Homeಕರ್ನಾಟಕಮಣಿಪುರ: ಸುಪ್ರೀಂ ಚಾಟಿ ಏಟು ಡಬಲ್ ಇಂಜೀನ್ ಸರ್ಕಾರಕ್ಕೆ ತಾಗುತ್ತಿಲ್ಲ; ಮೋದಿ ವಿರುದ್ಧ ಗುಡುಗಿದ ಗುಂಡೂರಾವ್‌

ಮಣಿಪುರ: ಸುಪ್ರೀಂ ಚಾಟಿ ಏಟು ಡಬಲ್ ಇಂಜೀನ್ ಸರ್ಕಾರಕ್ಕೆ ತಾಗುತ್ತಿಲ್ಲ; ಮೋದಿ ವಿರುದ್ಧ ಗುಡುಗಿದ ಗುಂಡೂರಾವ್‌

- Advertisement -
- Advertisement -

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣ ಹಳಿ ತಪ್ಪಿದೆ. ಆಡಳಿತ ಯಂತ್ರ ತುಕ್ಕು ಹಿಡಿದಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಈ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸರಣಿ ಟ್ವೀಟ್ ಮೂಲಕ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ”ಮಣಿಪುರ ಗಲಭೆ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪದೇ ಪದೇ ಚಾಟಿ ಬೀಸುತ್ತಲೇ ಇದೆ. ಇಷ್ಟಾದರೂ ಡಬಲ್ ಇಂಜೀನ್ ಸರ್ಕಾರದ ದಪ್ಪ ಚರ್ಮಕ್ಕೆ ಯಾವುದೇ ಚಾಟಿ ಏಟು ತಾಗುತ್ತಿಲ್ಲ. ಮಣಿಪುರ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿರುವ ಕೇಂದ್ರ ಭಾರತದ ನೆಲದಲ್ಲಿ ಸುದೀರ್ಘ ರಕ್ತಸಿಕ್ತ ಅಧ್ಯಾಯ ಬರೆಯಲು ಮುಂದಾಗಿದೆ” ಎಂದು ಹೇಳಿದ್ದಾರೆ.

”ಮಣಿಪುರ ವಿಚಾರದಲ್ಲಿ ಪ್ರಧಾನಿಯವರು ಯಾಕೆ ಮೌನ ಮುರಿಯುತ್ತಿಲ್ಲ? ಅವರ ಮೌನದ ಹಿಂದಿರುವುದು ಅಸಹಾಯಕತೆಯೋ ಅಥವಾ ರಾಜಕೀಯ ಲಾಭ ಗಳಿಸುವ ಕುಯುಕ್ತಿಯೋ ತಿಳಿಯುತ್ತಿಲ್ಲ. ಗುಜರಾತ್ ಗಲಭೆ ಸಂದರ್ಭದಲ್ಲೂ ಮೋದಿ ಇದೇ ಮೌನ ವಹಿಸಿದ್ದರು. ಈಗ ಪ್ರಧಾನಿಯಾದಾಗಲೂ ಮಣಿಪುರ ವಿಚಾರದಲ್ಲಿ ಮೌನವಹಿಸಿದ್ದಾರೆ. ಮೋದಿಯವರ ಮೌನದ ಹಿಂದಿನ ಮರ್ಮವೇನು?” ಎಂದು ಪ್ರಶ್ನಿಸಿದ್ದಾರೆ.

”ಗುಜರಾತ್ ಗಲಭೆ ನಡೆಯುವಾಗ ಕೇಂದ್ರದಲ್ಲಿ BJP ಸರ್ಕಾರವಿತ್ತು. ಈಗ ಮಣಿಪುರದಲ್ಲಿ ಗಲಭೆ ನಡೆಯುತ್ತಿರುವಾಗಲೂ ಕೇಂದ್ರದಲ್ಲಿ BJPಸರ್ಕಾರವೇ ಇದೆ. ಕನಿಷ್ಠ ಪಕ್ಷ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಮೋದಿಯವರಿಗೆ ‘ರಾಜಧರ್ಮ’ ಪಾಲಿಸುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಹೇಳಲು BJPಯಲ್ಲಿ ಯಾರಿಗೆ ತಾಕತ್ತಿದೆ?” ಎಂದು ಕೇಳಿದ್ದಾರೆ.

ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ. ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿ ಮೋದಿ ವಿರುದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕಿಡಿಕಾರಿದ್ದಾರೆ.

ಮೋದಿಯವರು ಮೌನವಾಗುವ ಸಂದರ್ಭಗಳು.

* ಗಲಭೆಗಳಾದಾಗ

* ಸಾಮೂಹಿಕ ನರಮೇಧಗಳಾಗುವಾಗ

* ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ

* ಬೆಲೆಯೇರಿಕೆಯಾದಾಗ

* PMCares ಫಂಡ್ ಬಗ್ಗೆ ಕೇಳಿದಾಗ

* 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ

* ಕಪ್ಪುಹಣದ ಬಗ್ಗೆ ಕೇಳಿದಾಗ

* ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ.

 

ಮೋದಿಯವರು ಮಾತನಾಡುವ ಸಂದರ್ಭಗಳು.

* ಚುನಾವಣೆ ಬಂದಾಗ

* ಪ್ರಚಾರಕ್ಕೆ ಕರೆದಾಗ

* ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ

* ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ

* ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ.

”ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ. ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?” ಎಂದು ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ.

ಇದನ್ನೂ ಓದಿ: ಮಣಿಪುರ ಬೆತ್ತಲೆ ಪ್ರಕರಣದಲ್ಲಿ FIR ವಿಳಂಬ: ‘14 ದಿನಗಳಿಂದ ಪೊಲೀಸರು ಏನು ಮಾಡುತ್ತಿದ್ದರು?’- ಸುಪ್ರೀಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...