Homeಮುಖಪುಟಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?

ಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?

ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಗವರ್ನರ್‌‌ ಹುದ್ದೆ ಎಷ್ಟೇ ಸ್ವತಂತ್ರ ಎಂದು ಸಾರಿದರೂ ಈ ಹುದ್ದೆಯ ಮೇಲೆ ಕೇಂದ್ರ ಸರ್ಕಾರದ ಹಸ್ತಕ್ಷೇಪ ನಿಂತಿಲ್ಲ.

- Advertisement -
- Advertisement -

ಕೊರೊನಾ ಭೀಕರ ಅಲೆಯು ಇಂದು ಜನಜೀವನವನ್ನು ಜರ್ಜರಿತಗೊಳಿಸುತ್ತಿದೆ. ಈ ಪೆಟ್ಟು ತಿಂದ ಜನರು ಎತ್ತಲೂ ದಿಕ್ಕು ಕಾಣದೇ ಬರಿದಾದ ಬದುಕಿನಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂಕ್ರಾಂಮಿಕ ಪಿಡುಗಿನ ನಿರ್ವಹಣೆಯನ್ನು ಜವಬ್ದಾರಿಯುತ ಚುನಾಯಿತ ಸರ್ಕಾರವು ಜನರ ಒಳಿತಿಗಾಗಿ ಮತ್ತು ರೋಗ ನಿಯಂತ್ರಣಕ್ಕಾಗಿ ಆಯಾ ಸಂದರ್ಭಾನುಸಾರ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಆದ್ಯ ಕರ್ತವ್ಯ. ಆದರೆ, ಈ ಸರ್ಕಾರದ ಕರ್ತವ್ಯ ಮತ್ತು ನಡೆಯನ್ನು ಇಂದು ಎಲ್ಲೋ ಒಂದು ಕಡೆ ವೈಫಲ್ಯದತ್ತ ಹಾದಿ ತುಳಿದಿದೆಯೇನೋ ಎಂದು ಕಾಣುತ್ತಿದೆ. ಏಕೆಂದರೆ, ಒಂದು ಸ್ಥಿರ ಸರ್ಕಾರ ಅಸ್ವಿತ್ವದಲ್ಲಿವಿದ್ದಾಗ್ಯೂ ಕೋವಿಡ್-19 ರೋಗದ ಪರಿಸ್ಥಿತಿ ಪರಿಶೀಲಿಸಲು ರಾಜ್ಯಪಾಲರಾದ ವಜುಭಾಯಿ ವಾಲಾರವರು ಸರ್ವಪಕ್ಷ ಸಭೆ ನಡೆಸಿರುವುದು.

ಇದು ನಿಜಕ್ಕೂ ಸಂವಿಧಾನದ ಚೌಕಟ್ಟನ್ನು ಪರಿಶೀಲನೆ ಮಾತ್ರವಲ್ಲದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದ ಸರ್ಕಾರದ ಕಾರ್ಯವೈಖರಿಯಲ್ಲಿ ನಿಶ್ಯಕ್ತತತೆ ಕಾಣುತ್ತಿದೆಯೇ ಎಂಬುದನ್ನು ನೋಡಬೇಕಾಗಿದೆ.

