Homeಮುಖಪುಟಇಂದು ಮಹಾರಾಷ್ಟ್ರದ 3 ದಿನದ ಬಿಜೆಪಿ ಸರ್ಕಾರಕ್ಕೆ ಮೊದಲ ಪುಣ್ಯತಿಥಿ: ಸಂಜಯ್ ರಾವತ್

ಇಂದು ಮಹಾರಾಷ್ಟ್ರದ 3 ದಿನದ ಬಿಜೆಪಿ ಸರ್ಕಾರಕ್ಕೆ ಮೊದಲ ಪುಣ್ಯತಿಥಿ: ಸಂಜಯ್ ರಾವತ್

"ಎರಡು-ಮೂರು ತಿಂಗಳಲ್ಲಿ ನಮ್ಮ (ಬಿಜೆಪಿ) ಸರ್ಕಾರ ರೂಪುಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ರಾವ್ ಸಾಹೇಬ್ ಪಾಟೀಲ್ ಸ್ಪೋಟಕ ಹೇಳಿಕೆ ನೀಡಿದ್ದರು"

- Advertisement -
- Advertisement -

ಇನ್ನು 2-3 ತಿಂಗಳಿನಲ್ಲಿ ಸರ್ಕಾರ ರಚಿಸುತ್ತೇವೆ ಎಂದ ಬಿಜೆಪಿ ನಾಯಕ ರಾವ್ ಸಾಹೇಬ್ ಪಾಟೀಲ್ ಧಾನ್ವೆ ಹೇಳಿಕೆಗೆ ತಿರುಗೇಟು ನೀಡಿದ ಶಿವಸೇನೆ ಮುಖಂಡ ಸಂಜಯ್ ರಾವತ್, “ಕಳೆದ ವರ್ಷ ರೂಪುಗೊಂಡಿದ್ದ 3 ದಿನದ ಸರ್ಕಾರದ ತಿಥಿ ಇಂದು” ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಂಜಯ್ ರಾವತ್ ಅವರ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದ್ದು, “ಕಳೆದ ವರ್ಷ ರೂಪುಗೊಂಡ 3 ದಿನಗಳ ಸರ್ಕಾರದ ತಿಥಿ ಇಂದು. ನಮ್ಮ ಸರ್ಕಾರ ಉಳಿದ 4 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ತಮ್ಮ ಎಲ್ಲಾ ಪ್ರಯತ್ನಗಳು ವಿಫಲವಾದ ಕಾರಣ ಹತಾಶೆಯಿಂದ ಪ್ರತಿಪಕ್ಷದ ನಾಯಕರು ಇಂತಹ ವಿಷಯಗಳನ್ನು ಹೇಳುತ್ತಾರೆ. ಮಹಾರಾಷ್ಟ್ರದ ಜನರು ನಮ್ಮ ಸರ್ಕಾರದೊಂದಿಗೆ ಇದ್ದಾರೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ” ಎಂದು ವರದಿ ಮಾಡಿದೆ.

ಇದನ್ನೂ ಓದಿ: ನಾವು ಟ್ರಂಪ್ ಹುಚ್ಚ ಎನ್ನುವುದಿಲ್ಲ; ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಒಬಾಮ ಯಾರು?- ಶಿವಸೇನೆ ಪ್ರಶ್ನೆ

ಇದನ್ನೂ ಓದಿ: ಬಿಹಾರದಲ್ಲಿ ನಿಜವಾದ ವಿಜೇತ ಆರ್‌‌ಜೆಡಿ ನಾಯಕ ತೇಜಸ್ವಿ ಯಾದವ್: ಶಿವಸೇನೆ

ನಿನ್ನೆ ಸ್ಫೋಟಕ ವಿಷಯವನ್ನು ಹೇಳಿದ್ದ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ರಾವ್ ಸಾಹೇಬ್ ಪಾಟೀಲ್, “ನಮ್ಮ ಸರ್ಕಾರ ರಚನೆಯಾಗುವುದಿಲ್ಲ ಎಂದು ನೀವು ಭಾವಿಸಬೇಡಿ. ಎರಡು-ಮೂರು ತಿಂಗಳಲ್ಲಿ ನಮ್ಮ ಸರ್ಕಾರ ರೂಪುಗೊಳ್ಳುತ್ತದೆ. ಈ ಮತದಾನದ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಪರಭಾನಿಯ ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು.

ಇಂದು ಬೆಳಿಗ್ಗೆ ಶಿವಸೇನೆ ಶಾಸಕರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದನ್ನು ಖಂಡಿಸಿದ್ದ ಸಂಜಯ್ ರಾವತ್, “ಮುಂದಿನ 25 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಪಕ್ಷವು ಮರೆತುಬಿಡಬೇಕು. ನೀವು ಇಂದು ಪ್ರಾರಂಭಿಸಿದ್ದೀರಿ, ಅದನ್ನು ಹೇಗೆ ಕೊನೆಗೊಳಿಸಬೇಕು ಎಂದು ನಮಗೆ ತಿಳಿದಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: BJP ಇನ್ನೂ ಯಾಕೆ ಸಾವರ್ಕರ್‌‌ಗೆ ಭಾರತ ರತ್ನ ನೀಡಿಲ್ಲ: ಶಿವಸೇನೆ ಪ್ರಶ್ನೆ

“ಶಾಸಕರು ಮನೆಯಲ್ಲಿ ಇಲ್ಲದಿದ್ದಾಗ ಅವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ನೀವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜನರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದೀರಿ. ಈ ಕ್ರಮಗಳು ನಿಮಗೆ ಹಿನ್ನಡೆ ಉಂಟುಮಾಡುತ್ತವೆ. ನಿಮ್ಮ ಸಮಯ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಸಿಬಿಐ ಅಥವಾ ಇ.ಡಿ ಆಗಿರಲಿ. ನಮ್ಮ ಸರ್ಕಾರ, ಶಾಸಕರು ಮತ್ತು ನಾಯಕರು ಯಾರಿಗೂ ಶರಣಾಗುವುದಿಲ್ಲ. ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿವಾದದ ನಂತರ ಶಿವಸೇನೆ ಕಳೆದ ವರ್ಷ ಬಿಜೆಪಿಯೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಕಡಿದುಕೊಂಡಿತು. ನಂತರ ಸೈದ್ಧಾಂತಿಕ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಅಧಿಕಾರಕ್ಕೆ ಬಂದಿತ್ತು. ಅಂದಿನಿಂದ ಬಿಜೆಪಿ ಮತ್ತು ಶಿವಸೇನೆಯ ನಡುವೆ ಬಹಿರಂಗ ಗುದ್ದಾಟ ನಡೆಯುತ್ತಿದೆ.


ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...