Homeಮುಖಪುಟಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

- Advertisement -
- Advertisement -

15ನೇ ಆಗಸ್ಟ್‌ಗೆ ಒಂದು ದಿನ ಮುನ್ನ ಬಂದ ಈ ಸುದ್ದಿ ಸ್ವಾತಂತ್ರ್ಯದ ಪರವಿರುವ ಪ್ರತಿಯೊಬ್ಬ ಭಾರತೀಯಳಿ/ನಿಗೆ ಚಿಂತೆಗೆ ದೂಡುತ್ತಿದೆ. ಸುದ್ದಿ ಏನೆಂದರೆ, ಅಶೋಕ ಯುನಿವರ್ಸಿಟಿಯ ಅರ್ಥಶಾಸ್ತ್ರದ ಯುವ ಪ್ರೊಫೆಸರ್ ಸಬ್ಯಸಾಚಿ ದಾಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ. ಅವರು ಮಾಡಿದ ಅಪರಾಧವೇನೆಂದರೆ ಅವರು 2019ರ ಚುನಾವಣೆಗಳ ಅಂಕಿಅಂಶಗಳ ವಿಶ್ಲೇಷಣೆ ಮಾಡಿ ಒಂದು ಅಕೆಡೆಮಿಕ್ ಪ್ರಬಂಧ ಬರೆದಿದ್ದರು. ಈ ಸುದ್ದಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉಳಿದುಕೊಂಡಿರುವ ಅಕೆಡೆಮಿಕ್ ಸ್ವಾತಂತ್ರದ ಮೇಲೆ ಘೋರ ಆಘಾತವಾಗಿದೆ.

ಅಂದಹಾಗೆ ಈ ಲೇಖಕರಿಗೆ ಹೆದರುವ ಯಾವ ಕಾರಣವೂ ಸರಕಾರಕ್ಕಿಲ್ಲ. ಸಬ್ಯಸಾಚಿ ದಾಸ್ ಇನ್ನೂ ಒಬ್ಬ ಪ್ರಸಿದ್ಧವಾದ ಅರ್ಥಶಾಸ್ತ್ರಜ್ಞರಲ್ಲ. ಅವರ ಹೆಚ್ಚಿನ ಲೇಖನಗಳು ಕಲ್ಯಾಣ ಯೋಜನೆಗಳ ಮೌಲ್ಯಮಾಪದಂತಹ ಪ್ರಶ್ನೆಗಳ ಮೇಲಿವೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಅವರ ಯಾವುದೇ ಸಂಬಂಧಗಳು ಕಂಡುಬಂದಿಲ್ಲ. ಹಾಗೂ ಸರಕಾರ ತನ್ನ ದಂಡ ಚಲಾಯಿಸಲು ಅಶೋಕ ಯುನಿವರ್ಸಿಟಿ ಯಾವುದೇ ಸರಕಾರಿ ಅನುದಾನದ ಮೇಲೆ ನಡೆಯುವ ಸಂಸ್ಥೆಯಂತೂ ಅಲ್ಲ.

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುಂಚೆ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರಕಾರದ ಯಾವ ಟೀಕೆಯೂ ಇಲ್ಲ, ಬಿಜೆಪಿಯನ್ನು ನಿಂದಿಸಿಲ್ಲ, ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ ಹಾಗೂ ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. “ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ವರ್ಲ್ಡ್‌ಸ್ ಲಾರ್ಜೆಸ್ಟ್ ಡೆಮಾಕ್ರಸಿ” (ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಸತ್ತೆಯ ಹಿನ್ನಡೆ) ತಲೆಬರಹದ ಈ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗಳ ಅಧಿಕೃತ ಪರಿಣಾಮಗಳನ್ನು ಸಂಖ್ಯಾಶಾಸ್ತ್ರದ ವಿಧಾನದ ಮೂಲಕ ವಿಶ್ಲೇಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಈ ವಿಷಯದ ಪರಿಣಿತನಾಗಿದ್ದರಿಂದ ವಿಶ್ವಾಸದಿಂದ ಇಷ್ಟು ಹೇಳಬಲ್ಲೆ; ಸಬ್ಯಸಾಚಿ ದಾಸ್‌ರ ಈ ಲೇಖನ ಭಾರತದ ಚುನಾವಣಾ ಅಂಕಿಅಂಶಗಳ ಮೇಲೆ ಬರೆಯಲಾಗಿರುವ ಅತ್ಯಂತ ಗಂಭೀರ ಹಾಗೂ ಗಹನವಾದ ಲೇಖನಗಳಲ್ಲಿ ಒಂದು ಎಂದು.

