Homeಕರ್ನಾಟಕ1 ವರ್ಷ, 10 ಪತ್ರ, 7 ಪ್ರೆಸ್‌ಮೀಟ್, ಒಂದು ಮುಖಾಮುಖಿ: ಕೋವಿಡ್ ಕುರಿತ ಎಚ್.ಕೆ ಪಾಟೀಲ್...

1 ವರ್ಷ, 10 ಪತ್ರ, 7 ಪ್ರೆಸ್‌ಮೀಟ್, ಒಂದು ಮುಖಾಮುಖಿ: ಕೋವಿಡ್ ಕುರಿತ ಎಚ್.ಕೆ ಪಾಟೀಲ್ ಎಚ್ಚರವನ್ನು ಸಿಎಂ, ಸುಧಾಕರ್ ಪರಿಗಣಿಸಲೇ ಇಲ್ಲ!

- Advertisement -
- Advertisement -

ಹೋದ ವರ್ಷ ಏಪ್ರಿಲ್ 29ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒಂದು ಪತ್ರ, ಇತ್ತೀಚೆಗೆ ಏಪ್ರಿಲ್ 14ರಂದು ಒಂದು ಪತ್ರ. ಈ ಎರಡರ ನಡುವೆ ಇನ್ನೂ ಎಂಟು ಪತ್ರಗಳು. ಹಲವು ಟ್ವೀಟ್‌ಗಳು, ಏಳು ಪ್ರೆಸ್‌ಮೀಟ್‌ಗಳು, ಒಮ್ಮೆ ಆರೋಗ್ಯ ಸಚಿವ ಡಾ, ಸುಧಾಕರ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲಿ ಮನವಿ ಮತ್ತು ಅಧಿವೇಶನದಲ್ಲಿ ಆಗ್ರಹ…..

ಇಷ್ಟೆಲ್ಲವನ್ನೂ ಗದಗ ಶಾಸಕ ಎಚ್.ಕೆ.ಪಾಟೀಲರು ಕೋವಿಡ್ ನಿಯಂತ್ರಣಕ್ಕಾಗಿ, ಕೋವಿಡ್ ಸಾವು ತಪ್ಪಿಸಲು ಅನುಸರಿಸಬೇಕಾದ ಕ್ರಮಗಳಿಗಾಗಿ ಸರ್ಕಾರವನ್ನು ಆಗ್ರಹಿಸಲು ಮಾಡುತ್ತ ಬಂದರು.

8 ತಿಂಗಳ ಹಿಂದೆಯೇ ಅವರು, ಮುಂದೆ ಸಂಭವಿಸಲಿರುವ ಆಮ್ಲಜನಕ ಕೊರತೆ, ವೆಂಟಿಲೇಟರ್ ಕೊರತೆ ಮತ್ತು ಆಸ್ಪತ್ರೆ ಹಾಸಿಗೆಗಳ ಕುರಿತು ಎಚ್ಚರಿಸುತ್ತ ಬಂದರು. ಮೊದಲ ಪತ್ರದಲ್ಲಿ (ಹೋದ ವರ್ಷ ಏಪ್ರಿಲ್) ಈ ಸಂದರ್ಭ ಬಳಸಿಕೊಂಡು ಮದ್ಯಪಾನ ನಿಷೇಧಕ್ಕೆ ಯತ್ನಿಸಿ ಎಮದು ಸಲಹೆ ಕೊಟ್ಟಿದ್ದರು.

ಉಳಿದ ಪತ್ರಗಳಲ್ಲಿ ಕೈಗಾರಿಕಾ ವಲಯದ ಆಮ್ಜನಕ ಬಳಸಿಕೊಳ್ಳಲು, ಖಾಸಗಿ ಆಸ್ಪತ್ರೆಗಳು ಕನಿಷ್ಠ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಡಲು ಒತ್ತಾಯ ಹಾಕುತ್ತ ಬಂದರು.
ಆದರೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಎಚ್.ಕೆ ಪಾಟೀಲರ ಸಲಹೆಗಳಿಗೆ ಗೋಣು ಆಡಿಸಿದರೇ ವಿನಃ ಕ್ರಮಕ್ಕೆ ಮುಂದಾಗಲಿಲ್ಲ. ಅದರ ಪರಿಣಾಮವನ್ನು ಇವತ್ತು ನೋಡುತ್ತಿದ್ದೇವೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಎಚ್‌ಕೆ. ಪಾಟೀಲ್, ‘ಹತ್ತಾರು ಪತ್ರ ಬರೆದು ಸರ್ಕಾರದ ಜವಾಬ್ದಾರಿ ನೆನಪಿಸಿದೆ, ಸುದ್ದಿಗೋಷ್ಠಿಗಳ ಮೂಲಕ, ಟ್ವೀಟ್‌ಗಳ ಮೂಲಕ ವಿನಂತಿಸಿದೆ. ನೇರವಾಗಿ ಮುಖ್ಯಮಂತ್ರಿಯವರ ಗೃಹ ಕಚೇರಿಗೇ ಹೋಗಿ ಆಮ್ಲಜನಕವನ್ನು ಪಡೆದುಕೊಳ್ಳುವ ಬಗೆಯನ್ನು ವಿವರಿಸಿ ಬಂದೆ. ಅಧಿವೇಶನದಲ್ಲೂ ಆರೋಗ್ಯ ಮೂಲ ಸೌಕರ್ಯಗಳನ್ನು ಬೇಗ ಉನ್ನತಿಕರಿಸಿ ಎಂದು ಒತ್ತಾಯಿಸಿದೆ. ತಜ್ಞರ ಮಾತನ್ನೇ ಆಲಿಸದ ಈ ಸರ್ಕಾರ ವಿರೋಧ ಪಕ್ಷದವರ ಸಲಹೆಯನ್ನು ಕೇಳುತ್ತದೆಯೇ? ಕೈಗಾರಿಕೆಗಳ ಪರ ಇರುವ ಈ ಸರ್ಕಾರ, ಕೇಂದ್ರ ಸರ್ಕಾರದಂತೆ ಉದ್ಯಮಿಗಳ ಪರ ಇದೆಯೇ ಹೊರತು ಜನಸಾಮಾನ್ಯನ ಪರ ಇಲ್ಲ. ಇವತ್ತು ಎರಡನೇ ಕೋವಿಡ್ ಅಲೆ ರಾಜ್ಯದಲ್ಲಿ ತೀವ್ರಗೊಳ್ಳಲು ಈ ಸರ್ಕಾರದ ಸೋಮಾರಿತನ, ಅದಕ್ಷತೆಯೇ ಕಾರಣ’ ಎಂದರು.

