Homeಮುಖಪುಟಮಹಾರಾಷ್ಟ್ರ ಉಪಚುನಾವಣೆ; ಬಿಜೆಪಿ ಭದ್ರಕೋಟೆ ಕಸ್ಬಾ ಪೇಠ್‌ನಲ್ಲಿ ಕಾಂಗ್ರೆಸ್‌ ಜಯಭೇರಿ

ಮಹಾರಾಷ್ಟ್ರ ಉಪಚುನಾವಣೆ; ಬಿಜೆಪಿ ಭದ್ರಕೋಟೆ ಕಸ್ಬಾ ಪೇಠ್‌ನಲ್ಲಿ ಕಾಂಗ್ರೆಸ್‌ ಜಯಭೇರಿ

ಪುಣೆಯ ಹೃದಯ ಭಾಗವಾದ ಕಸ್ಬಾ ಪೇಟ್‌ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಗೆಲ್ಲುತ್ತಾ ಬಂದಿತ್ತು

- Advertisement -
- Advertisement -

ಪುಣೆ ನಗರದ ಹೃದಯಭಾಗದಲ್ಲಿರುವ, ಬಿಜೆಪಿಯ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟ ಕಸ್ಬಾ ಪೇಠ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ.

ಸುಮಾರು ಮೂರು ದಶಕ ಕಾಲ ಕಬ್ಬಾ ಪೇಠ್‌ನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ. ಪ್ರತಿಪಕ್ಷವಾದ ಮಹಾ ವಿಕಾಸ್ ಅಘಾಡಿಯ ಅಭ್ಯರ್ಥಿಯಾಗಿದ್ದ ರವೀಂದ್ರ ಧಾಂಗೇಕರ್ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ.

ರವೀಂದ್ರ ಧಾಂಗೇಕರ್ ಅವರು ಬಿಜೆಪಿಯ ಹೇಮಂತ್ ರಸಾನೆ ಅವರನ್ನು 11,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. 1980ರಿಂದ ಎರಡು ಬಾರಿ ಹೊರತುಪಡಿಸಿ ಈ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿತ್ತು.

ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕ್ ಅವರ ಮರಿ ಮೊಮ್ಮಗಳು, ಬಿಜೆಪಿ ಶಾಸಕಿ ಮುಕ್ತಾ ತಿಲಕ್ ಅವರು ನಿಧನರಾಗಿದ್ದರಿಂದ ಕ್ಷೇತ್ರದಲ್ಲಿ ಚುನಾವಣೆ ನಿಗದಿಯಾಗಿತ್ತು. ಮುಕ್ತಾ ಅವರು 2019ರ ಚುನಾವಣೆಯಲ್ಲಿ ಗೆದ್ದಿದ್ದರು.

ಅದಕ್ಕೂ ಮೊದಲು 1995, 1999, 2004, 2009 ಮತ್ತು 2014 ರಲ್ಲಿ ಬಿಜೆಪಿಯ ಗಿರೀಶ್ ಬಾಪಟ್ ಅವರು ಐದು ಭಾರಿ ಕಸ್ಬಾ ಪೇಠ್‌ನಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದರು. ಬಾಪಟ್ ಅವರೀಗ ಪುಣೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.

ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್‌ ಸಂಭ್ರಮಾಚರಣೆ ಮಾಡಿದೆ. ಲೋಕಮಾನ್ಯ ತಿಲಕ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪುಣೆಯ ಬಹುತೇಕ ನಿವಾಸಿಗಳು ಅತೃಪ್ತಿ ಹೊಂದಿದ್ದರು ಎನ್ನಲಾಗುತ್ತಿದೆ.

