Homeಮುಖಪುಟನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ, ಈ ಕಾರ್ಯಕ್ರಮವನ್ನು ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ (AHEAD) ಎಂಬ ಹೊಸ ಹಾಗೂ ಹೆಚ್ಚು ಪರಿಚಿತವಲ್ಲದ ಸಂಸ್ಥೆಯು ಆಯೋಜಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ತನ್ನ ವೆಬ್‌ಸೈಟ್‌ನಲ್ಲಿ ಎಎಚ್‌ಇಎಡಿ (AHEAD) ಸಂಸ್ಥೆಯು ತಾನೊಂದು ಲಾಭರಹಿತ, ಪಕ್ಷಪಾತವಿಲ್ಲದ ಧೋರಣೆ ಹೊಂದಿರುವ ಹಾಗೂ ಸರ್ವಸಮ್ಮತ ಭವಿಷ್ಯ ರೂಪಿಸುವ ಉದ್ದೇಶದೊಂದಿಗೆ ಧಾರ್ಮಿಕ ಸೌಹಾರ್ದತೆಯ ಸಂವಾದಗಳನ್ನು ನಡೆಸುವುದು ತನ್ನ ಮುಖ್ಯ ಗುರಿ ಎಂದು ಬರೆದುಕೊಂಡಿದೆ.

ಈ ವೆಬ್‌ಸೈಟ್‌ನಲ್ಲಿ RSS ಹೆಸರು ಅಥವಾ ಈ ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆಯೊಂದಿಗಿನ ಯಾವುದೇ ನೇರ ಸಂಪರ್ಕವನ್ನು ಎಲ್ಲೂ ಉಲ್ಲೇಖಿಸಿಲ್ಲ. ಆದರೆ, ಈ ಎಎಚ್‌ಇಎಡಿ ಸಂಸ್ಥೆಯ ಮೂಲ ಸಂಸ್ಥಾಪಕರನ್ನು ಪರಿಶೀಲಿಸಿದಾಗ, ಇದು RSSನೊಂದಿಗೆ ಮೊದಲಿನಿಂದಲೂ ನಂಟು ಹೊಂದಿರುವುದು ಎದ್ದು ಕಾಣುತ್ತದೆ. ಆರ್‌ಎಸ್‌ಎಸ್ ಕೇವಲ ಭಾರತದಲ್ಲಿ (ಭಾರತ) ಮಾತ್ರ ಕೆಲಸ ಮಾಡುತ್ತದೆ ಮತ್ತು ಸಂಘವು ವಿದೇಶಿ ಸಂಸ್ಥೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಪದೇ ಪದೇ ಪ್ರತಿಪಾದಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಅಂಶವು ಮಹತ್ವದ ಸತ್ಯವನ್ನು ಬಯಲಿಗೆಳೆದಿದೆ.

ಎಎಚ್‌ಇಎಡಿ ಸಂಸ್ಥೆಯು ಮೇ 2025 ರಲ್ಲಿ ನೋಂದಣಿಯಾಗಿದ್ದು, ಸೆಪ್ಟೆಂಬರ್ ವೇಳೆಗೆ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ‘ದಿ ಕ್ವಿಂಟ್’ ಪಡೆದುಕೊಂಡ ಇದರ ನೋಂದಣಿ ದಾಖಲೆಗಳ ಪ್ರಕಾರ, ಖಂಡೇರಾವ್ ಕಂದ್ ಎಂಬ ವ್ಯಕ್ತಿ ಈ ಸಂಸ್ಥೆಯ ಪ್ರಮುಖ ಸಂಘಟಕರಾಗಿದ್ದಾರೆ.

ಕಂದ್ ಅವರು ‘ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡೈಸ್ಪೋರಾ ಸ್ಟಡೀಸ್’ (FIIDS) ಎಂಬ ಮತ್ತೊಂದು ಲಾಭರಹಿತ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದು, ಈ ಸಂಸ್ಥೆಯು ಯುಎಸ್ ಕ್ಯಾಪಿಟಲ್‌ನಲ್ಲಿ ಇತ್ತೀಚೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಒಳಗೊಂಡಂತೆ ಭಾರತ-ಅಮೆರಿಕ ಸಂಬಂಧ ಬಲಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ.

