Homeಮುಖಪುಟಮಣಿಪುರ ಹಿಂಸಾಚಾರ: ರಾಜ್ಯದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾದರೆ ಪ್ರಶಸ್ತಿ ವಾಪಸ್; ಕ್ರೀಡಾಪಟುಗಳಿಂದ ಜ್ಞಾಪಕ ಪತ್ರ

ಮಣಿಪುರ ಹಿಂಸಾಚಾರ: ರಾಜ್ಯದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾದರೆ ಪ್ರಶಸ್ತಿ ವಾಪಸ್; ಕ್ರೀಡಾಪಟುಗಳಿಂದ ಜ್ಞಾಪಕ ಪತ್ರ

- Advertisement -
- Advertisement -

ರಾಜ್ಯದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟಾದರೆ ಸರ್ಕಾರ ನೀಡಿದ ಬಹುಮಾನಗಳನ್ನು ಹಿಂದಿರುಗಿಸುವುದಾಗಿ ಮಣಿಪುರದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಕ್ರೀಡಾಪಟುಗಳು ಮಂಗಳವಾರ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಎಲ್ ಅನಿತಾ ಚಾನು (ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತರು), ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಎನ್ ಕುಂಜರಾಣಿ ದೇವಿ (ಪದ್ಮಶ್ರೀ), ಎಲ್ ಸರಿತಾ ದೇವಿ ಮತ್ತು ಡಬ್ಲ್ಯು ಸಂಧ್ಯಾರಾಣಿ ದೇವಿ (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು) ಮತ್ತು ಎಸ್ ಮೀರಾಬಾಯಿ ಚಾನು (ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು) ಸೇರಿದಂತೆ 11 ಕ್ರೀಡಾಪಟುಗಳು ಈ ವಿಷಯದ ಬಗ್ಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಲ್ ಅನಿತಾ ಚಾನು, ”ಮಣಿಪುರದ ಸಮಗ್ರತೆಯ ರಕ್ಷಣೆಯ ಬಗ್ಗೆ ಅಮಿತ್ ಶಾ ನಮಗೆ ಭರವಸೆ ನೀಡದಿದ್ದರೆ, ಭಾರತ ಸರ್ಕಾರ ನೀಡಿದ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇವೆ” ಎಂದು ಹೇಳಿದರು.

”ಬೇಡಿಕೆಯನ್ನು ಪೂರೈಸದಿದ್ದರೆ, ಕ್ರೀಡಾ ವ್ಯಕ್ತಿಗಳು ಭವಿಷ್ಯದಲ್ಲಿ ಭಾರತವನ್ನು ಪ್ರತಿನಿಧಿಸುವುದಿಲ್ಲ ಅಥವಾ ಅವರು ಯಾವುದೇ ಉದಯೋನ್ಮುಖ ಪ್ರತಿಭೆಗಳಿಗೆ ತರಬೇತಿ ನೀಡುವುದಿಲ್ಲ” ಎಂದು ಅವರು ಹೇಳಿದರು.

11 ಕ್ರೀಡಾಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಶಾ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ಹೋದರು ಆದರೆ ಕೇಂದ್ರ ಗೃಹ ಸಚಿವರು ಕುಕಿ ಸಂತ್ರಸ್ತರು ಮತ್ತು ಸಂಘಟನೆಗಳನ್ನು ಭೇಟಿ ಮಾಡಲು ಚುರಚಂದಪುರಕ್ಕೆ ತೆರಳಿದ್ದರಿಂದ ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ.

