Homeಮುಖಪುಟಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ತಲೆಕೆಳಗೆ ನೇತುಹಾಕಿ ಹಲ್ಲೆ

ಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ತಲೆಕೆಳಗೆ ನೇತುಹಾಕಿ ಹಲ್ಲೆ

- Advertisement -
- Advertisement -

ಮಧ್ಯಪ್ರದೇಶದ ಬೇತುಲ್‌ನಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದ ಘಟನೆ ಮಾಸುವ ಮುನ್ನವೆ, ಮತ್ತೊಬ್ಬ ಆದಿವಾಸಿ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿದೆ ಬಂದಿದೆ.

ಟೀ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಆತನನ್ನು ತಲೆ ಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಈ ವಾರ ಜಿಲ್ಲೆಯಲ್ಲಿ ಇಂತಹ ಎರಡನೇ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಟೀ ಅಂಗಡಿ ನಡೆಸುತ್ತಿದ್ದು, ದಾಳಿಕೋರರು ನನಗೆ ಥಳಿಸುವಾಗ ‘ಕತ್ತರಿಸು’ ಎಂದು ಹೇಳುತ್ತಿದ್ದರು’ ಎಂದು ಹೇಳಿದ್ದಾರೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂತ್ರಸ್ತನು ಛಾವಣಿಯಿಂದ ತಲೆಕೆಳಗಾಗಿ ನೇತಾಡುತ್ತಿರುವುದನ್ನು ತೋರಿಸುತ್ತದೆ. ಆತನಿಗೆ ಬೆಲ್ಟ್ ಮತ್ತು ಕೋಲುಗಳಿಂದ ನಿರ್ದಯವಾಗಿ ಥಳಿಸಲಾಗಿದೆ. ‘ಅವರು, ನನ್ನ ಬಟ್ಟೆಗಳನ್ನು ಕಿತ್ತೆಸೆದರು, ಕಟ್ಟಿಹಾಕಿದ ನಂತರ ದೊಣ್ಣೆ, ಬೆಲ್ಟ್ ಮತ್ತು ಚಪ್ಪಲಿಗಳಿಂದ ಥಳಿಸಿದರು. ನನ್ನನ್ನು ಏಕೆ ಹೊಡೆಯಲಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ, ಅವರು ನನ್ನ ತಂದೆಯೊಂದಿಗೆ ನಾನು ನಡೆಸುತ್ತಿರುವ ಟೀ ಅಂಗಡಿಗೆ ಹಣಕ್ಕಾಗಿ ಬೇಡಿಕೆಯಿಟ್ಟರು’ ಎಂದು ಸಂತ್ರಸ್ತ ಮಾಧ್ಯಮಗಳಿಗೆ ತಳಿಸಿದ್ದಾರೆ.

ಈ ಘಟನೆ 2023ರ ನವೆಂಬರ್‌ನಲ್ಲಿ ನಡೆದಿದ್ದು, ದಾಳಿಕೋರರು ತಮ್ಮ ಕುಟುಂಬಕ್ಕೆ ಹಾನಿ ಮಾಡುತ್ತಾರೆ ಎಂಬ ಭಯದಿಂದ ಅವರು ದೂರು ದಾಖಲಿಸಲಿಲ್ಲ. ‘ಅವರ ಬಳಿ ಬಂದೂಕು ಇತ್ತು, ಅವರಲ್ಲಿ ಒಬ್ಬರು ಕೊಲೆ ಮಾಡಿದ್ದಾರೆ ಎಂದು ನಾನು ಕೇಳಿದ್ದೆ. ಅದಕ್ಕಾಗಿಯೇ ನಾನು ಈವರೆಗೆ ಯಾರಿಗೂ ಹೇಳಲಿಲ್ಲ. ವೀಡಿಯೊ ವೈರಲ್ ಆದಾಗ, ಕೆಲವು ತಿಂಗಳ ಹಿಂದೆ ನನಗೆ ಇದು ಸಂಭವಿಸಿದೆ ಎಂದು ನಾನು ನನ್ನ ಅಣ್ಣನಿಗೆ ತಿಳಿಸಿದೆ’ ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ದುಃಖಕರ ಘಟನೆಯು ಇತ್ತೀಚೆಗೆ ಬೇತುಲ್‌ನಲ್ಲಿ ನಡೆದ ಮತ್ತೊಂದು ಘಟನೆಯನ್ನು ಅನುಸರಿಸುತ್ತದೆ, ಅಲ್ಲಿ ಇನ್ನೊಬ್ಬ ಬುಡಕಟ್ಟು ವ್ಯಕ್ತಿಯನ್ನು ಬರ್ಬರವಾಗಿ ಥಳಿಸಿದ್ದ ವಿಡಿಯೋ ವೈರಲ್ ಆಗಿತ್ತು.