ನಮ್ಮ ದೇಶದ ಮಟ್ಟಿಗೆ ಸ್ವಾತಂತ್ರ್ಯಪೂರ್ವದಲ್ಲಿ ವಸಾಹತುಶಾಹಿ ಆಡಳಿತವಿರುವಾಗ ಮೊದಲಿಗೆ ಕಂಪೆನಿ ರೂಲ್ (1773-1858) ರಲ್ಲಿ ಗವರ್ನರ್‌‌ ಆಫ್ ಬೆಂಗಾಲ್ ಎಂಬ ಹುದ್ದೆಯಯಿತ್ತು. ಆ ನಂತರದಲ್ಲಿ ಆ ಹುದ್ದೆಯ ಹೆಸರನ್ನು ಮಾರ್ಪಡಿಸಿ ಗವರ್ನರ್‌‌ ಜೆನರ್ ಆಫ್ ಬೆಂಗಾಲ್ ಎಂದು ನಾಮಕರಣ ಮಾಡಲಾಯಿತು. ಈ ಹುದ್ದೆಯ ಗವರ್ನರ್‌‌ ಜನರಲ್‍ರವರಿಗೆ ನಾಲ್ಕು ಜನ ಸಹಾಯಕರನ್ನು ಎಕ್ಸಿಕ್ಯೂಟಿವ್ ಕೌನ್ಸಿಲ್ ರಚಿಸಿ ನೇಮಕ ಮಾಡಲಾಯಿತು. ಈ ಹುದ್ದೆಗೆ ಪ್ರಥಮ ಗವರ್ನರ್‌‌ ಜನರಲ್ ಆಗಿ ಲಾರ್ಡ್ ವಾರೆನ್ ಹ್ಯಾಸ್ಟಿಂಗ್ಸ್‌ ನೇಮಕವಾದರು. ತದನಂತರ, 1833ರ ಚಾಟರ್ ಆಕ್ಟ್‌‌ನಲ್ಲಿ ಗವರ್ನರ್‌‌‌ ಜನರಲ್ ಆಫ್ ಬೆಂಗಾಲ್ ಎಂಬುದನ್ನು ಮಾರ್ಪಾಡಿಸಿ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ‘ಎರಡೇಟು ತಿನ್ನುತ್ತಿ’; ಆಕ್ಸಿಜನ್ ಸಿಲಿಂಡರ್‌ ಕೇಳಿದ ವ್ಯಕ್ತಿಗೆ ಬೆದರಿಸಿದ ಕೇಂದ್ರ ಸಚಿವ!

ಈ ಮೂಲಕ ಲಾರ್ಡ್ ವಿಲಿಯಂ ಬೆನೆಟಿಕ್‌ ಪ್ರಥಮ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಆಗಿ ನೇಮಕವಾದರು. ಮುಂದುವರೆದು ಬ್ರಿಟಿಷ್ ಆಳ್ವಿಕೆಯಲ್ಲಿ ಕ್ರೌನ್ ರೂಲ್ (1858-1947)ನ ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ – 1858 ನಲ್ಲಿ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಎಂಬ ಹುದ್ದೆಯ ಹೆಸರನ್ನು ವೈಸ್‍ರಾಯ್ ಆಫ್ ಇಂಡಿಯಾ ಎಂದು ಬದಲಾಯಿಸಿ ಲಾರ್ಡ್ ಕ್ಯಾನಿಂಗ್‌ರನ್ನು ಮೊದಲ ವೈಸ್‍ರಾಯ್ ಆಗಿ ನೇಮಕ ಮಾಡಲಾಯಿತು. ಈ ರೀತಿ ನಮ್ಮ ದೇಶದಲ್ಲಿ ಗವರ್ನರ್‌‌ ಅಂದರೆ ರಾಜ್ಯಪಾಲರ ಹುದ್ದೆಯೂ ಬ್ರಿಟಿಷ್ ಆಳ್ವಿಕೆಯ ಪಳೆಯುಳಿಕೆಯಾಗಿ ಬಂದಿದೆ.

