Homeಮುಖಪುಟ‘ಪುಟ್ಟ ವರದಿಗಾರ್ತಿ!’: ಬಾಲಕಿಯ ವಿಡಿಯೊ ಕವರೇಜ್‌ಗೆ ನೆಟ್ಟಿಗರು ಫಿದಾ

‘ಪುಟ್ಟ ವರದಿಗಾರ್ತಿ!’: ಬಾಲಕಿಯ ವಿಡಿಯೊ ಕವರೇಜ್‌ಗೆ ನೆಟ್ಟಿಗರು ಫಿದಾ

- Advertisement -
- Advertisement -

ಕಾಶ್ಮೀರದ ಪುಟ್ಟ ಬಾಲಕಿಯೊಬ್ಬರು ಮಾಧ್ಯಮ ವರದಿಗಾರ್ತಿಯಂತೆ ನಟಿಸಿ ತನ್ನ ಮನೆಯ ಸಮೀಪ ಇರುವ ರಸ್ತೆಗಳ ದುಸ್ಥಿತಿಯ ಬಗ್ಗೆ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಬಾಲಕಿಯ ವರದಿಯ ಕವರೇಜ್‌ ಅನ್ನು ಶ್ಲಾಘಸಿದ್ದು ಮುಂದಿನ ಹದಿನೈದು ವರ್ಷಗಳ ನಂತರ ಅವರು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾಣಿಸುವಂತಾಗಲಿ ಎಂದು ಹಾರೈಸಿದ್ದಾರೆ.

2:08 ಸೆಕೆಂಡಿನ ವಿಡಿಯೊ ಕಾಶ್ಮೀರದ್ದು ಎನ್ನಲಾಗಿದ್ದು, ವಿಡಿಯೊದಲ್ಲಿರುವ ಬಾಲಕಿಯ ಹೆಸರು ಮತ್ತು ಅವರ ವಾಸಸ್ಥಳದ ಬಗ್ಗೆಗಿನ ವರದಿಗಳು ಸಧ್ಯಕ್ಕೆ ಲಭ್ಯವಾಗಿಲ್ಲ.

ಇದನ್ನೂ ಓದಿ:ನನಗಾಗಿ ಜೋರಾಗಿ ಚಪ್ಪಾಳೆ ಹೊಡೆಯಿರಿ ಎಂದು ಕೇಳಿಕೊಂಡ ಬಿಜೆಪಿ ಎಂಪಿ, ನಿರಾಕರಿಸಿದ ರೈತರು: ವಿಡಿಯೋ ವೈರಲ್

ವೀಡಿಯೊದಲ್ಲಿ ಬಾಲಕಿಯು ರಸ್ತೆಯ ದುಸ್ಥಿತಿಯ ಬಗ್ಗೆ ದೂರುತ್ತಾ, ಇಂತಹ ರಸ್ತೆಯಿಂದಾಗಿ ತಮ್ಮ ಮನೆಗೆ ಅತಿಥಿಗಳು ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ವೀಡಿಯೊವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿರುವಂತೆ ತೋರುತ್ತಿದೆ. ಬಾಲಕಿಯು ಕ್ಯಾಮರಾ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು “ಅಮ್ಮ” ಎಂದು ಸಂಬೋಧಿಸುವುದು ಕೂಡಾ ಕೇಳುತ್ತದೆ.

ಕಾಶ್ಮೀರದಲ್ಲಿ ಭಾರೀ ಮಳೆ ಮತ್ತು ಹಿಮ ಸುರಿದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಹವಾಮಾನ ವೈಪರೀತ್ಯಗಳು ಪರಿಸ್ಥಿತಿಯನ್ನು ಹೇಗೆ ಹದಗೆಡಿಸುತ್ತವೆ ಎಂಬುದನ್ನು ಬಾಲಕಿಯು ವಿವರಿಸುತ್ತಾ, ಸುತ್ತಲೂ ನಡೆದು ತೋರಿಸುತ್ತಾರೆ. “ಜನರು ಕಸವನ್ನು ರಸ್ತೆಗಳಲ್ಲೇ ಎಸೆಯುತ್ತಾರೆ ಮತ್ತು ಸ್ಥಳವು ಕೊಳಕಾಗಿದೆ ಎಂದು ಬೊಬ್ಬೆ ಹೊಡೆಯುತ್ತಾರೆ” ಎಂದು ಪುಟ್ಟ ಬಾಲಕಿಯು ಹೇಳುತ್ತಾರೆ.

ವಿಡಿಯೊ ಕೊನೆಯಲ್ಲಿ ವೀಕ್ಷಕರೊಂದಿಗೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಂದಾದಾರರಾಗಿ ಎಂದು ಹೇಳುವ ಬಾಲಕಿಯು, ಮುಂದಿನ ವೀಡಿಯೊದಲ್ಲಿ ಮತ್ತೆ ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತಾರೆ. ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ:ಸ್ಮಶಾನಕ್ಕಾಗಿ ಹಾಡಿ ಜನರ ಆಗ್ರಹ: ಶವ ಇಟ್ಟು ಪ್ರತಿಭಟನೆ; ವಿಡಿಯೊ ವೈರಲ್‌‌

ಕಾಶ್ಮೀರದ ಅಧಿಕಾರಿಗಳಿಗೆ ವಿಡಿಯೊ ಮೂಲಕ ಮಕ್ಕಳು ಮನವಿ ಮಾಡಿದ್ದು ಇದುವೆ ಮೊದಲಲ್ಲ. ಆರು ವರ್ಷದ ಪುಟ್ಟ ಬಾಲಕಿಯ ವೀಡಿಯೊ ಕಳೆದ ವರ್ಷ ವೈರಲ್‌ ಆಗಿತ್ತು. ಅದರಲ್ಲಿ ಅವರು ಆನ್‌ಲೈನ್‌‌‌‌ ತರಗತಿಗಳ ಅವಧಿಯನ್ನು ಮಿತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದರು.

ಈ ವಿಡಿಯೊ ವೈರಲ್ ಆದ ನಂತರ, ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶಾಲಾ ವಿದ್ಯಾರ್ಥಿಗಳ ‘ಹೋಂ ವರ್ಕ್’ ಹೊರೆಯನ್ನು ಕಡಿಮೆ ಮಾಡಲು 48 ಗಂಟೆಗಳಲ್ಲಿ ನೀತಿಯನ್ನು ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ:ಸಿಖ್ಖರ ವಿರುದ್ಧ ಕ್ಯಾಬಿನೆಟ್ ಸಮಿತಿ ಚರ್ಚಿಸುತ್ತಿದೆ ಎಂದು ಬಿಂಬಿಸಿ ನಕಲಿ ವಿಡಿಯೊ ವೈರಲ್‌; FIR ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...