Homeಮುಖಪುಟಸಂಸದರ ಸಾಮೂಹಿಕ ಅಮಾನತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಹಾನಿಕಾರಕ; ಧನ್ಖರ್‌ಗೆ ಪತ್ರ ಬರೆದ ಖರ್ಗೆ

ಸಂಸದರ ಸಾಮೂಹಿಕ ಅಮಾನತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಹಾನಿಕಾರಕ; ಧನ್ಖರ್‌ಗೆ ಪತ್ರ ಬರೆದ ಖರ್ಗೆ

- Advertisement -
- Advertisement -

ಲೋಕಸಭೆ ಭದ್ರತೆ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುವಂತೆ ಪ್ರತಿಪಕ್ಷಗಳು ನಡೆಸಿದ ಗದ್ದಲ ಕಾರಣಕ್ಕೆ, ರಾಜ್ಯಸಭೆಯಿಂದ ಸದಸ್ಯರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದ ವಿಷಯದ ಕುರಿತು ಚರ್ಚಿಸಲು ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಖರ್ ಅವರು ಇಂದು (ಡಿಸೆಂಬರ್ 25) ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ.

‘ಭೇಟಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಪತ್ರ ಬರೆದಿರುವ ಖರ್ಗೆ, ಭೇಟಿಯಾಗದಿರಲು ಕಾರಣ ವಿವರಿಸಿ ಪತ್ರ ಬರೆದಿದ್ದಾರೆ. ಸದ್ಯ ದೆಹಲಿಯಿಂದ ಹೊರಗಿರುವ ಕಾರಣ ಇಂದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ದೆಹಲಿಗೆ ಮರಳಿದ ತಕ್ಷಣ ಭೇಟಿ ಮಾಡುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಭದ್ರತೆ ಉಲ್ಲಂಘನೆಯ ಗದ್ದಲದಲ್ಲೆ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿದ ಒಂದು ದಿನದ ನಂತರ, ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರಿಗೆ ಪತ್ರ ಬರೆದು, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಅಮಾನತುಗೊಳಿಸಿರುವುದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಹಾನಿಕಾರಕ. ರಚನಾತ್ಮಕವಾಗಿ ಸಮಸ್ಯೆಗಳನ್ನು ಪರಿಹರಿಸಲು ಉಪಾಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.

‘ಸಂಸತ್ತಿನ ಭದ್ರತೆಯ ಉಲ್ಲಂಘನೆಯ ತುರ್ತು ಸಮಸ್ಯೆಯನ್ನು ಪರಿಹರಿಸಲು ರಾಜ್ಯಸಭೆ ನಿಯಮಗಳು ಮತ್ತು ಕಾರ್ಯವಿಧಾನದ ಸಂಬಂಧಿತ ನಿಯಮಗಳ ಅಡಿಯಲ್ಲಿ ಅನೇಕ ಸೂಚನೆಗಳನ್ನು ಸಲ್ಲಿಸಲಾಗಿದೆ ಎಂದು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮುಕ್ತ ಚರ್ಚೆ ಮತ್ತು ಸಂವಾದಕ್ಕೆ ನನ್ನ ಬದ್ಧತೆಯನ್ನು ಪುನರುಚ್ಚರಿಸಲು ನಾನು ಬಯಸುತ್ತೇನೆ. ಇವುಗಳನ್ನು ಪರಿಹರಿಸಲು ಮುಂದಿನ ದಿನಗಳಲ್ಲಿ ಪರಸ್ಪರ ಅನುಕೂಲಕರ ದಿನಾಂಕ ಮತ್ತು ಸಮಯದಲ್ಲಿ ನಿಮ್ಮೊಂದಿಗೆ ಸಭೆ ನಡೆಸಲು ನಾನು ಸಿದ್ಧನಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಅಧ್ಯಕ್ಷರು ಸದನದ ಪಾಲಕರಾಗಿದ್ದು, ನೀವು ಸದನದ ಘನತೆಯನ್ನು ಎತ್ತಿಹಿಡಿಯಲು, ಸಂಸದೀಯ ಸವಲತ್ತುಗಳನ್ನು ರಕ್ಷಿಸಲು, ಚರ್ಚೆಗಳು ಮತ್ತು ಉತ್ತರಗಳ ಮೂಲಕ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಜನರ ಹಕ್ಕನ್ನು ರಕ್ಷಿಸಲು ಮುಂಚೂಣಿಯಲ್ಲಿರಬೇಕು. ಚರ್ಚೆಯಿಲ್ಲದೆ ಮತ್ತು ಸರ್ಕಾರದಿಂದ ಉತ್ತರದಾಯಿತ್ವವನ್ನು ಕೇಳದೆ ಪೀಠಾಧಿಪತಿಗಳು ವಿಧೇಯಕಗಳನ್ನು ಅಂಗೀಕರಿಸಲು ನಿರ್ಣಯಿಸಿದಾಗ ಅದು ಸಂಕಟವನ್ನುಂಟುಮಾಡುತ್ತದೆ’ ಎಂದು ಹೇಳಿದ್ದಾರೆ.

