ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಸಾವಿನ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಹರಿದಾಡಿತ್ತು. ಪತ್ರವನ್ನು ಸಿದ್ಧಾರ್ಥ್ ಅವರೇ ಬರೆದಿದ್ದರಾ..? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಹೀಗಾಗಿ ಪತ್ರದ ಬಗ್ಗೆ ತನಿಖೆಗೆ ಒಳಪಡಿಸಲಾಗಿತ್ತು. ಈಗ ಪತ್ರವನ್ನು ಸಿದ್ಧಾರ್ಥ್ ಅವರೇ ಬರೆದಿದ್ದರು. ಅದರಲ್ಲಿರುವ ಸಹಿ ಕೂಡ ಸಿದ್ಧಾರ್ಥ್ ಅವರದ್ದೇ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯ ವರದಿ ದೃಢಪಡಿಸಿದೆ.

ಸಿದ್ಧಾರ್ಥ್ ಸಾವಿನ ವೇಳೆ ಹರಿದಾಡಿದ್ದ ಪತ್ರವನ್ನು ಸಿದ್ಧಾರ್ಥ್ ಅವರೇ ಬರೆದಿರುವುದು ಎಂಬುದು ದೃಢವಾಗಿದೆ. ಸಾಲಗಾರರ ಒತ್ತಡ, ಐಟಿ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಪತ್ರದಲ್ಲಿ ಸಿದ್ಧಾರ್ಥ್ ಉಲ್ಲೇಖಿಸಿದ್ದರು. ಇನ್ನು ಸಿದ್ಧಾರ್ಥ್ ಜು.29ರಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ಕಂಪ್ಲೀಟ್ ಆಗಿದ್ದು, ಇನ್ನು ಶೇ. 10ರಷ್ಟು ಮಾತ್ರ ಬಾಕಿಯಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

‘ಸಿದ್ಧಾರ್ಥ್ ಅವರ ಸಾವಿನ ಕುರಿತ ಕೆಲ ದಾಖಲೆಗಳ ಪರಿಶೀಲನೆ ಬಾಕಿಯಿದೆ. ಸಿದ್ಧಾರ್ಥ್ ಅವರ ಕಚೇರಿಯಲ್ಲಿನ ಕೆಲವು ದಾಖಲೆಗಳನ್ನು ಪರಿಶೀಲಿಸಬೇಕಿದೆ. ತದನಂತರ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here