ನಿಶಿಕಾಂತ್ ದುಬೆ

ಈ ಅಂಕಿಅಂಶಗಳ ಅಥವಾ ವಿಧಾನದಲ್ಲಿ ಯಾವುದೇ ವಿವಾದವಿಲ್ಲ, ವಿವಾದವಿರುವುದು ಈ ಲೇಖನದ ನಿಷ್ಕರ್ಷದಲ್ಲಿ. 2019ರ ಚುನಾವಣೆಗಳ ಮತಗಟ್ಟೆಯಿಂದ ಹಿಡಿದು ಸೀಟುಗಳ ತನಕ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಏನೋ ಸಮಸ್ಯೆ ಇದೆ ಎಂಬ ನಿಷ್ಕರ್ಷಕ್ಕೆ ಲೇಖಕರು ಬರುತ್ತಾರೆ. ಯಾವ 59 ಕ್ಷೇತ್ರಗಳಲ್ಲಿ ಸೋಲುಗೆಲುವಿನ ತೀರ್ಮಾನ ಶೇ.5ಕ್ಕಿಂತ ಕಡಿಮೆ ಆಗಿದೆಯೋ, ಅವುಗಳಲ್ಲಿ 41 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗಣಿತದ ಸಾಮಾನ್ಯ ನಿಯಮಗಳ ಅನುಗುಣವಾಗಿ ಹಾಗೂ ದೇಶ ಮತ್ತು ಜಗತ್ತಿನ ಚುನಾವಣೆಗಳ ಹಳೆಯ ದಾಖಲೆಗಳನ್ನು ನೋಡಿದರೆ, ಇದು ಅತ್ಯಂತ ಅಸಾಮಾನ್ಯವಾದ ಪ್ರವೃತ್ತಿಯಾಗಿ ಕಂಡುಬರುತ್ತದೆ. ಈ ಇಡೀ ಲೇಖನ ಅಸಾಮಾನ್ಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನೋಡುತ್ತದೆ. ಬಿಜೆಪಿಯು ಅತ್ಯುತ್ತಮವಾಗಿ ಊಹೆಮಾಡಿರಬಹುದಾದ ಮುನ್ಸೂಚನೆ ಮತ್ತು ಉತ್ತಮವಾದ ಚುನಾವಣಾ ಪ್ರಚಾರದ ಕಾರಣದಿಂದ ಹೀಗೆ ಆಗಿರಬಹುದು ಎಂಬ ಸಾಧ್ಯತೆಯನ್ನು ಈ ಲೇಖನವು ಪರಿಶೀಲಿಸಿ ಅದನ್ನು ತಳ್ಳಿಹಾಕುತ್ತದೆ. ನಂತರ ಒಂದೊಂದು ವಿಷಯಕ್ಕೆ ಸಾಕ್ಷ್ಯ ಒದಗಿಸುತ್ತ ಈ ಲೇಖನವು ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರ ಪ್ರಕಾರ, ಇದು ಕೆಲವು ಆಯ್ದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾನದ ಅಥವಾ ಮತ ಎಣಿಕೆಯಲ್ಲಿ ಅಕ್ರಮ ಮಾಡುವುದರ ಮೂಲಕ ಆಗಿದೆ. ಈ ಲೇಖನ ಸಂಖ್ಯಾಶಾಸ್ತ್ರೀಯ ಪದ್ಧತಿಯ ಮೇಲೆ ಆಧಾರಿತವಾಗಿರುವುದರಿಂದ ಮೋಸದಾಟದ ಸಾಧ್ಯತೆಯನ್ನು ಸೂಚಿಸಬಲ್ಲದು; ಆದರೆ ಅದಕ್ಕೆ ಸಾಕ್ಷ್ಯ ಒದಗಿಸಲಾರದು. ಯಾವುದೇ ಸೆನ್ಸೇಷನಲ್ ಆರೋಪ ಹೊರಿಸುವ ಕೆಲಸ ಮಾಡದೇ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, ಹೀಗೆ ಮಾಡಿದ್ದರೂ ಕೂಡ ಇದರಿಂದ ಬಿಜೆಪಿಗೆ ಗರಿಷ್ಠ 9ರಿಂದ 18 ಸೀಟುಗಳ ನಷ್ಟವಾಗುತ್ತಿತ್ತು. ಅದರಿಂದ ಬಿಜೆಪಿಯ ಬಹುಮತದ ಮೇಲೆ ಯಾವ ಪರಿಣಾಮವೂ ಬೀರುತ್ತಿರಲಿಲ್ಲ. ಹಾಗಾಗಿ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, 2019ರಲ್ಲಿ ಬಿಜೆಪಿಯು ಮೋಸದಿಂದ ಚುನಾವಣೆ ಗೆದ್ದಿತ್ತು ಎಂಬ ನಿಷ್ಕರ್ಷವು ಖಂಡಿತವಾಗಿಯೂ ತಪ್ಪಾಗುತ್ತದೆ.

