Homeಮುಖಪುಟಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

ಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

- Advertisement -
- Advertisement -

ನಮಗೆ ಯಾವಾಗಲೋ ನೋಡಿದ ಯಾವ್ಯಾವುದೋ ಚಿತ್ರಗಳು ತಲೆಯಲ್ಲಿ ಉಳಿದುಬಿಡುತ್ತವೆ. ಆ ಚಿತ್ರಗಳನ್ನು ನಾವೇಕೆ ಮರೆಯಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಅನೇಕ ಸಲ ಎಂದೋ ನೋಡಿದ, ಎಂದೋ ಓದಿದ ನಾವು ಇಷ್ಟಪಡದ ಕಥೆಗಳು, ಚಿತ್ರಗಳೂ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಕರ್ನಾಟಕದ ಮೂಲೆಗಳಲ್ಲಿ, ಇಂಗ್ಲಿಷ್ ಗೊತ್ತಿಲ್ಲದೇ ಬೆಳೆದ ನಮ್ಮಂತವರಿಗೆ ಹಾಲಿವುಡ್ ಎನ್ನುವುದು ಗೊತ್ತಾಗಿದ್ದು ಕಾಲೇಜಿಗೆ ತಲುಪಿದ ಮೇಲೆಯೇ. ಸಿಕ್ಕಸಿಕ್ಕ ಸಿನೆಮಾಗಳನ್ನು ನೋಡುತ್ತಿದ್ದ ನಮಗೆ ಯಾವ ಚಿತ್ರ ಯಾವ ಕಾರಣಕ್ಕೆ ಇಷ್ಟವಾಗುತ್ತಿದೆ ಎನ್ನುವುದು ತಿಳಿಯುತ್ತಿರಲಿಲ್ಲ (ತಿಳಿಯಬೇಕು ಎನ್ನುವ ಯಾವ ನಿಯಮವೂ ಇಲ್ಲ). ಈ ಎರಡು ಚಿತ್ರಗಳು ನೋಡಿ ಎರಡು ದಶಕಗಳಾಗುತ್ತಿದ್ದರೂ ಸ್ಮೃತಿಪಟಲದಿಂದ ಒಂದಿಷ್ಟೂ ಮಾಸಿಲ್ಲ. ಈ ಎರಡು ಚಿತ್ರಗಳೂ ಹಾಲಿವುಡ್ ಅನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಸಾಮ್ಯತೆಗಳೂ ಇಲ್ಲ.

ಟೆಕ್ಸಾಸ್‍ನ ಹೋಟೆಲ್ ಒಂದರಲ್ಲಿ ಪಾತ್ರ ತೊಳೆಯುವ ಕೆಲಸಕ್ಕಿದ್ದ ಒಬ್ಬ ಯುವಕ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ನ್ಯೂಯಾರ್ಕ್‍ಗೆ ಬಂದಿಳಿಯುತ್ತಾನೆ. ಬಿಗ್ ಆ್ಯಪಲ್ ಎಂದು ಕರೆಯಲ್ಪಡುವ ದೊಡ್ಡ ನಗರ ನ್ಯೂ ಯಾರ್ಕ್‍ನಲ್ಲಿರುವ ಮಹಿಳೆಯರಿಗೆ ಸೆಕ್ಸ್ ಮಾಡಲು ಪುರುಷರೇ ಸಿಗುವುದಿಲ್ಲವೆಂದು, ತಾನೊಬ್ಬ ಒಳ್ಳೆಯ ಪ್ರೇಮಿಯಾಗಿದ್ದರಿಂದ ಒಬ್ಬ ಯಶಸ್ವೀ ಪುರುಷ ವೇಶ್ಯೆ ಆಗಬಹುದು ಎನ್ನುವ ಬಲವಾದ ನಂಬಿಕೆ ಜೋ ಬಕ್‍ನದು (ಜಾನ್ ವಾಯಿಟ್). ಟೆಕ್ಸಾಸ್‍ನಿಂದ ನ್ಯೂಯಾರ್ಕ್‍ವರೆಗಿನ ಪಯಣದಲ್ಲಿ ಕಾಣಿಸುವ ಎಲ್ಲಾ ಬಿಲ್‍ಬೋರ್ಡ್‍ಗಳು, ರೇಡಿಯೋದಲ್ಲಿ ಬರುವ ಜಾಹೀರಾತುಗಳೆಲ್ಲವೂ ಅವನ ನಂಬಿಕೆಯನ್ನು ಬಲಪಡಿಸುತ್ತಲೇ ಇರುತ್ತವೆ. ಜೇಬಿನಲ್ಲಿ ಒಂದಿಷ್ಟು ಕಾಸನ್ನು ಇಟ್ಟುಕೊಂಡು ಬಂದಿಳಿದು, ಒಂದು ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾನೆ. ತಾನೊಬ್ಬ ಗಟ್ಟಿಗ, ಪ್ರೇಮಿ ಎಂದು ತೋರಿಸಿಕೊಳ್ಳಲು ಕೌಬಾಯ್‍ಗಳು ಹಾಕಿಕೊಳ್ಳುವ ಒಂದು ಜಾಕೆಟ್ ಮತ್ತು ಹ್ಯಾಟ್‍ಅನ್ನು ಸದಾಕಾಲ ಹಾಕಿಕೊಂಡಿರುತ್ತಾನೆ.

