Homeಮುಖಪುಟಮಾಲ್ಗುಡಿ ಎಕ್ಸ್ಪ್ರೆಸ್ ಫೇಸ್ ಬುಕ್ ಪುಟ ಬ್ಲಾಕ್ ಮಾಡಿದ ಫೇಸ್ ಬುಕ್!

ಮಾಲ್ಗುಡಿ ಎಕ್ಸ್ಪ್ರೆಸ್ ಫೇಸ್ ಬುಕ್ ಪುಟ ಬ್ಲಾಕ್ ಮಾಡಿದ ಫೇಸ್ ಬುಕ್!

ಮಾಧ್ಯಮಗಳು ಆಳುವವರ ಭಜನೆ ಮಾಡುವ ಸಮಯದಲ್ಲಿ ನಮ್ಮಂತಹ ಕೆಲವು ಮಾಧ್ಯಮಗಳು ಪ್ರಭುತ್ವದ ಹುನ್ನಾರವನ್ನು ಗಟ್ಟಿ ದನಿಯಲ್ಲಿ, ಸ್ಪಷ್ಟ ಮತ್ತು ನೇರವಾಗಿ ಪ್ರಶ್ನಿಸುವ ಕೆಲಸವನ್ನು ಮಾಡುತ್ತಿವೆ. - ಪ್ರದೀಪ್ ಮಾಲ್ಗುಡಿ.

- Advertisement -
- Advertisement -

ಕೆಲ ತಿಂಗಳುಗಳ ಹಿಂದೆಯಷ್ಟೇ ನಾನುಗೌರಿ.ಕಾಂ ಫೇಸ್‌ಬುಕ್ ಪುಟ ನಿರ್ಬಂಧಿಸಿ ತೀವ್ರ ಟೀಕೆಯ ನಂತರ ಕ್ಷಮೆ ಕೇಳಿ ನಿರ್ಬಂಧ ತೆರವು ಮಾಡಿದ್ದ ಫೇಸ್‌ಬುಕ್‌, ಈಗ ಸಮುದಾಯ ನಿಯಮಗಳನ್ನು ಮುರಿಯಲಾಗಿದೆ ಎಂಬ ಯಥಾ ನೆಪವೊಡ್ಡಿ ಮಾಲ್ಗುಡಿ ಎಕ್ಸ್ಪ್ರೆಸ್ ಫೇಸ್ ಬುಕ್ ಪುಟವನ್ನು ಬ್ಲಾಕ್ ಮಾಡಿದೆ. ಇದರಿಂದ ಮಾಲ್ಗುಡಿ ಎಕ್ಸ್ಪ್ರೆಸ್ ವೆಬ್‌ಸೈಟ್‌ನ ಯಾವುದೇ ಲಿಂಕ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳದಂತೆ ತಡೆಹಿಡಿಯಲಾಗಿದೆ.

ಸೈದ್ಧಾಂತಿಕ ಕಾರಣಗಳಿಗಾಗಿ ಹಲವರು ಏಕಕಾಲದಲ್ಲಿ ಮಾಲ್ಗುಡಿ ಎಕ್ಸ್ಪ್ರೆಸ್ ಫೇಸ್ ಬುಕ್ ಪುಟದ ವಿರುದ್ದ ‘ಮಾಸ್‌ ರಿಪೋರ್ಟ್’ ಮಾಡಿದ ಕಾರಣಕ್ಕಾಗಿ ಫೇಸ್‌ಬುಕ್‌ ಈ ರೀತಿ ಬ್ಲಾಕ್ ಮಾಡಿರುವ ಸಾಧ್ಯತೆಯಿದೆ. ರಿಪೋರ್ಟ್ ಸಕಾರಣವಾಗಿದೆಯೇ ಅಥವಾ ಸುಮ್ಮನೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಫೇಸ್‌ಬುಕ್ ಬಳಿ ಯಾವುದೇ ವ್ಯವಸ್ಥೆಯಿಲ್ಲ. ಹಾಗಾಗಿ ಯಾವುದೇ ನಿರ್ದಿಷ್ಠ ಕಾರಣ ನೀಡದೆ ಸಮುದಾಯ ನಿಯಮಗಳನ್ನು ಮುರಿಯಲಾಗಿದೆ ಎಂಬ ಕಾರಣ ನೀಡಿ ಬ್ಲಾಕ್ ಮಾಡಿರುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’


ಮಾಲ್ಗುಡಿ ಎಕ್ಸ್ಪ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ, ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ, ಜಾತ್ಯತೀತ ಸಮಾಜ ನಿರ್ಮಾಣ ಮಾಡುವ ಕನಸನ್ನು ಹೊಂದಿರುವ ಸುದ್ದಿ ಸಂಸ್ಥೆ. ಇದರ ಭಾಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಿತಿಗಳನ್ನು ಜನರಿಗೆ ತೋರಿಸುವ ಕೆಲಸವನ್ನು ತನ್ನ ಸೀಮಿತ ಪರಿಧಿಯಲ್ಲಿ ನಡೆಸುತ್ತಿದೆ. ಈಗಿನ ಬ್ಲಾಕ್ ವಿರುದ್ಧ ಈಗಾಗಲೇ ಕನಿಷ್ಠ 10 ಬಾರಿ ಸ್ಪಷ್ಟೀಕರಣ ನೀಡಲಾಗಿದೆ. ಆದರೂ ನಿಷೇಧವನ್ನು ತೆರವುಗೊಳಿಸುತ್ತಿಲ್ಲ. ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳಾದ ಸೈದ್ಧಾಂತಿಕ ವಿರೋಧಿಗಳ ಕೈವಾಡವಿರುವ ಸಂಗತಿ ಮೇಲ್ನೋಟಕ್ಕೇ ಎದ್ದು ಕಾಣುತ್ತದೆ ಎಂದು ಮಾಲ್ಗುಡಿ ಎಕ್ಸ್ಪ್ರೆಸ್‌ ಸಂಪಾದಕರಾದ ಪ್ರದೀಪ್ ಮಾಲ್ಗುಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳು ಆಳುವವರ ಭಜನೆ ಮಾಡುವ ಸಮಯದಲ್ಲಿ ನಮ್ಮಂತಹ ಕೆಲವು ಮಾಧ್ಯಮಗಳು ಪ್ರಭುತ್ವದ ಹುನ್ನಾರವನ್ನು ಗಟ್ಟಿ ದನಿಯಲ್ಲಿ, ಸ್ಪಷ್ಟ ಮತ್ತು ನೇರವಾಗಿ ಪ್ರಶ್ನಿಸುವ ಕೆಲಸವನ್ನು ಮಾಡುತ್ತಿವೆ. ನಮ್ಮನ್ನು ನೈತಿಕವಾಗಿ ಮತ್ತು ಮಾನಸಿಕವಾಗಿ ಕುಂದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಇಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್‌ಬುಕ್: ಗೌರಿ ಮೀಡಿಯಾ ತಂಡ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...