Homeಮುಖಪುಟನರೇಂದ್ರ ಮೋದಿ ಸ್ಟೇಡಿಯಂ ಟ್ರೋಲ್: ಸರ್ದಾರ್‌ ಪಟೇಲ್‌ಗೆ ಅವಮಾನ ಎಂದ ನೆಟ್ಟಿಗರು!

ನರೇಂದ್ರ ಮೋದಿ ಸ್ಟೇಡಿಯಂ ಟ್ರೋಲ್: ಸರ್ದಾರ್‌ ಪಟೇಲ್‌ಗೆ ಅವಮಾನ ಎಂದ ನೆಟ್ಟಿಗರು!

- Advertisement -
- Advertisement -

ಅಹಮದಾಬಾದ್‌ನಲ್ಲಿರುವ ಮೊಟೆರಾದ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ವಿರೋಧಿಸಿ ಪ್ರತಿಪಕ್ಷಗಳು ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ವ್ಯಾಪಕವಾದ ನವೀಕರಣ ಕಾರ್ಯಗಳ ನಂತರ ಕ್ರೀಡಾಂಗಣವನ್ನು ಇತ್ತೀಚೆಗೆ ಪುನಃ ತೆರೆಯಲಾಗಿದ್ದು ಅದನ್ನು ರಾಷ್ಟ್ರಪತಿ ಬುಧವಾರ ಉದ್ಘಾಟಿಸಿದರು. ಹೊಸದಾಗಿ ನವೀಕೃತಗೊಂಡ ಕ್ರೀಡಾಂಗಣವು 1,10,000 ಆಸನಗಳನ್ನು ಹೊಂದಿದ್ದು, ಇದೀಗ ಅದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.

ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಇದು ‘ಸರ್ದಾರ್‌ ವಲ್ಲಭಾಬಾಯಿ ಪಟೇಲ್’ ಅವರಿಗೆ ಮಾಡಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ದಾರ್‌ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರಿಟ್ಟ ಸರ್ಕಾರ!

ಅಮರನಾಥ್‌ ಪಂಜಿಕರ್‌ ಅವರು, “ಆರೆಸ್ಸೆಸ್‌‌ ಅನ್ನು ಬ್ಯಾನ್ ಮಾಡಿರುವುದಕ್ಕೆ ಆರೆಸ್ಸೆಸ್ ಅವರ ವಿರುದ್ದ ಪ್ರತಿಕಾರ ಪಡೆಯುತ್ತಿದೆ” ಎಂದು ಹೇಳಿದ್ದಾರೆ.

ಸುವರ್ಣ ಶ್ರೇಯ ಅವರು, “ಈಗಾಗಲೆ ಬಂದ ಸುದ್ದಿ, ಸದನದ ಹೆಸರನ್ನು ಮೋದಿ ನಿವಾಸ ಎಂದು ಬದಲಾಯಿಸಲಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಐಜಿ ಲಕ್ಕೀ ಎಂಬ ಟ್ವಿಟರ್ ಹ್ಯಾಂಡಲ್, “ನಮ್ಮ ದೇಶದಲ್ಲಿ ರೈತ ಮತ್ತು ಯುವಜನರನ್ನು ಬಿಟ್ಟು ಎಲ್ಲವು ಬದಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಇದನ್ನೂ ಓದಿ: ನರೇಂದ್ರ ಮೋದಿಯ ಅಸಲೀ ಜೀವನ ವೃತ್ತಾಂತದ ಬಗ್ಗೆ ನಿಮಗೆಷ್ಟು ಗೊತ್ತು?

ದಿವಾಕರ್‌ ಕುಮಾರ್‌ ಅವರು, “ನರೇಂದ್ರ ಮೋದಿ ಸ್ಟೇಡಿಯಂನ ಎರಡು ತುದಿಗಳಿಗೆ ಹೆಸರೇನು ಎಂಬುದು ನಿಮಗೆ ಗೊತ್ತೆ?. ಅದಾನಿ ಎಂಡ್ ಮತ್ತು ರಿಲಾಯನ್ಸ್ ಎಂಡ್ ಎಂದಾಗಿದೆ. ನೀತಿ ಕತೆ ನಿಮ್ಮ ಗಾಡ್‌ಫಾಡರ್‌ಗಳನ್ನು ಯಾವತ್ತೂ ಮರೆಯದಿರಿ. ನಾವಿಬ್ಬರು ನಮಗಿಬ್ಬರು ಸರ್ಕಾರ. ಮುಂದೇನು” ಎಂದು ಕೇಳಿದ್ದಾರೆ.

ಅಕ್ಷಯ್ ಅವರು, “ಮುಂದಿನದ್ದು ಯಾವುದು, ಸರ್ದಾರ್‌ ಪಟೇಲ್ ಮೂರ್ತಿಗೆ ನರೇಂದ್ರ ಮೋದಿಯ ಮುಖವನ್ನು ಪಿಕ್ಸ್ ಮಾಡೋಣವೆ” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಡೆಮಾಕ್ರಸಿ ಧೂಳೀಪಟ: ಮೂರೂವರೆ ಗುಜರಾತಿಗಳು ವರ್ಸಸ್ ಆರೂವರೆ ಕೋಟಿ ಕನ್ನಡಿಗರು

ಭಾರತೀಯ ಎಂಬ ಹ್ಯಾಂಡಲ್, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಸೆಂಚುರಿ ಹೊಡೆದಿರುವ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದಾರೆ.

ಕಬೀರ ಅವರು, “ನಾವು ಎಲ್.ಕೆ. ಅಡ್ವಾನಿ ತರ ಫೀಲ್ ಮಾಡೋಣಾ” ಎಂದು ನರೇಂದ್ರ ಮೋದಿಯ ಜೊತೆ ಅಡ್ವಾನಿ, ‘ನನ್ನ ಹೆಸರಲ್ಲಿ ಒಂದು ರಸ್ತೆನಾದರೂ ಮಾಡಿದಿಯಾ’ ಎಂದು ಕೇಳುತ್ತಿರುವಂತೆ ಚಿತ್ರವನ್ನು ಹಾಕಲಾಗಿದೆ.

ದೀಪಕ್ ಅವರು ಮುನ್ನಾ ಭಾಯಿ ಎಂಬಿಬಿಎಸ್ ಚಿತ್ರದ ಚಿತ್ರದ ದೃಶ್ಯವನ್ನು ಪೋಸ್ಟ್ ಮಾಡಿ, ‘‘ಎಲ್ಲವೂ ಚಿತ್ರದಲ್ಲಿರುವ ವಿಷಯವೆ ಆಗಿದೆ’’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ನಾಯಕನೂ ತಾನು ಎಲ್ಲವನ್ನು ಬದಲಾಯಿಸುತ್ತಿರುವ ಕನಸು ಕಾಣುತ್ತಾ ತನ್ನ ಸಹಚರನಿಗೆ ಹೇಳುತ್ತಿರುವ ಹಾಸ್ಯ ದೃಶ್ಯವಾಗಿದೆ.

ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್‌ ಆದ ಕಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...