Homeಕರ್ನಾಟಕನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಾಯಕತ್ವದ ಐದು ಶಕ್ತಿ ಮೂಲಗಳ ಬಗ್ಗೆ ತಿಳಿಯೋಣ ಬನ್ನಿ.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಇತ್ತೀಚಿಗೆ ನಾಯಕತ್ವದ ಬಗ್ಗೆ ತರಗತಿಯೊಂದರಲ್ಲಿ ಪಾಠ ಮಾಡುತ್ತಿರುವಾಗ “ಓರ್ವ ವ್ಯಕ್ತಿಗೆ ನಾಯಕ ಆಗಲು ಶಕ್ತಿ ಎಲ್ಲಿಂದ ಬರುತ್ತದೆ?” ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ನನಗೆ ಹೊಳೆದಿದ್ದು ಮಿಷಿಗನ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಜಾನ್ ಫ್ರೆಂಚ್ ಮತ್ತು ಬರ್ಟ್ರಾಂಡ್ ರೇವನ್ ಅವರ 1959ರ ಅಧ್ಯಯನ. ಇವರ ಲೇಖನ ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಪ್ರಸಕ್ತ ರಾಜಕೀಯ ನಾಯಕತ್ವದ ಬಗ್ಗೆ ಒಂದು ವಿಡಂಬನೆ ಎನಿಸಬಹುದು  ಆದರೆ ಅದರ ಹಿಂದಿರುವ ಸತ್ಯವನ್ನು ತೆಗೆದುಹಾಕುವಂತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಾಯಕ (ನಾಯಕಿ) ಎಂದೆನಿಸಿಕೊಳ್ಳಲು ಆ ವ್ಯಕ್ತಿಯಲ್ಲಿ ಏನೋ ಒಂದು ಶಕ್ತಿ ಇರಬೇಕು; ಕೆಲವು ಕಣ್ಣಿಗೆ ಗೋಚರವಾಗಿದ್ದರೆ ಕೆಲವು ಅಗೋಚರವಾಗಿರುತ್ತವೆ. ಶಕ್ತಿಯ ರಹಸ್ಯವನ್ನು ನಾಯಕರು ತಮ್ಮ ಬೆಂಬಲಿಗರಿಗೆ ತಿಳಿಸುವುದಿಲ್ಲ, ಆದರೆ ಸಾಮಾನ್ಯ ಪ್ರಜೆಗಳು ಇದರ ಬಗ್ಗೆ  ತಿಳಿದಿರುವುದು ಉತ್ತಮ.

ಮೊದಲನೆಯದು ನ್ಯಾಯಯುತವಾದ ಸ್ಥಾನಿಕ ಮೂಲ – ಅಂದರೆ ನ್ಯಾಯಯುತವಾಗಿ ಅವರು ಯಾವುದೋ ಚುನಾವಣೆಯಲ್ಲಿ ಗೆದ್ದಿದ್ದರೆ ಅಥವಾ ಪದ/ಸ್ಥಾನವನ್ನು ಪಡೆದಿದ್ದರೆ ಅದರಿಂದ ಸಿಗುವ ನಾಯಕತ್ವ ಶಕ್ತಿ. ಇದು ಎಲ್ಲರಿಗೂ ಗೋಚರಿಸುವ ಶಕ್ತಿ ಮೂಲ. ಅವರು ನಿಜವಾಗಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದರೋ, ಇಲ್ಲವೋ ಅದರ ಚರ್ಚೆ ಈಗ ಬೇಡ. ಇದು