ಇದನ್ನೂ ಓದಿ: ಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

ಇಷ್ಟು ಸೀಮಿತವಾದ ಮಾತು ಹೇಳಿದ್ದಕ್ಕೆ ಇಷ್ಟೊಂದು ವಿವಾದ ಸೃಷ್ಟಿಯಾಗಿದೆ. ಬಿಜೆಪಿಯ ಸಮರ್ಥಕರು ಲೇಖಕರ ಮೇಲೆ ಎಲ್ಲಾ ಬಗೆಯ ಅಕೆಡೆಮಿಕ್ ಮತ್ತು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ಲೇಖನ ಬರೆಯುವುದಕ್ಕೆ ನೀವು ಹೇಗೆ ಅನುಮತಿ ನೀಡಿದಿರಿ ಎಂದು ಬಿಜೆಪಿ ಎಂಪಿ ನಿಶಿಕಾಂತ್ ದುಬೆ (ಇವರ ಡಿಗ್ರಿ ಬಗ್ಗೆ ವಿವಾದವಿದೆ) ಅಶೋಕ ಯುನಿವರ್ಸಿಟಿಗೆ ಕೇಳಿದರು. ತಮ್ಮ ಅಧ್ಯಾಪಕರ ಪರವಾಗಿ ನಿಲ್ಲುವುದರ ಬದಲಾಗಿ ಅಶೋಕ ಯುನಿವರ್ಸಿಟಿಯು ಒಂದು ಹೇಳಿಕೆ ನೀಡಿ ಲೇಖನ ಮತ್ತು ಲೇಖಕರಿಂದ ಅಂತರ ಕಾಪಾಡಿಕೊಂಡಿತು. ಈಗ ಗೊತ್ತಾಗಿದ್ದೇನೆಂದರೆ, ಪ್ರೊ ದಾಸ್ ಅವರು ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದ್ದಾರೆ (ಅವರನ್ನು ವಿಶ್ವವಿದ್ಯಾಲಯವು ಕೆಲಸದಿಂದ ತೆಗೆದುಹಾಕಿಲ್ಲ); ಆದರೆ ಇಂತಹ ಪರಿಸ್ಥಿತಿಯಲ್ಲಿ ನೀಡಿದ ರಾಜೀನಾಮೆಯನ್ನು ಐಚ್ಛಿಕ ಸೇವಾನಿವೃತ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಲೇಖಕರ ಮೇಲೆ ಒತ್ತಡ ಹಾಕಲಾಗಿ, ಆ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಸ್ವಾಭಾವಿಕ.

ಅಶೋಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಆಗಿರುವುದು ದೇಶಕ್ಕೆ ಒಂದು ಅಶುಭ ಸಂಕೇತ ನೀಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಮುನ್ನ ಪ್ರೊ ಪ್ರತಾಪ್ ಭಾನು ಮೆಹ್ತಾ ಮತ್ತು ರಾಜೇಂದ್ರನ್ ನಾರಾಯಣರಿಗೂ ಸರಕಾರೀ ಒತ್ತಡದ ಅನುಮಾನದ ಕಾರಣದಿಂದ ಇದೇ ಅಶೋಕ ವಿಶ್ವವಿದ್ಯಾಲಯ ತೊರೆಯಬೇಕಾಗಿ ಬಂದಿತ್ತು. ಈ ವಿಶ್ವವಿದ್ಯಾಲಯವು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ತನ್ನ ಗುರುತು ದಾಖಲಿಸಿಕೊಂಡಿದೆ; ಇದು ಹಣಕಾಸಿನ ವಿಷಯದಲ್ಲೂ ಸರಕಾರಿ ನಿಯಂತ್ರಣದಿಂದ ಸ್ವತಂತ್ರವಾಗಿದೆ. ತಾನು ಅಕೆಡೆಮಿಕ್ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವುದಾಗಿ ವಿಶ್ವವಿದ್ಯಾಲಯ ಹೇಳಿಕೊಳ್ಳುತ್ತದೆ.

