Homeಮುಖಪುಟಮೆಟಾ v/s ವೈರ್‌: ಆದಿತ್ಯನಾಥ್ ಕುರಿತ ಪೋಸ್ಟ್‌ ಮರುಸ್ಥಾಪಿಸಿದ ಇನ್‌ಸ್ಟಾಗ್ರಾಮ್‌

ಮೆಟಾ v/s ವೈರ್‌: ಆದಿತ್ಯನಾಥ್ ಕುರಿತ ಪೋಸ್ಟ್‌ ಮರುಸ್ಥಾಪಿಸಿದ ಇನ್‌ಸ್ಟಾಗ್ರಾಮ್‌

- Advertisement -
- Advertisement -

ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ವರದಿ ಮಾಡಿದ ನಂತರ ಯೋಗಿ ಆದಿತ್ಯನಾಥ್‌ ಕುರಿತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಅನ್ನು ತೆಗೆದುಹಾಕಲಾಗಿದೆ ಎಂದು ‘ದಿ ವೈರ್‌’ ವರದಿ ಮಾಡಿದ ಬಳಿಕ, ಮೆಟಾ ಸಂಸ್ಥೆಯು ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಅನ್ನು ಮರುಸ್ಥಾಪಿಸಿದೆ.

ಸದರಿ ಖಾತೆದಾರ @cringearchivist ಮಂಗಳವಾರ ಟ್ವಿಟ್ಟರ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರತಿಮೆಯನ್ನು ಪೂಜಿಸುತ್ತಿರುವ ವ್ಯಕ್ತಿಯನ್ನು ವಿಡಂಬಿಸಿದ ಪೋಸ್ಟ್‌‌ಅನ್ನು ಮೆಟಾ ‘ಮೌನವಾಗಿ ಮರುಸ್ಥಾಪಿಸಿದೆ’ ಎಂದು ಖಾತೆದಾರರು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಅಮಿತ್ ಮಾಳವಿಯಾ ವರದಿ ಮಾಡಿದ ನಂತರ ಮೆಟಾ ಸಂಸ್ಥೆಯು ಪೋಸ್ಟ್ ರಿಮೂವ್ ಮಾಡಿದೆ ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟಿಹಾಕಿತ್ತು.

“ಪೋಸ್ಟ್‌ನಲ್ಲಿ ನ್ಯೂಡಿಟಿ (ನಗ್ನತೆ) ಇದೆ ಎಂದು ಪೋಸ್ಟ್‌ಅನ್ನು ತೆರವು ಮಾಡಲಾಗಿದೆ. ಇಲ್ಲಿ ನಗ್ನತೆ ಮತ್ತು ಲೈಂಗಿಕ ವಿಷಯದ ಮಾರ್ಗಸೂಚಿ ಉಲ್ಲಂಘನೆಯಾಗಿದೆ” ಎಂದು ಸೂಚನೆಯನ್ನು Superhumans of Cringetopia ಖಾತೆಗೆ ನೀಡಿರುವುದಾಗಿ ವೈರ್‌ ಆರೋಪಿಸಿತ್ತು.

ಕೆಲವು ಸ್ವಯಂಚಾಲಿತ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ಹಲವರು ಭಾವಿಸಿದರು. ಆದರೆ ಅಕ್ಟೋಬರ್ 10ರಂದು ‘ದಿ ವೈರ್’ ಬೇರೆಯ ಆರೋಪ ಮಾಡಿ, “ಮಾಳವಿಯಾ ಅವರ ನಿರ್ದೇಶನದ ಮೇರೆಗೆ ಮೆಟಾ ಪೋಸ್ಟ್‌ ತೆಗೆದುಹಾಕಿದೆ” ಎಂದಿತ್ತು.

ವಿಡಂಬನಾತ್ಮಕ ಪೋಸ್ಟ್ ಅನ್ನು ಮರುಸ್ಥಾಪಿಸಿರುವ ಕುರಿತು ಮೆಟಾದ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ‘ಎಂಟ್ರಾಕರ್’ ವರದಿ ಮಾಡಿದೆ.

