Homeಕರ್ನಾಟಕನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

- Advertisement -
- Advertisement -

ನಾನು ನಿರ್ಮಾಪಕನಾಗಿದ್ದೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಮ್ಮ ತಂದೆಯವರು ನನಗೆ ವಿರೋಧ ವ್ಯಕ್ತಪಡಿಸಿದ್ದರು. ಅವರು ರೇವಣ್ಣನವರಿಗೆ ಮಾತ್ರ ಆಶರ್ವಾದ ಮಾಡಿದ್ದರು. ನನಗೆ ರಾಜಕಾರಣ ಬೇಡವೆಂದಿದ್ದರು. ಆಗ ನಾನು ಅವರ ಮಾತು ಕೇಳಬೇಕಿತ್ತು, ಕೇಳಿಲ್ಲ. ಆಗ ದೇವೆಗೌಡರು ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ ನ ಚಂದ್ರಶೇಖರ್ ವಿರುದ್ಧ ನಾನು ಚುನಾವಣೆಗೆ ನಿಂತಿದ್ದು.. ಅಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಬೇಕಿತ್ತು.. ಆಗ ರಾಜಕಾರಣ ಪ್ರವೇಶಿಸಿದೆ.

ಒಂದು ಕಡೆ ದೇವೇಗೌಡರು ಮತ್ತು ಇನ್ನೊಂದು ಕಡೆ ಶಾಸಕರ ವಿಶ್ವಾಸ ನನ್ನ ಜೊತೆಗಿತ್ತು. ಆದರೆ 1999ರಲ್ಲಿ ರೇವಣ್ಣನವರು, ದೇವೇಗೌಡರು, ನಾನು ಸೋತಿದ್ದೇವು. ಅವತ್ತೇ ರಾಜಕಾರಣಕ್ಕೆ ಎಳ್ಳುನೀರು ಬಿಡಬೇಕಿತ್ತು. ಆದರೆ ಜನ.. ನನ್ನನ್ನು ನೋಡಲು ಬಂದಿದ್ದರು..  ಅವರು ನಮ್ಮ ಕೈಬಿಡಬೇಡಿ ಅಂದರು. ಹಾಗಾಗಿ ಮುಂದುವರೆದೆ. ಹಾಗಾಗಿ ಜನಗಳ ಮಧ್ಯಕ್ಕೆ ಹೋದೆ. 2004ರಲ್ಲಿ ಗೆದ್ದ.. ಅವತ್ತಿನ ರಾಜಕಾರಣ ನಿಮಗೆಲ್ಲ ಗೊತ್ತೆ ಇದೆ.

ವಿರೋಧ ಪಕ್ಷದ ನಾಯಕರಿಗೆ ಹೇಳುತ್ತೇನೆ. ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ.. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತಿದ್ದಾರೆ. ದೇಶದ ಸಂಸ್ಕೃತಿ ನಾಶ ಮಾಡಲಿಕ್ಕೆ ಈ ಸೋಷಿಯಲ್ ಮೀಡಿಯಾ ಆರಂಭವಾಗಿದೆ..

ನಾನು ತಪ್ಪು ಮಾಡಿದ್ದೇನೆ. ತಪ್ಪು ತಿದ್ದಿಕೊಂಡಿದ್ದೇನೆ.. ನನ್ನ ಜೀವನದಲ್ಲಿ ಆ ಅವಕಾಶವಿದೆ. ಆದರೆ ಬಿಜೆಪಿಯವರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಟ್ವಿಟ್ಟರ್ ನಲ್ಲಿ Session for Karnataka Trust Vote has begun But CM h.d kumaraswamy is resting at his Taj West end hotel His message is clear He will continue to loot & waste tax payers money to the very last second as CM ಅಂತ ಬರೆದಿದ್ದಾರೆ.

ನಾನು ತಾಜ್ ಹೋಟೆಲ್ ನಲ್ಲಿ ಭಾಷಣ ಪ್ರಿಪೇರ್ ಮಾಡ್ತಾ ಕೂತಿದ್ದೆ. ಹೌದು ಸ್ವಲ್ಪ ಪ್ರಯತ್ನ ಪಟ್ಟೆ.. ಏನಾದರೂ ಕೊನೆ ಹಂತದಲ್ಲಿ ವಿಶ್ವಾಸಮತ ಗೆಲ್ಲಲ್ಲಿಕ್ಕೆ, ಸದನ ಗೆಲ್ಲಿಸುತ್ತೆ ಅಂತ.. ಪ್ರಯತ್ನ ಮಾಡಿದೆ. ನಾನು ಕದ್ದು ಮುಚ್ಚಿ ಮಾತಾಡೋಲ್ಲ.. ಶಾಸಕರು ಕಣ್ಣೀರು ಹಾಕಿದ್ದಾರೆ.. ಅವರಿಗಾಗಿ ಅದಕ್ಕೋಸ್ಕರ ತಡವಾಯ್ತು.. ಈ ರಾಜ್ಯ ಲೂಟಿ ಮಾಡಲಿಕ್ಕಲ್ಲ..

