Homeಕರ್ನಾಟಕಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

ಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

- Advertisement -
- Advertisement -

| ಡಾ. ಎಚ್.ಎಸ್. ಅನುಪಮಾ |

ಒಂದು ಪ್ರದೇಶದ ಜನ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿರತೆ ಮತ್ತು ಸುಸ್ಥಿತಿಯಲ್ಲಿ ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮೂಲಸೌಕರ್ಯಗಳನ್ನು ಒದಗಿಸಿ ಜನರಿಗೆ ಘನತೆಯ ಬದುಕನ್ನು ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಸ್ವಾಯತ್ತ ಬದುಕಿಗೆ ಅವಕಾಶ ಕಲ್ಪಿಸಿಕೊಡುವುದು ಅಭಿವೃದ್ಧಿ. ಎಂದೇ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ದೇಶ, ಸಮಾಜ ತೊಡಗಿಕೊಳ್ಳುತ್ತ ಹೋದಂತೆ ಜನರ ಸುತ್ತಮುತ್ತಲ ಪರಿಸರ, ಸಾಮುದಾಯಿಕ ಅಂತರ್ ಸಂಬಂಧಗಳು, ಮನುಷ್ಯ-ಪ್ರಕೃತಿ ಸಂಬಂಧಗಳು ಸುಧಾರಿಸುತ್ತವೆ.

ಇಂಥ ಉದಾತ್ತ ವ್ಯಾಖ್ಯಾನವನ್ನಿಟ್ಟುಕೊಂಡು ಕಳೆದ ಶತಮಾನದಲ್ಲಿ ವಿಶ್ವಾದ್ಯಂತ ನಾನಾ ದೇಶಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆ ಶುರುವಾಯಿತು. ಹಲವು ಅಳತೆಗೋಲುಗಳು ರೂಪುಗೊಂಡವು. ವಿಶ್ವಯುದ್ಧಗಳ ನಂತರ ಹಲವು ದೇಶಗಳಲ್ಲಿ ತಾಂಡವವಾಡುತ್ತಿದ್ದ ಅನಕ್ಷರತೆ, ಬಡತನ, ನಿರುದ್ಯೋಗ, ತಾಯಿ ಮರಣ, ಶಿಶು ಮರಣ, ರೋಗರುಜಿನಗಳೇ ಮುಂತಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ದೇಶಗಳು ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಹಿಂದುಳಿದ ಎಂದು ಗೆರೆಯೆಳೆದು ಗುರುತುಗೊಂಡವು. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳಿಗೆ ತಾವೂ ಅಭಿವೃದ್ಧಿ ಹೊಂದುವ ಕನಸು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರತೊಡಗಿತು. ಹೆಚ್ಚುಕಡಿಮೆ ವಿಶ್ವದ ಎಲ್ಲ ದೇಶಗಳೂ ಅಭಿವೃದ್ಧಿ ಕಾರ್ಯಕ್ರಮಗಳಿಗೆಂದು ತಮ್ಮ ಆರ್ಥಿಕತೆಯನ್ನು, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು, ಆದ್ಯತೆಗಳನ್ನು ಮರುರೂಪಿಸಿಕೊಂಡವು. ಆರ್ಥಿಕ ಸಹಾಯಕ್ಕಾಗಿ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಯತ್ನಿಸಿದವು. ದೇಶ ಕಟ್ಟುವ ಮಾದರಿಗಾಗಿ, ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲಿಕ್ಕಾಗಿ ವಿಶ್ವದ ದೊಡ್ಡಣ್ಣಂದಿರಂತೆ ವರ್ತಿಸುವ ಯಜಮಾನ ದೇಶಗಳ ಕಡೆಗೆ ನೋಡಿದವು.

ದಶಕಗಳು ಕಳೆದವು. ಅಭಿವೃದ್ಧಿಯ ನೆಪದಲ್ಲಿ, ಸಾಲ ಕೊಡುವ ನೆಪದಲ್ಲಿ, ಸಾಲ ಕೊಡುವ ಮುನ್ನ ಹೇರುವ ಷರತ್ತುಗಳ ನೆಪದಲ್ಲಿ ಬಡದೇಶಗಳ ನೆಲ-ಜಲ-ಜನಜೀವನದ ತಲೆಯ ಮೇಲೆ ನವ ವಸಾಹತುಶಾಹಿಗಳು ಅಂಕುಶ ಹಿಡಿದು ಕುಳಿತುಕೊಳ್ಳಲು ಇದೇ ಅಭಿವೃದ್ಧಿ ಮಾತುಗಳು ಕಾರಣವಾದವು. ಬಡವರು ಮತ್ತು ಸಿರಿವಂತರ ನಡುವಿನ ಕಂದಕ ಹಿಂದೆಂದಿಗಿಂತ ಇವತ್ತು ಹಿರಿದಾಗಿದೆ. ಒಂದಷ್ಟು ಜನ ಸಿರಿವಂತರು ಸೃಷ್ಟಿಯಾಗಲು ಅಸಂಖ್ಯ ಜನಸಮುದಾಯ ತನ್ನ ನೆಲೆ, ಸಂಪನ್ಮೂಲದಿಂದ ವಂಚಿತರಾಗಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಪರಿಸರ ಮತ್ತೆ ಮೊದಲ ಸ್ಥಿಗೆ ಎಂದೆಂದೂ ತಲುಪಲು ಸಾಧ್ಯವಾಗದಷ್ಟು ನಾಶವಾಗಿದೆ. ಜನಜೀವನದ ಮೇಲೆ ನಿರುದ್ಯೋಗ, ಸಾಂಸ್ಕøತಿಕ ಪಲ್ಲಟಗಳು, ರಾಜಕೀಯ ಅಸ್ಥಿರತೆ, ಬಡತನ, ಕೋಮುಘರ್ಷಣೆಯೇ ಮೊದಲಾದ ಬಿಕ್ಕಟ್ಟುಗಳು ಹೇರಲ್ಪಟ್ಟಿವೆ. ಅಭಿವೃದ್ಧಿ ಪ್ರಕ್ರಿಯೆ ಚುರುಕುಗೊಂಡಷ್ಟೂ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತಿರುವುದನ್ನು, ಜನಸಮುದಾಯಗಳು ತಮ್ಮ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.