ನಂತರ ಸ್ವಾತಂತ್ರ್ಯ ಪಡೆದ ನಮ್ಮ ದೇಶ, ದೇಶದ ಅಧಿಕಾರ ಮತ್ತು ಆಡಳಿತವು ಒಂದು ಸಂಘಟನಾತ್ಮಕವಾಗಿ ನಮ್ಮಗಳ ಕೈಗೆ ಸಿಕ್ಕಿ ಅದನ್ನು ಹೊತ್ತು ನಡೆಸಲು ಡಾ. ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಸಂವಿಧಾನದ ಭಾಗ-6 ರ ವಿಧಿ 152 ರಿಂದ 163 ರವರೆಗೆ ರಾಜ್ಯಪಾಲರ ನೇಮಕ, ಅಧಿಕಾರ ಮತ್ತು ಆಡಳಿತದ ಬಗ್ಗೆ ವಿವರಿಸಲಾಗಿದೆ. ಇತ್ತೀಚೆಗೆ ಅವರು ನಡೆಸಿದ ಸರ್ವಪಕ್ಷ ಸಭೆಯೂ ಸಂವಿಧಾನದ ಮೂಲ ತತ್ವ ಉಲ್ಲಂಘನೆಯಾಗಿದೆಯೇ ಎಂಬುದು ನೋಡಿದಾಗ, ಸಂವಿಧಾನ ವಿಧಿ – 154 ರಲ್ಲಿ ರಾಜ್ಯದ ಕಾರ್ಯಾಂಗ ಅಧಿಕಾರವು ರಾಜ್ಯಪಾಲರಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅವರು ಅದನ್ನು ನೇರವಾಗಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕ ಈ ಸಂವಿಧಾನಕ್ಕನುಸಾರವಾಗಿ ಚಲಾಯಿಸತಕ್ಕದ್ದು ಎಂದು ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಆಕ್ಸಿಜನ್‌ಗೆ ಹಾಹಾಕಾರ; ನೇಪಾಳಕ್ಕೆ ವೆಂಟಿಲೇಟರ್‌‌‌ ಹೊಂದಿರುವ 39 ಆಂಬುಲೆನ್ಸ್‌ ಗಿಫ್ಟ್‌‌‌!

ರಾಜ್ಯಪಾಲರ ಈ ಅಧಿಕಾರ ವ್ಯಾಪ್ತಿಯನ್ನು ದಿನಾಂಕ: 02/06/1949 ರಲ್ಲಿ ಸಂವಿಧಾನ ರಚನಾಸಭೆಯ ಚರ್ಚೆಯಲ್ಲಿ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್‌ರವರು ಸಭೆಯನ್ನು ಉದ್ದೇಶಿಸಿ “ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಕೆಲವು ಕರ್ತವ್ಯಗಳಿರುತ್ತವೆ. ಅವು ಸಚಿವ ಸಂಪುಟಕ್ಕೆ ಸಲಹೆ ನೀಡುವುದು, ಸಚಿವ ಸಂಪುಟವನ್ನು ಎಚ್ಚರಿಸುವುದು, ಸಚಿವ ಸಂಪುಟಕ್ಕೆ ಪರ್ಯಾಯ ಮಾರ್ಗಗಳ ಬಗೆಗೆ ಸಲಹೆ ನೀಡುವುದು ಹಾಗೂ ಅದನ್ನು ಸಚಿವ ಸಂಪುಟ ಮರುಪರಿಶೀಲಿಸಲು ಸೂಚಿಸುವುದು. ಈ ಸದನದಲ್ಲಿರುವ ಯಾರಾದರೂ ರಾಜ್ಯಪಾಲರ ಮೇಲೆ ಹೊರೆಸಿರುವ ಈ ಕರ್ತವ್ಯಗಳ ಬಗೆಗೆ ಪ್ರಶ್ನಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಇಲ್ಲದಿದ್ದರೆ ಅವರೊಬ್ಬ ಸಂಪೂರ್ಣವಾಗಿ ಅನಗತ್ಯ ಅಧಿಕಾರಿಯಾಗುತ್ತಾರೆ ಹಾಗಾಗುವುದು ಒಳ್ಳೆಯದಲ್ಲ. ಅವರು ಯಾವ ಪಕ್ಷದ ಪ್ರತಿನಿಧಿಯೂ ಅಲ್ಲ.