ಈ ಹೊಸ ಅಪರಿಚಿತ ನಗರದಲ್ಲಿ ಗಮ್ ಅಗಿಯುತ್ತ, ರಸ್ತೆಗಳಲ್ಲಿ ಅಲೆಯುತ್ತ ಕಂಡಕಂಡ ಮಹಿಳೆಯರಿಗೆ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಕನಸುಗಳು ಎಷ್ಟೇ ಪ್ರಬಲವಾಗಿದ್ದರೂ ಶಹರದ ವಾಸ್ತವ, ತನ್ನ ಕೆಲಸದಲ್ಲಿ ಮರೀಚಿಕೆಯಾದ ಯಶಸ್ಸು, ಬರಿದಾಗುತ್ತಿರುವ ಜೇಬು ಇವನನ್ನು ವಾಸ್ತವಕ್ಕೆ ಎಳೆಯುವ ಪ್ರಯತ್ನ ಮಾಡುತ್ತವೆ. ಆದರೆ ನಮ್ಮ ಹೀರೋನ ಭ್ರಮೆ ಅಷ್ಟು ಸುಲಭಕ್ಕೆ ಕರಗುವಷ್ಟು ಪೊಳ್ಳಾಗಿಲ್ಲ. ಆಗ ಅವನಿಗೆ ಸಿಗುವನು ರಿಕೊ/ರ್ಯಾಟ್ಸೋ (ಡಸ್ಟಿನ್ ಹಾಫ್‍ಮನ್). ರಿಕೋ ಸದಾ ಕೆಮ್ಮುತ್ತಿರುವ, ಕುಂಟುನಡೆಯುವ ಸಣ್ಣಪುಟ್ಟ ಕಳ್ಳತನ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುವ ವ್ಯಕ್ತಿ. ಜೋ ಬಕ್‍ನನ್ನು ನೋಡಿದಕೂಡಲೇ, ಅವನ ಸ್ನೇಹ ಸಂಪಾದಿಸಿ, ಅವನು ಹೀಗೆಲ್ಲ ರಸ್ತೆಯಲ್ಲಿ ಹುಡುಕಾಟ ಮಾಡಬಾರದೆಂದೂ, ಅವನಿಗೆ ಒಬ್ಬ ಮ್ಯಾನೇಜರ್‍ನ ಅವಶ್ಯಕತೆ ಇದೆಯೆಂದು ನಂಬಿಸಿ, ಒಂದಿಷ್ಟು ದುಡ್ಡು ಕಿತ್ತುಕೊಂಡು ಕಳುಹಿಸುತ್ತಾನೆ. ತಾನು ಮೋಸ ಹೋದೆನೆಂದು ತಿಳಿಯಲು ಜೋಗೆ ಹೆಚ್ಚು ಸಮಯ ಹಿಡಿಯುವದಿಲ್ಲ.

ಜೋ ದುಡ್ಡು ಕಟ್ಟಿಲ್ಲವೆಂದು ಹೋಟೆಲ್‍ನಿಂದ ಹೊರದಬ್ಬಲ್ಪಟ್ಟು, ತಿನ್ನಲೂ ಕಾಸಿಲ್ಲದೇ ಅಲೆಯುತ್ತಿರುವಾಗ ಮತ್ತೆ ಸಿಗುವನು ರ್ಯಾಟ್ಸೋ. ಆಗ ಶುರುವಾಗುವುದು ಅವರಿಬ್ಬರ ಸೋಲು, ಗೆಲುವು, ನೋವು, ಹತಾಶೆಗಳ ಪಯಣ.

