Homeಮುಖಪುಟಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ; ಸ್ಥಾನಮಾನ ಕಳೆದುಕೊಂಡ ಎನ್‌ಸಿಪಿ, ಟಿಎಂಸಿ, ಸಿಪಿಐ ಪಕ್ಷಗಳು

ಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ; ಸ್ಥಾನಮಾನ ಕಳೆದುಕೊಂಡ ಎನ್‌ಸಿಪಿ, ಟಿಎಂಸಿ, ಸಿಪಿಐ ಪಕ್ಷಗಳು

- Advertisement -
- Advertisement -

ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷ ಎಂದು ಮಾನ್ಯತೆ ನೀಡಿದೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ತಮ್ಮ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿವೆ.

ಚುನಾವಣಾ ಆಯೋಗವು, 2014 ಮತ್ತು 2019ರ ಲೋಕಸಭಾ ಚುನಾವಣೆಗಳು ಮತ್ತು 2014 ರಿಂದ 21 ರಾಜ್ಯ ವಿಧಾನಸಭಾ ಚುನಾವಣೆಗಳು – ಪಕ್ಷಗಳ ಸಮೀಕ್ಷೆಯ ಕಾರ್ಯಕ್ಷಮತೆಯ ವಿಮರ್ಶೆಯನ್ನು ಆಧರಿಸಿ ನಿರ್ಧಾರವನ್ನು ತಗೆದುಕೊಂಡಿದೆ. ಇತರ ಪ್ರಯೋಜನಗಳ ಜೊತೆಗೆ, ರಾಷ್ಟ್ರೀಯ ಪಕ್ಷದ ಸ್ಥಾನಮಾನವು ಪಕ್ಷದ ಚಿಹ್ನೆಯನ್ನು ಅದರ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗುತ್ತದೆ.

ದೇಶವು ಈಗ ಆರು ರಾಷ್ಟ್ರೀಯ ಪಕ್ಷಗಳನ್ನು ಹೊಂದಿದೆ – ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಿಪಿಐ(ಎಂ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮತ್ತು ಎಎಪಿ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ: ”ಇಷ್ಟು ಕಡಿಮೆ ಸಮಯದಲ್ಲಿ ರಾಷ್ಟ್ರೀಯ ಪಕ್ಷವೇ? ಇದು ಪವಾಡಕ್ಕಿಂತ ಕಡಿಮೆಯೇನಲ್ಲ. ಎಲ್ಲರಿಗೂ ಅಭಿನಂದನೆಗಳು. ದೇಶದ ಕೋಟಿ ಕೋಟಿ ಜನ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ. ಜನ ನಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಾರೆ. ಇಂದು, ಜನರು ನಮಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಸ್ವಾಮಿ, ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸಲು ನಮಗೆ ಅನುಗ್ರಹಿಸು” ಎಂದು ಹೇಳಿದ್ದಾರೆ.

ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಅಡಿಯಲ್ಲಿ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವೆಂದು ಗುರುತಿಸುವ ಮಾನದಂಡವನ್ನು ನಿಗದಿಪಡಿಸುತ್ತದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಮಾನ್ಯತೆ ಪಡೆದು ರಾಜ್ಯ ಪಕ್ಷವಾಗಿದೆ. ಹಾಗಾಗಿ ರಾಷ್ಟ್ರೀಯ ಪಕ್ಷವಾಗಲು ಸಮರ್ಥವಾಗಿದೆ ಎಂದು ಚುನಾವಣಾ ಆಯೋಗ ಆದೇಶದಲ್ಲಿ ಹೇಳಿದೆ.

ಜನವರಿ 1, 2014 ರಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಲಾದ ಆದೇಶದ ಪ್ಯಾರಾಗ್ರಾಫ್ 6C ಪ್ರಕಾರ, ಒಂದು ಪಕ್ಷವು “ಮುಂದಿನ ಚುನಾವಣೆಯಲ್ಲಿ” ಪ್ಯಾರಾಗ್ರಾಫ್ 6A ಮತ್ತು 6B ಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದರೆ ಅದು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮುಂದುವರಿಯುತ್ತದೆ. ಆ ಮಾನದಂಡದಲ್ಲಿ ಎಎಪಿ “ಮನ್ನಣೆ ಪಡೆದಿದೆ”.