ಈ ಸಂಸ್ಥೆಯು ಕಳೆದ ವರ್ಷ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ವಾಷಿಂಗ್ಟನ್ ಪೋಸ್ಟ್ ಅಂಕಣಕಾರರೊಬ್ಬರ ಪ್ರವಾಸಕ್ಕೆ ಸಹ-ಪ್ರಾಯೋಜಕತ್ವ ನೀಡಿತ್ತು. ತಮ್ಮ ಜೀವನದ ಬಹುಪಾಲು ಸಮಯ ಆರ್‌ಎಸ್‌ಎಸ್ ಜೊತೆ ನಿಕಟ ಸಂಬಂಧ ಹೊಂದಿದ್ದ ಕಂದ್, 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಆಯೋಜನೆಯಲ್ಲೂ ಭಾಗಿಯಾಗಿದ್ದರು.

ಆರ್‌ಎಸ್‌ಎಸ್‌ನಲ್ಲಿದ್ದ ಜೊತೆಗೆ ಕಂದ್ ಅವರು ಹಿಂದೂ ಸ್ವಯಂಸೇವಕ ಸಂಘದ (HSS) ಅಧಿಕಾರಿಯೂ ಆಗಿದ್ದರು. ಈ ಎಚ್‌ಎಸ್‌ಎಸ್ ಅನ್ನು ಆರ್‌ಎಸ್‌ಎಸ್‌ನ ಅಂತಾರಾಷ್ಟ್ರೀಯ ಘಟಕ ಎಂದೇ ವ್ಯಾಪಕವಾಗಿ ಗುರುತಿಸಲಾಗುತ್ತದೆ. ಆದರೆ ಇದು ಸ್ವತಂತ್ರ ಸ್ವಯಂಸೇವಕ ಗುಂಪು ಎಂದು ಎಚ್‌ಎಸ್‌ಎಸ್ ಪ್ರತಿಪಾದಿಸುತ್ತದೆ. ಇನ್ನು ಎಚ್‌ಎಸ್‌ಎಸ್ ಹಿಂದೆ ಹಲವು ಕಾರ್ಯಕ್ರಮಗಳಿಗೆ ಭಾಗವತ್ ಅವರನ್ನು ಆಹ್ವಾನಿಸಿ ಆಯೋಜಿಸಿತ್ತು. ಹಳೆಯ ವರದಿಗಳ ಪ್ರಕಾರ, ಕಂದ್ ಅವರು ಭಾರತದ ಚುನಾವಣೆಗಳ ಸಂದರ್ಭದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ತಂತ್ರ ರೂಪಿಸುವ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಸೆಪ್ಟೆಂಬರ್ 2024 ರಲ್ಲಿ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದ ಕಂದ್, ಹಲವು ಬಿಜೆಪಿ ನಾಯಕರೊಂದಿಗಿನ ತಮ್ಮ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ನೋಂದಣಿ ದಾಖಲೆಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಕಂದ್ ಅವರು ಎಎಚ್‌ಇಎಡಿ ಸಂಸ್ಥೆಯ ಪ್ರಮುಖ ಸಂಘಟಕ ಹುದ್ದೆಯಿಂದನ್ನ ತೊರೆದಿದ್ದು, ಹರೀಶ್ ಕಂದ್‌ಪಾಲ್ ಎಂಬುವವರು ಆ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಆದರೆ ಕಂದ್‌ಪಾಲ್ ಕೂಡ ಎಫ್‌ಐಐಡಿಎಸ್ (FIIDS) ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ.