ಅವರು ಇಡೀ ರಾಜ್ಯದ ಜನತೆಯ ಪ್ರತಿನಿಧಿ. ಅವರು ಜನತೆಯ ಹೆಸರಿನಲ್ಲಿ ತಮ್ಮ ಆಡಳಿತವನ್ನು ನಡೆಸಿಕೊಂಡು ಹೋಗುವರು. ಅವರು ಆಡಳಿತವನ್ನು ನಡೆಸಿಕೊಂಡು ಹೋಗುತ್ತಿರುವುದು ಒಂದು ಹಂತದಲ್ಲಿ ಒಳ್ಳಯದೆಂದೂ, ಸಮರ್ಥನೀಯವೆಂದೂ, ಪ್ರಾಮಾಣಿಕವಾಗಿದೆಯೆಂದು ಪರಿಗಣಿಸಬಹುದು. ಆದುದರಿಂದ, ರಾಜ್ಯಪಾಲರು ಭ್ರಷ್ಟಚಾರವಿಲ್ಲದ, ನಿಷ್ಪಕ್ಷಪಾತವಾದ ಶುದ್ಧ ಆಡಳಿತವನ್ನು ನೀಡುವುದು ಹಾಗೂ ಸಚಿವ ಸಂಪುಟದಿಂದ ಪ್ರತಿಪಾದಿಸಲಾಗದ ಪ್ರಸ್ತಾವಗಳು ಜನತೆಯ ಇಚ್ಛೆಗೆ ವಿರುದ್ಧವಾಗಿರದಂತೆ ನೋಡಿಕೊಳ್ಳುವುದು ಅದಕ್ಕಾಗಿ ಸಚಿವರಿಗೆ ಸಲಹೆ ನೀಡಲು, ಅವರನ್ನು ಎಚ್ಚರಿಸಲು ಹಾಗೂ ಮರುಪರಿಶೀಲಿಸಲು ಹೇಳುವುದು ಅವರ ಕರ್ತವ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಇದು ಒಂದು ಕಡೆಯಾದರೆ, ಸಂವಿಧಾನ ವಿಧಿ-163 ಯು, “ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ: (1) ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲರು, ತನ್ನ ಎಲ್ಲ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರ ಚಲಾಯಿಸಲು ಅವರನ್ನು ಅಗತ್ಯಪಡಿಸಿರುವಷ್ಟರ ಮಟ್ಟಿಗೆ ಹೊರತು, ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವರಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು” ಎಂದು ಹೇಳಿದೆ.

ಅಂದರೆ, ನೆರವು ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು. ಆದರೆ, ಇಲ್ಲಿ ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲವಿದ್ದಾಗ್ಯೂ ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿರುವುದು ಸಂವಿಧಾನದ ತತ್ವ ಮತ್ತು ಒಕ್ಕೂಟ (ಫೆಡರಲ್) ವ್ಯವಸ್ಥೆಗೆ ಧಕ್ಕೆಯಾದಂತೆ ಯಾಕೆಂದರೆ, ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕವಾದವರು 1979 ರಲ್ಲಿ ಸುಪ್ರೀಂಕೋರ್ಟ್ ಗವರ್ನರ್‌ ಹುದ್ದೆಯೂ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಹುದ್ದೆಯಲ್ಲ ಅದು ಸಾಂವಿಧಾನಿಕ ಸ್ವಾತಂತ್ರ್ಯ ಹುದ್ದೆ ಎಂದು ಹೇಳಿದ್ದರೂ ಸಹ ಕೆಲವೊಮ್ಮೆ ಹಲವು ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್‍ರ ರೀತಿಯಲ್ಲಿ ವರ್ತಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾ – ಒಂದು ಧ್ವಂಸ ಕಾರ್ಯಾಚರಣೆಯಷ್ಟೇ!

