Homeಮುಖಪುಟಗ್ರಹಾಂ ಸ್ಟೇನ್ಸ್ ಮತ್ತು ಮಕ್ಕಳ ಮರ್ಡರ್‌ ಕೇಸ್‌: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿ ವಿವಾದದಲ್ಲಿ ಒಡಿಶಾದ...

ಗ್ರಹಾಂ ಸ್ಟೇನ್ಸ್ ಮತ್ತು ಮಕ್ಕಳ ಮರ್ಡರ್‌ ಕೇಸ್‌: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿ ವಿವಾದದಲ್ಲಿ ಒಡಿಶಾದ ನೂತನ ಸಿಎಂ

- Advertisement -
- Advertisement -

ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. 1999ರಲ್ಲಿ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪದಲ್ಲಿ ಶಿಕ್ಷೆಗೊಳಗಾದ ಭಜರಂಗದಳ ಕಾರ್ಯಕರ್ತ ದಾರಾ ಸಿಂಗ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಸುದರ್ಶನ್ ಟಿವಿಯ ಸಂಪಾದಕ ಸುರೇಶ್ ಚವ್ಹಾಂಕೆ ಅವರ ಜೊತೆಗೆ ಭಾಗಿಯಾಗಿದ್ದರು.

ಇಸ್ಲಾಮೋಫೋಬಿಯಾಕ್ಕೆ ಹೆಸರುವಾಸಿಯಾಗಿರುವ ಚವ್ಹಾಂಕೆ ದಾರಾ ಸಿಂಗ್‌ನನ್ನು ಬಿಡುಗಡೆ ಮಾಡುವಂತೆ ಅಭಿಯಾನವನ್ನು ನಡೆಸಿದ್ದಾರೆ. ಸೆಪ್ಟೆಂಬರ್ 2022ರಲ್ಲಿ, ಕಿಯೋಂಜಾರ್ ಜೈಲಿನಲ್ಲಿ ಸಿಂಗ್ ಅವರನ್ನು ಭೇಟಿ ಮಾಡಲು ಚವ್ಹಾಂಕೆಗೆ ಅನುಮತಿ ನಿರಾಕರಿಸಲಾಗಿದೆ, ಅದರ ನಂತರ ಸುದರ್ಶನ್ ಟಿವಿ ಸಂಪಾದಕ ಮತ್ತು ಮಾಝಿ ಸೇರಿದಂತೆ ಅವರ ಜೊತೆಗಿದ್ದ ಬಿಜೆಪಿ ನಾಯಕರು ಜೈಲು ಅಧಿಕಾರಿಗಳ ವಿರುದ್ಧ ಧರಣಿ ನಡೆಸಿದ್ದರು.

1999ರ ಜನವರಿ 22ರ ರಾತ್ರಿ ಮನೋಹರಪುರದಲ್ಲಿ ಜಂಗಲ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಲಾಗಿತ್ತು. ಬಿಜೆಪಿ ಜೊತೆ  ಸಂಬಂಧ ಹೊಂದಿರುವ ಬಲಪಂಥೀಯ ಬಜರಂಗದಳದ ಕಾರ್ಯಕರ್ತರ ಗುಂಪು ಈ ಕೃತ್ಯವನ್ನು ಎಸಗಿತ್ತು.

ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಿದ್ದ ತಂಡದಲ್ಲಿದ್ದ ದಾರಾ ಸಿಂಗ್ ಬಿಜೆಪಿಯ ಸದಸ್ಯನಾಗಿದ್ದ. ಆತ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿದ್ದ. ಗೋ ಸುರಕ್ಷಾ ಸಮಿತಿಯ ಸಕ್ರಿಯ ಸದಸ್ಯನಾಗಿದ್ದ ಈತ 1998ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ರ್ಯಾಲಿಗಳಲ್ಲಿ ತೊಡಗಿಸಿಕೊಂಡಿದ್ದ. ಇದಲ್ಲದೆ 1991ರ ಚುನಾವಣೆಯ ಸಮಯದಲ್ಲಿ ಪಾಟ್ನಾದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ. ಹಿಂದುತ್ವದ ಬಲವಾದ ಪ್ರತಿಪಾದಕನಾಗಿದ್ದ.

ದನದ ವ್ಯಾಪಾರಿಗಳನ್ನು ಟಾರ್ಗೆಟ್‌ ಮಾಡಿ ದುಷ್ಕೃತ್ಯ ನಡೆಸುತ್ತಿದ್ದ ಗಂಗಾನದಿ ಬಯಲು ಪ್ರದೇಶದ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್, ಕುಷ್ಠರೋಗದ ಸಂತ್ರಸ್ತರ ಸೇವೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೈನ್ಸ್(58) ಮತ್ತು ಅವನ ಇಬ್ಬರು ಮಕ್ಕಳಾದ ಫಿಲಿಪ್ (10) ಮತ್ತು ತಿಮೋತಿ(6) ಅವರನ್ನು ಜೀವಂತ ಸುಟ್ಟು ಹಾಕಿದ್ದ. ಈ ಘಟನೆ 1999ರ ಜನವರಿ 21-22ರಾತ್ರಿ ವೇಳೆ ನಡೆದಿದೆ. ಘಟನೆ ನಡೆದು ಇಂದಿಗೆ 25 ವರ್ಷವಾಗಿದೆ. ಪ್ರಕರಣದಲ್ಲಿ ದಾರಾ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ಈ ಪ್ರಕರಣದಲ್ಲಿ ಕೊಲೆಗಾರನ ಸಿದ್ದಾಂತವನ್ನು ಅರ್ಥಮಾಡಿಕೊಂಡಿಲ್ಲ ಎಂದು ಕ್ರಿಶ್ಚಿಯನ್ ಸಮುದಾಯವು ಹೇಳಿಕೊಂಡಿತ್ತು.

ಆಸ್ಟ್ರೇಲಿಯಾದಿಂದ ಒರಿಸ್ಸಾ(ಒಡಿಶಾ)ಗೆ ಬಂದು ನೆಲೆಸಿದ್ದ ಗ್ರಹನ್ ಸ್ಟೇನ್ಸ್ ಸ್ಥಳೀಯ ಭಾಷೆ ಕಲಿತು ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದರು. ರಾಜ್ಯದ ಮಯೂರ್‌ ಬಂಜ್ ಎಂಬ ಊರಿನಲ್ಲಿ ಕುಷ್ಠರೋಗಿಗಳ ಚಿಕಿತ್ಸೆಗಾಗಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇವರು ಎರಡನೇ ಮದರ್ ತೆರೇಸಾ ಎಂದು ಕೂಡ ಕರೆಯಲ್ಪಟ್ಟಿದ್ದರು. ಗ್ರಹನ್ ಸ್ಟೇನ್ಸ್ ಹತ್ಯೆ ಘಟನೆಯನ್ನು ಅಂದಿನ ಭಾರತದ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ರಾಷ್ಟ್ರಕ್ಕೆ ಕಪ್ಪು ಚುಕ್ಕೆ ಎಂದು ಕರೆದಿದ್ದರು.

2003ರಲ್ಲಿ ಖೋರ್ಧಾದ ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಸಿಂಗ್‌ಗೆ ಮರಣದಂಡನೆ ವಿಧಿಸಿತ್ತು. ಇತರ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಒಡಿಶಾ ಹೈಕೋರ್ಟ್ ಸಿಂಗ್ ಅವರ ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.

ಇದನ್ನು ಓದಿ: ಪೋಕ್ಸೋ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಹೈಕೋರ್ಟ್‌ ಮೊರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...