ತೆರಿಗೆ ಸಲ್ಲಿಕೆಯ ದಾಖಲೆಗಳ ಪ್ರಕಾರ, ಎಎಚ್‌ಇಎಡಿ ಸಂಸ್ಥೆಯು ಸುದೇಶ್ ಅಗರ್ವಾಲ್, ನರೇಶ್ ರಾಜಣ್ಣ ಮತ್ತು ರಸಿತಾ ವಿಷ್ಣುರಾಮ್ ಎಂಬ ಮೂವರು ನಿರ್ದೇಶಕರನ್ನು ಹೊಂದಿದೆ. ವಿಷ್ಣುರಾಮ್ ಅವರು ಬಿಜೆಪಿ ಪದಾಧಿಕಾರಿ ಹಿತೇಶ್ ಜೈನ್ ನೇತೃತ್ವದ, ಮೋದಿ ಪರ ಡಿಜಿಟಲ್ ಕಮ್ಯುನಿಕೇಷನ್ಸ್ ಪ್ಲಾಟ್‌ಫಾರ್ಮ್ ಆದ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್‌ನ ‘ವಿಕಸಿತ ಭಾರತ ಫೆಲೋಶಿಪ್’ನ ಹಿರಿಯ ಫೆಲೋ ಆಗಿದ್ದಾರೆ. ಈ ಫೆಲೋಶಿಪ್ ಅನ್ನು 2024 ರಲ್ಲಿ ಮೋದಿಯವರ ಹುಟ್ಟುಹಬ್ಬದಂದು ದೇಶ-ವಿದೇಶಗಳ ತಜ್ಞರು ಭಾರತದ ಕುರಿತು ಸಕಾರಾತ್ಮಕ ನಿರೂಪಣೆ ನಿರ್ಮಿಸಲು ಕೊಡುಗೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು. ಈ ಎಲ್ಲಾ ವಿಷಯಗಳ ಕುರಿತು ಪ್ರತಿಕ್ರಿಯೆ ಕೋರಿ ‘ದಿ ಕ್ವಿಂಟ್’ ಸಂಸ್ಥೆಯು ಕಂದ್, ಎಫ್‌ಐಐಡಿಎಸ್, ಕಂದ್‌ಪಾಲ್ ಮತ್ತು ಎಎಚ್‌ಇಎಡಿ ಅವರನ್ನು ಸಂಪರ್ಕಿಸಿದ್ದು, ಅವರಿಂದ ಪ್ರತಿಕ್ರಿಯೆ ಬಂದ ತಕ್ಷಣ ವರದಿಯನ್ನು ನವೀಕರಿಸಲಾಗುವುದು ಎಂದು ತಿಳಿಸಿದೆ.

ಆರ್‌ಎಸ್‌ಎಸ್ ಸಂಸ್ಥೆಯು ಅಮೆರಿಕದ ಕಾಂಗ್ರೆಸ್‌ನಲ್ಲಿ ತನ್ನ ಪರವಾಗಿ ಲಾಬಿ ಮಾಡಲು ವಾಷಿಂಗ್ಟನ್ ಡಿಸಿಯ ಪ್ರಮುಖ ಲಾಬಿಯಿಂಗ್ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ ಎಂದು ‘ಪ್ರಿಸಮ್’ ನಡೆಸಿದ ತನಿಖೆಯಲ್ಲಿ ಬಹಿರಂಗವಾದ ಕೆಲವೇ ತಿಂಗಳುಗಳಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಈ ವಿಚಾರ ಬಹಿರಂಗಗೊಂಡ ನಂತರವೂ ಆರ್‌ಎಸ್‌ಎಸ್‌ನ ಸುನಿಲ್ ಅಂಬೇಕರ್ ಅವರು ತಾವು ಯಾವುದೇ ಲಾಬಿಯಿಂಗ್ ಸಂಸ್ಥೆಯನ್ನು ನೇಮಿಸಿಕೊಂಡಿಲ್ಲ ಮತ್ತು ತಾವು “ಭಾರತದಲ್ಲಿ ಮಾತ್ರ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದರು.