ಕಸ್ಬಾ ಪೇಠ್‌ ಪುಣೆಯ ಅತ್ಯಂತ ಹಳೆಯ ವಸತಿ ಪ್ರದೇಶವಾಗಿದೆ. ಇದನ್ನು ಕಸ್ಬಾ ಪುಣೆ ಎಂದೂ ಕರೆಯಲಾಗುತ್ತಿತ್ತು. ಜೊತೆಗೆ ಪುಣೆಯ ಹೃದಯ ಭಾಗವೆಂದೇ ಕಸ್ಬಾ ಪೇಠ್‌‌ ಪರಿಗಣಿಸಲ್ಪಟ್ಟಿದೆ.

ಚಿಂಚವಾಡ್‌ನಲ್ಲಿ ಬಿಜೆಪಿ ಗೆಲುವು

ಬಿಜೆಪಿ ಶಾಸಕರಾದ ಲಕ್ಷ್ಮಣ್ ಜಗತಾಪ್ ಅವರು ನಿಧನರಾಗಿದ್ದರಿಂದ ಚಿಂಚವಾಡ್ ಕ್ಷೇತ್ರಕ್ಕೂ ಚುನಾವಣೆ ನಿಗದಿಯಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

25ನೇ ಸುತ್ತಿನ ಮತ ಎಣಿಕೆ ಮುಗಿದ ನಂತರ ಬಿಜೆಪಿಯ ಅಶ್ವಿನಿ ಜಗತಾಪ್ 90,266 ಮತಗಳನ್ನು, ಎನ್‌ಸಿಪಿಯ ನಾನಾ ಕಾಟೆ 76,983 ಮತ್ತು ಸ್ವತಂತ್ರ ಅಭ್ಯರ್ಥಿ ರಾಹುಲ್ ಕಲಟೆ 29,200 ಮತಗಳನ್ನು ಪಡೆದಿದ್ದಾರೆ.

ಅಭ್ಯರ್ಥಿಗಳನ್ನು ಹಾಕದಂತೆ ಎಂವಿಎಗೆ ಮನವಿ ಮಾಡಿದ್ದ ಸಿಎಂ ಶಿಂಧೆ

ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಕೂಟವು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕದಿರುವಂತೆ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮನವಿ ಮಾಡಿದ್ದರು.

“ಮಹಾರಾಷ್ಟ್ರವನ್ನು ಗಮನದಲ್ಲಿಟ್ಟುಕೊಂಡು ಕಸ್ಬಾ ಪೇಠ್ ಮತ್ತು ಚಿಂಚ್‌ವಾಡ್ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳಿಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬೇಡಿ” ಎಂದಿದ್ದರು ಶಿಂಧೆ.

ಇದನ್ನೂ ಓದಿರಿ: ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಪಿಎಂ, ಲೋಕಸಭೆ ವಿಪಕ್ಷ ನಾಯಕ, ಸಿಜೆಐ ಇರಬೇಕು: ಸುಪ್ರೀಂ ಕೋರ್ಟ್

ಮೂರು ಅವಧಿಯಲ್ಲಿ ಕಾರ್ಪೊರೇಟರ್ ಆಗಿದ್ದ ಹೇಮಂತ್ ರಸಾನೆ ಅವರನ್ನು ಕಸ್ಬಾ ಪೇಠ್‌ನಿಂದ ಮತ್ತು ಲಕ್ಷ್ಮಣ್ ಜಗತಾಪ್ ಅವರ ಪತ್ನಿ ಅಶ್ವಿನಿ ಜಗತಾಪ್ ಅವರನ್ನು ಚಿಂಚವಾಡದಿಂದ ಬಿಜೆಪಿ ಕಣಕ್ಕಿಳಿಸಿತ್ತು.

ಅಭ್ಯರ್ಥಿ ಘೋಷಣೆಯ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಪ್ರಮುಖ ಎಂವಿಎ ನಾಯಕರಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಅಜಿತ್ ಪವಾರ್, ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರನ್ನು ಕರೆದು ಮಾತನಾಡಿದ್ದರು. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಎಂವಿಎ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಮನವಿ ಮಾಡಿದ್ದರು. ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿ ಎಂದು ಸಿಎಂ ಆಶಿಸಿದ್ದರು.

ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದರು. ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...