ಒಂದು ವೇಳೆ ಇಂತಹ ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪಕನಿ/ಳಿಗೆ ತನ್ನ ಸಂಶೋಧನೆಗೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದರೆ ದೇಶದ ಉಳಿದೆಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕೆಡೆಮಿಕ್ ಸಂಸ್ಥೆಗಳ ಪರಿಸ್ಥಿತಿ ಹೇಗಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಕಾಲತ್ತು ಮಾಡುತ್ತ ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದೇನೆಂದರೆ, ’ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಸತ್ಯ ಮತ್ತು ಪ್ರಾಮಾಣಿಕ ಮಾತುಗಳನ್ನು ಹೇಳುವ ಸ್ವಾತಂತ್ರ್ಯವಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಯಾವುದನ್ನು ನಾವು ಅಸತ್ಯ ಎಂದುಕೊಳ್ಳುತ್ತೇವೋ, ಅದನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ್ಯ ಇರಬೇಕು, ಆಗ ಅದರ ಸಾರ್ವಜನಿಕ ಖಂಡನೆ, ನಿರಾಕರಣೆ ಆಗಿ, ನಾವೆಲ್ಲ ಸತ್ಯದ ದಿಕ್ಕಿನಲ್ಲಿ ಮುಂದೆಹೋಗಬಹುದು’ ಎಂದು. ಹಾಗಾಗಿ, ಸಬ್ಯಸಾಚಿ ದಾಸ್‌ರ ಲೇಖನ ದೋಷಪೂರ್ಣವಾಗಿದೆ ಹಾಗೂ ಅವರ ನಿಷ್ಕರ್ಷ ಪೊಳ್ಳಾಗಿದೆ ಎಂದು ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡರೂ ಸಹ ಆಗಲೂ ಅವರ ಧ್ವನಿ ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಂಕಿಅಂಶಗಳು, ವಿಧಾನ ಮತ್ತು ನಿಷ್ಕರ್ಷದ ನಿರಾಕರಣೆ ಮಾಡಲು, ಖಂಡಿಸಲು ಅಧಿಕಾರವಿದೆ; ಆ ಪ್ರಯತ್ನವನ್ನು ಬಿಜೆಪಿ ಸಮರ್ಥಕರು ಕಳೆದ ಎರಡು ವಾರಗಳಿಂದ ಮಾಡಿದ್ದಾರೆ. ಆದರೆ ಅಧಿಕಾದ ಬಲದಿಂದ ಇಂತಹ ಧ್ವನಿಯನ್ನು ಮುಚ್ಚಿಹಾಕುವುದು ನಮ್ಮ ಪ್ರಜಾಪ್ರಭುತ್ವದ ದೌರ್ಬಲ್ಯದ ಸೂಚನೆ ನೀಡುತ್ತದೆ. ಇದರಿಂದ ಸಬ್ಯಸಾಚಿ ದಾಸ್ ಅವರು ಆಡಳಿತ ಪಕ್ಷದ ದೌರ್ಬಲ್ಯದ ಮೇಲೆಯೇ ದಾಳಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತೆ ಹಾಗೂ ಏನೋ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಪುಷ್ಟಿನೀಡುತ್ತದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...

ತೆಲಂಗಾಣ| ಕೆಸಿಆರ್‌ ಮನೆ ಮುಂದೆ ದಲಿತ ಮುಖಂಡರಿಂದ ಪ್ರತಿಭಟನೆ; ಬಿಆರ್‌ಎಸ್‌ ಕಾರ್ಯಕರ್ತರಿಂದ ನೀರು-ಅರಿಶಿನ ಬಳಸಿ ರಸ್ತೆ ಶುದ್ಧೀಕರಣ

ತೆಲಂಗಾಣದ ಸಿದ್ಧಾಪೇಟೆ ಜಿಲ್ಲೆಯ ಎರ್ರವಳ್ಳಿಯಲ್ಲಿರುವ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಫಾರ್ಮ್ ಹೌಸ್ ಬಳಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ನಂತರ, ಬಿಆರ್‌ಎಸ್ ನಾಯಕರು ನಡೆಸಿದ...