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತೀರಿ. ನನ್ನ ಯೋಗ್ಯತೆಯ ಬಗ್ಗೆ ಮಾತಾಡುತ್ತೀರಿ. ಯೋಗ್ಯತೆಗೆ ತಕ್ಕ ಜವಾಬ್ದಾರಿ ನೀಡುತ್ತೇವೆ.. ಎಚ್ ವಿಶ್ವನಾಥ ರವರು ಸಾರ ಮಹೇಶ್ ಬಗ್ಗೆ ಬಳಸಿರುವ ಪದಬಳಕೆ.. ಬಹಳ ಕೆಟ್ಟ ರೀತಿಯ ಹೇಳಿಕೆ ಕೊಟ್ಟಿದ್ದಾರೆ..

ಇನ್ನು ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಅದನ್ನು ನೋಡಿದರೆ ಬಗ್ಗೆ ವಾಂತಿ ಬರುತ್ತೆ.. ಥೂ..

ಇವತ್ತಿನ ಮಾಧ್ಯಮಗಳಿಗೆ ಮನುಷ್ಯತ್ವ, ಮಾನವೀಯತೆ ಇದೆಯೇ.? ಪ್ರಿಂಟ್ ಮಾಧ್ಯಮಗಳು ಇನ್ನು ನಂಬಿಕೆ ಉಳಿಸಿಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ದೇಶ ಯಾಕೆ ಹಾಳು ಮಾಡುತ್ತಿದ್ದೀರಿ.. ನಿಮಗೆ ಬ್ಯುಸಿನೆಸ್ ಮಾಡಬೇಕಾರೆ ಬೇರೆ ಉದ್ಯಮ ಮಾಡಿಕೊಳ್ಳಿ. ಇಲ್ಲಿ ಬಂದು ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ. ನಾನು ಜೆ.ಪಿ ನಗರಕ್ಕೆ ಹೋಗುವಾಗ ಕ್ಯಾಮರ ಇಟ್ಟುಕೊಂಡು ಬಂದಿದ್ದರು.. ಪ್ರೈವಸಿ ಎಲ್ಲಿದೆ?

ನಾನು ನಾಡಿನ ಮುಖ್ಯಮಂತ್ರಿ ಯಾಗಿದ್ದಾಗ ಒಂದು ಮಾಧ್ಯಮದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೇವೆ.. ಕತ್ತಲೆ ಲೋಕದ ಕುಮಾರ .. ಎಂದು ವರದಿ ಮಾಡಿದ್ದರು. ಸ್ವಚ್ಛ ಭಾವನಾತ್ಮಕ ಜೀವನ ನನ್ನದು.. ಅದನ್ನು ನೋಡಿದಾಗ ಇಂತಹ ಸರ್ಟಿಫಿಕೇಟ್ ತಗೊಂಡು ಮುಖ್ಯಮಂತ್ರಿ ಆಗಬೇಕ ಅನ್ನಿಸಿತು. ಅಂದು ರಾತ್ರಿಯೆಲ್ಲ ಮಲಗಿಲ್ಲ .. ಅವತ್ತು ಎಡಗಾಲು ಸ್ವಾಧೀನ ಕಳೆದುಕೊಂಡು ಒಂದೂವರೆ ಗಂಟೆ ನೊಂದಿದ್ದೇನೆ..

ಇಂದು ನಾನು ಅತ್ಯಂತ ಸಂತೋಷವಾಗಿ ಈ ಸ್ಥಾನ ತ್ಯಜಿಸುತ್ತಿದ್ದೇನೆ. ನನಗೆ ಯಾವ ನೋವು ಇಲ್ಲ.  ಮತ್ತೊಮ್ಮೆ ವಚನ ಭ್ರಷ್ಟ.. ಎನ್ನುವ ಮಾಧ್ಯಮಗಳು ಪ್ರಶ್ನೆ ಹಾಕಿಕೊಳ್ಳಿ.