ಉದಾಹರಣೆಗೆ ವಿ.ಪಿ. ಸಿಂಗ್ ನೇತೃತ್ವದ ನ್ಯಾಷನಲ್‌‌ ಫ್ರಂಟ್ ಗೌರ್ನಮೆಂಟ್ (1989) ರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಗವರ್ನರ್‌‌ಗಳು ರಾಜೀನಾಮೆ ನೀಡುವಂತೆ ಕೇಳಿತು. ಅದರಂತೆ ಕೆಲವರನ್ನು ಬದಲಿಸಿ ಉಳಿದವರನ್ನು ಮುಂದುವರೆಸಿಕೊಂಡು ಹೋಗಲಾಯಿತು. ನಂತರ 1991 ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಾಗ ವಿ.ಪಿ. ಸಿಂಗ್ ಸರ್ಕಾರದಲ್ಲಿ ನೇಮಕವಾಗಿದ್ದ 14 ಗವರ್ನರ್‌ಗಳನ್ನು ಬದಲಾಯಿಸಲಾಯಿತು. ಇತ್ತೀಚೆಗೆ ನಡೆದ ರಾಜ್ಯಪಾಲರ ಸರ್ವಪಕ್ಷ ಸಭೆಯ ವರ್ತನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮತ್ತು ಆಡಳಿತ ಪಕ್ಷದ ಕೆ.ಎಸ್. ಈಶ್ವರಪ್ಪ ಮತ್ತು ಹೆಚ್. ವಿಶ್ವನಾಥ್‌ರವರು ಖಂಡಿಸಿದ್ದಾರೆ.

ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಗವರ್ನರ್‌‌ ಹುದ್ದೆ ಎಷ್ಟೇ ಸ್ವತಂತ್ರ ಎಂದು ಸಾರಿದರೂ ಈ ಹುದ್ದೆಯ ಮೇಲೆ ಕೇಂದ್ರ ಸರ್ಕಾರದ ಹಸ್ತಕ್ಷೇಪ ನಿಂತಿಲ್ಲ. ಈಗಾಗಲೇ, ಯಡಿಯೂರಪ್ಪರವರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿಯೊಳಗಿನ ಹೈಕಮಾಂಡ್ ತುದಿಗಾಲಲ್ಲಿ ನಿಂತಿರುವುದು, ಬಸವನಗೌಡ ಪಾಟೀಲ್ ಯತ್ನಾಳ್‍‌ ಯಡಿಯೂರಪ್ಪರವರ ಮೇಲೆ ನೇರ ಆರೋಪ ಮತ್ತು ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಇದು ಪಕ್ಷದೊಳಗೆ ಆಂತರಿಕವಾಗಿ ನಡೆಯುತ್ತಿರುವುದು ಮುಚ್ಚಿಟ್ಟ ಸತ್ಯವಾಗಿ ಉಳಿದಿಲ್ಲ. ಇಂದು ರಾಜ್ಯಪಾಲರ ಅಧಿಕಾರ ಹಸ್ತಕ್ಷೇಪ ಮತ್ತು ಮುಖ್ಯಮಂತ್ರಿ ಅವರ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯ ಅಥವಾ ನಿಶ್ಯಕ್ತತೆಯನ್ನು ಎತ್ತಿ ತೋರಿಸಿದೆ.

ಈಗಾಗಲೇ, ಕೊರೊನಾದಿಂದ ಜನಜೀವನಕ್ಕೆ ಪೆಟ್ಟು ಬಿದ್ದಿದೆ. ಈ ಅಲೆಯಲ್ಲಿ ರಾಜ್ಯಪಾಲರ ಈ ನಡೆಯೂ ಸಂವಿಧಾನದ ಮೂಲತತ್ವ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದೆ ಅದು ಹೆಚ್ಚು ಗಾಯವಾಗದಂತೆ ನೋಡಿಕೊಂಡು ನಮ್ಮ ಸಂವಿಧಾನ ಉಳಿಸುವ ನಿಟ್ಟಿನತ್ತ ಸರ್ಕಾರ ಸಾಗಬೇಕಾಗಿದೆ.

(ಅಭಿಪ್ರಾಯಗಳು ಲೇಖಕರ ವೈಯಕ್ತಿಕವಾದವು)

ಇದನ್ನೂ ಓದಿ: ಆಕ್ಸಿಜನ್, ಐಸಿಯು ಕೊರತೆಯಿಂದ ಉಂಟಾಗುವ ಸಾವುಗಳಿಗೆ ಕೇಂದ್ರವೇ ಹೊಣೆ- ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...