ಇತರ ಷರತ್ತುಗಳ ಜೊತೆಗೆ, ಪ್ಯಾರಾಗ್ರಾಫ್ 6A ಹೇಳುವಂತೆ ರಾಜ್ಯ ಪಕ್ಷವು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಡೆದ ಮತಗಳಲ್ಲಿ ಕನಿಷ್ಠ 6% ಮತ್ತು ಕನಿಷ್ಠ ಇಬ್ಬರು ಶಾಸಕರನ್ನು ಪಡೆಯಬೇಕು; ಅಥವಾ ಕಳೆದ ಲೋಕಸಭಾ ಚುನಾವಣೆಯಲ್ಲಿ 6% ಮತ ಹಂಚಿಕೆ ಮತ್ತು ಆ ರಾಜ್ಯದಿಂದ ಒಬ್ಬ ಸಂಸದ; ಅಥವಾ ವಿಧಾನಸಭೆಯ ಒಟ್ಟು ಸ್ಥಾನಗಳ 3% ಅಥವಾ ಮೂರು ಸ್ಥಾನಗಳನ್ನು ಪಡೆಯಬೇಕು.

ಅದೇ ರೀತಿ, ಕಳೆದ ಲೋಕಸಭೆ ಅಥವಾ ಅಸೆಂಬ್ಲಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕನಿಷ್ಠ 6% ಮತಗಳನ್ನು ಪಡೆಯಬೇಕು ಮತ್ತು ಕನಿಷ್ಠ ನಾಲ್ಕು ಸಂಸದರನ್ನು ಹೊಂದಿರಬೇಕು ಎಂದು ಪ್ಯಾರಾಗ್ರಾಫ್ 6B ಹೇಳುತ್ತದೆ; ಅಥವಾ ಲೋಕಸಭೆಯಲ್ಲಿ ಕನಿಷ್ಠ 2% ಸ್ಥಾನಗಳು, ಅದರ ಅಭ್ಯರ್ಥಿಗಳು ಕನಿಷ್ಠ ಮೂರು ರಾಜ್ಯಗಳಿಂದ ಚುನಾಯಿತರಾಗಿರುತ್ತಾರೆ.

ದೆಹಲಿ, ಗೋವಾ ಮತ್ತು ಪಂಜಾಬ್ ಜೊತೆಗೆ, ಎಎಪಿ 2022ರ ಅಸೆಂಬ್ಲಿ ಚುನಾವಣೆಯ ನಂತರ ಗುಜರಾತ್‌ನಲ್ಲಿ ರಾಜ್ಯ ಪಕ್ಷವಾಯಿತು, ಅಲ್ಲಿ ಅದು 12.92% ಮತಗಳನ್ನು ಪಡೆದುಕೊಂಡಿತು.

ಟಿಎಂಸಿ: ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಟಿಎಂಸಿ ರಾಜ್ಯ ಪಕ್ಷವಾಗುವುದನ್ನು ಕಳೆದುಕೊಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ, ಆದರೂ ಅದು ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ರಾಜ್ಯ ಪಕ್ಷವಾಗಿ ಮುಂದುವರೆದಿದೆ ಮತ್ತು 2023ರ ಚುನಾವಣೆಯ ಆಧಾರದ ಮೇಲೆ ಮೇಘಾಲಯದಲ್ಲಿ ರಾಜ್ಯ ಪಕ್ಷದ ಸ್ಥಾನಮಾನವನ್ನು ನೀಡಲಾಗಿದೆ.

ಇದನ್ನೂ ಓದಿ: ”ಪ್ರಧಾನಿ ಪದವಿ ನಕಲಿಯೇ?”: ಮೋದಿ ಶೈಕ್ಷಣಿಕ ದಾಖಲೆ ಕುರಿತು ಮತ್ತೆ ಪ್ರಶ್ನಿಸಿದ ಕೇಜ್ರಿವಾಲ್

2019ರ ಲೋಕಸಭಾ ಚುನಾವಣೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಮಣಿಪುರದಿಂದ ಟಿಎಂಸಿ ಸ್ಪರ್ಧಿಸಿಲ್ಲ ಮತ್ತು ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 0.40% ಮತ್ತು 43.28% ಮತಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ. 2016ರಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ, ಪಕ್ಷದ ಮತ ಹಂಚಿಕೆಯು ಪಶ್ಚಿಮ ಬಂಗಾಳದಲ್ಲಿ 44.91%, ಮಣಿಪುರದಲ್ಲಿ 1.41% ಮತ್ತು ತ್ರಿಪುರಾದಲ್ಲಿ 0.30% ಆಗಿತ್ತು. ಇತ್ತೀಚಿನ ಸಮೀಕ್ಷೆಗಳಲ್ಲಿ, ಪಕ್ಷವು ಪಶ್ಚಿಮ ಬಂಗಾಳದಲ್ಲಿ (2021) 48.02% ಮತಗಳನ್ನು ಪಡೆದುಕೊಂಡಿತು ಮತ್ತು ಮಣಿಪುರದಲ್ಲಿ (2022) ಸ್ಪರ್ಧಿಸಲಿಲ್ಲ ಎಂದು ವಿವರಿಸಿದೆ.