ಆದರೆ, ಮೋದಿ ಮತ್ತು ಭಾಗವತ್ ಅವರ ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಆರ್‌ಎಸ್‌ಎಸ್‌ನ ಅಸ್ತಿತ್ವವನ್ನು ಹಾಗೂ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅದರ ಪ್ರಭಾವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿರಂತರವಾಗಿ ಜಾಗತಿಕ ಪ್ರವಾಸಗಳನ್ನು ಮಾಡುತ್ತವೆ ಎಂಬುದು ನಮಗೆ ತಿಳಿದಿದೆ. ಪ್ರಜಾಪ್ರಭುತ್ವವಾದಿ ಭಾರತೀಯರು ಮತ್ತು ಹಿಂದುತ್ವ ಪರ ಭಾರತೀಯರ ನಡುವಿನ ಸದ್ಧಾಂತಿಕ ಸಮರಕ್ಕೆ ಭಾರತಕ್ಕಿಂತಲೂ ಅನಿವಾಸಿ ಭಾರತೀಯರೇ (ಡೈಸ್ಪೋರಾ) ಪ್ರಮುಖ ರಂಗವಾಗಿದ್ದಾರೆ ಎಂದು ಯುಎಸ್ ಮೂಲದ ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸುನಿತಾ ವಿಶ್ವನಾಥ್ ಹೇಳಿದ್ದಾರೆ.

ಇನ್ನು ಕೆಲವರು ಈ ಕಾರ್ಯಕ್ರಮ ಮತ್ತು ಅದರ ಸಂಘಟಕರ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. “ಆರ್‌ಎಸ್‌ಎಸ್ ‘ಯೂನಿವರ್ಸಲ್ ಒನ್‌ನೆಸ್’ (ಸರ್ವವ್ಯಾಪಿ ಏಕತೆ) ಹೆಸರಿನಲ್ಲಿ ತನ್ನ ಇಮೇಜ್ ಸರಿಪಡಿಸಿಕೊಳ್ಳಲು ಇಂತಹ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದರೆ, ಇತ್ತ ಅಲ್ಪಸಂಖ್ಯಾತರು ತಮ್ಮ ಜೀವ ತೆತ್ತು ಬೆಲೆ ತೆರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ಆಕ್ಷೇಪಾರ್ಹವಾಗಿದೆ ಎಂದು ‘ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ ಮಂಡಳಿಯ ಸದಸ್ಯೆ ಸಫಾ ಅಹಮದ್ ಹೇಳಿದ್ದಾರೆ.

ಹಿಂದುತ್ವ ರಾಷ್ಟ್ರೀಯತೆಯ ಬೆಳವಣಿಗೆಯನ್ನು ಎದುರಿಸಲು ಯತ್ನಿಸುತ್ತಿರುವ ಒಕ್ಕೂಟವಾದ ‘ಸವೇರಾ’ದ ಭಾಗವಾಗಿ ಈ ಕೌನ್ಸಿಲ್ ಕೆಲಸ ಮಾಡುತ್ತಿದೆ. ಎಎಚ್‌ಇಎಡಿ ಸಂಸ್ಥೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ಮತ್ತೊಂದು ಮುಖವಾಡದ ಸಂಸ್ಥೆಯಾಗಿದೆ ಎಂದು ಸವೇರಾ ಬಿಡುಗಡೆ ಮಾಡಿದ ವರದಿ ಸೂಚಿಸಿದೆ. “ಆರ್‌ಎಸ್‌ಎಸ್ ಕೇವಲ ಭಾರತದಲ್ಲಷ್ಟೇ ಕೆಲಸ ಮಾಡುತ್ತದೆ ಎಂದಾದಲ್ಲಿ ಮೋದಿ ಮತ್ತು ಮೋಹನ್ ಭಾಗವತ್ ಇಲ್ಲಿಗೆ ಏಕೆ ಬಂದಿದ್ದಾರೆ? ಅವರ ಸಂಘಟನೆಯು ಮೊದಲು ಅಮೆರಿಕನ್ ಕಾಂಗ್ರೆಸ್‌ನಲ್ಲಿ ರಹಸ್ಯವಾಗಿ ಲಾಬಿ ಮಾಡಲು ಯತ್ನಿಸಿತು, ಮತ್ತು ಈಗ ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಸೂಚಿಯನ್ನು ಜಾರಿಗೆ ತರಲು ಶೆಲ್ ಸಂಸ್ಥೆಗಳ ಮೂಲಕ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅಹಮದ್ ಆರೋಪಿಸಿದ್ದಾರೆ.

