Homeಮುಖಪುಟಉದ್ಯೋಗಕ್ಕಾಗಿ ಭೂಮಿ ಹಗರಣ: ಇಡಿ ಮುಂದೆ ವಿಚಾರಣೆಗೆ ಹಾಜರಾದ ಲಾಲು ಪ್ರಸಾದ್ ಯಾದವ್

ಉದ್ಯೋಗಕ್ಕಾಗಿ ಭೂಮಿ ಹಗರಣ: ಇಡಿ ಮುಂದೆ ವಿಚಾರಣೆಗೆ ಹಾಜರಾದ ಲಾಲು ಪ್ರಸಾದ್ ಯಾದವ್

- Advertisement -
- Advertisement -

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಉದ್ಯೋಗಕ್ಕಾಗಿ ಭೂ ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದರು. ಲಾಲು ಅವರ ವಿಚಾರಣೆಯನ್ನು ವಿರೋಧಿಸಿ ಪಕ್ಷದ ಬೆಂಬಲಿಗರು ಇಡಿ ಕಚೇರಿಯ ಹೊರಗೆ ಪ್ರತಿಭಟಿಸಿದರು.

‘ಲ್ಯಾಂಡ್ ಫಾರ್ ಜಾಬ್ ಮನಿ ಲಾಂಡರಿಂಗ್’ ಪ್ರಕರಣದ ಆರೋಪಿಗಳಾದ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಿಸಾ ಭಾರತಿ, ಹೇಮಾ ಯಾದವ್, ಹೃದಯಾನಂದ ಚೌಧರಿ ಮತ್ತು ಇತರ ಆರೋಪಿಗಳಿಗೆ ರೋಸ್ ಅವೆನ್ಯೂ ನ್ಯಾಯಾಲಯ ಶನಿವಾರ ಸಮನ್ಸ್ ಜಾರಿ ಮಾಡಿದೆ.

ಲಾಲು ಪ್ರಸಾದ್ ಯಾದವ್ ಹೊರತುಪಡಿಸಿ, ರಾಬ್ರಿ ದೇವಿ, ಅವರ ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್, ಹೃದಯಾನಂದ್ ಚೌಧರಿ, ಅಮಿತ್ ಕತ್ಯಾಲ್ ಅವರನ್ನು ಇಡಿ ಹೆಸರಿಸಿದೆ. ಎಬಿ ಎಕ್ಸ್‌ಪೋರ್ಟ್ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಎಂಬ ಎರಡು ಸಂಸ್ಥೆಗಳ ಮೇಲೂ ಆರೋಪ ಮಾಡಲಾಗಿದೆ.

ನಿತೀಶ್ ಕುಮಾರ್ ಪಕ್ಷ ಬದಲಾಯಿಸಿದ ನಂತರ ಭಾನುವಾರ ಬಿಹಾರ ಸರ್ಕಾರಕ್ಕೆ ಮರಳಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ಆರ್‌ಜೆಡಿಯಲ್ಲಿ ಭ್ರಷ್ಟಾಚಾರವು ಆಳವಾಗಿ ನೆಲೆಗೊಂಡಿದೆ ಎಂದು ಹೇಳಿಕೊಂಡಿದೆ.

‘ಇವರು (ಲಾಲು ಯಾದವ್) ಭ್ರಷ್ಟರು ಎಂಬುದು ದೇಶದ ಜನತೆಗೆ ಗೊತ್ತಿದೆ. ಭ್ರಷ್ಟಾಚಾರವೇ ಅವರಿಗೆ ರತ್ನವಾಗಿದೆ… ಒಂದೂವರೆ ವರ್ಷದೊಳಗೆ ಲಕ್ಷಾಧಿಪತಿಗಳಾಗುವುದು ಹೇಗೆ ಎಂಬ ವ್ಯವಸ್ಥೆಯನ್ನು ಬಿಹಾರದ ಯುವಕರಿಗೆ ತಿಳಿಸುವಂತೆ ತೇಜಸ್ವಿ ಯಾದವ್ ಅವರನ್ನು ಒತ್ತಾಯಿಸಲು ಬಯಸುತ್ತೇನೆ’ ಎಂದು ಬಿಹಾರ ಬಿಜೆಪಿ ಘಟಕದ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಭೂಮಿ-ಉದ್ಯೋಗ ಹಗರಣ ಪ್ರಕರಣ

