Homeಮುಖಪುಟಕೊರೊನಾ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಮೋದಿ ಸರ್ಕಾರ ಅನ್‌ಲಾಕ್ ಮಾಡಿದೆ - ರಾಹುಲ್

ಕೊರೊನಾ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಮೋದಿ ಸರ್ಕಾರ ಅನ್‌ಲಾಕ್ ಮಾಡಿದೆ – ರಾಹುಲ್

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಮತ್ತು ಪೆಟ್ರೋಲ್ ಡೀಸೆಲ್ ಬೆಲೆ ಎರಡನ್ನು ಮೋದಿ ಸರ್ಕಾರ ಅನ್‌ಲಾಕ್ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಏರುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು ಮತ್ತು ಪೆಟ್ರೋಲ್ ಡೀಸೆಲ್ ಬೆಲೆಯ ಗ್ರಾಫ್ ಒಂದನ್ನು ಪೋಸ್ಟ್ ಮಾಡಿರುವ ಅವರು ಜೂನ್ ತಿಂಗಳವರೆಗೆ ಲಾಕ್ ಆಗಿದ್ದ ಇವುಗಳನ್ನು ಮೋದಿ ಸರ್ಕಾರ ಅನ್‌ಲಾಕ್ ಮಾಡಿದೆ. ಅದಕ್ಕಾಗಿ ತೀವ್ರಗತಿಯಲ್ಲಿ ಏರುತ್ತಿವೆ ಎಂದು ಲೇವಡಿ ಮಾಡಿದ್ದಾರೆ.

ಕೊರೊನಾ ವೈರಸ್‌ ಪ್ರಕರಣಗಳು ಮಾತ್ರ ಏರುತ್ತಿಲ್ಲ ಎಂದು ಶೀರ್ಷಿಕೆ ನೀಡಿರುವ ಅವರು  ಪೆಟ್ರೋಲ್-ಡೀಸೆಲ್ ದರಗಳು ಸಹ ಅದೇ ವೇಗದಲ್ಲಿ ಏರುತ್ತಿವೆ ಎನ್ನುವುದನ್ನು ಸೂಚಿಸಿದ್ದಾರೆ.

ಇಷ್ಟು ದಿನ ಲಡಾಖ್‌ ಗಡಿಯಲ್ಲಿನ ಉದ್ವಿಗ್ನತೆ ನಿಭಾಯಿಸಲು ಮೋದಿ ಸರ್ಕಾರ ವಿಫಲವಾಗಿದೆ ಎಂಬುದರ ಮೇಲೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅವರು ಇಂದು ಕೊರೊನಾ ವೈರಸ್ ಮತ್ತು ಪೆಟ್ರೋಲ್ ಡೀಸೆಲ್‌ ಬೆಲೆಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಟೀಕಾಪ್ರಹಾರ ಮಾಡಿದ್ದಾರೆ.

ಜೂನ್ 1 ರಿಂದ ಅನ್ಲಾಕ್ ಹಂತ 1 ಪ್ರಾರಂಭವಾದ ನಂತರ ಸ್ಥಿರ ಏರಿಕೆಯನ್ನು ಹೇಗೆ ಕಂಡಿದೆ ಎಂಬುದನ್ನು ತೋರಿಸುತ್ತದೆ.

ಕರೋನಾವೈರಸ್ ಹರಡುವುದನ್ನು ತಡೆಯಲು ಮೂರು ತಿಂಗಳ ಹಿಂದೆ ವಿಧಿಸಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ತೆಗೆದುಹಾಕುವ ಉದ್ದೇಶದಿಂದ ಮೂರು ಹಂತದ ಅನ್‌ಲಾಕ್‌ ಇದು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಜೂನ್‌ 7ರವರೆಗೆ ಸುಮಾರು 82 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೈನಂದಿನ ಏರಿಕೆ ಇಲ್ಲದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಯಿತು. ಆದರೆ ಜೂನ್ 7 ರ ನಂತರ ಮೊದಲಿನ ರೀತಿಯ ದೈನಂದಿನ ದರ ನಿಗಧಿಗೆ ಮರಳಿದಾಗಿನಿಂದ ಸತತ 18ನೇ ದಿನವೂ ಸಹ ಪೆಟ್ರೋಲ್ ಡೀಸೆಲ್‌ ಬೆಲೆಗಳಲ್ಲಿ ಏರಿಕೆಯಾಗಿದೆ.  ಜೂನ್ 7 ರಂದು ಡೀಸೆಲ್ ಬೆಲೆ ಲೀಟರ್‌ಗೆ 69 ರೂ ಇದ್ದರೆ ಪೆಟ್ರೋಲ್ ಬೆಲೆ ಲೀಟರ್‌ 71 ಇತ್ತು. ಆದರೆ ಇಂದಿಗೆ ಎರಡರ ಬೆಲೆಯಲ್ಲಿಯೂ ಅತಿ ಹೆಚ್ಚಿನ ಬೆಲೆ ಏರಿಕೆಯಾಗಿದ್ದು ದೆಹಲಿಯಲ್ಲಿ ಎರಡರ ಬೆಲೆಯೂ 79 ರೂಗಳಿಗೆ ಅಧಿಕವಾಗಿದೆ.

ಅದೇ ರೀತಿ ಜೂನ್ 1 ರಂದು ನರೇಂದ್ರ ಮೋದಿಯವರು ಮೊದಲ ಹಂತದ ಅನ್‌ಲಾಕ್‌ ಘೋಷಿಸಿದಾಗ 7000-8000 ದಿನಕ್ಕೆ ವರದಿಯಾಗುವ ಕೋವಿಡ್‌ ಪ್ರಕರಣಗಳಿದ್ದರೆ ಇಂದಿಗೆ ಅದರ ಎರಡು ಪಟ್ಟು ಹೆಚ್ಚಳವಾಗುತ್ತಿದೆ. ಇಂದು ದೇಶವು 15,968 ಹೊಸ ಪ್ರಕರಣಗಳು ಮತ್ತು 465 ಸಾವುಗಳನ್ನು ವರದಿ ಮಾಡಿದ್ದು, ಇದುವರೆಗಿನ ಅತಿ ಹೆಚ್ಚು ಏಕದಿನ ಜಿಗಿತವಾಗಿದೆ. ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,56,183 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಇಂಧನ ಬೆಲೆಗಳ ದೈನಂದಿನ ಹೆಚ್ಚಳದ ಬಗ್ಗೆ ಸರ್ಕಾರವು ಪ್ರತಿಪಕ್ಷಗಳ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಬೆಲೆ ಹೆಚ್ಚಳದ ವಿರುದ್ಧ ಶೀಘ್ರದಲ್ಲೇ ದೇಶಾದ್ಯಂತ ‘ಜನ ಆಂದೋಲನ್’ (ಜನರ ಆಂದೋಲನ) ಪ್ರಾರಂಭಿಸುವುದಾಗಿ ಕಾಂಗ್ರೆಸ್ ಮಂಗಳವಾರ ಹೇಳಿದೆ.


ಇದನ್ನೂ ಓದಿ: ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...