Homeಮುಖಪುಟಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧವಿಲ್ಲ: ಸುಪ್ರೀಂಗೆ ಮುಸ್ಲಿಂ ಮಂಡಳಿ ಸ್ಪಷ್ಟನೆ

ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧವಿಲ್ಲ: ಸುಪ್ರೀಂಗೆ ಮುಸ್ಲಿಂ ಮಂಡಳಿ ಸ್ಪಷ್ಟನೆ

- Advertisement -
- Advertisement -

ಮುಸ್ಲಿಂ ಮಹಿಳೆಯರು ನಮಾಜು ಮಾಡಲು ಮಸೀದಿಗಳಿಗೆ ಪ್ರವೇಶ ಮಾಡುವ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌(ಎರಡನೇ ಅರ್ಜಿಯಲ್ಲಿ) ಸಲ್ಲಿಸಿದೆ.

“ಮುಸ್ಲಿಂ ಮಹಿಳೆಯರು ಮಸೀದಿಗಳಿಗೆ ಪ್ರವೇಶಿಸಲು ಮತ್ತು ನಮಾಜ್ ಅಥವಾ ಸಭೆಯ ಪ್ರಾರ್ಥನೆಗಳನ್ನು ಸಲ್ಲಿಸಲು (ಓದಲು) ಯಾವುದೇ ನಿಷೇಧವಿಲ್ಲ ಎನ್ನುವ ವಿಚಾರಕ್ಕೆ ಮಂಡಳಿಯು ಬದ್ಧವಾಗಿದೆ” ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮುಸ್ಲಿಂ ಪಕ್ಷಪಾತಿಯಾಗಿದೆ: ದ್ವೇಷಭಾಷಣಕಾರ ಚವ್ಹಾಂಕೆ ಬೆಂಬಲಿಗರ ಆರೋಪ

ನಮಾಜು ಅಥವಾ ಪ್ರಾರ್ಥನೆ ಮಾಡುವಾಗ ಒಂದೇ ಸಾಲಿನಲ್ಲಿ ಅಥವಾ ಒಂದೇ ಜಾಗದಲ್ಲಿ ಹೆಣ್ಣು ಹಾಗೂ  ಗಂಡು ಸೇರಲು ಸಾಧ್ಯವಿಲ್ಲ ಆದ್ದರಿಂದ ಸಾಧ್ಯವಾದರೆ, ಆವರಣದೊಳಗೆ ಸ್ಥಳಗಳನ್ನು ಪ್ರತ್ಯೇಕಿಸುವುದು ಅಗತ್ಯವಿದೆ ಎಂದು ಮಂಡಳಿ ಹೇಳಿದೆ.

”ಇತ್ತೀಚೆಗೆ ಸಲ್ಲಿಸಿದ ಅರ್ಜಿಯಲ್ಲಿ, ಮೆಕ್ಕಾದ ತವಾಫ್‌ನ ಉದಾಹರಣೆಯನ್ನು ಮಂಡಳಿಯು ಸ್ಪಷ್ಟಪಡಿಸಿದೆ. ಮಕ್ಕಾದಲ್ಲಿಯೂ ಸಹ ಪವಿತ್ರ ಕಾಬಾದ ಸುತ್ತಲಿನ ಎಲ್ಲಾ ಮಸೀದಿಗಳಲ್ಲಿ, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ಅಭ್ಯಾಸವು ಜಾರಿಯಲ್ಲಿದೆ” ಎಂದು ಮಂಡಳಿಯು ಹೇಳಿದೆ.

ಭಾರತೀಯ ಮಸೀದಿಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಅವಲಂಬಿಸಿ, ನಿರ್ವಹಣಾ ಸಮಿತಿಗಳು ಮಸೀದಿಗಳಲ್ಲಿ ಅಂತಹ ವ್ಯವಸ್ಥೆಗಳನ್ನು ಮಾಡಲು ಅನುಮತಿಸಬೇಕು. ಇದರಿಂದ ಮಹಿಳೆಯರಿಗೆ ಪ್ರತ್ಯೇಕ ಸ್ಥಳಗಳನ್ನು ರಚಿಸಲು ಅನಕೂಲವಾಗುತ್ತದೆ.

ಅಫಿಡವಿಟ್‌ನಲ್ಲಿ ಹೇಳಲಾದ ಈ ನಿಲುವನ್ನು ಹೊರತುಪಡಿಸಿ, ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡುತ್ತದೆ, ಎಲ್ಲೆಲ್ಲಿ ಹೊಸ ಮಸೀದಿಗಳನ್ನು ನಿರ್ಮಿಸಲಾಗುತ್ತದೆ, ಮಹಿಳೆಯರಿಗೆ ಸೂಕ್ತ ಸ್ಥಳಾವಕಾಶವನ್ನು ನೀಡುವ ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಮಂಡಳಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...