ಹೆಸರು ಹೇಳಲಿಚ್ಛಿಸದ ಟಿಎಂಸಿಯ ಹಿರಿಯ ನಾಯಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ”ನಾವು ಈ ನಿರ್ಧಾರವನ್ನು ಕಾನೂನಿನ ಮೂಲಕ ಪ್ರಶ್ನಿಸುತ್ತೇವೆ” ಎಂದು ಹೇಳಿದ್ದಾರೆ.

ಎನ್‌ಸಿಪಿ: 2017 ಮತ್ತು 2018ರ ನಡುವಿನ ವಿಧಾನಸಭಾ ಚುನಾವಣೆಯಲ್ಲಿ ಗೋವಾ, ಮಣಿಪುರ ಮತ್ತು ಮೇಘಾಲಯದಲ್ಲಿ ಎನ್‌ಸಿಪಿ ತನ್ನ ರಾಜ್ಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿತು, ಏಕೆಂದರೆ ಅದರ ಮತ ಹಂಚಿಕೆ ಅನುಕ್ರಮವಾಗಿ 2.28%, 0.95% ಮತ್ತು 1.61% ಆಗಿದೆ. ಮಹಾರಾಷ್ಟ್ರದಲ್ಲಿ ರಾಜ್ಯ ಪಕ್ಷವಾಗಿ ಉಳಿದಿದೆ. 2019ರ ಅಸೆಂಬ್ಲಿ ಚುನಾವಣೆಯಲ್ಲಿ 16.71% ಮತಗಳನ್ನು ಪಡೆದಿದೆ. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಆಧಾರದ ಮೇಲೆ ನಾಗಾಲ್ಯಾಂಡ್‌ನಲ್ಲಿ ಪಕ್ಷಕ್ಕೆ ರಾಜ್ಯ ಪಕ್ಷದ ಸ್ಥಾನಮಾನವನ್ನು ನೀಡಲಾಗಿದೆ.

ಈ ಬಗ್ಗೆ ಎನ್‌ಸಿಪಿ ವಕ್ತಾರು, ”ಆದೇಶವನ್ನು ಅಧ್ಯಯನ ಮಾಡಿದ ನಂತರ ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿದ್ದಾರೆ.

ಸಿಪಿಐ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ರಾಜ್ಯ ಪಕ್ಷವಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿದೆ, ಆದರೆ ಅದು ಕೇರಳ, ಮಣಿಪುರ ಮತ್ತು ತಮಿಳುನಾಡಿನಲ್ಲಿ ರಾಜ್ಯ ಪಕ್ಷವಾಗಿ ಉಳಿದಿದೆ. 2016 ರಿಂದ 2019 ರವರೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ, ಪಕ್ಷದ ಮತ ಹಂಚಿಕೆಯು ತಮಿಳುನಾಡಿನಲ್ಲಿ 0.79% (ರಾಜ್ಯದಿಂದ ಇಬ್ಬರು ಸಂಸದರನ್ನು ಹೊಂದಿದೆ), ಪಶ್ಚಿಮ ಬಂಗಾಳದಲ್ಲಿ 1.45%, ಮಣಿಪುರದಲ್ಲಿ 0.74% (2019 ರ ಲೋಕಸಭೆ ಚುನಾವಣೆಯಲ್ಲಿ ಮತ ಹಂಚಿಕೆ 8.27%), ಮತ್ತು ಒಡಿಶಾದಲ್ಲಿ 0.12%.

”ಸಿಪಿಐ ಪಕ್ಷವು 1952ರಿಂದ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸಿದೆ ಮತ್ತು ಸಂಸತ್ತಿನಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ” ಎಂದು ಅದು ವಾದಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

0
ಹಾಸನ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭಾರತ ತೊರೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಅಸ್ಸಾಂನ...