ಕೇವಲ ರಾಜಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಯಾವುದೇ ಸರಕಾರಿ, ಖಾಸಗಿ ಅಥವಾ ಸರಕಾರೇತರ ಸಂಸ್ಥೆಯ ಹುದ್ದೆಯಲ್ಲಿರುವವರಿಗೂ ಅನ್ವಯಿಸುತ್ತದೆ. ಈ ಶಕ್ತಿ ಮೂಲ ಎಷ್ಟೇ ಪ್ರಬಲವಾಗಿದ್ದರೂ ಸಹ ಇದು ಕಾಯಂ ಆಗಲು ಸಾಧ್ಯವಿಲ್ಲ. ಕುರ್ಚಿ ಬಿಟ್ಟು ಕೆಳಗಿಳಿದ ಕ್ಷಣದಲ್ಲೇ ಶಕ್ತಿ ಮೂಲ ಮಾಯವಾಗುತ್ತದೆ. ಇತ್ತೀಚಿಗೆ ಚುನಾವಣೆಯಲ್ಲಿ ಪರಾಭವಗೊಂಡು ಅಥವಾ ಕೆಲಸ ಕಳೆದುಕೊಂಡು ಕಳೆಗುಂದಿದ  ಹಲವಾರು ನಾಯಕರನ್ನು ನೀವು ಈಗಾಗಲೇ ಕಂಡಿರಬಹುದು. ಅನುಯಾಯಿಗಳು ಇವರನ್ನು ಗೌರವಿಸುತ್ತಿರಲಿಲ್ಲ, ಇವರು ಅಲಂಕರಿಸಿದ ಸ್ಥಾನವನ್ನು ಹಿಂಬಾಲಿಸುತ್ತಿದ್ದರು. ಹಾಗಾಗಿ ಇದು ಅಸ್ಥಾಯಿ ಸ್ಥಾನಿಕ ಶಕ್ತಿ ಮೂಲ.

ಎರಡನೆಯದು ಸಂಭಾವನೆ ಅಥವಾ ಇನಾಮು ಹಂಚುವ ಶಕ್ತಿ ಮೂಲ – ಅಂದರೆ ಇಲ್ಲಿ ನಾಯಕರು ತಮ್ಮ ಹಣ ಅಥವಾ ಸ್ಥಾನಕ್ಕೆ ಇರುವ ಶಕ್ತಿಯನ್ನು ಉಪಯೋಗಿಸಿಕೊಂಡು ತಮಗೆ ಬೇಕಾದವರಿಗೆ ಸೂಕ್ತ ಸಂಭಾವನೆ ನೀಡಿ, ಅನುಯಾಯಿಗಳನ್ನಾಗಿ ಮಾಡಿಕೊಂಡು ನಾಯಕರಾಗಿ ಮೆರೆಯುವ ಶಕ್ತಿ. ಇಲ್ಲಿ ಬಳಸಲ್ಪಡುವುದು ಮೊದಲನೆಯ ಸ್ಥಾನದಲ್ಲಿದ್ದಾಗ ಗಳಿಸಲ್ಪಟ್ಟ/ಕಬಳಿಸಲ್ಪಟ್ಟ ಹಣವಾದರೂ ಆಗಬಹುದು ಅಥವಾ ಬೇರೆ ಮಾರ್ಗದಿಂದ ಬಂದ ಹಣವಾದರೂ ಆಗಬಹುದು. ಎಲ್ಲವೂ ಹಣದ ರೂಪದಲ್ಲೇ ಇರಬೇಕಾಗಿಲ್ಲ, ತಮಗೆ ಬೇಕಾದವರಿಗೆ ಕೊಟ್ಟ ಬಡ್ತಿ, ವರ್ಗಾವಣೆ, ಮಾಡಿದ ಉಪಕಾರ, ಕಲ್ಪಿಸಿಕೊಟ್ಟ ಸೌಕರ್ಯ, ನೀಡಿದ ಬಿರುದು-ಬಹುಮಾನ, ವಾಗ್ದಾನಗಳು ಮುಂತಾದವು ಇಲ್ಲಿ ಕೆಲಸ ಮಾಡುತ್ತವೆ. ಇದು ಕೆಲವರಿಗೆ ಗೋಚರಿಸುತ್ತದೆ, ಕೆಲವರಿಗೆ ರಹಸ್ಯ ಅನಿಸುತ್ತದೆ. ಈ ಶಕ್ತಿ ಮೂಲದ ಆಯಸ್ಸು ಮೊದಲನೆಯದಕ್ಕಿಂತ ಸ್ವಲ್ಪ ಜಾಸ್ತಿ ಆದರೂ ಕಾಯಂ ಅಲ್ಲ. ಹಂಚುವ ಶಕ್ತಿ ಕ್ಷೀಣವಾದಂತೆ ಅನುಯಾಯಿಗಳೂ, ಶಕ್ತಿ ಮೂಲವೂ ಮಾಯವಾಗುತ್ತವೆ.

