Homeಮುಖಪುಟಮದರ್ ತೆರೇಸಾ ಅವರ ಚಾರಿಟಿಯ ‘ವಿದೇಶಿ ನಿಧಿಗಳ ಪರವಾನಗಿ’ ಪುನಃಸ್ಥಾಪನೆ

ಮದರ್ ತೆರೇಸಾ ಅವರ ಚಾರಿಟಿಯ ‘ವಿದೇಶಿ ನಿಧಿಗಳ ಪರವಾನಗಿ’ ಪುನಃಸ್ಥಾಪನೆ

ಒಕ್ಕೂಟ ಸರ್ಕಾರ ಪರವಾನಗಿ ಸ್ಥಗಿತ ಮಾಡಿದ್ದರಿಂದ ಸಂಸ್ಥೆಯ ಸುಮಾರು 250 ಖಾತೆಗಳಿಗೆ ವಿದೇಶದಿಂದ ಧನ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ

- Advertisement -
- Advertisement -

ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗೆ ವಿದೇಶದಿಂದ ನಿಧಿಯನ್ನು ಪಡೆಯಲು ಅಗತ್ಯವಿದ್ದ ಪರವಾನಗಿ (FCRA)ಯನ್ನು ಶನಿವಾರ ಪುನಃಸ್ಥಾಪಿಸಲಾಗಿದೆ. ಕಳೆದ ಎರಡು ವಾರಗಳಿಂದ ‘ಪ್ರತಿಕೂಲ ವಿಷಯ’ಗಳನ್ನು ಉಲ್ಲೇಖಿಸಿ ಒಕ್ಕೂಟ ಸರ್ಕಾರವು ಸಂಸ್ಥೆಯ ನವೀಕರಣದ ವಿನಂತಿಯನ್ನು ನಿರಾಕರಿಸಿತ್ತು.

ಪರವಾನಗಿ ಇಲ್ಲದೆ ಇರುವುದರಿಂದಾಗಿ ಸಂಸ್ಥೆಯ ಸುಮಾರು 250 ಖಾತೆಗಳಿಗೆ ವಿದೇಶದಿಂದ ಧನ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಒಕ್ಕೂಟ ಸರ್ಕಾರವು ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಸುದ್ದಿ ಸಂಸ್ಥೆ ANI, ‘ಸಂಬಂಧಿತ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಪರವಾನಗಿಯನ್ನು ಮರುಸ್ಥಾಪಿಸಲಾಗಿದೆ’ ಎಂದು ವರದಿ ಮಾಡಿದೆ.

ಇದನ್ನೂ ಓದಿ:ಮದರ್‌ ತೆರೇಸಾರ ಮಿಷನರೀಸ್‌ ಬ್ಯಾಂಕ್‌ ಖಾತೆಗಳ ಸ್ಥಗಿತ: ಮಮತಾ ಬ್ಯಾನರ್ಜಿ ಆರೋಪ

FCRA ಪರವಾನಗಿಯನ್ನು ಮತ್ತೇ ಪುನಃಸ್ಥಾಪಿಸಿದ ನಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಸಂಸದ ಡೆರೆಕ್ ಒ’ಬ್ರೇನ್, “56 ಇಂಚಿನ ಶಕ್ತಿಗಿಂತ ಪ್ರೀತಿಯ ಶಕ್ತಿ ಪ್ರಬಲವಾಗಿದೆ” ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

“ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗಾಗಿ FCRA ನೋಂದಣಿ ಮತ್ತೆ ಮಾಡಲಾಗಿದೆ. ‘ಪ್ರತಿಕೂಲ ವಿಷಯ’ಗಳು ಹಲವರಿಗೆ ಕಿರುಕುಳ ನೀಡಿತು, ಆದರೆ ಅದು ಎರಡು ವಾರಗಳಲ್ಲಿ ಕಣ್ಮರೆಯಾಯಿತು. ಪ್ರೀತಿಯ ಶಕ್ತಿಯು 56 ಇಂಚಿನ ಶಕ್ತಿಗಿಂತ ಪ್ರಬಲವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿ, “ಮಿಷನರೀಸ್ ಆಫ್ ಚಾರಿಟಿಗೆ ಎಫ್‌ಸಿಆರ್‌ಎ ಮತ್ತೆ ಅನುಮೋದನೆ ನೀಡಿದೆ. ಸಾರ್ವಜನಿಕ ಅಭಿಪ್ರಾಯ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆಯಿಂದಾಗಿ ಇದು ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.

