Homeಅಂತರಾಷ್ಟ್ರೀಯಇಂಗ್ಲೆಂಡ್‌‌ನ ಲೀಸೆಸ್ಟರ್ ಹಿಂಸಾಚಾರ: ಶಾಂತಿ ಕಾಪಾಡುವಂತೆ ಹಿಂದೂ-ಮುಸ್ಲಿಂ ಮುಖಂಡರ ಐಕ್ಯತೆಯ ಮಂತ್ರ

ಇಂಗ್ಲೆಂಡ್‌‌ನ ಲೀಸೆಸ್ಟರ್ ಹಿಂಸಾಚಾರ: ಶಾಂತಿ ಕಾಪಾಡುವಂತೆ ಹಿಂದೂ-ಮುಸ್ಲಿಂ ಮುಖಂಡರ ಐಕ್ಯತೆಯ ಮಂತ್ರ

- Advertisement -
- Advertisement -

ಇಂಗ್ಲೆಂಡ್‌ನ ಲೀಸೆಸ್ಟರ್‌‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಈವರೆಗೆ 47 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ನಗರದಲ್ಲಿ ಸೌಹಾರ್ದತೆಗಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಒಗ್ಗಟ್ಟಾಗಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

“ನಾವು ಲೀಸೆಸ್ಟರ್‌ನ ಕುಟುಂಬವಾಗಿದ್ದು ಹಿಂದೂಗಳು ಮತ್ತು ಮುಸ್ಲಿಮರಾಗಿ ಇಲ್ಲಿ ನಿಂತಿಲ್ಲ. ಸಹೋದರ ಸಹೋದರಿಯರಂತೆ ನಿಮ್ಮ ಮುಂದೆ ನಿಂತಿದ್ದೇವೆ. ವಿಭಜನೆಗೆ ಕಾರಣವಾಗುವ ಯಾವುದೇ ವಿದೇಶಿ ಉಗ್ರಗಾಮಿ ಸಿದ್ಧಾಂತಕ್ಕೆ ಲೀಸೆಸ್ಟರ್ ಸ್ಥಾನವಿಲ್ಲ” ಎಂದು ಮುಖಂಡರೊಬ್ಬರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮ್ಮ ಎರಡು ಧರ್ಮಗಳು ಈ ಅದ್ಭುತ ನಗರದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಮರಸ್ಯದಿಂದ ಬದುಕಿವೆ. ನಾವು ಒಟ್ಟಿಗೆ ಈ ನಗರಕ್ಕೆ ಬಂದಿದ್ದು, ಒಂದೇ ಸವಾಲುಗಳನ್ನು ಒಟ್ಟಿಗೆ ಎದುರಿಸಿದ್ದೇವೆ. ನಾವು ಜನಾಂಗೀಯ ದ್ವೇಷಿಗಳ ವಿರುದ್ಧ ಒಟ್ಟಾಗಿ ಹೋರಾಡಿದ್ದೇವೆ. ಒಗ್ಗಟ್ಟಿನಲ್ಲೆ ಈ ನಗರವನ್ನು ವೈವಿಧ್ಯತೆ ಮತ್ತು ಸಮುದಾಯದ ಒಗ್ಗಟ್ಟಿನ ದಾರಿದೀಪವನ್ನಾಗಿ ಮಾಡಿದೆವು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್‌: ಮುಸ್ಲಿಂ ವಿರೋಧಿ ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಹಿಂದುತ್ವ ಪ್ರೇರಿತ ಯುವಕರು; ಭುಗಿಲೆದ್ದ ಘರ್ಷಣೆ

