Homeಮುಖಪುಟನವೀನ್ ಪಟ್ನಾಯಕ್ ಆಯೋಜಿಸಿದ್ದ ಔತಣ ಕೂಟದಲ್ಲಿ ಮಮತಾ ಬ್ಯಾನರ್ಜಿ- ಅಮಿತ್ ಶಾ ಮುಖಾಮುಖಿ!

ನವೀನ್ ಪಟ್ನಾಯಕ್ ಆಯೋಜಿಸಿದ್ದ ಔತಣ ಕೂಟದಲ್ಲಿ ಮಮತಾ ಬ್ಯಾನರ್ಜಿ- ಅಮಿತ್ ಶಾ ಮುಖಾಮುಖಿ!

- Advertisement -
- Advertisement -

ನವೀನ್ ಪಟ್ನಾಯಕ್ ಆಯೋಜಿಸಿದ್ದ ಔತಣ ಕೂಟದಲ್ಲಿ ಮಮತಾ ಬ್ಯಾನರ್ಜಿ- ಅಮಿತ್ ಶಾ ಮುಖಾಮುಖಿಯಾಗಿರುವ ಘಟನೆ ಜರುಗಿದೆ.

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವ ರಾಜ್ಯಗಳ ವೇದಿಕೆಯಾದ ಪೂರ್ವ ವಲಯ ಮಂಡಳಿಯ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಮಿತ್ ಶಾ ಅವರ ಈ ಭೇಟಿ ಸಾಧ್ಯವಾಗಿದೆ. ಸಭೆಯಲ್ಲಿ ನವೀನ್ ಪಟ್ನಾಯಕ್ ಮತ್ತು ಅವರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಜರಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಭೆಗೆ ಗೈರಾಗಿದ್ದರು.

ಪೂರ್ವ ವಲಯ ಮಂಡಳಿಯ 24 ನೇ ಸಭೆಯ ಆಯೋಜಕರಾದ ನವೀನ್ ಪಟ್ನಾಯಕ್ ತಮ್ಮ ಟ್ವಿಟ್ಟರ್ ನಲ್ಲಿ ಮಮತಾ ಬ್ಯಾನರ್ಜಿ ಹಾಗೂ ಅಮಿತ್ ಶಾ ಮುಖಾಮುಖಿಯಾಗಿ ಆಹಾರ ಸೇವಿಸುತ್ತಿದರುವ ಈ ಚಿತ್ರವನ್ನು ಹಾಕಿದ್ದಾರೆ.

ಸಭೆಯಲ್ಲಿ ಕಲ್ಲಿದ್ದಲಿನ ರಾಯಧನ ಪರಿಷ್ಕರಣೆ, ಎಡಪಂಥೀಯ ಉಗ್ರವಾದ, ಅಪರಾಧಗಳು ಮತ್ತು ರೈಲು-ಸಂಪರ್ಕ ಯೋಜನೆಗಳಂತಹ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಪಿಟಿಐ ತಿಳಿಸಿದೆ.

ದೇಶದಾದ್ಯಂತ ಪ್ರತಿಭಟನೆಗೆ ನಾಂದಿ ಹಾಡಿದ ಸಿಎಎ ವಿವಾದಾತ್ಮಕ ಕಾನೂನಿನ ಬಗ್ಗೆ ಮಮತಾ ಬ್ಯಾನರ್ಜಿ ಮತ್ತು ಅಮಿತ್ ಶಾ ನಡುವೆ ವಾದ ಪ್ರತಿವಾದಗಳು ನಡೆದಿವೆ. ಮಮತಾ ಬ್ಯಾನರ್ಜಿ ಈ ಕಾನೂನಿನ ತೀವ್ರ ವಿರೋಧಿಗಳಲ್ಲಿ ಒಬ್ಬರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...