Homeಕರ್ನಾಟಕ2ನೇ ಸ್ನಾತಕೋತ್ತರ ಪದವಿ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶವಿಲ್ಲ: ಬೆಂಗಳೂರು ವಿವಿಯಿಂದ ಸುತ್ತೋಲೆ

2ನೇ ಸ್ನಾತಕೋತ್ತರ ಪದವಿ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶವಿಲ್ಲ: ಬೆಂಗಳೂರು ವಿವಿಯಿಂದ ಸುತ್ತೋಲೆ

- Advertisement -
- Advertisement -

ಎರಡನೇ ಸ್ನಾತಕೋತ್ತರ ಪದವಿಗೆ ಸೇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶಾತಿ ನೀಡಬಾರದು ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.

ದಲಿತ ವಿದ್ಯಾರ್ಥಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳು ದಿನಕ್ಕೊಂದು ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಬೆಂಗಳೂರು ವಿವಿಯ ಸುತ್ತೋಲೆ ಹೊರಬಿದ್ದಿದೆ.

ಸುತ್ತೋಲೆಯಲ್ಲಿ ಏನಿದೆ?

2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಹಾಸ್ಟೆಲ್ ಪ್ರವೇಶ ನೀಡುವ ಸಂದರ್ಭದಲ್ಲಿ ಎರಡನೇ ಸ್ನಾತಕೋತ್ತರ ಪದವಿಗೆ ಕಡ್ಡಾಯವಾಗಿ ಅವಕಾಶ ನೀಡಬಾರದೆಂದು ತಿಳಿಸಲಾಗಿದೆ. ಕಾರಣ ಸರ್ಕಾರದ ಆದೇಶದನ್ವಯ ಒಂದು ಭಾರಿ ಸರ್ಕಾರಿ ಅಥವಾ ವಿಶ್ವವಿದ್ಯಾನಿಲಯದ ಸೌಲಭ್ಯಗಳನ್ನು ಪಡೆದಿರುವವರಿಗೆ ಮತ್ತೊಮ್ಮೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಇದನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ಪ್ರವೇಶ ನೀಡುವ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶ ನೀಡಬೇಕು.

ಆದುದರಿಂದ ಎಲ್ಲಾ ಪ್ರಧಾನ ಕ್ಷೇಮಪಾಲಕರುಗಳು ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಮುಚ್ಚಳಿಕೆಯನ್ನು ಪಡೆದು ಹಾಸ್ಟೆಲ್ ಪ್ರವೇಶ ನೀಡಬೇಕು. ವಿಭಾಗಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಮೊದಲು ಪಿಜಿ/ಎರಡನೇ ಪಿಜಿ ಎಂಬುದನ್ನು ಪರಿಶೀಲಿಸಿಕೊಂಡು ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶದ ಅರ್ಜಿಗಳನ್ನು ದೃಢೀಕರಿಸಬೇಕು.

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಪರಿಷತ್‌ ಮಾಜಿ ಸದಸ್ಯರಾದ ರಮೇಶ್‌ ಬಾಬು, “ಬೆಂಗಳೂರು ವಿವಿಯು ದಲಿತ ವಿರೋಧಿ ನೀತಿಯನ್ನು ಪದೇ ಪದೇ ಜಾಹೀರು ಮಾಡಿದೆ. ಬಿಜೆಪಿಯ ರಹಸ್ಯ ಕಾರ್ಯಸೂಚಿ ಬೆತ್ತಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಎರಡನೇ ಸ್ನಾತಕೋತ್ತರ ಪದವಿಗೆ ಹಾಸ್ಟೆಲ್‌ಗೆ ಅವಕಾಶ ನೀಡದಂತೆ ಸುತ್ತೋಲೆ ನೀಡಿ ಅವರ ಹಕ್ಕು ಕಸಿಯಲು ಶಿಕ್ಷಣ ವಂಚಿತ ಮಾಡಲು ಹೊರಟಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