”ನಾವು ಜ್ಞಾಪಕದ ಪ್ರತಿಯನ್ನು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ಸಲ್ಲಿಸಿದ್ದೇವೆ. ಚುರಾಚಂದ್‌ಪುರದಿಂದ ವಾಪಸಾದ ನಂತರ ಸಂಜೆ ಶಾ ಅವರೊಂದಿಗೆ ಸಭೆಯನ್ನು ಏರ್ಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ನಂತರ ನಾವು ಅವರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸುತ್ತೇವೆ” ಎಂದು ಚಾನು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ಸಹಜ ಸ್ಥತಿಗೆ ಬರಲು ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಬೇಕು: ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ

”ಜ್ಞಾಪಕ ಪತ್ರಕ್ಕೆ ರಾಜ್ಯದ ಇತರ ಅರ್ಜುನ್ ಪ್ರಶಸ್ತಿ ಪುರಸ್ಕೃತರು ಸಹ ಸಹಿ ಮಾಡಿದ್ದಾರೆ. ಅವರೆಂದರೆ ಒಯಿನಮ್ ಬೆಂಬೆಮ್ ದೇವಿ (ಪದ್ಮಶ್ರೀ ಕೂಡ), ಎನ್ ಸೋನಿಯಾ ಚಾನು, ಎಂ ಬಿಯೋಜಿತ್ ಸಿಂಗ್, ವೈ ಸನತೋಯ್ ದೇವಿ, ಎಲ್ ಶುಶೀಲಾ ದೇವಿ ಮತ್ತು ಎಂ ಸುರಂಜಯ್ ಸಿಂಗ್” ಎಂದು ತಿಳಿಸಿದರು.

”ಕುಕಿ ಭಯೋತ್ಪಾದಕರು ಮಣಿಪುರದ ಸಮಗ್ರತೆಗೆ ಸವಾಲು ಹಾಕುತ್ತಿದ್ದಾರೆ” ಜನರನ್ನು ಕೊಂದು ಮನೆಗಳನ್ನು ಸುಡುವ ಮೂಲಕ ಹಿಂಸಾಚಾರ ನಡೆಸುತ್ತಿದ್ದಾರೆ. ಕೇಂದ್ರ ಭದ್ರತಾ ಪಡೆಗಳು ಇದನ್ನು ನಿಯಂತ್ರಿಸುವಲ್ಲಿ ವಿಫಲಾಗಿವೆಯೇ? ಎಂದು ಕ್ರೀಡಾಪಟುಗಳು ಪ್ರಶ್ನಿಸಿದ್ದಾರೆ.

”ವಿಶೇಷವಾಗಿ ಕಣಿವೆ ಜಿಲ್ಲೆಗಳ ಬಾಹ್ಯ ಪ್ರದೇಶಗಳಲ್ಲಿ ನಿರಾಯುಧ ನಾಗರಿಕರ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳನ್ನು ನಾವು ಖಂಡಿಸುತ್ತೇವೆ” ಎಂದು ಅವರು ಹೇಳಿದರು.

”ಕುಕಿ ಉಗ್ರಗಾಮಿ ಗುಂಪುಗಳೊಂದಿಗಿನ ಕಾರ್ಯಾಚರಣೆಯ ಅಮಾನತು (SoO) ಒಪ್ಪಂದವನ್ನು ರದ್ದುಗೊಳಿಸಬೇಕು, ಶಾಂತಿ ಮತ್ತು ಸಹಜತೆಯನ್ನು ಶೀಘ್ರವಾಗಿ ಮರುಸ್ಥಾಪಿಸಬೇಕು ಮತ್ತು ಮಣಿಪುರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಬೇಕು” ಎಂದು ಕ್ರೀಡಾಪಟುಗಳು ಒತ್ತಾಯಿಸಿದರು.

”ಮಣಿಪುರವನ್ನು ವಿಭಜಿಸುವ ಬೇಡಿಕೆಯು ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹವಲ್ಲ, ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡುಬೇಕು ಎಂದು ” ಎಂದು ಮೆಮೊರಾಂಡಮ್ ಒತ್ತಾಯಿಸಿದೆ.

ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಲು ಕಾರಣವಾಗಿರುವುದರಿಂದ NH2 ನಲ್ಲಿನ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವಂತೆ ಕ್ರೀಡಾಪಟುಗಳು ಸರ್ಕಾರವನ್ನು ಒತ್ತಾಯಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...