Homeಕರೋನಾ ತಲ್ಲಣಕೊರೊನಾ ತಲ್ಲಣ: #ModiOxygenDo, भाषणबाज_मोदी, #oxygenbedslekkakodi ಟ್ವಿಟರ್‌ ಟ್ರೆಂಡ್

ಕೊರೊನಾ ತಲ್ಲಣ: #ModiOxygenDo, भाषणबाज_मोदी, #oxygenbedslekkakodi ಟ್ವಿಟರ್‌ ಟ್ರೆಂಡ್

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದ್ದು ಪ್ರಸ್ತುತ ಆಘಾತಕಾರಿ ಹಂತಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಕಾಲಹರಣ ಮಾಡದೇ ಕೊರೊನಾ ಸಮಸ್ಯೆಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದ ‘ಕರ್ನಾಟಕ ಜನಾರೋಗ್ಯ ಚಳುವಳಿ’ಯ ಹ್ಯಾಶ್‌‌ಟ್ಯಾಗ್‌ ಆಂದೋಲನವು ಶನಿವಾರ ಟ್ರೆಂಡ್ ಆಗಿದೆ.

ಜನಾರೋಗ್ಯ ಚಳುವಳಿಯು, ‘ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಿ’, ‘ಪ್ರತಿದಿನ ಎಷ್ಟು ಹೊಸ ಬೆಡ್ ವ್ಯವಸ್ಥೆ ಆಯಿತು ಎಂಬ ವರದಿ ಕೊಡಿ’, ‘ಬೆಂಗಳೂರಿನ ಸರ್ಕಾರೀ ಆರೋಗ್ಯ ವ್ಯವಸ್ಥೆ ಬಲಪಡಿಸಿ’, ‘ಒಕ್ಕೂಟ ಸರ್ಕಾರದಿಂದ ಆಕ್ಸಿಜನ್ ಪಾಲಿನ ಹಕ್ಕು ಪಡೆದಿದ್ದರ ಲೆಕ್ಕ ಕೊಡಿ’ ಮುಂತಾದ ಬೇಡಿಕೆಗಳನ್ನು ಇಟ್ಟು, #DemandEverydayReport, #Implement_Citizen’s_charter, #oxygenbedslekkakodi ಜೊತೆಗೆ #ModiOxygenDo ಮುಂತಾದ ಹ್ಯಾಶ್‌ಟ್ಯಾಗ್‌ಗನ್ನು ಇಟ್ಟು ಟ್ವಿಟರ್‌ ಅಭಿಯಾನ ನಡೆಸಿದೆ.

ಅದರಲ್ಲೂ ದೇಶದಾದ್ಯಂತ ಆಮ್ಲಜನಕ ಕೊರತೆ ಇರುವ ಬಗ್ಗೆ ವರದಿಗಳಾಗುತ್ತಿದ್ದು, ‘ಭಾಷಣಕಾರ ಮೋದಿ’(भाषणबाज_मोदी) ಹಾಗೂ #ModiOxygenDo( ಮೋದಿ ಆಮ್ಲಜನಕ ಕೊಡಿ) ದೇಶದಾದ್ಯಂತ ಟ್ರೆಂಡ್ ಆಗಿದೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್‌‌ ಅವರಿಗೆ ಟ್ಯಾಗ್‌ ಮಾಡಿ, ಕರ್ನಾಕಟ ಜನಾರೋಗ್ಯ ಚಳುವಳಿಯು, “ಹಾಸಿಗೆಗಳ ಕುರಿತು ದೈನಂದಿನ ವರದಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ” ಎಂದು ಟ್ವೀಟ್ ಮಾಡಿದೆ.

ಆಕಾಶ್ ಅವರು, ಪ್ರಧಾನ ಮಂತ್ರಿ ಯಾರ ಬಗ್ಗೆ ಕಾಳಜಿ ವಹಿಸಿದ್ದಾರೆ? ಎಂದು ಪ್ರಧಾನಿ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ?.

ಇದನ್ನೂ ಓದಿ: ಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!

“ಸಾವಿರಾರು ನಾಗರಿಕರ ಸಾವಿಗಿಂತ ಗರ್ಭಿಣಿ ಆನೆ ಸಾವಿಗೀಡಾಗಿದ್ದಕ್ಕೆ ನಮ್ಮ ಕ್ರಿಕೇಟಿಗರು ಮತ್ತು ನಟರು ಮಾತನಾಡುತ್ತಾರೆ. ಅವರು ತಮ್ಮ ಗುಲಾಮಗಿರಿಯ ಬಗ್ಗೆ ನಾಚಿಕೆಪಡುವವರೆಗೂ ಇದನ್ನು ಶೇರ್‌ ಮಾಡಿ” ಎಂದು ತೆಲಂಗಾಣದ ಶಾಸಕಿ ದನಸಾರಿ ಅನಸೂಯ ಅವರು, ಕೊರೊನಾದಿಂದ ಸಾವಿಗೀಡಾಗಿರುವವರ ಶರೀರವನ್ನು ಸುಡುತ್ತಿರುವ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ

ಇದನ್ನೂ ಓದಿ: ಆಕ್ಸಿಜನ್, ಐಸಿಯು ಕೊರತೆಯಿಂದ ಉಂಟಾಗುವ ಸಾವುಗಳಿಗೆ ಕೇಂದ್ರವೇ ಹೊಣೆ- ರಾಹುಲ್ ಗಾಂಧಿ

 

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾ – ಒಂದು ಧ್ವಂಸ ಕಾರ್ಯಾಚರಣೆಯಷ್ಟೇ!

ವಿಡಿಯೊ ನೋಡಿ►► ಕೋವಿಡ್ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ/ತಾಲೂಕು ಮಟ್ಟದಲ್ಲಿ ನಾವೇನು ಮಾಡಬಹುದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...