Homeಮುಖಪುಟಮೌಲಾನಾ ಆಝಾದ್ ಫೌಂಡೇಶನ್‌ ಮುಚ್ಚುವಂತೆ ಆದೇಶ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

ಮೌಲಾನಾ ಆಝಾದ್ ಫೌಂಡೇಶನ್‌ ಮುಚ್ಚುವಂತೆ ಆದೇಶ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

- Advertisement -
- Advertisement -

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ್ನು(MAEF) ಮುಚ್ಚುವ ಕೇಂದ್ರ ವಕ್ಫ್ ಕೌನ್ಸಿಲ್‌ನ ಪ್ರಸ್ತಾವನೆಯನ್ನು ಅನುಮೋದಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಮನವಿಯ ಕುರಿತು ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ ಸರ್ಕಾರಿ ಧನಸಹಾಯದ ಸಂಸ್ಥೆಯಾಗಿದ್ದು, ಶಿಕ್ಷಣಕ್ಕಾಗಿ, ವಿಶೇಷವಾಗಿ ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್‌ನಂತಹ ಯೋಜನೆಗಳನ್ನು ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ ಮೂಲಕ ನೀಡಲಾಗುತ್ತಿತ್ತು. ಆದರೆ 2022ರಲ್ಲಿ ಕೇಂದ್ರವು ಇದನ್ನು ಸ್ಥಗಿತಗೊಳಿಸಿತ್ತು.

ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠವು ಈ ಬಗ್ಗೆ ಮಾಹಿತಿಯನ್ನು ನೀಡುವಂತೆ ಸರ್ಕಾರಿ ವಕೀಲರನ್ನು ಕೇಳಿದೆ ಮತ್ತು ಮಾರ್ಚ್ 7ಕ್ಕೆ ಈ ಕುರಿತು ವಿಚಾರಣೆಯನ್ನು ಮುಂದೂಡಿದೆ.

ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನ್‌ನ್ನು ಮುಚ್ಚುವ ಆದೇಶವು ಸಂಪೂರ್ಣವಾಗಿ ದುರುದ್ದೇಶಪೂರಿತ, ಫೌಂಡೇಶನ್‌ನ್ನು ಮುಚ್ಚುವ ನಿರ್ಧಾರ ಏಕಪಕ್ಷೀಯವಾಗಿದೆ ಹಾಗೂ ಅರ್ಹ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನದಿಂದ ವಂಚಿತರನ್ನಾಗಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

1860ರ ಸೊಸೈಟಿಗಳ ನೋಂದಣಿ ಕಾಯಿದೆಯ ಸೆಕ್ಷನ್ 13ರ ಪ್ರಕಾರ, ನೋಂದಾಯಿಸಲಾದ ಯಾವುದೇ ಸೊಸೈಟಿಯ ವಿಸರ್ಜನೆಗೆ ಆ ಸೊಸೈಟಿಯ ಮೂರು-ಐದನೇ ಸದಸ್ಯರ ಸಮ್ಮತಿ ಬೇಕಾಗುತ್ತದೆ. ಅಲ್ಲದೆ, ಅದರ ಸ್ವತ್ತುಗಳನ್ನು ಇದೇ ರೀತಿಯ ಸೊಸೈಟಿಗೆ ವರ್ಗಾಯಿಸಬೇಕು ಮತ್ತು ಸೆಕ್ಷನ್ 14ರ ಪ್ರಕಾರ 3-4 ಸದಸ್ಯರ ಮತದಿಂದ ಅದನ್ನು ನಿರ್ಧರಿಸಬೇಕಾಗುತ್ತದೆ.

ಮುಸ್ಲಿಮ್‌ ಸಮುದಾಯಕ್ಕೆ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿದ್ದ ಮೌಲಾನಾ ಆಝಾದ್ ಶಿಕ್ಷಣ ಪ್ರತಿಷ್ಠಾನವನ್ನು(MAEF) ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಚ್ಚುವಂತೆ ಆದೇಶಿಸಿರುವ ಬಗ್ಗೆ ಈ ಮೊದಲು ವರದಿಯಾಗಿತ್ತು. ಫೆಬ್ರವರಿ 7ರಂದು ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿ ಧೀರಜ್ ಕುಮಾರ್ ಅವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿತ್ತು.

ಆದೇಶದ ಪ್ರಕಾರ, ನವೆಂಬರ್‌ 30, 2023ರಲ್ಲಿದ್ದಂತೆ ಫೌಂಡೇಶನ್‌ ಬಳಿ ರೂ.1,073.26 ಕೋಟಿ ನಿಧಿ ಇದ್ದು, ಬಾಧ್ಯತೆಗಳು ರೂ.40,355 ಕೋಟಿ ಆಗಿವೆ ಹಾಗೂ ಈ ಮೊತ್ತ ಕಳೆದರೆ ಉಳಿಯುವ ಮೊತ್ತ ರೂ.669.71 ಕೋಟಿ ಆಗಿದೆ. ಈ ನಿಧಿಯನ್ನು ಕನ್ಸಾಲಿಡೇಟೆಡ್‌ ಫಂಡ್ಸ್‌ ಆಫ್‌ ಇಂಡಿಯಾಗೆ ವರ್ಗಾಯಿಸುವ ಹಾಗೂ ಬಾಧ್ಯತೆಗಳನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಣಕಾಸು ಆಯೋಗಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ಆದೇಶದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೌಲಾನಾ ಅಬ್ಧುಲ್‌ ಕಲಾಂ ಆಝಾದ್‌ ಪೌಂಡೇಶನ್‌ ಮುಸ್ಲಿಂ ಸಮುದಾಯದ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಡುವೆ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರದಿಂದ ಅನುದಾನಿತ ಸಂಸ್ಥೆಯಾಗಿದೆ. ಇದನ್ನು ಮೊದಲ ಶಿಕ್ಷಣ ಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ಜನ್ಮ ಶತಮಾನೋತ್ಸವದಂದು 1989ರಲ್ಲಿ ಸ್ಥಾಪಿಸಲಾಗಿತ್ತು. ಇದರಡಿಯಲ್ಲಿ ಜೂನಿಯರ್ ಸಂಶೋಧನಾ ವಿದ್ಯಾರ್ಥಿಗಳಿಗೆ (ಜೆಆರ್‌ಎಫ್) ಮೊದಲ ಎರಡು ವರ್ಷಗಳವರೆಗೆ ಮಾಸಿಕ ರೂ.31,000 ನೀಡಿದರೆ, ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ (ಎಸ್‌ಆರ್‌ಎಫ್) ಉಳಿದ ಅವಧಿಗೆ ತಿಂಗಳಿಗೆ ರೂ.35,000 ನೀಡಲಾಗುತ್ತದೆ. 2021-22ರ ವರದಿಯಂತೆ ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್ 6,700 ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ, ಇದರ ಮೊತ್ತ 738.85 ಕೋಟಿ ರೂ.ಎಂದು ಹೇಳಲಾಗಿದೆ. ಆದರೆ ಈ ಯೋಜನೆಯನ್ನು 2022ರಲ್ಲಿ ನಿಲ್ಲಿಸಲಾಗಿತ್ತು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಇದನ್ನು ಓದಿ: ಟಿಆರ್‌ಪಿ ಹಗರಣ: ಅರ್ನಬ್‌ ಗೋಸ್ವಾಮಿ ವಿರುದ್ಧದ ಪ್ರಕರಣ ಹಿಂಪಡೆಯಲು ಅನುಮತಿಸಿದ ಕೋರ್ಟ್‌

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...