ಪಠ್ಯ ಮರು ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಮಾಡಿರುವ ಹಲವು ಅಶ್ಲೀಲ, ಸ್ತ್ರೀದ್ವೇಷಿ ಮತ್ತು ಹತ್ಯೆ ಹಾಗೂ ರೇಪ್ ಸಮರ್ಥನೆ ಮಾಡುವ ಪೋಸ್ಟ್‌ಗಳು ವೈರಲ್ ಆಗಿದ್ದು, ಇದರ ನಂತರ ಅವರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಅಕೌಂಟ್ ಅನ್ನು ಗುರುವಾರ ಲಾಕ್ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರ ಪರವಾಗಿ ಮತ್ತು ಬಿಜೆಪಿಯ ಪರವಾಗಿ ತೀರಾ ಕೀಳು ಮಟ್ಟದಲ್ಲಿ ಟ್ರೋಲ್ ಮಾಡುತ್ತಾ ಕುಖ್ಯಾತಿ ಪಡೆದಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಮರು ಪರಿಷ್ಕರಣೆ ಸಮಿತಿಯ ಅಧ್ಯಕ್ಷನ್ನಾಗಿ ಬಿಜೆಪಿ ಸರ್ಕಾರ ಆಯ್ಕೆ ಮಾಡಿತ್ತು. ಬಿಜೆಪಿ ಸರ್ಕಾರದ ಈ ನಿಲುವನ್ನು ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ಸಾಹಿತ್ಯಿಕ ವಲಯದ ಗಣ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದರ ನಂತರ ಅವರ ಸಮಿತಿ ಪರಿಷ್ಕರಣೆ ಮಾಡಿರುವ ಹಲವು ಪಠ್ಯಗಳು ಮತ್ತು ಕೈಬಿಟ್ಟಿರುವ ಹಲವು ಪಠ್ಯಗಳ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸಿ ನಾಡಿನ ಗಣ್ಯ ಸಾಹಿತಿಗಳು ತಮ್ಮ ಬರಹಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬಾರದು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ನಾಡಗೀತೆ, ನಾಡಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದ ಹಲವು ಬರಹಗಳ ‘ಸ್ಕ್ರೀನ್ ಶಾರ್ಟ್‌ಗಳು’ ಹರಿದಾಡಿದ್ದವು. ಹೀಗಾಗಿ ಸಾಹಿತಿಗಳು ಮತ್ತು ಸ್ವಾಮೀಜಿಗಳು ಅವರ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ
ಈ ನಡುವೆ ಅವರು ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಬರೆದಿದ್ದು, ಕೊಲೆ ಮತ್ತು ರೇಪ್ ಅನ್ನು ಸಮರ್ಥಿಸಿ ಬರೆದಿರುವ ಹಳೆಯ ಪೋಸ್ಟ್‌ಗಳು ವೈರಲ್ ಆಗಿವೆ. ಅವುಗಳಲ್ಲಿ ಕೆಲವು ತೀರಾ ಕೊಳಕುಮಟ್ಟದ್ದಾಗಿತ್ತು. ಅವುಗಳನ್ನು ಕೆಳಗೆ ನೋಡಬಹುದು.
ತನ್ನ ವಿವಾದಾತ್ಮಕ ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳು ವೈರಲ್ ಆಗಿ ಜನಾಕ್ರೋಶ ಹೆಚ್ಚುತ್ತಿದ್ದಂತೆ ರೋಹಿತ್ ಚಕ್ರತೀರ್ಥ ತನ್ನ ಟ್ವೀಟರ್ ಮತ್ತು ಫೇಸ್‌ಬುಕ್ ಖಾತೆಗೆ ಲಾಕ್ ಮಾಡಿದ್ದಾರೆ.
Boycott such nonsense persons.
These people spoiled the mind of young generations.
ರೋಹಿತ್ ಚಕ್ರತೀರ್ತನಂತಹ ವಿಕೃತ ಮನಸ್ಸಿನ ವ್ಯಕ್ತಿ ನಮ್ಮ ಮಕ್ಕಳು ಓದಬೇಕಾದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅದ್ಯಕ್ಷ ಆಗಿರುವುದು ಕನ್ನಡಿಗರಿಗೆ ನಾಚಿಕೆಗೇಡಿನ ಸಂಗತಿ.
ಪಠ್ಯ ಪಸ್ತಕ ಸಮಿತಿಗೆ ಇವರು ಹೆಸರು ಸೇರಿಸಿದ ಮೂಲ ಶಕ್ತಿ ಅಥವಾ ವ್ಯಕ್ತಿ ಯಾವುದು -ಎಂಬುದು ತಿಳಿಯಬೇಕಿದೆ.