8 COMMENTS

  1. ಪರಿಶಿಷ್ಟ ಜಾತಿ/ಪಂಗಡಗಳ ಶಾಸಕ,ಲೋಕಸಭೆ ಸದಸ್ಯರು, ಮಂತ್ರಿಗಳು ಏನು ಗೆಣಸು ತಿನ್ನುತ್ತಿದ್ದಾರಾ? ನಿಮ್ಮಗಳಿಗೆ ನಿಮ್ಮ ಸಮುದಾಯದ ಜನಗಳು ವಿದ್ಯಾವಂತರಾಗುವುದು ಬೇಡವಾ, ನೀವೇ ಈ ದರಿದ್ರ ಜಾತಿವಾದಿ ಸರ್ಕಾರದ ಜೀತದಾಳಾಗಲು ಭಾಭಾಸಾಹೇಬರು ನಿಮಗೆಲ್ಲಾ ರಾಜಕೀಯ ಮೀಸಲಾತಿ ನೀಡಿದರಾ? ಒಂದು ವೇಳೆ ನೀವೆಲ್ಲಾ ಈ ಜಾತಿವಾದಿ ಸರ್ಕಾರದ ಗುಲಾಮರಾಗುವುದಾದರೆ , ಪರಿಶಿಷ್ಟರ ಸಂವಿಧಾನಕ ಅಶಯಗಳನ್ನ ರಕ್ಷಣೆ ನೀಡಲು ಅಶಕ್ತರಾದರೆ ,ನಿಮ್ಮ ಸ್ಥಾನಕ್ಕೆ ರಾಜನಾಮೆ ನೀಡಿ ತೊಲಗಿ, ಕನಿಷ್ಠ ದಲಿತರ ನಿಜ ಪ್ರತಿನಿದಿಗಳಾದರು ಬರಲಿ.

  2. ಇದೆಲ್ಲ ಮನುವಾದಿಗಳ ಷಡ್ಯಂತ್ರ. ಶೂದ್ರರ, ದಲಿತರ ಸೌಲಭ್ಯಗಳನ್ನು ಮೊಟಕುಗೊಳಿಸಿ, ವಿವಿ ಕ್ಯಾಂಪಸ್ ನಲ್ಲಿ ದೇವಸ್ಥಾನ ಕಟ್ಟಲು ಪ್ರಯತ್ನ ಮಾಡುವುದು ಕೇವಲ ನಾಗಪುರದ ಅಜೆoಡಾ ಅಷ್ಟೇ….

  3. ಕಲಿಯುತ್ತಿರುವ ಮೊದಲ ಪೀಳಿಗೆಯ ದಲಿತ ಮಕ್ಕಳಿಗೆ ಮೊದಲೊತ್ತು ನೀಡಲಿ. ಸೀಟುಗಳು ಉಳಿದರೆ, ಕಲಿಕೆಯ ಎರಡನೇ ಪೀಳಿಗೆಯವರಿಗೂ ಎಡೆಮಾಡಲಿ.

  4. ಬಿಜೆಪಿ ಸರ್ಕಾರ ದಲಿತ ವಿರೋಧಿ ಎಂಬುವುದನ್ನು ಸಾಬೀತು ಪಡಿಸಿದೆ ದಲಿತ ಜನಪ್ರತಿನಿಧಿಗಳು ಯೋಚಿಸಿ ನೋಡಿ ನಮಗೆ ಈ ಸರ್ಕಾರ ಬೇಕಾ..????

  5. ಮಾನ್ಯ ಗೋವಿಂದ ಕಾರಜೋಳ್, ಪಿ ರಾಜೀವ್ ಕುಡಚಿ ಶಾಸಕರ, ನಾರಾಯಣ ಸ್ವಾಮಿ, ಇನ್ನಿತರ ಎಸ್ಸಿ ಎಸ್ಟಿ ಜನ ಪ್ರತಿನಿದಿಗಳೇ ಕತ್ತೆ ಕಾಯ್ತಿದಿರಾ ನಮ್ಮ ಬಡ ವಿದ್ಯಾರ್ಥಿಗಳು ಎಲ್ಲಿ ಓದಬೇಕು, ಈ ಆದೇಶದ ವಿರುದ್ದ ಬಾಯಿ ಬಿಟ್ಟು ಮಾತಾಡಿ. ನಮ್ಮ ಅಳಿವು ಉಳಿವಿನ ಪ್ರಶ್ನೆ ಯಾಗಿದೆ.

  6. ಈಗಲಾದರೂ ಎಸ್ಸಿ ಎಸ್ಟಿ ಗಳು ಒಂದಾಗಿ ರಾಜ್ಯಧಿಕಾರ ಹಿಡಿಯಬೇಕು, ಯುವಕರು ಅರ್ಥಮಾಡಿಕೊಳ್ಳಿ ಬಿಜೆಪಿ ಬಿಜೆಪಿ ಎಂದು ಹಿಂದೆ ಹೋಗಿ ಸಮಾಜವನ್ನು ಅದೋಗತಿಗೆ ದೂಡಬೇಡಿ ಅಂಬೇಡ್ಕರ್ ಅವರ ಅನುಭವದ ಜೀವನ ಚರಿತ್ರೆಯನ್ನು ಓದಿ ತಿಳುಕೊಳ್ಳಿ ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸಿ ಜೈಭೀಮ್

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...