ಸದಸ್ಯರ ಅಮಾನತು ನಿರ್ಧಾರದ ಮೂಲಕ 146 ಸಂಸದರ ಧ್ವನಿಯನ್ನು ಸರ್ಕಾರ ಅಡಗಿಸುತ್ತಿದೆ. ಡಿಸೆಂಬರ್ 14 ರಂದು ನಡೆದ ಭದ್ರತಾ ಲೋಪ ಘಟನೆ ಬಗ್ಗೆ ಸಂಸದರ ಅಮಾನತುಗೊಳಿಸುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಆದರೆ, ಸದನದಲ್ಲಿ ಸಚಿವರು ಹೇಳಿಕೆಯನ್ನು ನೀಡಲಿಲ್ಲ. ಬದಲಿಗೆ ಅವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಅವರು ಪ್ರಜಾಪ್ರಭುತ್ವ ಮಂದಿರವನ್ನು ಅಪಹಾಸ್ಯ ಮಾಡಿರುವುದು ವಿಷಾದನೀಯವಾದದ್ದು’ ಎಂದು ಹೇಳಿದ್ದಾರೆ.

‘ರಾಜ್ಯಸಭೆಗೆ ಗೃಹ ಸಚಿವರು ಹಾಜರಾಗುವುದಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ವಿಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ವಿರೋಧ ಪಕ್ಷದ ನಾಯಕರಿಗೆ ಮೊದಲೆ ತಿಳಿಸಿದ್ದರು. ಇಂತಹ ಬೆದರಿಕೆಗಳ ಕುರಿತು ಸಭಾಧ್ಯಕ್ಷಕರು ಪರಿಶೀಲಿಸಬೇಕೆಂದು ನಾವು ಬಯಸುತ್ತೇವೆ’ ಎಂದು ಮನವಿ ಮಾಡಿದ್ದಾರೆ.

‘ದೇಶದ ಗಡಿಯಲ್ಲಿ ಚೀನಾ ಅತಿಕ್ರಮಣ, ಮಣಿಪುರದಲ್ಲಿ ಅಶಾಂತಿ ಸೇರಿದಂತೆ ಹಲವು ಗಂಭೀರ ವಿಚಾರಗಳ ಕುರಿತ ಚರ್ಚೆಯಿಂದ ಸರ್ಕಾರ ನುಣುಚಿಕೊಂಡಿರುವುದನ್ನು ಸಭಾಧ್ಯಕ್ಷರು ಗಮನಿಸಬೇಕು. ನೀವು ಸದನದ ಕಾವಲುಗಾರರಾಗಿದ್ದು, ಸದನದ ಘನತೆ ಕಾಪಾಡಬೇಕು, ಸಂಸದೀಯ ಸವಲತ್ತುಗಳನ್ನು ಕಾಪಾಡಬೇಕು. ಸಂಸತ್ತಿನಲ್ಲಿ ಕಲಾಪ, ಚರ್ಚೆ ಮತ್ತು ಉತ್ತರದ ಮೂಲಕ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಹಕ್ಕು ಜನರಿಗಿದೆ’ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

ಸಂಸತ್ತಿನ ಘನತೆ ರಕ್ಷಿಸುವಲ್ಲಿ ತಾವು ಮುಂಚೂಣಿಯಲ್ಲಿರಬೇಕು. ಆದರೆ, ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಿದ್ದಕ್ಕಾಗಿ ಮತ್ತು ಸರ್ಕಾರದಿಂದ ಉತ್ತರದಾಯಿತ್ವವನ್ನು ಕೇಳದಿದ್ದಕ್ಕಾಗಿ ಸಭಾಧ್ಯಕ್ಷ ಮೇಲೆ ಅಸಮಾಧಾನವಿದೆ. ಸದನದಲ್ಲಿ ಕಲಾಪ ಮುಂದುವರೆಯಬೇಕೆಂಬ ಸಭಾಧ್ಯಕ್ಷ ಮಾತನ್ನು ನಾನು ಒಪ್ಪುತ್ತೇನೆ. ಆದರೆ, ಸದನದಲ್ಲಿ ಚರ್ಚೆ ನಡೆಸಲು ಸರ್ಕಾರ ಉತ್ಸುಕವಾಗಿರದಿದ್ದರೆ, ಚರ್ಚೆಗಳಿಗೆ ಉತ್ತರ ಸಿಗುವುದಿಲ್ಲ ಎಂದು’ ಕಾಂಗ್ರೆಸ್ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; INDIA ಮೈತ್ರಿಕೂಟಕ್ಕೆ BSP? ಒಕ್ಕೂಟ ತ್ಯಜಿಸುವ ಬೆದರಿಕೆ ಹಾಕಿದ ಅಖಿಲೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...