Homeಮುಖಪುಟಅಕ್ರಮ ಹಣ ವರ್ಗಾವಣೆ: ಸಚಿವ ನವಾಬ್ ಮಲಿಕ್ ಬಂಧನದ ವಿರುದ್ಧ ಮಹಾರಾಷ್ಟ್ರ ಶಾಸಕ, ಸಚಿವರ ಪ್ರತಿಭಟನೆ

ಅಕ್ರಮ ಹಣ ವರ್ಗಾವಣೆ: ಸಚಿವ ನವಾಬ್ ಮಲಿಕ್ ಬಂಧನದ ವಿರುದ್ಧ ಮಹಾರಾಷ್ಟ್ರ ಶಾಸಕ, ಸಚಿವರ ಪ್ರತಿಭಟನೆ

- Advertisement -
- Advertisement -

ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬುಧವಾರ ವಿಚಾರಣೆ ನಡೆಸಿದ ನಂತರ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಬಂಧಿಸಿದೆ. ಸಚಿವ ನವಾಬ್ ಮಲಿಕ್ ಮಾರ್ಚ್ 3ರ ವರೆಗೆ ಏಜೆನ್ಸಿಯ ಕಸ್ಟಡಿಯಲ್ಲಿರುತ್ತಾರೆ.

ಸಚಿವ ನವಾಬ್ ಮಲಿಕ್ ಬಂಧನವನ್ನು ವಿರೋಧಿಸಿರುವ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರ ಪ್ರತಿಭಟನೆ ನಡೆಸುವುದಾಗಿ ತಿಳಿಸಿತ್ತು. ಗುರುವಾರ (ಫೆ.24) ಆಡಳಿತರೂಢ ಪಕ್ಷಗಳ ಸಚಿವರು ಮತ್ತು ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ನವಾಬ್ ಮಲಿಕ್ (62) ಅವರನ್ನು ಬುಧವಾರ ಬಂಧಿಸಲಾಗಿತ್ತು. ನಂತರ ವಿಶೇಷ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್. ಎನ್. ರೋಕಡೆ ಮಾರ್ಚ್ 3 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ಭೇಟಿಯೆಂದ ಪ್ರಶಾಂತ್ ಕಿಶೋರ್: ವಿರೋಧ ಪಕ್ಷಗಳ ಒಗ್ಗಟ್ಟು ಎಂದ NCPಯ ನವಾಬ್ ಮಲ್ಲಿಕ್!

ಅಕ್ರಮ ಹಣ ವರ್ಗಾವಣೆ ತನಿಖೆಯು ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಮುಂಬೈನ ರಾಜ್ಯ ಸಚಿವಾಲಯದ ಬಳಿ ಹಿರಿಯ ಸಚಿವರಾದ ಅಜಿತ್ ಪವಾರ್, ಛಗನ್ ಭುಜಬಲ್, ಬಾಳಾಸಾಹೇಬ್ ಥೋರಟ್, ಜಯಂತ್ ಪಾಟೀಲ್ ಮತ್ತು ಅಸ್ಲಂ ಶೇಖ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಸೇರಿದಂತೆ ಇತರ ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟನಾ ಸ್ಥಳದಲ್ಲಿ ಮೊದಲು ಕಾಣಿಸಿಕೊಂಡಿದ್ದಾರೆ. ಬಳಿಕ ಶಿವಸೇನೆಯ ಹಿರಿಯ ನಾಯಕ ಮತ್ತು ಸಚಿವ ಸುಭಾಷ್ ದೇಸಾಯಿ ಸೇರಿದಂತೆ ಶಿವಸೇನಾ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಫೆಬ್ರವರಿ 25 ರಿಂದ ಎಲ್ಲಾ ಮಹಾ ವಿಕಾಸ್ ಅಘಾಡಿ ಪಕ್ಷಗಳ ಕಾರ್ಯಕರ್ತರು ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಲಿಕ್ ಅವರು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ರಾಜೀನಾಮೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಬುಧವಾರ ಸಂಜೆ ನಡೆದ ಮಹಾ ವಿಕಾಸ್ ಅಘಾಡಿ ನಾಯಕರ ಸಭೆಯ ನಂತರ ಹೇಳಿದ್ದರು.

ಸಚಿವ ನವಾಬ್ ಮಲಿಕ್ ಬುಧವಾರ ಇಡಿ ಕಚೇರಿಯಿಂದ ಹೊರಬರುವಾಗ ಹೊರಗಡೆಯಿದ್ದ ಮಾಧ್ಯಮದವರಿಗೆ ಮುಷ್ಟಿಯನ್ನು ಹಿಡಿದು ಸನ್ನೆ ಮಾಡುತ್ತಾ, ’ಮಲಿಕ್ ತಲೆಬಾಗುವುದಿಲ್ಲ’. ನಾವು ಹೋರಾಡುತ್ತೇವೆ, ಗೆಲ್ಲುತ್ತೇವೆ ಮತ್ತು ಎಲ್ಲರನ್ನೂ ಬಹಿರಂಗಪಡಿಸುತ್ತೇವೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಶಿವಮೊಗ್ಗ ಹಿಂಸಾಚಾರ ನಷ್ಟವನ್ನು ಈಶ್ವರಪ್ಪನವರಿಂದ ವಸೂಲಿ ಮಾಡಿ- ಹರಿಪ್ರಸಾದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...