ಲೈಬೇರಿಯಾದಲ್ಲಿ ಜನಪ್ರತಿನಿಧಿಗಳು, ದೇಶದ ಬಜೆಟ್ ಗಾಗಿ ತಮ್ಮ ಸಂಬಳದ ಕಾಲು ಭಾಗವನ್ನು ಮೀಸಲಿಟ್ಟು ಮಾದರಿಯಾಗಿದ್ದಾರೆ. 2020ರ ಬಜೆಟ್ ನ್ನು ಯಶಸ್ವಿಯಾಗಿಸಲು ಮತ್ತು ಜನರಿಗೆ ಹತ್ತಿರವಾಗಿಸಲು ಮುಂದಡಿಯಿಟ್ಟಿರುವ ಲೈಬೇರಿಯಾ ಜನಪ್ರತಿನಿಧಿಗಳು, ತಮಗೆ ಬರುವ ಸಂಬಳದಲ್ಲಿ ಶೇ. 30ರಷ್ಟನ್ನು ಬಜೆಟ್ ಗಾಗಿ ಸೇವ್ ಮಾಡಿದ್ದಾರೆ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ರಾಜಕಾರಣಿಗಳು ತಮ್ಮ ಸಂಬಳದ ಕಾಲು ಭಾಗವನ್ನು ಮೀಸಲಿಡಲು ಒಪ್ಪಿಕೊಂಡಿದ್ದು, ಈಗಾಗಲೇ ರೂಪುರೇಷೆ ತಯಾರಾಗಿದೆ.
ಲೈಬೇರಿಯಾವು, ಐಎಂಎಫ್ ( ಅಂತಾರಾಷ್ಟ್ರೀಯ ಹಣಕಾಸು ನಿಧಿ)ನ ಪ್ರಮುಖ ಮಾನದಂಡಗಳನ್ನು ಮುಟ್ಟುವಂತಾಗಲು ಈ ನೆರವು ನೀಡುತ್ತಿರುವುದಾಗಿ ಜನಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.
ಲೈಬೇರಿಯಾದ ಪಕ್ಕದ ರಾಷ್ಟ್ರ ನೈಜೀರಿಯಾದಲ್ಲಿ ಸಂಸತ್ ಸಚಿವಾಲಯದ ಹಿರಿಯ ಅಧಿಕಾರಿಗಳು 5.5 ನೈಜೀರಿಯನ್ ಬಿಲಿಯನ್ ಮೊತ್ತದಲ್ಲಿ ಕಾರುಗಳನ್ನು ಖರೀದಿಸಲು ಹೋಗಿದ್ದರು. ಆಗ ನೈಜೀರಿಯಾ ಪ್ರಜೆಗಳು, ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಹೀಗಿರುವಾಗ ನೀವು ಕಾರು ಖರೀದಿಸುತ್ತಿದ್ದಾರಾ..? ಎಂದು ಪ್ರತಿಭಟನೆ ನಡೆಸಿದ್ದರು. ಇದಾದ ಒಂದು ತಿಂಗಳ ನಂತರ ಇದರಿಂದ ಪಾಠ ಕಲಿತ ಲೈಬೇರಿಯಾ ಜನಪ್ರತಿನಿಧಿಗಳು, ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ, ಬಜೆಟ್ ಗಾಗಿ ತಮ್ಮದೇ ಸಂಬಳದ ಶೇ. 30 ಭಾಗವನ್ನು ಮೀಸಲಿಡುವುದಾಗಿ ನಿರ್ಧಾರ ತೆಗೆದುಕೊಂಡು ಮಾದರಿಯಾಗಿದ್ದಾರೆ.
ಲೈಬೇರಿಯನ್ ಸರ್ಕಾರ 2020ರ ಬಜೆಟ್ ನ್ನು ಈಗಾಗಲೇ ಪಾಸ್ ಮಾಡಿದೆ. ಅದರಲ್ಲಿ ಜನಪ್ರತಿನಿಧಿಗಳ ಸಂಬಳ ಮತ್ತು ಭತ್ಯೆ ಸೇರಿಸಲಾಗಿದೆ. ಈ ಮೂಲಕ ದೇಶದ ಅಭಿವೃದ್ಧಿ ಬಜೆಟ್ ಗಾಗಿ ಜನಪ್ರತಿನಿಧಿಗಳು ಸಂಬಳ ಮತ್ತು ಭತ್ಯೆ ನೀಡಿ, ಮಾದರಿಯಾಗಿದ್ದಾರೆ.
ಲೈಬೀರಿಯಾದ ಈ ಘಟನೆ ನಮ್ಮ ದೇಶದ ಜನಪ್ರತಿನಿಧಿಗಳಿಗೂ ಮಾದರಿಯಾಗಲಿ.