ಬಿಜೆಪಿ ಜೊತೆ 20 ತಿಂಗಳು ಇದ್ದೆ. ಅಧಿಕಾರ ಹಸ್ತಾಂತರವನ್ನು ಮಾಡಬೇಕೆಂದಿದ್ದೆ. ಈಶ್ವರಪ್ಪ ಜಗದೀಶ್ ಶೆಟ್ಟರ್ ಯಡಿಯೂರಪ್ಪರವರ ಒಪ್ಪಂದ ಮಾಡಿಕೊಂಡಿದೆ. ಆಗ ನನ್ನ ಗೆಳೆಯರಾದ ಬಾಲಕೃಷ್ಣ, ಚಲುವರಾಯಸ್ವಾಮಿ ಜೊತೆಗಿದ್ದರು. ಅಗ್ರಿಮೆಂಟ್ ಮಾಡಿಕೊಂಡರು. ದೇವೆಗೌಡರು ಮತ್ತು ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಆದರೆ ಆಗಲಿಲ್ಲ ಅಷ್ಟೇ..

ನಾನು ತಾಜ್ ವೆಸ್ಟೆಂಡ್ ನಲ್ಲಿಯೇ ಇರುತ್ತೇನೆ ಅಂತ ಆರೋಪ ಮಾಡುತ್ತೀರಿ. 2018ರ ಚುನಾವಣೆಯ ಫಲಿತಾಂಶದ ದಿನ. ಅಂದು ಅದೇ ಹೋಟೆಲ್ ನಲ್ಲಿ ಕುಳಿತು ಟಿ.ವಿ ನೋಡುತ್ತಿದ್ದೆ. ಅಂದು ರಾಜಕೀಯ ಬಿಡಬೇಕಿತ್ತು.. ಆದರೆ ಆಗ ಗುಲಾಂ ನಬಿ ಆಜಾದ್ ರವರು ದೂರವಾಣಿ ಕರೆ ಮಾಡಿ.. ನಿಮಗೆ ಬೆಂಬಲ ನೀಡುತ್ತೇವೆ, ಸಮ್ಮಿಶ್ರ ಸರ್ಕಾರ ಮಾಡೋಣ ಅಂದರು. ಹಾಗಾಗಿ ಆ ರೂಂ ಬಗ್ಗೆ ಪ್ರೀತಿ ಅಷ್ಟೇ.

ನಾನು ವಚನ ಭ್ರಷ್ಟ ಅಲ್ಲ.. ಒಂಭತ್ತು ದಿನದ ಮುಖ್ಯಮಂತ್ರಿ ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು. ಈ ನಾಡಿನ ಜನತೆಗೆ ತಿಳಿಸಬೇಕಿದೆ. ದೇವೇಗೌಡರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಸ್ವಲ್ಪ ದಿನದಲ್ಲಿಯೇ ಹೊರಬರುತ್ತೆ. ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ.. ಈ ಸರ್ಕಾರ ಇರುತ್ತೊ ಹೋಗುತ್ತೊ .. ಆದರೆ ನನ್ನ ಅಧಿಕಾರಿಗಳಿಗೆ ಹೃದಯತುಂಬಿದ ಧನ್ಯವಾದಗಳು

ಡೇ ಒಂದರಿಂದ ಮಾಧ್ಯಮಗಳು ತೊಂದರೆ ಕೊಟ್ಟಿವೆ. ಸುಭದ್ರ ಸರ್ಕಾರಗಲೇ ಕೆಲಸ ಮಾಡುವುದು ಕಷ್ಟ. ನಮ್ಮ ನಡವಳಿಕೆ ನೋಡಿ, ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಇದು ಕೇವಲ ನನ್ನ ಸಾಧನೆ ಅಲ್ಲ.. ಅವರೆಲ್ಲರ ಪಾಲಿದೆ.