ಈ ವೈರುಧ್ಯಕ್ಕೆ ಕಾರಣವೇನು? ಇದನ್ನು ವಿವರಿಸುವುದು ಹೇಗೆ?

‘ನಮ್ಮ ಆಯ್ಕೆಯಂತೆ, ನಮಗೆ ಮೌಲಿಕವೆನಿಸುವ ಬದುಕನ್ನು ಬದುಕಲು ಸಾಧ್ಯಮಾಡುವುದೇ ಅಭಿವೃದ್ಧಿ. ಸಮಾಜವೊಂದರ ಯಶಸ್ಸು ಅದರಲ್ಲಿರುವ ಜನರು ಅನುಭವಿಸುವ ಸ್ವಾತಂತ್ರ್ಯವೇ ಆಗಿದೆ. ಅಭಿವೃದ್ಧಿ ಎಂದರೆ ಜನಸಮುದಾಯಗಳ ಅನುಭವಕ್ಕೆ ನಿಲುಕುವ ಹಿಗ್ಗುತ್ತಿರುವ ಸ್ವಾತಂತ್ರ್ಯ. ವ್ಯಕ್ತಿ ತನ್ನ ಸಂಪೂರ್ಣ ಮಾನವ ಸಾಮಥ್ರ್ಯವನ್ನರಿಯಲು ಸಾಧ್ಯ ಮಾಡುವುದೇ ಸ್ವಾತಂತ್ರ್ಯ ಮತ್ತು ಅಭಿವೃದ್ಧಿ.’ – ಅಮತ್ರ್ಯ ಸೆನ್

ನಿಜ. ಆದರೆ ನಮ್ಮ ಅಭಿವೃದ್ಧಿ ಮಾದರಿಗಳು ಇದನ್ನು ಸಾಧ್ಯಮಾಡಿವೆಯೆ? ಜನಸಮುದಾಯಗಳ ಮೇಲೆ, ಭಾಷೆ-ಶಿಕ್ಷಣ-ಕೃಷಿ-ಪರಿಸರದ ಮೇಲೆ, ದಮನಿತರ ಸಬಲೀಕರಣ ಪ್ರಕ್ರಿಯೆಯ ಮೇಲೆ ಅಭಿವೃದ್ಧಿ ಮಾದರಿಗಳ ಪ್ರಭಾವವೇನು? ಅಭಿವೃದ್ಧಿ ಹೊಂದುತ್ತಿರುವ ಈ ಕಾಲದಲ್ಲಿ ಸಮುದಾಯಗಳ ನಡುವಿನ ಸಂಬಂಧದ ಸೂಕ್ಷ್ಮ ಒಳತೋಟಿಗಳೇನು? ಮಹಿಳೆಯರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಷ್ಟು ಪಾಲುದಾರರು? ಅವರ ಮೇಲಾದ ಪರಿಣಾಮಗಳೇನು?

ಅಭಿವೃದ್ಧಿಯ ದಾರಿಯಲ್ಲಿ ಇಷ್ಟು ದೂರ ನಡೆದು ಬಂದಿರುವಾಗ ಅದರ ಸಾಧಕ-ಬಾಧಕಗಳ ಕುರಿತು ವಸ್ತುನಿಷ್ಠವಾಗಿ ಚರ್ಚಿಸುವ ಹೊತ್ತು ಬಂದಿದೆ. ಫಲಾನುಭವಿಗಳ ದೃಷ್ಟಿಯಿಂದಲ್ಲ, ವಂಚಿತರ ದೃಷ್ಟಿಕೋನದಿಂದ ಅಭಿವೃದ್ಧಿಯ ಮಾನದಂಡಗಳು ಹಾಗೂ ಮಾರ್ಗಗಳನ್ನು ಮರುಪರಿಶೀಲಿಸಬೇಕಾದ ತುರ್ತು ಹುಟ್ಟಿಕೊಂಡಿದೆ. ಅದರ ಸಲುವಾಗಿ 6ನೇ ಮೇ ಸಾಹಿತ್ಯ ಮೇಳವನ್ನು ಗದಗದ ಅಂಬೇಡ್ಕರ್ ಭವನದಲ್ಲಿ ಇದೇ ಮೇ 4, 5ರಂದು ಏರ್ಪಡಿಸಲಾಗಿದೆ. `ಅಭಿವೃದ್ಧಿ ಭಾರತ: ಕವಲುದಾರಿಗಳ ಮುಖಾಮುಖಿ’ ಎಂಬ ಶೀರ್ಷಿಕೆಯಡಿ ಅಭಿವೃದ್ಧಿ ಹೆಸರಿನಲ್ಲಿ ನಾವು ಕ್ರಮಿಸಿದ ದಾರಿಯನ್ನು ವಿಶ್ಲೇಷಿಸಲು, ಮರುಪರಿಶೀಲಿಸಲು, ಚರ್ಚಿಸಲು ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...