ಈ ಚಿತ್ರ ಏಕೆ ಇಷ್ಟವಾಗುತ್ತೆ ಎಂದು ಅನೇಕ ಸಲ ಪ್ರಶ್ನೆ ಕೇಳಿದ್ದೇನೆ. ಅಲೆಕ್ಸಾಂಡರ್ ಪೇನ್ ಒಂದು ಮಾತು ಹೇಳುತ್ತಾರೆ, ‘ನಿರ್ದೇಶನವೆಂದರೆ 90% ಕಾಸ್ಟಿಂಗ್ ಹಾಗೂ ಬಾಕಿ 10% ಮಾತ್ರ ನಿರ್ದೇಶನ’. ಈ ಚಿತ್ರದಲ್ಲಿ ಕನಸುಗಣ್ಣುಗಳ ಮುಗ್ಧ ಜಾನ್ ವಾಯಿಟ್ ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಾನೆ. ಚಿತ್ರದಲ್ಲಿ ಬರುವ ಫ್ಲ್ಯಾಷ್‍ಬ್ಯಾಕ್, ಕನಸುಗಳು, ಪಾರ್ಟಿಯ ದೃಶ್ಯಗಳು, ಹಿಂಸೆ, ಲೈಂಗಿಕತೆಯ ಬಗ್ಗೆ ಟೀಕೆಗಳು ಬಂದಿವೆ. ಅವುಗಳು ಇಲ್ಲದಿದ್ದರೂ ಈ ಚಿತ್ರ ನಮಗೆ ಇಷ್ಟವಾಗುತ್ತಿತ್ತೇನೋ.

ನಮಗೆ ಈ ಚಿತ್ರ ನೆನಪಿನಲ್ಲುಳಿಯುವುದು ಪಾತ್ರಗಳ ಮುಗ್ಧತೆಯಿಂದ. ದೊಡ್ಡ ನಗರದಲ್ಲಿ ಮಿಸ್‍ಫಿಟ್ ಆಗಿರುವ ಇವರು, ನಿಜಜೀವನದಲ್ಲಿ ನಮಗೆ ಕಂಡರೆ ಬಹುಶಃ ಹೇಸಿಗೆ ಪಟ್ಟು ಮುಂದೆ ಹೋಗುತ್ತೇವೆ ಆದರೆ ಇಲ್ಲಿ ಅವರನ್ನೇ ಇಷ್ಟಪಡುತ್ತೇವೆ. ಇವರ ಮೂರ್ಖತೆ ಮುರ್ಖತೆಯಾಗಿ ಕಾಣಿಸದೇ ಮುಗ್ಧತೆಯಾಗಿ ಕಾಣಿಸುತ್ತದೆ. ಇವರ ಸತ್ಯವನ್ನು ನಾಗರಿಕ ಸಮಾಜವೇಕೆ ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುತ್ತೇವೆ. ತನ್ನನ್ನು ತಾನು ಒಪ್ಪಿಕೊಳ್ಳುವ ಕಥೆಯನ್ನು ಹೇಳುವ, ತನ್ನ ತಪ್ಪುಗಳನ್ನು ಕ್ಷಮಿಸುವ ಕಥೆಯಾಗಿ ನೆನಪಿನಲ್ಲಿ ಉಳಿಯುತ್ತದೆ ಜಾನ್ ಶ್ಲೆಲಿಂಜರ್ ಅವರ ನಿರ್ದೇಶನದ ಈ ಚಿತ್ರ ಮಿಡ್‍ನೈಟ್ ಕೌಬಾಯ್.