‘ಕಳೆದ ಮಂಗಳವಾರ, ಬುಧವಾರ ದೆಹಲಿ ಹೈಕೋರ್ಟ್ ಆಮ್ಲಜನಕ ಕುರಿತಾಗಿ ಏನು ಹೇಳಿತೋ ಅದನ್ನು ನಾನು ಕಳೆದ ವರ್ಷದಿಂದ ಹೇಳುತ್ತ ಬಂದಿದ್ದೇನೆ. ಕೋರ್ಟ್ ಆಕ್ರೋಶದಲ್ಲಿ ಹೇಳಿದ್ದನ್ನು ನಾನು ಸೌಮ್ಯವಾಗಿ ಸಲಹೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸುತ್ತ ಬಂದಿದ್ದೇನೆ. ಆದರೆ, ದಪ್ಪ ಚರ್ಮದ ರಾಜ್ಯ ಸರ್ಕಾರಕ್ಕೆ. ಮಂತ್ರಿಮಂಡಲಕ್ಕೆ ಆಪರೇಷನ್ ಕಮಲದಿಂದ ಬಂದವರನ್ನು ಸೇರಿಸಿಕೊಳ್ಳುವುದು, ಉಪ ಚುನಾವಣೆ ಮುಖ್ಯವಾಯಿತೆ ಹೊರತು ಕೋವಿಡ್ ನಿಯಂತ್ರಣದ ಕಾಳಜಿ ಮುಖ್ಯವಾಗಲೇ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಈಗಲಾದರೂ ಕೈಗಾರಿಕಾ ವಲಯದ ಆಮ್ಲಜನಕವನ್ನು ಪಡೆಯಬೇಕು. ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅದನ್ನು ವಶಪಡಿಸಿಕೊಳ್ಳಬೇಕು. ಕೈಗಾರಿಕಾ ಉದ್ದೇಶದ ಆಮ್ಲಜನಕ, ವೈದ್ಯಕೀಯ ಆಮ್ಲಜನಕ ವ್ಯತ್ಯಾಸವೇನಿಲ್ಲ. ಒಂದು ದೊಡ್ಡ ಗಾತ್ರದ ಸಿಲಿಂಡರ್‌ನಲ್ಲಿ ಇರುತ್ತದೆ, ಇನ್ನೊಂದು ಸಣ್ಣ ಸೈಜಿನ ಸಿಲಿಂಡರ್‌ನಲ್ಲಿ ಇರುತ್ತದೆ. ಈಗ ಹೇಗೂ ಬಹುಪಾಲು ಆಸ್ಪತ್ರೆಗಳಲ್ಲಿ ಎಲ್ಲ ವಾರ್ಡು, ರೂಮ್‌ಗಳಿಗೆ ಆಕ್ಸಿಜನ್ ಪೈಪಿಂಗ್ ಇದೆ. ಕೈಗಾರಿಕಾ ಸಿಲಿಂಡರ್‌ಗಳನ್ನು ಈ ಪೈಪಿಂಗ್‌ಗೆ ಜೋಡಿಸುವುದಷ್ಟೇ ಕೆಲಸ. ಆದರೆ ಸರ್ಕಾರ ಇನ್ನೂ ಮಾತುಕತೆಯ ಹಂತದಲ್ಲಿದೆ… ಎಷ್ಟೊಂದು ಜೀವಗಳು ಬಲಿಯಾಗಬೇಕು?’ ಎಂದು ಅವರು ಪ್ರಶ್ನೆ ಮಾಡುತ್ತಲೇ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಶಾಸಕರೊಬ್ಬರ ಸಲಹೆಯನ್ನೂ ಪರಿಗಣಿಸದ, ತಜ್ಞರ ಎಚ್ಚರಿಕೆಯನ್ನೂ ಗೌರವಿಸದ ಯಡಿಯೂರಪ್ಪ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳುವುದೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...