ಕಾರ್ಯಕ್ರಮ ನಡೆಯುವ ಕೆಲವೇ ದಿನಗಳ ಹಿಂದೆ ನ್ಯೂಯಾರ್ಕ್ ನಗರದ ಮೇಯರ್ ಝೋಹ್ರಾನ್ ಮಮ್ದಾನಿ ಅವರು ತಾವು ಈ ಕಾರ್ಯಕ್ರಮವನ್ನು ಬೆಂಬಲಿಸುವುದಿಲ್ಲ, ಆದರೆ ಅದನ್ನು ತಡೆಯುವುದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು. ಬಹಿಷ್ಕಾರ ಮತ್ತು ವಿಭಜಕ ದೃಷ್ಟಿಕೋನವನ್ನು ಹೊಂದಿರುವ ಚಳವಳಿಯ ಬೆಳವಣಿಗೆಯನ್ನು ನೋಡುವುದು ತೀವ್ರ ಕಳವಳಕಾರಿ ಎಂದು ಮಮ್ದಾನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಮರುದಿನವೇ ಎಕ್ಸ್ (ಟ್ವಿಟರ್) ಸಂಸ್ಥೆಯು ಎಎಚ್‌ಇಎಡಿ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಖಾತೆ ಮರುಸ್ಥಾಪನೆಯಾದ ನಂತರ ಎಎಚ್‌ಇಎಡಿ ಸಂಸ್ಥೆಯು, ನಮ್ಮ ವಿರೋಧಿಗಳು ಎಕ್ಸ್ ಅಲ್ಗಾರಿದಮ್ ದುರ್ಬಳಕೆ ಮಾಡಿಕೊಂಡು ನಮ್ಮ ಖಾತೆಯನ್ನು ಬ್ಲಾಕ್ ಮಾಡಲು ಯತ್ನಿಸಿದ್ದರು ಎಂದು ಪೋಸ್ಟ್ ಮಾಡಿತ್ತು.

ಮತ್ತೊಂದೆಡೆ, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೆರಿಕದ ಆಯೋಗವು (USCIRF) ಕೂಡ ಈ ಕಾರ್ಯಕ್ರಮದ ಕುರಿತು ಕಳವಳ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಬಿಜೆಪಿ ಸರ್ಕಾರವು ಆರ್‌ಎಸ್‌ಎಸ್‌ನ ಹಿಂದುತ್ವ ಸಿದ್ಧಾಂತಕ್ಕೆ ಪೂರಕವಾದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ತಾರತಮ್ಯ ಮಾಡುವ ನೀತಿಗಳನ್ನು ಜಾರಿಗೆ ತಂದಿದೆ ಎಂದು ಅದು ಹೇಳಿದೆ.

ಯುಎಸ್‌ಸಿಐಆರ್‌ಎಫ್ ಎಂಬುದು ವಿಶ್ವದಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಮತ್ತು ಶಿಫಾರಸುಗಳನ್ನು ಮಾಡುವ ಯುಎಸ್ ಕಾಂಗ್ರೇಸ್‌ನ ಸ್ವತಂತ್ರ, ದ್ವಿಪಕ್ಷೀಯ ಸರ್ಕಾರಿ ಸಂಸ್ಥೆಯಾಗಿದೆ. ಸರ್ಕಾರವು ತನ್ನ ಗಡಿಗಳನ್ನು ಮೀರಿಯೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಮನಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ, ಉತ್ತರ ಅಮೆರಿಕದಲ್ಲಿ ಸಿಖ್ ಸಮುದಾಯದ ಸದಸ್ಯರ ಮೇಲಿನ ಹತ್ಯೆ ಮತ್ತು ಹತ್ಯೆಯ ಯತ್ನಗಳು ಇದಕ್ಕೆ ಉದಾಹರಣೆ ಎಂದು ಆಯೋಗವು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Sourec: The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಆದೇಶ ಹೊರಡಿಸಿದ ವಿಎಚ್‌ಪಿ; ಬಲಪಂಥೀಯ ಸಂಘನೆಯ ಅಧಿಕಾರ ಪ್ರಶ್ನಿಸಿದ ವಿಪಕ್ಷಗಳು

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು...

