Homeಮುಖಪುಟಮುಂಬೈ: ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಮಹಿಳೆಯನ್ನು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅರೆಸ್ಟ್

ಮುಂಬೈ: ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಮಹಿಳೆಯನ್ನು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅರೆಸ್ಟ್

- Advertisement -
- Advertisement -

ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ನಂತರ ಅದೇ ಆಯುಧದಿಂದ ತನ್ನನ್ನು ತಾನು ಗಾಯಗೊಳಿಸಿಕೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ಮುಂಬೈನ ಸಕಿನಾಕಾ ಪ್ರದೇಶದಲ್ಲಿ ನಡೆದಿದೆ.

ಸಂಘರ್ಷ ನಗರದ ಚಂಡಿವಾಲಿ ನಿವಾಸಿ ಪಂಚಶೀಲಾ ಅಶೋಕ್ ಜಾಮ್ದಾರ್ (30 ವರ್ಷ) ಕೊಲೆಯಾದ ಮಹಿಳೆ  ಎಂದು ತಿಳಿದುಬಂದಿದ್ದು, ಆರೋಪಿಯನ್ನು ದೀಪಕ್ ಬೋರ್ಸೆ ಎಂದು ಗುರುತಿಸಲಾಗಿದೆ.

ಖೈರಾನಿ ರಸ್ತೆಯ ದತ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಸಕಿನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ”ದೀಪಕ್ ಬೋರ್ಸೆ ಅವರು ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ನುಗ್ಗಿ ಪಂಚಶಿಲಾ ಜಾಮದಾರ್ ಅವರ ಕತ್ತು ಸೀಳಿದರು. ಅವರು ತಪ್ಪಿಸಿಕೊಳ್ಳಲು ವಾಹನದಿಂದ ಇಳಿದರು ಆದರೆ ಸ್ವಲ್ಪ ದೂರದಲ್ಲಿ ಕೆಳಗೆ ಬಿದ್ದರು. ಬೋರ್ಸ್ ಅದೇ ಹರಿತವಾದ ಆಯುಧದಿಂದ ಅವನ ಕುತ್ತಿಗೆಯನ್ನು ಕೂಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದನು” ಎಂದು ಅವರು ಹೇಳಿದರು..

”ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕಾಗಮಿಸಿ, ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆರೋಪಿ ಚೇತರಿಸಿಕೊಳ್ಳುತ್ತಿದ್ದಾನೆ” ಎಂದು ಅವರು ಹೇಳಿದರು.

ಮಹಿಳೆ ಮತ್ತು ಆರೋಪಿಗಳು ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ತ್ರಿಚಕ್ರ ವಾಹನದಲ್ಲಿ ಇಬ್ಬರ ನಡುವೆ ಉಂಟಾದ ಜಗಳದಿಂದ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಸಕಿನಾಕಾ ಪೊಲೀಸರು ದೀಪಕ್ ಬೋರ್ಸೆ ವಿರುದ್ಧ ಕೊಲೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಮುಂಬೈ: ಜೊತೆಗಾತಿಯನ್ನು ಕೊಂದು, ಮೃತದೇಹವನ್ನು ತುಂಡರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ವ್ಯಕ್ತಿ ಅರೆಸ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...