Homeಮುಖಪುಟಮುಂದಿನ ಸಿಎಂ ಬಗ್ಗೆ ಸುಳಿವು ನೀಡಿದ ನಿತೀಶ್ ಕುಮಾರ್; ಜೆಡಿಯುನಲ್ಲಿ ಬಿರುಕು?

ಮುಂದಿನ ಸಿಎಂ ಬಗ್ಗೆ ಸುಳಿವು ನೀಡಿದ ನಿತೀಶ್ ಕುಮಾರ್; ಜೆಡಿಯುನಲ್ಲಿ ಬಿರುಕು?

- Advertisement -
- Advertisement -

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ತಮ್ಮ ಮಹಾಘಟಬಂಧನ್ ನೇತೃತ್ವ ವಹಿಸಲಿದ್ದಾರೆ ಎಂದು ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಘೋಷಿಸಿದ್ದರು. ಈ ಮೂಲಕ ಅವರು ಮುಂದಿನ ಸಿಎಂ ತೇಜಸ್ವಿ ಎನ್ನುವ ಸುಳಿವು ನೀಡಿದ್ದರು.

ನಿತೀಶ್ ಕುಮಾರ್ ಅವರು 2025ರ ಚುನಾವಣೆಯ ಬಳಿಕ ಸಿಎಂ ಸ್ಥಾನದಿಂದ ದೂರ ಉಳಿದರೆ ತಮಗೆ ಪಟ್ಟ ಸಿಗಲಿದೆ ಎನ್ನುವ ಆಸೆಯಲ್ಲಿ ಜೆಡಿಯುನ ಕೆಲವು ನಾಯಕರು ಇದ್ದರು. ಅದೇ ರೀತಿ 2021 ರಲ್ಲಿ ತಮ್ಮ ಆರ್‌ಎಲ್‌ಎಸ್‌ಪಿಯನ್ನು ಜೆಡಿಯುನೊಂದಿಗೆ ವಿಲೀನಗೊಳಿಸಿದ ಕುಶ್ವಾಹಾ ಕೂಡ ನಿತೀಶ್ ಅವರ ಉತ್ತರಾಧಿಕಾರಿಯಾಗುವ ಆಸೆ ಹೊಂದಿದ್ದರು. ಆದರೆ ಇದೀಗ ಅವರ ಹೇಳಿಕೆಯಿಂದ ತೇಜಸ್ವಿ ಅವರು ಗೊಂದಲದಲ್ಲಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳುವ ಸಾಧ್ಯತೆ ಕೂಡ ಇದೆ ಎಂದು ವರದಿಯಾಗಿದೆ.

ಎನ್ ಡಿಎ ನತ್ತ ಮುಖ ಮಾಡಿರುವ ಕುಶ್ವಾಹಾ ಅವರ ಮನವೊಲಿಸಲು ಇದೀಗ ನಿತೀಶ್ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬಹುದು. ಕುಶ್ವಾಹಾ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿರುವ ನಿತೀಶ್, ಇವೆಲ್ಲಾ ಊಹಾಪೋಗಳು ಇಂತಹ ಕ್ರಮವನ್ನು ಆರ್‌ಜೆಡಿ ವಿರೋಧಿಸುತ್ತದೆ. ರಾಜ್ಯದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಾಟ್ನಾದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಜನವರಿ 14 ರಂದು ಕುಶ್ವಾಹ ಅವರು ತಮ್ಮ ಮಹಾಮೈತ್ರಿಕೂಟದ ಸಹೋದ್ಯೋಗಿಗಳೊಂದಿಗೆ ಸಭೆ ಸಮಾರಂಭ ನಡೆಸಲಿದ್ದಾರೆ. ಈ ಸಮಾರಂಭಕ್ಕೆ ಕೆಲವು ಬಿಜೆಪಿ ನಾಯಕರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ. ಕುಶ್ವಾಹಾ ಜೊತೆಗೆ ಜೆಡಿಯು ನ ಕೆಲವು ನಾಯಕರು ಪಕ್ಷ ಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ: 11 ಶಸ್ತ್ರಸಜ್ಜಿತರನ್ನು ಬಂಧಿಸಿದ ಸೇನಾ ಸಿಬ್ಬಂದಿ; ಮಹಿಳೆಯರಿಂದ ಪ್ರತಿಭಟನೆ

0
ಸೇನಾ ಗಸ್ತು ಸಿಬ್ಬಂದಿಯು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ 11 ಶಸ್ತ್ರಸಜ್ಜಿತ ಪುರುಷರನ್ನು ಪತ್ತೆ ಮಾಡಿ ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಮಹಿಳಾ ಪ್ರತಿಭಟನಾಕಾರರು...