ಮೋಹನ್ ಭಾಗವತ್ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ವಿರೋಧ : ಅಮೆರಿಕದ 61 ಸಂಘಟನೆಗಳಿಂದ ಪ್ರತಿಭಟನೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿರುವ, ಶನಿವಾರ (ಆ.29) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು...

ಶಿವಮೊಗ್ಗ| ಈದ್-ಎ-ಮಿಲಾದ್ ರ್‍ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ: ಮೂವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು,...

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ FIR: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ವಿದ್ಯಾರ್ಥಿ...

ಈದ್ ಮಿಲಾದ್ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನ; ಭಜರಂಗದಳ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಈದ್-ಎ-ಮಿಲಾದ್ ಪೋಸ್ಟರ್‌ಗಳ ವಿಚಾರವಾಗಿ ಗುಂಪುಗಳ ನಡುವೆ ಶತ್ರುತ್ವ ಸೃಷ್ಟಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಕಲಬುರಗಿಯಲ್ಲಿ ಭಜರಂಗದಳದ ಕಾರ್ಯಕರ್ತನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಯ ಭಾಗವಾಗಿ...

ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ: ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ವಾಷಿಂಗ್ಟನ್/ಕಾರಕಾಸ್: ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ದೇಶದ 65 ಬಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಸಾಬೀತಾದ ತೈಲ ನಿಕ್ಷೇಪಗಳ ಮೇಲೆ ಬಹುಮತ ನಿಯಂತ್ರಣ ಸಾಧಿಸುವ ಒಪ್ಪಂದವನ್ನು ಅಮೆರಿಕ ಮಾಡಿಕೊಂಡಿದೆ....

ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ; ಇದು ಬಿಜೆಪಿಯ ಗೆಲುವಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ...

ಬಿಜೆಪಿ ಕಾರ್ಯಕರ್ತನ ಬಳಿ 3,400ಕ್ಕೂ ಹೆಚ್ಚು SIR ಎನ್ಯುಮರೇಷನ್‌ ಫಾರಂಗಳು ಪತ್ತೆ!-ವರದಿ

ಮತದಾರರ ವಿವರಗಳಿರುವ 3,400ಕ್ಕೂ ಹೆಚ್ಚು ಎಸ್‌ಐಆರ್ ಎನ್ಯುಮರೇಷನ್ ಫಾರಂಗಳು ಸ್ಥಳೀಯ ಬಿಜೆಪಿ ಕಾರ್ಯಕರ್ತನ ಬಳಿ ಪತ್ತೆಯಾದ ಬಳಿಕ, ನವಿ ಮುಂಬೈನಲ್ಲಿ ಐವರು ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಗುರುವಾರ (ಆ.27)...

ಹಾವೇರಿ| ಆಹಾರ ಸಂಸ್ಕರಣಾ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಕಲುಷಿತ ಆಹಾರ ಪದಾರ್ಥ ವಶಕ್ಕೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ್ ನೇತೃತ್ವದ ತಂಡ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ರಾಣೆಬೆನ್ನೂರು ತಾಲೂಕಿನ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ, 1,033 ಕೆಜಿ ಕಲುಷಿತ ಆಹಾರ...

ಹಾಸನ: ಎಡಪಂಥೀಯರು ಮೋಸ್ಟ್ ಡೇಂಜರಸ್, ಕಳ್ಳರು! ನಿಶ್ಚಲಾನಂದನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗೆ CPI(M) ಖಂಡನೆ

ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ವಿಶ್ವ...