ಸೋಮವಾರದಂದು ಬೆತುಲ್‌ನಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಬಜರಂಗದಳದ ಕಾರ್ಯಕರ್ತರು ಕೋಳಿಯಂತೆ ಕೂರುವಂತೆ ಒತ್ತಾಯಿಸಿದ್ದರು. ಬಜರಂಗದಳದ ಸದಸ್ಯ ಚಂಚಲ್ ರಜಪೂತ್ ಎಂಬಾತನ ನೇತೃತ್ವದ ಗುಂಪು ದೈಹಿಕ ಹಿಂಸೆ ಮತ್ತು ಜಾತಿ ನಿಂದನೆಗೆ ಮಾಡಿತ್ತು.

ಡಿಜೆ ಆಗಿ ಕೆಲಸ ಮಾಡುತ್ತಿರುವ ರಾಜು ಅವರು ನೋವಿನ ಅನುಭವವನ್ನು ವಿವರಿಸಿದರು, “ರಾತ್ರಿ 11:30 ರ ಸುಮಾರಿಗೆ ನಾನು ಮನೆಗೆ ಹೋಗುತ್ತಿದ್ದಾಗ ಸುಭಾಷ್ ಶಾಲೆಯ ಬಳಿ ಚಂಚಲ್ ರಜಪೂತ್ ಮತ್ತು ಅವರ ಬಜರಂಗದಳದ ಸ್ನೇಹಿತರು ನನ್ನನ್ನು ಕರೆದೊಯ್ದರು. ಅವರು ನನ್ನ ಮೇಲೆ ದೈಹಿಕವಾಗಿ ಮತ್ತು ಹಲ್ಲೆ ನಡೆಸಿದರು. ಮೌಖಿಕವಾಗಿ ಮತ್ತು ನನ್ನ ವಿರುದ್ಧ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ’ ಎಂದರು ಹೇಳಿದ್ದರು.

ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಗಂಭೀರ ಅಪರಾಧಗಳಲ್ಲಿ ಇಳಿಕೆಯನ್ನು ಸೂಚಿಸುತ್ತವೆ. ಪೊಲೀಸ್ ಪ್ರಧಾನ ಕಛೇರಿಯ ಅಜಾಕ್ ಶಾಖೆಯು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2022 ರಿಂದ 2023 ರವರೆಗೆ ಈ ಸಮುದಾಯಗಳ ವಿರುದ್ಧದ ತೀವ್ರ ಅಪರಾಧಗಳಲ್ಲಿ 22% ರಷ್ಟು ಕಡಿಮೆಯಾಗಿದೆ.

2022ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ 11,384 ಅಪರಾಧ ಪ್ರಕರಣಗಳು ವರದಿಯಾಗಿದ್ದು, 2023ರಲ್ಲಿ ಈ ಸಂಖ್ಯೆ 11,171ಕ್ಕೆ ಇಳಿಕೆಯಾಗಿದೆ. ಕೊಲೆ ಪ್ರಕರಣಗಳು 2022 ರಲ್ಲಿ 140 ರಿಂದ 2023 ರಲ್ಲಿ 121 ಕ್ಕೆ ಇಳಿಕೆ ಕಂಡಿದೆ. ಅಂತೆಯೇ, ಅದೇ ಅವಧಿಯಲ್ಲಿ ವರದಿಯಾದ ಲೈಂಗಿಕ ದೌರ್ಜನ್ಯ ಪ್ರಕರಣಗಳು 996 ರಿಂದ 883 ಕ್ಕೆ ಇಳಿದಿದೆ.

ರಾಜ್ಯದಾದ್ಯಂತ ಅಂಚಿನಲ್ಲಿರುವ ಸಮುದಾಯಗಳ ವಿರುದ್ಧದ ಅಪರಾಧಗಳ ಹಾಟ್‌ಸ್ಪಾಟ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. 2021 ರಲ್ಲಿ, ಅಂತಹ 906 ಹಾಟ್‌ಸ್ಪಾಟ್‌ಗಳಿದ್ದವು ಮತ್ತು 2023 ರ ವೇಳೆಗೆ, ಸಂಖ್ಯೆ 566 ಕ್ಕೆ ಇಳಿದಿದೆ.

ಇದನ್ನೂ ಓದಿ; ಚಲೋ ದೆಹಲಿ ಮೆರವಣಿಗೆ: ಸಿಂಘು ಗಡಿಯಲ್ಲಿ ರೈತರ ಮೇಲೆ ಬಲ ಪ್ರಯೋಗಕ್ಕೆ ನಿರ್ದೇಶನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read