Homeಮುಖಪುಟ'ಪಿಎಫ್‌ ಪಾವತಿಸಲು ಅವರು ಅಪ್ಪನ ಸಾವಿಗಾಗಿ ಕಾಯುತ್ತಿದ್ದರು': ಇಪಿಎಫ್‌ಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕುಟುಂಬ

‘ಪಿಎಫ್‌ ಪಾವತಿಸಲು ಅವರು ಅಪ್ಪನ ಸಾವಿಗಾಗಿ ಕಾಯುತ್ತಿದ್ದರು’: ಇಪಿಎಫ್‌ಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕುಟುಂಬ

- Advertisement -
- Advertisement -

“ನನ್ನ ತಂದೆಯ ಪಿಎಫ್ ಹಣ ನೀಡಲು ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಹೇಳಿ 9 ವರ್ಷಗಳ ಕಾಲ ಅಧಿಕಾರಿಗಳು ಸತಾಯಿಸಿದ್ದರು. ಆದರೆ, ತಂದೆ ಮೃತಪಟ್ಟ ಬೆನ್ನಲ್ಲೇ ಯಾವುದೇ ಹೆಚ್ಚುವರಿ ದಾಖಲೆ ಕೇಳದೆ ತಕ್ಷಣ ಹಣ ನೀಡಿದ್ದಾರೆ. ಕನಿಷ್ಠ ಪಕ್ಷ ಅವರು ತಂದೆಯ ಮರಣ ಪ್ರಮಾಣ ಪತ್ರ ಕೂಡ ಕೇಳಿಲ್ಲ” ಈ ಮಾತು ಹೇಳಿರುವುದು ಕಳೆದ ತಿಂಗಳು ಕೇರಳದ ಕೊಚ್ಚಿಯಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಚೇರಿಯೊಳಗೆ ಆತ್ಮಹತ್ಯೆ ಮಾಡಿಕೊಂಡ 69 ವರ್ಷದ ಕೆಪಿ ಶಿವರಾಮನ್ ಅವರ 39 ವರ್ಷದ ಪುತ್ರ ಪ್ರದೀಶ್.

ಕಳೆದ 9 ವರ್ಷಗಳಿಂದ ಅಧಿಕಾರಿಗಳು ಪಿಎಫ್ ಹಣ ನೀಡದೆ ಶಿವರಾಮನ್ ಅವರನ್ನು ಸತಾಯಿಸಿದ್ದರು. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಕುಟುಂಬಕ್ಕೆ ಕೊಡಬೇಕಾಗಿದ್ದ ಎಲ್ಲಾ ಬಾಕಿ ಹಣವನ್ನು ನೀಡಿದ್ದಾರೆ. ಕುಟುಂಬದ ಪ್ರಕಾರ, ಶಿವರಾಮನ್ ಅವರ ಪತ್ನಿ ಕಾನೂನುಬದ್ಧ ನಾಮಿನಿ ಎಂಬ ಪತ್ರವನ್ನು ಹೊರತುಪಡಿಸಿ, ಇನ್ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೇಳದೆ ಹಣ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ವ್ಯವಸ್ಥೆಯ ವಿರುದ್ಧ ಹೋರಾಡಲು ನಮ್ಮ ಬಳಿ ಆರ್ಥಿಕ ಸಂಪನ್ಮೂಲಗಳಿಲ್ಲದಿದ್ದರೂ, ನನ್ನ ತಂದೆ ಶಿವರಾಮನ್‌ ಅವರಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಬೇರೆಯವರ ತಂದೆಗೆ ಈ ರೀತಿ ಆಗದಂತೆ ನೋಡಿಕೊಳ್ಳಲು ನಾವು ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ” ಎಂದು ಪ್ರದೀಶ್ ಹೇಳಿದ್ದಾರೆ.