ಮೂರನೆಯದು ಬೆದರಿಕೆಯ ಶಕ್ತಿ ಮೂಲ ಅಂದರೆ ಅಧಿಕಾರ, ಧನಬಲ ಅಥವಾ ತೋಳ್ಬಲದ ಶಕ್ತಿಯ ಮೇಲೆ ಇತರರಿಗೆ ಬೆದರಿಕೆ ಹಾಕಿ/ಹಾಕಿಸಿ, ಅವರನ್ನು ತಮ್ಮ ಫರ್ಮಾನು ಕೇಳುವಂತೆ ಮಾಡುವ ನಾಯಕತ್ವ. ಇದು ಮೇಲಿನ ಎರಡು ಶಕ್ತಿ ಮೂಲದಿಂದಲಾದರೂ ಅಥವಾ ಪ್ರತ್ಯೇಕವಾಗಿಯೂ ಬಂದಿರಬಹುದು. ಕೆಲಸದಲ್ಲಿ ಡಿಮೋಷನ್, ಬಡ್ತಿ ತಡೆಹಿಡಿಯುವಿಕೆ, ನೀರು-ಮೇವು ಸಿಗದ ಸ್ಥಳಕ್ಕೆ ವರ್ಗಾವಣೆ, ಕಾರ್ಯ ಕ್ಷಮತೆಯ ಬಗ್ಗೆ ಟೀಕಾತ್ಮಕ ವರದಿ, ಮುಂತಾದ ಬೆದರಿಕೆ ಹಾಕುವುದು ಈ ತರಹದ ನಾಯಕತ್ವದ ವೈಶಿಷ್ಟ್ಯ. ಅಲ್ ಕೈದಾ, ತಾಲಿಬಾನ್ ಅಥವಾ ಇತ್ತೀಚಿನ ಐಸಿಸ್, ಮುಂತಾದ ಸಂಸ್ಥೆಗಳು ಮಾತ್ರವಲ್ಲದೆ ಎಷ್ಟೋ ಬಹುರಾಷ್ಟ್ರೀಯ ಸಂಸ್ಥೆಗಳು ಸಹ ಇದನ್ನು ಆಗಾಗ್ಗೆ ಬಳಸುತ್ತವೆ. ಈ ಶಕ್ತಿಮೂಲವೂ ಸಹ ಗೋಚರ – ಅಗೋಚರವಾಗಿರಬಹುದು ಆದರೆ ಬಹುಕಾಲ ನಡೆಯುವುದಿಲ್ಲ; ಒಂದಲ್ಲ ಒಂದು ದಿನ ಜನರು ಸಿಡಿದೇಳುತ್ತಾರೆ.

ನಾಲ್ಕನೆಯದು ವಿದ್ವತ್ ಶಕ್ತಿ ಮೂಲ – ಅಂದರೆ ಆ ವ್ಯಕ್ತಿ ಯಾವುದೇ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಪರಿಣಿತಿ ಹೊಂದಿದ್ದಲ್ಲಿ ಅಥವಾ ಸಾಧನೆ ಮಾಡಿದಲ್ಲಿ ಅದರಿಂದ ಬರುವ ಆತ್ಮಶಕ್ತಿ ಮತ್ತು ಖ್ಯಾತಿ ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಇದು ಎಲ್ಲರಿಗೂ ಕಾಣುವಂತಹ, ಜನಸಾಮಾನ್ಯರಿಗೆ ಕೈಗೆಟುಕಬಹುದಾದ ಏಕೈಕ ಶಕ್ತಿಮೂಲ. ಅವರು ನಿಜವಾಗಿ ವಿದ್ವಾಂಸರೋ ಅಥವಾ ಕರ್ತಿಚೌರ್ಯ ಮಾಡಿ ವಿದ್ವಾಂಸರಾದರೋ ಅದರ ಚರ್ಚೆ ಈಗ ಬೇಡ. ಮೋಸ ಮಾಡಿದ್ದರೆ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಈ ಶಕ್ತಿ ಮೂಲ ಅತ್ಯಂತ ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಾಗಿದ್ದು ಇದನ್ನು ಯಾರೂ ಅವರಿಂದ ಕಸಿದುಕೊಳ್ಳಲಾರರು. ಇವರಿಗಿಂತ ಹೆಚ್ಚು ಸಾಧನೆ ಮಾಡಿದವರು ಇನ್ನೂ ಹೆಚ್ಚಿನ ಪ್ರೀತಿ- ವಿಶ್ವಾಸ, ಹಣ ಗಳಿಸಿದರೂ ಸಹ ಇವರ ಖ್ಯಾತಿಗೆ ಧಕ್ಕೆಯಿರುವುದಿಲ್ಲ. ಉದಾಹರಣೆಗೆ ಸಚಿನ್ ತೆಂಡುಲ್ಕರ್ ಮತ್ತು ಡಾನ್ ಬ್ರಾಡ್ಮನ್.  ಆದರೆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೊಂದು ಗೊತ್ತಿಲ್ಲದ ಕ್ಷೇತ್ರದಲ್ಲಿ ನಾಯಕನಾಗ ಹೊರಟು – ಸಿನಿಮಾ ಅಥವಾ ಕ್ರೀಡಾ ತಾರೆಗಳಿಗೆ ರಾಜಕೀಯದಲ್ಲಿ ಆದ ಹಾಗೆ – ಮುಖಭಂಗ ಮಾಡಿಕೊಂಡ ನಿದರ್ಶನಗಳು ಇವೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿ ಎರಡರಲ್ಲೂ ಮಿಂಚಿದವರೂ ಇದ್ದಾರೆ.

ಐದನೆಯದು ಒಬ್ಬರ ಬೆನ್ನು ಇನ್ನೊಬ್ಬರು ತಟ್ಟುವ ಕಲೆಯಿಂದ ಬರುವ ಶಿಫಾರಸ್ಸು (ರೆಫೆರಲ್) ಶಕ್ತಿ ಮೂಲ ಅಂದರೆ ಇದರಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತನ್ನಾಡಿ ಅವರನ್ನು ಮೇಲಕ್ಕೇರಿಸುವುದು. ರಾಜಕೀಯ ಕ್ಷೇತ್ರದಲ್ಲಿ ಸರಿಯಾದ ಕುಟುಂಬದಲ್ಲಿ ಜನ್ಮ ತಾಳಿದುದರಿಂದ ಮತ್ತು ಅಪ್ಪ-ಅಮ್ಮನ ಚೇಲಾಗಳು ಇವರನ್ನು ತಲೆಯ ಮೇಲೆ ಕೂರಿಸಿಕೊಳ್ಳುವುದರಿಂದ ಈ ಶಕ್ತಿ ಮೂಲ ಕೈಹತ್ತಬಹುದು. ಇದನ್ನು ಅಂತರ್ಜಾಲ ಪ್ರಪಂಚದಲ್ಲಿ ಕೆಲವು (ಲಿಂಕ್ಡ್ ಇನ್ ಮುಂತಾದ) ತಾಣದಲ್ಲಿ ಎಂಡಾರ್ಸ್ಮೆಂಟ್ ರೂಪದಲ್ಲಿ ಕಾಣಬಹುದು. ಇದು ನ್ಯಾಯಯುತ ಅಥವಾ ಮೋಸಯುತವೂ ಆಗಿರಬಹುದು. ಈ ಶಕ್ತಿ ಮೂಲವೂ ಗೋಚರ ಅಥವಾ ಅಗೋಚರವಾಗಿರಬಹುದು. ಸರಿಯಾದ ಜನರನ್ನು ಶಿಫಾರಸ್ಸು ಮಾಡದೆ, ತಮ್ಮ ಅನುಯಾಯಿಗಳನ್ನು ಮೇಲೇರಿಸಲು ಪ್ರಯತ್ನಿಸಿ, ತಾವೂ ಬಿದ್ದು, ಮಿಕ್ಕವರನ್ನು ಬೀಳಿಸಿದ ನಾಯಕರೂ, ಪಕ್ಷದಿಂದ ಪಕ್ಷಕ್ಕೆ ಅಥವಾ ಕಂಪನಿಯಿಂದ ಕಂಪನಿಗೆ ಹಾರಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅದ ಕಥೆಗಳು ನಿಮಗೆ ತಿಳಿದಿರಬಹುದು.