ಜಾಕ್ (ರಾಬರ್ಟ್ ಡಿ ನೀರೊ) ಒಬ್ಬ ಮಾಜಿ ಪೊಲೀಸ್, ಈಗ ಒಬ್ಬ ಬೌಂಟಿ ಹಂಟರ್, ಜಾಮೀನಿನ ಮೇಲೆ ಹೊರಗೆ ಬಂದು ತಪ್ಪಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವುದು ಇವನ ಕೆಲಸ. ಜಾನಾಥನ್ ಒಬ್ಬ ಅಕೌಂಟಂಟ್, ಜಾಮೀನಿನಲ್ಲಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಈಗ ಅವನನ್ನು ಹಿಡಿದು ಒಪ್ಪಿಸಬೇಕಿದೆ. ಇದು ಮಾರ್ಟಿನ್ ಬ್ರೆಸ್ಟ್ ಅವರ ಮಿಡ್‍ನೈಟ್ ರನ್ ಚಿತ್ರ.

ಜಾನಾಥನ್ ಎಂಬ ಈ ಅಕೌಂಟಂಟ್ ಜಿಮಿ ಸೆರಾನೋ ಎನ್ನುವ ಮಾಫಿಯಾ ಡಾನ್‍ನ ದುಡ್ಡನ್ನೆ ಎಗರಿಸಿ ಚಾರಿಟಿಗೆ ಹಂಚಿದ್ದಾನೆ. ಹಾಗಾಗಿ ಆ ಡಾನ್ ಇವನನ್ನು ಹುಡುಕಿ ಮುಗಿಸಬೇಕಿದೆ. ಪೊಲೀಸರಿಗೂ ಇವನ ಹುಡುಕಾಟ, ಜಾನಾಥನ್‍ನ್ನು ಜಾಕ್ ತನ್ನ ವಶಕ್ಕೆ ತೆಗೆದುಕೊಂಡರೆ ಪೊಲೀಸರ ಕೆಲಸ ಕೆಡುತ್ತೆ ಹಾಗಾಗಿ ಜಾಕ್ ಮೇಲೆ ಕಣ್ಣಿಟ್ಟಿದ್ದಾರೆ. ಯಾರೇ ಬಂಧಿಸಿದರೂ ತನ್ನನ್ನು ಮುಗಿಸಿಬಿಡುವರು ಎಂದು ಜಾನಾಥನ್‍ಗೆ ತಿಳಿದಿದೆ ಹಾಗಾಗಿ ಅವನು ಈ ಮೂವರಿಂದಲೂ ಪಾರಾಗಬೇಕು. ಜಾಕ್‍ಗೆ ಜಾನಾಥನ್‍ನನ್ನು ಹುಡುಕುವುದು ಕಷ್ಟವಾಗಿಲ್ಲ, ಆದರೆ ಅವನನ್ನು ನ್ಯೂ ಯಾರ್ಕ್‍ನಿಂದ ಲಾಸ್ ಏಂಜೆಲ್ಸ್‍ಗೆ ತರಲೇಬೇಕಿದೆ, ಇಲ್ಲದಿದ್ದರೆ ಅವನಿಗೆ ದುಡ್ಡು ಸಿಗುವುದಿಲ್ಲ. ಈ ಪಯಣದಲ್ಲಿ ಅವರಿಬ್ಬರ ಸಂಬಂಧ. ಇಬ್ಬರೂ ಒಳ್ಳೆಯವರೆ ಆದರೆ ಸಂದರ್ಭ ಒಳ್ಳೆಯತನಕ್ಕೆ ಅನುವು ಮಾಡಿಕೊಡುವುದಿಲ್ಲ.

