Homeಮುಖಪುಟಅಪಹರಣಕ್ಕೊಳಗಾಗಿದ್ದ ಹಡಗಿನಿಂದ 21 ಮಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಅಪಹರಣಕ್ಕೊಳಗಾಗಿದ್ದ ಹಡಗಿನಿಂದ 21 ಮಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ

- Advertisement -
- Advertisement -

ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾಗಿದ್ದ ವ್ಯಾಪಾರಿ ಹಡಗಿನಿಂದ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶುಕ್ರವಾರ ರಕ್ಷಿಸಿದೆ.

ಭಾರತೀಯ ನೌಕಾಪಡೆಯ ವಿಶೇಷ ಮಾರ್ಕೋಸ್ ತಂಡ ಕಾರ್ಯಾಚರಣೆ ನಡೆಸಿ ಸಿಬ್ಬಂದಿಯನ್ನು ರಕ್ಷಿಸಿದ್ದು, ಅಪಹೃತ ಹಗಡಗಿಗೆ ಕಮಾಂಡೋಗಳು ತಲುಪುತ್ತಿದ್ದಂತೆ ಅಪಹರಣಕಾರರು ಪಲಾಯಣ ಮಾಡಿದ್ದಾರೆ ಎನ್ನಲಾಗಿದೆ.

ಲೈಬೀರಿಯನ್ ಧ್ವಜ ಹೊಂದಿದ್ದ ವ್ಯಾಪಾರಿ ಹಡಗು ಎಂ.ವಿ ಲೀಲಾ ನಾರ್ಫೋಕ್ ಅಪಹರಣಕ್ಕೊಳಗಾಗಿತ್ತು. ಈ ಕುರಿತು ಯುನೈಟೆಡ್ ಕಿಂಗ್‌ಡಮ್ ಮೆರೈನ್ ಟ್ರೇಡ್ ಆಪರೇಷನ್ಸ್ ಪೋರ್ಟಲ್‌ಗೆ ಗುರುವಾರ ಸಂಜೆ ಸಂದೇಶ ರವಾನೆಯಾಗಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಐಎನ್‌ಎಸ್ ಚೆನ್ನೈನ ನೌಕಾಪಡೆಯು ಯುದ್ಧ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿತ್ತು. ಶುಕ್ರವಾರ ಅಪಹೃತ ಹಡಗು ಏರಿದ್ದ ಕಮಾಂಡೋಗಳು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

ಬ್ರೆಝಿಲ್‌ನ ಡು ಅಕೊ ಬಂದರಿನಿಂದ ಹೊರಟಿದ್ದ ಹಡಗು, ಬಹರೇನ್‌ನ ಖಲೀಫಾ ಬಿನ್ ಸಲ್ಮಾನ್‌ ಬಂದರಿಗೆ ತೆರಳುತಿತ್ತು. ಈ ವೇಳೆ ಸೊಮಾಲಿಯಾದ ಪೂರ್ವಕ್ಕೆ 300 ನಾಟಿಕಲ್ ಮೈಲ್ ದೂರದಲ್ಲಿ ಅಪಹರಣಕ್ಕೊಳಗಾಗಿತ್ತು. ಈ ಹಡಗಿನ ಸಮೀಪದಲ್ಲೇ ಐಎನ್‌ಎಸ್‌ ಚೆನ್ನೈ ಇದ್ದುದರಿಂದ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿತ್ತು.

ನೌಕಾಪಡೆ ಹಡಗಿನ ಬಳಿ ತಲುಪುವ ಮೊದಲೇ ವಿಮಾನದ ಮೂಲಕ ಕಣ್ಗಾವಲಿಡಲಾಗಿತ್ತು. ಹಡಗಿನಲ್ಲಿದ್ದವರು ಸುರಕ್ಷಿತವಾಗಿರವುದನ್ನು ಖಚಿತಪಡಿಸಲಾಗಿತ್ತು. ಸುಮಾರು 5-6 ಜನರ ಶಸ್ತ್ರ ಸಜ್ಜಿತ ಗುಂಪು ಜನವರಿ 4ರಂದು ಹಡಗನ್ನು ಏರಿತ್ತು ಎಂದು ತಿಳಿದು ಬಂದಿದೆ.

ಕೆಂಪು ಸಮುದ್ರ ಮತ್ತು ಅರಬೀ ಸಮುದ್ರದಲ್ಲಿ ಸತತವಾಗಿ ಹಡಗುಗಳ ಅಪಹರಣ ಮತ್ತು ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಡಿಸೆಂಬರ್ 16 ರಿಂದ ಭಾರತೀಯ ನೌಕಾಪಡೆಯು ಕಡಲ ಗಸ್ತು ವಿಮಾನವನ್ನು ನಿಯೋಜಿಸಿದೆ. ಗಲ್ಫ್ ಆಫ್ ಏಡೆನ್‌ನಲ್ಲಿ 18 ಸಿಬ್ಬಂದಿಯಿದ್ದ ಮಾಲ್ಟಾ ಧ್ವಜದ ನೌಕೆ ಎಂ.ವಿ ರಿಆನ್‌ ಮೇಲಿನ ದಾಳಿ ಬಳಿಕ ಕಡಲ ಕಣ್ಗಾವಲು ಹೆಚ್ಚಿಸಲಾಗಿದೆ.

ಇದನ್ನೂ ಓದಿ : ಮತ್ತೆ ಗರಿಗೆದರಿದ ಇವಿಎಂ ಚರ್ಚೆಯನ್ನು ಕೊನೆಗಾಣಿಸುವುದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...