“ಇನ್‌ಸ್ಟಾಗ್ರಾಮ್‌ನ ಎಕ್ಸ್-ಚೆಕ್ (ಕ್ರಾಸ್‌ಚೆಕ್‌) ಕಾರ್ಯಕ್ರಮದ ಸವಲತ್ತು ಪಡೆಯುವ ಮೂಲಕ ಮಾಳವಿಯಾ ರಿಪೋರ್ಟ್ ಮಾಡಿದ್ದಾರೆ. ಹೀಗಾಗಿ ಅವರು ವರದಿ ಮಾಡುವ ಯಾವುದೇ ಪೋಸ್ಟ್‌ಗಳನ್ನು ತಕ್ಷಣವೇ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗುತ್ತದೆ. ಮೆಟಾ ನಿಯಮಗಳನ್ನು ಉಲ್ಲಂಘಿಸದಿದ್ದರೂ ಯಾವುದೇ ಪರಿಶೀಲನೆಯಾಗಿಲ್ಲ” ಎಂದು ವೈರ್‌ ವರದಿ ಆರೋಪಿಸಿತ್ತು.

ಕ್ರಾಸ್‌ಚೆಕ್‌ ಕಾರ್ಯಕ್ರಮದ ಕುರಿತು ಸೆಪ್ಟೆಂಬರ್ 2021ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಮೊದಲ ಬಾರಿಗೆ ಬೆಳಕು ಚೆಲ್ಲಿತ್ತು. ಕನಿಷ್ಠ 5.8 ಮಿಲಿಯನ್ ಪ್ರಭಾವಿ ಖಾತೆದಾರರು (ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರು) ಈ ಸವಲತ್ತು ಹೊಂದಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.

ಮಾಳವಿಯಾಗೆ ಸಂಬಂಧಿಸಿದ ಆರೋಪಗಳನ್ನು ಮೆಟಾ ಸಂಸ್ಥೆ ನಿರಾಕರಿಸಿತು. “ದಿ ವೈರ್‌ನ ವರದಿಯು ಅಸಮರ್ಪಕ ಮತ್ತು ತಪ್ಪುದಾರಿಗೆಳೆಯುವಂತಿದೆ. ಸುಳ್ಳು ದಾಖಲೆಗಳನ್ನು ಆಧರಿಸಿ ವರದಿ ಮಾಡಲಾಗಿದೆ” ಎಂದು ಮೆಟಾ ಹೇಳಿಕೊಂಡಿದೆ. ಎಕ್ಸ್-ಚೆಕ್ ಅಥವಾ ಕ್ರಾಸ್ ಚೆಕ್ ಸವಲತ್ತುಗಳನ್ನು ಹೊಂದಿರುವ ಬಳಕೆದಾರರು ಹೇಳಿದ ತಕ್ಷಣ ಯಾವುದೇ ವಿಷಯವನ್ನು ರಿಮೂವ್‌ ಮಾಡಲು ಸಾಧ್ಯವಿಲ್ಲ. ದಿ ವೈರ್‌ ವರದಿಯು ಸುಳ್ಳು ಎಂದು ಪ್ರತಿಕ್ರಿಯೆ ನೀಡಿತ್ತು.

“ನಾವು ನಮ್ಮ ವಿಷಯದ ನಿರ್ಧಾರಗಳ ಪರಿಶೀಲನೆಯನ್ನು ಸ್ವೀಕರಿಸುತ್ತೇವೆ. ಆದರೆ ಸುಳ್ಳು ಆರೋಪಗಳನ್ನು ತಿರಸ್ಕರಿಸುತ್ತೇವೆ. ದಿ ವೈರ್ ಈ ವಂಚನೆಯ ಬಲಿಪಶು ಎಂದು ನಾವು ಭಾವಿಸುತ್ತೇವೆ, ಆದರೆ ಅಪರಾಧಿ ಅಲ್ಲ” ಎಂದಿತ್ತು.

ಈ ಹಿಂದೆ ಕಂಟೆಂಟ್ ಮಾಡರೇಶನ್ ಕುರಿತು ಮೆಟಾಗೆ ಪ್ರಶ್ನೆಗಳನ್ನು ಕಳುಹಿಸಿದಾಗ ಕಂಪನಿಯು ಹೆಚ್ಚುವರಿ ಇನ್‌ಪುಟ್‌ಗಳನ್ನು ಒದಗಿಸಲು ನಿರಾಕರಿಸಿತು ಎಂದು ಸ್ಕ್ರಾಲ್‌.ಇನ್‌ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...