ಸರಿಯಾದವರಿಂದ ಸರಿಯಾದವರಿಗೆ ಸಿಕ್ಕ ಶಿಫಾರಸ್ಸು ಶಕ್ತಿ ಮೂಲದಿಂದ ತುಂಬಾ ಮೇಲಕ್ಕೆ ಹೋದ ನಾಯಕರ ಉದಾಹರಣೆಗಳು ಸುಮಾರಷ್ಟಿವೆ. ಈ ಶಕ್ತಿಯನ್ನು ನುರಿತ ವೃತ್ತಿಪರರಿಂದ ‘ಇಮೇಜ್ ಬಿಲ್ಡಿಂಗ್’ ತಂತ್ರಕಲೆ ಉಪಯೋಗಿಸಿ ಕಟ್ಟಿಸಲೂಬಹುದು. ಕೆಲವು ರಾಜಕಾರಣಿಗಳು ಇದನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆ ಒಂದು ಸಾಬೂನಿನ ಬಗ್ಗೆ ಹೊಗಳಿ ಅದನ್ನು ನಂಬರ್ ಒನ್ ಮಾರಾಟದ ವಸ್ತುವನ್ನಾಗಿ ಮಾಡುವಂತೆ ಈ ಕಲೆಯನ್ನು  ವ್ಯಕ್ತಿಗಳ ಮೇಲೂ ಪ್ರಯೋಗಿಸಬಹುದು. ಐದು ಅಡಿ ಎತ್ತರದ ಮನುಷ್ಯನನ್ನು ಐವತ್ತು ಅಡಿ ‘ಕಟೌಟ್’ನಂತೆ ಪ್ರತಿಬಿಂಬಿಸಲೂಬಹುದು. ಈ ಕಲೆಯನ್ನು ಬಳಸಿಕೊಂಡು ಮೂರು ಕಾಸಿನ ಬೆಲೆ ಇಲ್ಲದ ವ್ಯಕ್ತಿಗಳು ನ್ಯಾಯಯುತ ನಾಯಕರಾದ ಉದಾಹರಣೆಗೇನೂ ಕೊರತೆಯಿಲ್ಲ. ಇದನ್ನು ವೃತ್ತಿಪರ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠಾಧೀಶರು, ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ಇದೂ ಶಾಶ್ವತವಲ್ಲ. ಇದನ್ನು ಜವಾಬ್ದಾರಿಯುತವಾಗಿ ಬಳಸದಿದ್ದಲ್ಲಿ ಇದು ಹಾನಿಕಾರಕವಾಗಿ ಪರಿಣಮಿಸಬಹು. ನಿಜವಾದ ವಿದ್ವತ್ ಶಕ್ತಿಮೂಲ ಇಲ್ಲದಿದ್ದಾಗ ಮಿಕ್ಕ ಯಾವುದೇ ಒಂದು ಶಕ್ತಿಮೂಲವನ್ನು ನಂಬಿದರೆ ಸಾಲದು ಎಂದು ತಿಳಿದು, ಉಳಿದವನ್ನೂ ಕಾಲಕಾಲಕ್ಕೆ ತಕ್ಕಂತೆ ಬಳಸಿಕೊಂಡು ದೀರ್ಘಕಾಲದಿಂದ ಬದುಕುಳಿದಿರುವ ನಾಯಕರು ಬಹಳಷ್ಟಿದ್ದಾರೆ.

ಏನೇ ಇರಲಿ, ತಮ್ಮ ನಾಯಕರನ್ನು ಹಿಂಬಾಲಿಸುವ ಮುನ್ನ ಅವರ ಶಕ್ತಿಮೂಲಗಳನ್ನು ಸರಿಯಾಗಿ ಅರಿತುಕೊಂಡಲ್ಲಿ ಜನರು ಬೇಸ್ತು ಬೀಳುವುದು ಕಡಿಮೆಯಾಗುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...