ಲಾಲು ಯಾದವ್ ಅವರು 2004 ಮತ್ತು 2009ರ ನಡುವೆ ರೈಲ್ವೇ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಆರ್‌ಜೆಡಿ ರಾಷ್ಟ್ರೀಯ ಅಧ್ಯಕ್ಷರ ಹೊರತಾಗಿ, ಚಾರ್ಜ್‌ಶೀಟ್ ಆಗಿನ ರೈಲ್ವೆ ಜನರಲ್ ಮ್ಯಾನೇಜರ್ ಹೆಸರನ್ನೂ ಒಳಗೊಂಡಿದೆ. ರೈಲ್ವೇ ನೇಮಕ ಮಾಡಲು ಅಭ್ಯರ್ಥಿಗಳ ಕುಟುಂಬದ ಸದಸ್ಯರ ಮಾಲೀಕತ್ವದ ಜಮೀನನ್ನು ಲಾಲು ಪ್ರಸಾದ್ ಯಾದವ್ ಅವರು ಪತ್ನಿ ರಾಬ್ರಿ ದೇವಿ ಮತ್ತು ಮಗಳು ಮಿಸಾ ಭಾರತಿ ಅವರ ಹೆಸರಿಗೆ ಮಾರಾಟ ಮಾಡಿಸಿದರು. ಇದು ಮಾರುಕಟ್ಟೆ ದರಗಳಿಗಿಂತ ಕಡಿಮೆಯಾಗಿತ್ತು ಎಂಬ ಆರೋಪ ಮಾಡಲಾಗಿದೆ.

ಇಡಿ ತನಿಖೆಯ ಪ್ರಕಾರ, ಪಾಟ್ನಾ ಮತ್ತು ಇತರ ಪ್ರದೇಶಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಲವಾರು ತುಂಡು ಭೂಮಿಯನ್ನು ಆಗಿನ ರೈಲ್ವೆ ಸಚಿವರ ಕುಟುಂಬವು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ. ಈ ಜಮೀನುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹200 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಬಿಡಿ ಗ್ರೂಪ್-ಡಿ ಅರ್ಜಿದಾರರಿಂದ ಲಾಲು ಯಾದವ್ ಅವರ ಕುಟುಂಬವು ಕೇವಲ ₹7.5 ಲಕ್ಷಕ್ಕೆ ಸ್ವಾಧೀನಪಡಿಸಿಕೊಂಡ ನಾಲ್ಕು ಎಕರೆ ಭೂಮಿಯನ್ನು ರಾಬ್ರಿ ದೇವಿ ಅವರು ₹ 3.5 ಕೋಟಿಗಳಷ್ಟು ದೊಡ್ಡ ಲಾಭದೊಂದಿಗೆ ಆರ್‌ಜೆಡಿ ಮಾಜಿ ಶಾಸಕ ಸೈಯದ್ ಅಬು ದೋಜಾನಾ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಇಡಿ ತನಿಖೆಯು ಕಂಡುಹಿಡಿದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್, ರಾಬ್ರಿ ದೇವಿ, ಅವರ ಪುತ್ರಿ ಮಿಸಾ ಭಾರತಿ ಮತ್ತು ಇತರ 13 ಮಂದಿಯ ವಿರುದ್ಧ ಭೂಮಿ-ಉದ್ಯೋಗ ಹಗರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

ಇದನ್ನೂ ಓದಿ; ಕೆರಗೋಡು ಧ್ವಜ ವಿವಾದ: ಬಿಜೆಪಿ-ಆರ್‌ಎಸ್‌ಎಸ್‌ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...