Homeಮುಖಪುಟಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು; ಜಯಾ ಬಚ್ಚನ್‌

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು; ಜಯಾ ಬಚ್ಚನ್‌

ಡಿಸೆಂಬರ್ 31 ರ ಒಳಗಾಗಿ 4 ಜನ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಎಐಎಡಿಎಂಕೆ ಸಂಸದೆ ವಿಜಿಲಾ ಸತ್ಯನಾಂತ್ ಹೇಳಿದ್ದಾರೆ.

- Advertisement -
- Advertisement -

ಸಂಸತ್ತಿನ ಉಭಯ ಸದನಗಳಲ್ಲಿ ಕಳೆದ ವಾರ ಸಂಭವಿಸಿದ ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿಷಯವು ದೊಡ್ಡ ಚರ್ಚೆಯಾಗಿದೆ. ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್, ಅತ್ಯಾಚಾರದ ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಥುವಾ, ನಿರ್ಭಯ ಅಥವಾ ತೆಲಂಗಾನದ ಘಟನೆಯಲ್ಲಿ ಏನಾಯ್ತು? ಸರ್ಕಾರ ಅದನ್ನು ಹೇಗೆ ನಿಭಾಯಿಸಿದೆ ಮತ್ತು ಈ ಜನರಿಗೆ ಎಷ್ಟು ನ್ಯಾಯ ದೊರಕಿದೆ? ಎಂಬುದರ ಕುರಿತು ಸರ್ಕಾರವು ಸರಿಯಾದ ಮತ್ತು ಖಚಿತವಾದ ಉತ್ತರವನ್ನು ನೀಡಬೇಕೆಂದು ಜನರು ಈಗ ಬಯಸುತ್ತಾರೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ.

ಈ ಕುರಿತು ಎಷ್ಟು ದಿನ ನಾವು ಮಾತನಾಡಬೇಕು ತಿಳಿಯುತ್ತಿಲ್ಲ. ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರಕ್ಕೆ ಒಂದು ದಿನ ಮೊದಲು ಹೈದರಾಬಾದ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಆದರೂ ಆ ಪ್ರದೇಶದಲ್ಲಿ ಏಕೆ ರಕ್ಷಣೆಯನ್ನು ಹೆಚ್ಚು ಮಾಡಿ ಅನಾಹುತವನ್ನು ತಪ್ಪಿಸಲಿಲ್ಲ? ಆ ಪ್ರದೇಶದ ಸೆಕ್ಯುರಿಟಿಗಳೆ ಇದಕ್ಕೆ ಹೊಣೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಕೆಲಸಗಳನ್ನು ಸರಿಯಾಗಿ ಮಾಡದ ಈ ಜನರು ಇಡೀ ದೇಶದ ಮುಂದೆ ನಾಚಿಕೆಪಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿ ಶಿಕ್ಷೆ ನೀಡಬೇಕು ಎಂದು ಜಯಾ ಬಚ್ಚನ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಡಿಸೆಂಬರ್ 31 ರ ಒಳಗಾಗಿ 4 ಜನ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಎಐಎಡಿಎಂಕೆ ಸಂಸದೆ ವಿಜಿಲಾ ಸತ್ಯನಾಂತ್ ಹೇಳಿದ್ದಾರೆ.

“ಮಕ್ಕಳು ಮತ್ತು ಮಹಿಳೆಯರಿಗೆ ಈ ದೇಶ ಸುರಕ್ಷಿತವಲ್ಲ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಬೇಕು. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಸಿದಂತೆ ”ಎಂದು ಅವರು ಹೇಳಿದ್ದಾರೆ.

ಅತ್ಯಾಚಾರದ ಆರೋಪಿಗಳನ್ನು ನ್ಯಾಯಾಲಯಕ್ಕೆ ತರುವಾಗ ಆಕ್ರೋಶಿತರಾದ ಭಾರೀ ಜನ ರಸ್ತೆಗಳಲ್ಲಿ ಸೇರಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಗಿ ಬಂದಿತ್ತು ಮತ್ತು ಲಘು ಲಾಠಿ ಪ್ರಹಾರ ಸಹ ನಡೆಸಲಾಗಿದೆ.

ವಿಡಿಯೋ ನೋಡಿ

ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಮೂವರು ಪೊಲೀಸರನ್ನು “ಕರ್ತವ್ಯ ನಿರ್ವಹಣೆಯ ಲೋಪ”ದ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ. ಆರೋಪಿಗಳಿಗೆ ಶನಿವಾರದಿಂದ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಅತ್ಯಾಚಾರವನ್ನು ತಡೆಗಟ್ಟಲು ಸಾಧ್ಯ! ತಡೆಗಟ್ಟಲೇಬೇಕು! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆಯ ನಂತರ ತೆಲಂಗಾಣದಲ್ಲಿ ಭಾರಿ ಪ್ರತಿಭಟನೆ ಮತ್ತು ದೇಶಾದ್ಯಂತ ಕೋಪವನ್ನು ಉಂಟುಮಾಡಿದ ನಂತರ ಆರೋಪಿಗಳನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಭಾನುವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...