಂದಿದೆ.

ಲೀ-ಚಾಂಗ್’ನ ಸಿನಿಮಾ ವೃತ್ತಿ ಪ್ರಾರಂಭವಾದದ್ದು ಒಬ್ಬ ಸಹ ಬರಹಗಾರ ಮತ್ತು ಸಹ ನಿರ್ದೇಶಕನಾಗಿ ‘ಟು ದ ಸ್ಕೇರಿ ಐಲ್ಯಾಂಡ್’ ಎಂಬ ಸಿನಿಮಾದಿಂದ. ಇದು ಕೋರಿಯಾದ ಮೊದಲ ಸ್ವತಂತ್ರ ನಿರ್ಮಾಣದಲ್ಲಿ ಬಂದ ಸಿನಿಮಾ. ಇವನ ಮೊದಲ ನಿರ್ದೇಶನದ ಸಿನಿಮಾ 1997ರಲ್ಲಿ ತೆರೆಕಂಡ ‘ಗ್ರೀನ್ ಫಿಶ್’. ಇದು ಕೋರಿಯಾದಲ್ಲಿ ಸಾಕಷ್ಟು ಪ್ರಸಂಶೆ ಮತ್ತು ಪ್ರಶಸ್ತಿಗಳನ್ನು ಪಡೆಯಿತು. ಆ ನಂತರದ ಇವನ ಸಿನಿಮಾಗಳು ‘ಪೆಪ್ಪರ್ಮೆಂಟ್ ಕ್ಯಾಂಡಿ (1999) ‘ಓಯಸಿಸ್ಸ್'(2002), ‘ಸಿಕ್ರೇಟ್ ಸನ್ ಸೈನ್'(2007), ‘ಪೊಯೆಟ್ರಿ'(2010) ಮತ್ತು ಈಗ ಬಂದಿರುವ ‘ಬರ್ನಿಂಗ್'(2018) ಜಗತ್ತಿನಾದ್ಯಂತ ವಿಮರ್ಶೆ, ಪ್ರಸಂಶೆ, ಪ್ರಶಸ್ತಿಗಳನ್ನ ಪಡೆದಿವೆ. ಇವನ ಬಹುತೇಕ ಸಿನಿಮಾಗಳು ಒಂದು ಸಮಾಜದಲ್ಲಿನ ವ್ಯಕ್ತಿಗಳ ವ್ಯಯಕ್ತಿಕ ತಲ್ಲಣಗಳನ್ನ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ದಾಟಿಸುತ್ತವೆ. ಪೋಲ್ಯಾಂಡ್ ದೇಶದ ‘ಕಿಸ್ಲೋಸ್ಕಿ’ ಮತ್ತು ಟರ್ಕಿ ದೇಶದ ‘ನೂರಿ ಬಿಲ್ಗೆ’ ರೀತಿಯಲ್ಲಿ.

(ಅಭಿಪ್ರಾಯಗಳು ಸ್ನೇಹಿತರಾದ ಮನು ಮೈಸೂರು ಅವರೊಂದಿಗಿನ ಚರ್ಚೆಯಲ್ಲಿ ಹುಟ್ಟಿಕೊಂಡತಹವು)

ಯದುನಂದನ್ ಕೀಲಾರ, ಅವರಿಗೆ ಜಾಗತಿಕ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...