Homeಮುಖಪುಟಇಂಡಿಯಾ ಬಣದಿಂದ ನಿತೀಶ್ ಕುಮಾರ್ ನಿರ್ಗಮನ ನೋವು ತರಿಸಿದೆ: ಸಂಜಯ್ ಸಿಂಗ್

ಇಂಡಿಯಾ ಬಣದಿಂದ ನಿತೀಶ್ ಕುಮಾರ್ ನಿರ್ಗಮನ ನೋವು ತರಿಸಿದೆ: ಸಂಜಯ್ ಸಿಂಗ್

- Advertisement -
- Advertisement -

‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ‘ಇಂಡಿಯಾ’ ಬಣದಿಂದ ನಿರ್ಗಮಿಸಿದ್ದರಿಂದ ನನಗೆ ನೋವಾಗಿದೆ. ಅವರು ಪದೇಪದೆ ಬಣಗಳನ್ನು ಬದಲಾಯಿಸುವುದು ಉತ್ತಮವಾದ ನಡೆಯಲ್ಲ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಬಾನುವಾರ ಮಾತನಾಡಿರುವ ಅವರು, “ಸನಿತೀಶ್ ಕುಮಾರ್ ಮಾಜವಾದಿ ಆಂದೋಲನದಿಂದ (ಸಮಾಜವಾದಿ ಚಳುವಳಿ) ಬಂದವರು… ಅವರು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಇದ್ದರು. ಅವರು ಪದೇಪದೆ ಬಣಗಳನ್ನು ಬದಲಾಯಿಸುತ್ತಲೇ ಇದ್ದರು. ಅದು ಒಳ್ಳೇದಲ್ಲ…ಸಂಪೂರ್ಣ ಕ್ರಾಂತಿಯ ಘೋಷವಾಕ್ಯ ನೀಡಿದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಬಿಹಾರದ ಜನ ಬೆಂಬಲಿಸಿದರು. ಜನರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವುದಿಲ್ಲ’ ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ, ನಿತೀಶ್‌ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಆದರೆ, ಈ ವರ್ಷದ ಜನವರಿಯಲ್ಲಿ, 73 ವರ್ಷದ ನಾಯಕ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅನ್ನು ತೊರೆದಿದ್ದು, ಬಿಹಾರದಲ್ಲಿ ಹಳೆಯ ಮಿತ್ರ ಪಕ್ಷವಾದ ಬಿಜೆಪಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದರು. ಬಿಹಾರ ಸಿಎಂ ಬಣ ಬದಲಿಸಿದ್ದು ಇದು ಐದನೇ ಬಾರಿ.

ನಿತೀಶ್ ಕುಮಾರ್ ಪ್ರಕಾರ, “ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆಗೆ ಅವರಿಗೆ ಹೊಂದಿಕೆಯಾಗಿಲ್ಲ. ಆದ್ದರಿಂದ ‘ಮಹಾಘಟಬಂಧನ್’ ಮತ್ತು ಇಂಡಿಯಾ ಬ್ಲಾಕ್ ಅನ್ನು ತೊರೆದೆ ಎಂದು ಹೇಳಿದ್ದರು. ಬಿಜೆಪಿಯನ್ನು ಎದುರಿಸಲು ಅವರು ಇಂಡಿಯಾ ಒಕ್ಕೂಟವು ತನ್ನ ಕೆಲಸವನ್ನು ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. “ಮೈತ್ರಿಕೂಟದಲ್ಲಿರುವ ಇತರರು ಮಾಡುತ್ತಿರುವ ಕೆಲಸಕ್ಕೆ ಹೇಗೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ” ಎಂದು ಹೇಳಿದರು.

“ನಾನು ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ಈ ಸರ್ಕಾರವನ್ನು ಕೊನೆಗಾಣಿಸುವಂತೆ ರಾಜ್ಯಪಾಲರನ್ನು ಕೇಳಿದ್ದೇನೆ. ಪಕ್ಷದ ಮುಖಂಡರು ಸಲಹೆ ನೀಡುತ್ತಿದ್ದರು. ಅವರು ಹೇಳಿದ್ದನ್ನು ಕೇಳಿ ರಾಜೀನಾಮೆ ನೀಡಿದ್ದೇನೆ. ನಮ್ಮ ನಡುವೆ ಪರಿಸ್ಥಿತಿ ಚೆನ್ನಾಗಿರಲಿಲ್ಲ; ಹೀಗಾಗಿ ನಮ್ಮ ಸಂಬಂಧ ಮುರಿದು ಬಿದ್ದಿದೆ” ಎಂದು ರಾಜೀನಾಮೆ ಸಲ್ಲಿಸಿದ ಬಳಿಕ ಹೇಳಿದ್ದರು.

ಇದನ್ನೂ ಓದಿ; ಬಿಜೆಪಿ ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಪಕ್ಷ: ಸಂಜಯ್ ಸಿಂಗ್ ವಾಗ್ಧಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...