ಇದೊಂದು ಪಕ್ಕಾ ಹಾಲಿವುಡ್ ಫಾರ್ಮುಲಾ ಸಿನೆಮಾ. ಇವುಗಳನ್ನು ‘ಬಡಿ’ (buddy) ಫಿಲ್ಮ್‍ಗಳು ಎನ್ನಲಾಗುತ್ತದೆ. ಇಬ್ಬರು ವ್ಯವಸ್ಥೆ ಮತ್ತು ತಮ್ಮತಮ್ಮ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಕಥೆ ಹಾಗೂ ಇದೊಂದು ಕಾಮೆಡಿ. ಎಲ್ಲಾ ಪಾತ್ರಗಳಿಗೂ ಒಂದು ಉದ್ದೇಶವಿದೆ, ಕಥೆ ಲೀನಿಯರ್ ಆಗಿ, ಗಂಭೀರಗೊಂಡಂತೆ ಹೆಚ್ಚೆಚ್ಚು ಕಾಮೆಡಿಯಾಗತೊಡಗುತ್ತದೆ. ಸಂಘರ್ಷವೆನ್ನುವುದು ಗಟ್ಟಿಗೊಳ್ಳುತ್ತ ಕ್ಲೈಮ್ಯಾಕ್ಸ್ ತಲುಪುತ್ತದೆ. ಸಾಹಸದೃಶ್ಯಗಳು, ಚೇಸ್‍ಗಳು, ಚಾಪರ್ ಶಾಟ್‍ಗಳನ್ನು ಒಳಗೊಂಡ ಈ ಚಿತ್ರವನ್ನು ಫಾರ್ಮುಲಾ ಚಿತ್ರವೆಂದು ಕರೆದಲ್ಲಿ, ಫಾರ್ಮುಲಾ ಚಿತ್ರದ ಶ್ರೇಷ್ಠ ನಿದರ್ಶನ ಎನ್ನಬಹುದು. ಈ ಚಿತ್ರದ ವಿಶೇಷತೆಯೂ ಇದರ ಕಾಸ್ಟಿಂಗ್. ಬೌಂಟಿ ಹಂಟರ್ ಆಗಿರುವ ರಾಬರ್ಟ್ ಡಿ ನೀರೋ ಯಾವಾಗಲೂ ಗಂಭೀರವಾಗಿಯೇ ಇದ್ದಾನೆ; ಚಾಲ್ರ್ಸ್ ಗೋರ್ಡಿನ್ ಒಬ್ಬ ವೈಟ್‍ಕಾಲರ್ ಕೆಲಸದ ಸಂಭಾವಿತ ವ್ಯಕ್ತಿಯಾಗಿ ಶಾಂತವಾಗೇ ಇರುತ್ತಾನೆ. ಇವರು ಯಾವ ಸಂದರ್ಭದಲ್ಲೂ ಕಾಮೆಡಿ ಮಾಡುವ ಪ್ರಯತ್ನ ಮಾಡುವುದಿಲ್ಲ. ಅವರ ಪರಿಸ್ಥಿತಿಗಳೆ, ಅವರ ಸಂಕಷ್ಟಗಳೇ ಕಾಮೆಡಿಯಾಗಿ ಪರಿಣಮಿಸುತ್ತವೆ.

ಫಾರ್ಮುಲಾ ಚಿತ್ರವಾಗಿದ್ದು, ಹಾಲಿವುಡ್‍ನ ಸ್ಟ್ರಕ್ಚರ್‍ಗೆ ಬದ್ಧವಾಗಿದ್ದು, ಸ್ಟಾರ್‍ಗಳನ್ನು ಹಾಕಿಕೊಂಡರೂ ಈ ಚಿತ್ರ ಮಾನವೀಯತೆಗೆ ಬದ್ಧವಾಗಿದೆ. ಕಾಮೆಡಿ, ಥ್ರಿಲರ್, ಬಡಿ, ಚೇಸ್ ಸಿನೆಮಾ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಂದರೂ, ಪಾತ್ರಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ, ಅವರ ಸಮಸ್ಯೆಗಳಿಗೆ ಮಿಡಿಯುವಂತೆ ಮಾಡುತ್ತದೆ. ಜಾಕ್ ತನ್ನ ಮಾಜಿ ಹೆಂಡತಿಯನ್ನು ಭೇಟಿ ಮಾಡುವುದು, ತನ್ನ ಮಗಳನ್ನು ಅನೇಕ ವರ್ಷಗಳ ನಂತರ ನೋಡುವುದು, ಸೆಂಟಿಮೆಂಟಲ್ ಅಂಶಗಳನ್ನು ತುರುಕುವ ಸಲುವಾಗಿ ಸೇರಿಸಿಲ್ಲ. ತಾನು ಹೇಳಬೇಕಾದ ಕಥೆಗೆ ಬದ್ಧನಾಗಿ ಪ್ರಾಮಾಣಿಕವಾಗಿ ಹೇಳಿದ್ದರಿಂದಲೇ ಮೂಡಿಬಂದಿದ್ದು ಮಿಡ್‍ನೈಟ್ ರನ್ ಎನ್ನುವ ಮಾರ್ಟಿನ್ ಬ್ರೆಸ್ಟ್ ಅವರ ನಿರ್ದೇಶನದ ಅದ್ಭುತ ಚಿತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...