ಸಾಲ ಮನ್ನಾ .. 25 ಸಾವಿರ ಕೋಟಿ ತೆಗೆದಿದ್ದೇವೆ.. ರೈತರಿಗೆ ಮೋಸ ಮಾಡಲಿಕ್ಕೆ ಹೋಗಿಲ್ಲ.. 2018ರಲ್ಲಿ ಸಿದ್ದರಾಮಯ್ಯ ನವರು ಫೇಬ್ರವರಿ ತಿಂಗಳ ಬಜೆಟ್ ಮಂಡನೆ ಮಾಡಿದ್ದರು. ನಂತರ ನಾನು ಅಧಿಕಾರಕ್ಕೆ ಬಂದರೂ ಅವರ ಯಾವುದೇ ಕಾರ್ಯಕ್ರಮ ಕಡಿತ ಮಾಡಿಲ್ಲ.. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾದ 2700 ಕೋಟಿ ರೂ ನಾವು ತೀರಿಸಿದೆವು. ರೈತರಿಗೆ ನಮ್ಮಿಂದ ಮೋಸವಾಗಿಲ್ಲ.. ಟ್ರಾಕ್ಟರ್, ಮನೆ ಕಟ್ಟುವಾಗ ಸಾಲ ಮಾಡಿದರೆ ಅದಕ್ಕೂ ಕುಮಾರಸ್ವಾಮಿ ಕಾರಣ ಎಂದು ಈ ಮಾಧ್ಯಮಗಳು ಅರಚುತ್ತವೆ.

ಒಂದೇ ಒಂದು ಹಗರಣ ಇದ್ರೆ ನನ್ನ ಮುಂದೆ ತಂದುಕೊಡಿ. ಬರಿ ಚಪಲಕ್ಕೆ ಹೇಳಬೇಡಿ. ದಾಖಲೆಗಳ ಸಮೇತ ತಂದಿಡಿ. ನಾನು ಸರ್ಕಾರಿ ಕಾರು, ಬಂಗಲೆ, ಟಿ.ಎ ಡಿ.ಎ, ಪೆಟ್ರೋಲ್ ಖರ್ಚು ತಗೊಂಡಿಲ್ಲ.. ಜನರ ತೆರಿಗೆ ಹಣ ಖರ್ಚು ಮಾಡಬೇಕಾದರೆ ನನ್ನ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ಖರ್ಚು ಮಾಡುತ್ತೇನೆ.

ಪ್ರಧಾನ್ ಮಂತ್ರಿ ಸಮ್ಮಾನ್ ಯೋಜನೆಗೆ 35 ಲಕ್ಷ ರೈತರ ವಿವರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದೇವೆ. ಆದರೆ ಹಣ 15 ಲಕ್ಷ ರೈತ ಕುಟುಂಬಗಳಿಗೆ ಮಾತ್ರ. 1500 ಕೋಟಿ ಮಾತ್ರ. ನಾನು ತಪ್ಪು ಮಾಡಿದ್ರೆ ಕಿವಿಹಿಂಡಿ ಬುದ್ದಿ ಹೇಳಿ. ಹಾಗೆಯೇ ಒಳ್ಳೇಯ ಕೆಲಸ ಮಾಡಿದರೆ ಮನಸ್ಸು ಬಿಚ್ಚು ಹೇಳಿ. ಬೋಪಯ್ಯ ಅಪ್ಪಚ್ಚು ರಂಜಾನ್ ಕೇಳಿ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಬಂದಾಗ ಯಾವ ರೀತಿ ಕೆಲಸ ಮಾಡಿದ್ದೀವಿ ಅಂತ. ಯಾವ ರೀತಿ ಕೆಲಸ ಮಾಡಿದ್ದೀನಿ ..

ಬಸವರಾಜ ಬೊಮ್ಮಾಯಿ ಜ್ಯೋತಿಷಿ ಯಾವಾಗ ಆದ್ರಿ? ಫೆಬ್ರವರಿ ನಲ್ಲೇ ನುಡಿದಿದ್ದರು.. ಈ ಸರ್ಕಾರ ಬೀಳುತ್ತೆ ಅಂತ. ನಾನು ಜ್ಯೋತಿಷಿ ಕೇಳಲ್ಲ.. ನಂಬೋಲ್ಲ. ರೇವಣ್ಣನ ಬಗ್ಗೆ ಮಾತಾಡುತ್ತಾರೆ.  ದಿನಾ ಟಿವಿಯೊಳಗೆ ನಿಂಬೆ ಹಣ್ಣಿನ ಚರ್ಚೆ ಮಾಡುತ್ತಾರೆ. ಆತ ಅಮಾಯಕ. ನನ್ನ ಪ್ರಕಾರ ಮುಗ್ಧ.

ನಾನು ಓಡಿ ಹೋಗೋಲ್ಲ. ವಿಶ್ವಾಸಮತಕ್ಕೆ ಹಾಕುತ್ತೇನೆ. ಗೆಲುವು ಸೋಲು ಎರಡನ್ನು ಸಮಭಾವದಿಂದ ಸ್ವೀಕರಿಸುತ್ತೇನೆ…

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...