“ನನ್ನ ತಂದೆ ಹೋದರು. ಆದರೆ, ಬೇರೆಯವರ ತಂದೆಗೆ ಈ ರೀತಿ ಆಗದಂತೆ ನೋಡಿಕೊಳ್ಳಲು ಕಾನೂನು ಮೊರೆ ಹೋಗಲು ನಿರ್ಧರಿಸಿದ್ದೇವೆ. ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡಬಹುದಿತ್ತು. ಆದರೆ, ಅವರು ನನ್ನ ತಂದೆ ಸಾಯುವವರೆಗೆ ಕಾದು, ಬಳಿಕ ತಕ್ಷಣ ಹಣ ಕೊಟ್ಟಿದ್ದಾರೆ. ಅವರು ನನ್ನ ತಂದೆ ಸಾಯಲು ಕಾಯುತ್ತಿದ್ದರು” ಎಂದು ದಿನಗೂಲಿ ಮಾಡುವ 39 ವರ್ಷದ ಪ್ರದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಪಿಎಫ್‌ಒ ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಪಿಎಫ್‌ ಹಣ ಹಿಂಪಡೆಯಲು ಫಾರ್ಮ್‌ 20 ಅನ್ನು ಸಲ್ಲಿಸಬೇಕು. ಕುಟುಂಬ ಸದಸ್ಯರು ಈ ಹಣ ಪಡೆಯುವುದಾದರೆ, ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ, ರಕ್ಷಕತ್ವ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಆದರೆ, ಶಿವರಾಮನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಕುಟುಂಬ ಸದಸ್ಯರಿಂದ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೇಳದೆ ಹಣ ನೀಡಲಾಗಿದೆ. ಇದೇ ಅಧಿಕಾರಿಗಳು ಶಿವರಾಮನ್ ಜೀವಂತ ಇದ್ದಾಗ ಹಣ ನೀಡದೆ ಸತಾಯಿಸಿ ಅವರ ಸಾವಿಗೆ ಕಾರಣರಾಗಿದ್ದರು.

ಏನಿದು ಪ್ರಕರಣ?

ಕೇರಳದ ತ್ರಿಶೂರ್ ಮೂಲದ ಶಿವರಾಮನ್ ಅವರು ಅಪೋಲೋ ಟೈರ್ಸ್‌ನಲ್ಲಿ ನೌಕರರಾಗಿದ್ದರು. 9 ವರ್ಷಗಳ ಹಿಂದೆ ಅವರು ವೃತ್ತಿಯಿಂದ ನಿವೃತ್ತರಾಗಿದ್ದರು. ಅಂದಿನಿಂದಲೂ, ತಮ್ಮ ಪಿಎಫ್‌ ಹಣವನ್ನು ಪಡೆಯಲು ಇಪಿಎಫ್‌ಒ ಕಚೇರಿಗೆ ಅಲೆಯುತ್ತಿದ್ದರು. ಆದರೆ, ದಾಖಲೆಗಳು ಹೋಲಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳ ಅವರ ಹಣವನ್ನು ಪಾವತಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಮನನೊಂದಿದ್ದ ಶಿವರಾಮನ್ ಕಳೆದ ತಿಂಗಳು (ಫೆಬ್ರವರಿ) 7ರಂದು ಕೊಚ್ಚಿಯಲ್ಲಿರುವ ಇಪಿಎಫ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಮ್ಮ ತಂದೆಯ ಸಾವಿಗೆ ಇಪಿಎಫ್‌ಒ ಅಧಿಕಾರಿಗಳೇ ಕಾರಣವೆಂದು ಆರೋಪಿಸಿರುವ ಪ್ರದೀಪ್, ಫೆಬ್ರವರಿ 7ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ನಾವು ನಮ್ಮಂತೆ ಇತರ ಕುಟುಂಬಗಳಿಗೆ ನೋವು ಎದುರಾಗಬಾರದು ಎಂಬ ಕಾರಣಕ್ಕೆ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಪ್ರದೀಪ್ ಹೇಳಿದ್ದಾರೆ.

ವರದಿಯ ಪ್ರಕಾರ, ಶಿವರಾಮನ್ ಅವರ 90,000 ರೂ. ಪಿಎಫ್‌ ಹಣ ಇಪಿಎಫ್‌ಒ ಖಾತೆಯಲ್ಲಿತ್ತು. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಗುರುತಿನ ದಾಖಲೆಗಳು ಹೊಂದಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳು ಮರುಪಾವತಿಗೆ ನಿರಾಕರಿಸಿದ್ದರು. ಅಲ್ಲದೆ, ಅವರ ಶಾಲೆಯ ಪ್ರಮಾಣ ಪತ್ರಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಅವರಿಗೆ ಅದನ್ನು ನೀಡಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ : ಚುನಾವಣಾ ಬಾಂಡ್ ಮಾಹಿತಿ ಒದಗಿಸದ ಎಸ್‌ಬಿಐ: ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಎಡಿಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...