ಚಾರಿಟಿಯ FCRA ಪರವಾನಗಿ ವಿವಾದ ಬ್ರಿಟನ್ ಸಂಸತ್ತಿನಲ್ಲೂ ಗುರುವಾರ ಸದ್ದು ಮಾಡಿತ್ತು. “ಚಾರಿಟಿಯ ಖಾತೆಗಳಿಗೆ FCRA ಯಾಕೆ ನಿರಾಕರಿಸಲಾಗಿದೆ, ಇದರ ಬಗ್ಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕುವಂತೆ ಭಾರತ ಸರ್ಕಾರವನ್ನು ಕೇಳಬೇಕು” ಎಂದು ಅಲ್ಲಿನ ಸಂಸದರು ತಮ್ಮ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಇದನ್ನೂ ಓದಿ:ಜಾಮಿಯಾ ಮಿಲ್ಲಿಯಾ ಸೇರಿದಂತೆ ವಿದೇಶಿ ಫಂಡಿಂಗ್ ಪರವಾನಗಿ ಕಳೆದುಕೊಂಡ 12,000 ಎನ್‌ಜಿಒಗಳು!

ಮಿಷನರೀಸ್ ಆಫ್ ಚಾರಿಟಿಯ ಎಫ್‌ಸಿಆರ್‌ಎ ಪರವಾನಗಿಯನ್ನು ಕ್ರಿಸ್‌ಮಸ್ ದಿನದಂದು ಹಿಂತೆಗೆದುಕೊಳ್ಳಲಾಗಿತ್ತು. ಇದನ್ನು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ವ್ಯಾಪಕವಾಗಿ ಖಂಡಿಸಿದ್ದರು.

ತನ್ನ ನಿರ್ಧಾರವನ್ನು ಪರಿಶೀಲಿಸುವ ಮನವಿಯನ್ನು ಸ್ವೀಕರಿಸಿಲ್ಲ ಎಂದು ಗೃಹ ಸಚಿವಾಲಯ ಹೇಳಿತ್ತು. ಆದರೆ ಸಚಿವಾಲಯವು ಇದಕ್ಕೆ ವಿವರಗಳನ್ನು ನೀಡಿರಲಿಲ್ಲ. ಮಿಷನರೀಸ್‌‌ ಆಫ್‌ ಚಾರಿಟಿ ಯುವತಿಯರನ್ನು ಮತಾಂತರಿಸಲು ಯತ್ನಿಸಿಸುತ್ತಿದೆ ಎಂದು ಗುಜರಾತ್‌ನಲ್ಲಿ ದೂರು ದಾಖಲಾದ ವಾರಗಳ ನಂತರ ಚಾರಿಟಿಯ ಖಾತೆಗಳು ಸ್ಥಗಿತಗೊಂಡಿದ್ದವು.

ಕಳೆದ ವಾರ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ಭಾರತದಲ್ಲಿನ 12,000 ಕ್ಕೂ ಹೆಚ್ಚು ಎನ್‌ಜಿಒಗಳು ಮತ್ತು ಚಾರಿಟಬಲ್ ಸಂಸ್ಥೆಗಳು ಅವಧಿ ಮುಗಿದ ನಂತರ ತಮ್ಮ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಳೆದುಕೊಂಡಿವೆ ಎಂದು ಒಕ್ಕೂಟ ಸರ್ಕಾರ ಹೇಳಿದೆ. ಎಫ್‌ಸಿಆರ್‌ಎ ಪರವಾನಗಿ ಇಲ್ಲದ ಸಂಸ್ಥೆಗಳ ಪಟ್ಟಿಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಆಕ್ಸ್‌ಫ್ಯಾಮ್ ಇಂಡಿಯಾ, ಭಾರತೀಯ ವೈದ್ಯಕೀಯ ಸಂಘ ಮತ್ತು ಕುಷ್ಠರೋಗ ಮಿಷನ್ ಸೇರಿದೆ.

ಇದನ್ನೂ ಓದಿ:ವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆಮದರ್‌ ಥೆರೇಸಾ ಮದರ್‌ ಥರೇಸಾ ಮದರ್‌ ಥೆರೇಸಾ ಮದರ್‌ ಥರೆಸಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...