Homeಮುಖಪುಟನೆಹರು ಮ್ಯೂಸಿಯಂ ಮರುನಾಮಕರಣ: ಪ್ರಧಾನಿಗೆ ಪರೋಕ್ಷವಾಗಿ ಟೀಕಿಸಿದ ರಾಹುಲ್ ಗಾಂಧಿ

ನೆಹರು ಮ್ಯೂಸಿಯಂ ಮರುನಾಮಕರಣ: ಪ್ರಧಾನಿಗೆ ಪರೋಕ್ಷವಾಗಿ ಟೀಕಿಸಿದ ರಾಹುಲ್ ಗಾಂಧಿ

- Advertisement -
ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜವಾಹರಲಾಲ್ ನೆಹರು ಅವರು ಬರೀ ಹೆಸರಿಗೆ ಮಾತ್ರವಲ್ಲ, ತಾನು ಮಾಡಿದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಪ್ರಧಾನಿಗೆ ಪರೋಕ್ಷವಾಗಿ ಟೀಕಿಸಿದ್ದಾರೆ.
ನೆಹರೂ ಜಿ ಅವರು ತಾನು ಮಾಡಿದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ,  ಬರೀ ಹೆಸರಿನಿಂದ  ಅಲ್ಲ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ಕೇಂದ್ರ  ಸರಕಾರವು  ನವದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು (NMML) ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಿದೆ.
ಮರುನಾಮಕರಣದ ಕುರಿತು   ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯನಿರ್ವಾಹಕ ಮಂಡಳಿಯ ಉಪಾಧ್ಯಕ್ಷ ಎ ಸೂರ್ಯ ಪ್ರಕಾಶ್ ಅವರು ಎಕ್ಸ್‌(ಟ್ವಿಟ್ಟರ್)  ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿ,  ಪ್ರಧಾನಿ ನರೇಂದ್ರ ಮೋದಿ ನೆಹರೂವಿನ ಪರಂಪರೆಯನ್ನು ವಿರೂಪಗೊಳಿಸುತ್ತಿದ್ದಾರೆ ಮತ್ತು ನಾಶಪಡಿಸುತ್ತಿದ್ದಾರೆ  ಎಂದು  ಹೇಳಿದೆ.
ಮೋದಿ Nನ್ನು ಅಳಿಸಿ ಬದಲಿಗೆ P ಎಂದು ಹಾಕಿದ್ದಾರೆ. ಆ P ನಿಜವಾಗಿಯೂ ಸಣ್ಣತನದ ಸಂಕೇತ  ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಜೂನ್ ನಲ್ಲಿ ನಡೆದ ಎನ್‌ಎಂಎಂಎಲ್ ಸೊಸೈಟಿಯ ವಿಶೇಷ ಸಭೆಯಲ್ಲಿ ನೆಹರೂ   ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯಿಸಿ, ಹೊಸ ಕಟ್ಟಡದಲ್ಲಿ ನೆಲೆಗೊಂಡಿರುವ ವಸ್ತುಸಂಗ್ರಹಾಲಯವು ನಮ್ಮ ಪ್ರಧಾನ ಮಂತ್ರಿಗಳು ವಿವಿಧ ಸವಾಲುಗಳ ಮೂಲಕ ರಾಷ್ಟ್ರವನ್ನು ಹೇಗೆ ಮುನ್ನಡೆಸಿದರು  ಮತ್ತು ದೇಶದ ಸರ್ವತೋಮುಖ ಪ್ರಗತಿಯನ್ನುಹೇಗೆ  ಮಾಡಿದರು  ಎಂಬ ಕಥೆಯನ್ನು ಹೇಳುತ್ತದೆ. ಇದು ಎಲ್ಲಾ ಪ್ರಧಾನ ಮಂತ್ರಿಗಳನ್ನು ಗುರುತಿಸುತ್ತದೆ ಎಂದು ಹೇಳಿದೆ.
- Advertisement -

 

ಇದನ್ನು ಓದಿ: ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರಕಾರ ಆದಿವಾಸಿ ಸಮುದಾಯಗಳನ್ನು ನಿರ್ಲಕ್ಷಿಸಿದೆ: ಕಾಂಗ್ರೆಸ್‌

0
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಮಧ್ಯಪ್ರದೇಶದ ಆದಿವಾಸಿ ಸಮುದಾಯಗಳನ್ನು ನಿರ್ಲಕ್ಷಿಸಿದ್ದು, ಕೇಂದ್ರ ಬಜೆಟ್‌ನಲ್ಲಿ ಆದಿವಾಸಿಗಳಿಗೆ ಕೇಸರಿ ಪಕ್ಷದ ಹಂಚಿಕೆಯು ನೀತಿ ಆಯೋಗ ನಿಗದಿಪಡಿಸಿದ ಶೇಕಡಾ 8.2ಕ್ಕಿಂತ ಕಡಿಮೆಯಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಮಧ್ಯಪ್ರದೇಶದಲ್ಲಿ ನಡೆಯಲಿರುವ...