“ಸಭ್ಯ ಸಮಾಜದ ಭಾಗವಾಗಿರದ ಉದ್ವೇಗ ಮತ್ತು ಹಿಂಸೆಯ ಬಗ್ಗೆ ಸಮುದಾಯಗಳಿಗೆ ದುಃಖ ಉಂಟಾಗಿದ್ದು, ಅಘಾತಗೊಂಡಿದೆ. ನಾವು ಎಲ್ಲಾ ಧಾರ್ಮಿಕ ಸ್ಥಳಗಳು, ಮಸೀದಿಗಳು ಮತ್ತು ದೇವಾಲಯಗಳ ಪಾವಿತ್ರ್ಯತೆಯನ್ನು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ. ಜೋರಾದ ಸಂಗೀತ, ಧ್ವಜಧಾರಣೆ, ಅವಹೇಳನಕಾರಿ ಘೋಷಣೆಗಳು ಅಥವಾ ಪವಿತ್ರ ಬಟ್ಟೆಯ ವಿರುದ್ಧದ ದಾಳಿಗಳೊಂದಿಗೆ ಪ್ರಚೋದನೆಗೆ ಒಳಗಾಗಬೇಡಿ” ಎಂದು ಅವರು ಜನರನ್ನು ಒತ್ತಾಯಿಸಿದ್ದಾರೆ.

ಪೂರ್ವ ಇಂಗ್ಲೆಂಡ್ ನಗರದಲ್ಲಿ ಮತ್ತಷ್ಟು ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಡೆಯಲು ನಡೆಯುತ್ತಿರುವ ಪೊಲೀಸ್‌ ಕಾರ್ಯಾಚರಣೆಯ ಭಾಗವಾಗಿ 47 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ಹೇಳಿದ್ದಾರೆ.

ಭಾರತವು ಪಾಕಿಸ್ತಾನವನ್ನು ಸೋಲಿಸಿದ ಆಗಸ್ಟ್ 28 ರ ಕ್ರಿಕೆಟ್ ಪಂದ್ಯದ ನಂತರ ನಗರದಲ್ಲಿ ಉದ್ವಿಗ್ನತೆ ಪ್ರಾರಂಭವಾಗಿತ್ತು. ಕಳೆದ ಶನಿವಾರ ಹಿಂದುತ್ವ ಬೆಂಬಲಿಗರು ಮಾಸ್ಕ್‌ ಧರಿಸಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಸ್ಲಿಂ ವಿರೋಧಿ ಘೋಷಣೆಗಳೊಂದಿಗೆ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ್ದರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುವ ವಿಡಿಯೊ ಮತ್ತು ಬಾಟಲಿಗಳಲ್ಲಿ ಎಸೆಯುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಂತರ ಭಾನುವಾರ ಮುಸ್ಲಿಂ ಯುವಕರು ಕೂಡಾ ಸಭೆ ನಡೆಸಿ ದಾಂದಲೆ ಎಬ್ಬಿಸಿದ್ದರು.

ಇದನ್ನೂ ಓದಿ: 19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಇಂಗ್ಲೆಂಡ್ ಮಣಿಸಿ 5ನೇ ಬಾರಿ ಕಪ್ ಗೆದ್ದ ಭಾರತ

ಘರ್ಷಣೆಯ ಸಮಯದಲ್ಲಿ ಆಕ್ರಮಣಕಾರಿ ಶಸ್ತ್ರಾಸ್ತ್ರವನ್ನು ಹೊಂದಿದ್ದಕ್ಕಾಗಿ 20 ವರ್ಷದ ಯುವಕನಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಲೀಸೆಸ್ಟರ್‌ಶೈರ್ ಪೊಲೀಸ್‌ನ ತಾತ್ಕಾಲಿಕ ಮುಖ್ಯ ಕಾನ್ಸ್‌ಟೇಬಲ್ ರಾಬ್ ನಿಕ್ಸನ್, “ಬಂಧಿತರಲ್ಲಿ ಕೆಲವರು ನಗರದ ಹೊರಭಾಗದವರಾಗಿದ್ದು, ಕೆಲವರು ಬರ್ಮಿಂಗ್‌ಹ್ಯಾಮ್‌ನವರೂ ಇದ್ದರು” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...